HOME
CINEMA NEWS
GALLERY
TV NEWS
REVIEWS
CONTACT US

ROCKLINE VENKATESH BACK ON TV, ZEE KANNADA TO TELECAST JANUMADA JODI FROM AUG 8
P
roducer Rockline Venkatesh is back on television after two decades with his new television daily soap Janumada Jodi. The soap will go on air on Zee Kannada from August 8 at 8 pm.

Janumada Jodi, with its tagline, Januma Janumakku Preethiya Jothe Dooradavara Olavina Kathe, is a rebirth drama. The serial is said to be reincarnation of a couple. Actors Vijay Simha and Neha Patil will essay the lead roles. 

Janumada Jodi has been shot in Jaipur and other parts of North India. Other cast members include Doddanna, Nagendra Sha, Nischitha Gowda and Vidya Murthy. Raaghu Cheran, who had earlier written the script for Jothe Jotheyali, a daily soap on the same channel, has written the script for Janumada Jodi. The serial will be directed by Raaghu Shivamogga.
-4/08/16 

ಜನುಮದ ಜೋಡಿ
ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಚಿತ್ರನಿರ್ಮಾಣ ಸಂಸ್ಥೆಯಾಗಿ ಬೆಳೆದುನಿಂತ ರಾಕ್‍ಲೈನ್ ಎಂಟರ್‍ಪ್ರೈಸಸ್ ಇದೀಗ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸುವತ್ತ ಮನಸ್ಸು ಮಾಡಿದೆ. ಹೌದು, ರಾಕ್‍ಲೈನ್ ವೆಂಕಟೇಶ್ ಅವರು ಇದೀಗ ಕಿರುತೆರೆ ಧಾರಾವಾಹಿಯ ನಿರ್ಮಾಪಕರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಇದೇ ಆಗಸ್ಟ್ 8ರ ಸೋಮವಾರದಿಂದ ಮೂಡಿಬರಲಿರುವ ಜನುಮದ ಜೋಡಿ ಎಂಬ ವಿನೂತನ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಅವರು ಕಾಲಿರಿಸಿದ್ದಾರೆ.

ಒಂದು ಸಾಮಾಜಿಕ ಕಥಾಕಲ್ಪನೆಯೊಂದಿಗೆ ಪ್ರೀತಿ, ಮಮತೆಯ ದಾರಿಯೊಳಗೆ ನಡೆಯುವ ಜನುಮದ ಜೋಡಿಯ ಕಥೆ, ಕಾವೇರಿ ಎಂಬ ಮುಗ್ಧ ಯುವತಿಯ ಸುತ್ತ ಸಾಗಲಿದೆ. ಸ್ವತಂತ್ರ ಹಕ್ಕಿಯಂತೆ ಹಾರಬೇಕಿದ್ದ ಕಾವೇರಿಯ ಕನಸುಗಳೆ¯್ಲÁ ಒಮ್ಮೆ ಬೆಂಕಿಗೆ ಬಿದ್ದು ಕಮರಿಹೋಗುತ್ತವೆ. ನಂತರ, ಆಕೆ ಮತ್ತೆ ಮರುಭೂಮಿಯಲ್ಲಿ ಹುಟ್ಟಿ ವಸುಂಧರೆಯಾಗಿ ಬೆಳೆದು ನಿಲ್ಲುತ್ತಾಳೆ. ಕಾವೇರಿಯ ಕನಸುಗಳಿಗೆ¯್ಲÁ ಪ್ರೀತಿಯ ಸುಧೆ ಹರಿಸುತ್ತಾ ಆಕೆಯ ಜೊತೆಗಿರುತ್ತೇನೆಂದು ಬಂದ ಆದಿತ್ಯವರ್ಮ ಕೂಡ ಬೆಂಕಿಗೆ ಬಿದ್ದು ಮರಣ ಹೊಂದಿ ಪುನರ್ಜನ್ಮದಲ್ಲಿ ಸಂಜು ಆಗಿ ಹುಟ್ಟಿ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಬದುಕುತ್ತಿರುತ್ತಾನೆ. ಹೀಗೆ ಪ್ರೀತಿಯ ಫ್ರೇಮಿನೊಳಗೆ ಅಡಗಿ ಕುಳಿತಿದ್ದ, ಈ ಜೋಡಿ ಹಕ್ಕಿಗಳು ಪುನರ್ಜನ್ಮ ತಳೆದು ಬಂದ ನಂತರ ಮತ್ತೆ ಒಂದಾಗುತ್ತಾರಾ, ಇಲ್ಲವಾ ಎಂಬುದನ್ನು
ಹೇಳುವ ಕಥೆಯೇ ಜನುಮದ ಜೋಡಿ.

ಈ ರೋಚಕವಾದ ಜನ್ಮಾಂತರದ ಕಥಾನಕ ಹೊಂದಿದ ಲವ್‍ಸ್ಟೋರಿಯನ್ನು ರಾಕ್‍ಲೈನ್ ಎಂಟರ್‍ಪ್ರೈಸಸ್ ಸಂಸ್ಥೆ ಮೊದಲಬಾರಿಗೆ ನಿರ್ಮಾಣ ಮಾಡುತ್ತಿದೆ. ಸದಾ ಹೊಸತನದ ಕಥೆಗಳನ್ನು ಪುಟ್ಟಪರದೆಯ ಮೇಲೆ ತಂದು ಕಿರುತೆರೆಗೆ ಒಂದು ಹೊಸಕಳೆ ನೀಡುತ್ತಿರುವ ಜೀ ಕನ್ನಡ ವಾಹಿನಿ ಪ್ರಾರಂಭಿಸುತ್ತಿರುವ ಮತ್ತೊಂದು ಹೊಸ ಧಾರಾವಾಹಿ ಇದಾಗಿದೆ. ಜನ್ಮಜನ್ಮಕ್ಕೂ ಜೊತೆಯಾಗಿಯೇ ಇರುವ ಅಪರೂಪದ ಜೋಡಿಯ ಜನುಮದ ಜೋಡಿ ಎಂಬ ಕಥೆಯನ್ನು ಜೀ ವಾಹಿನಿ ಹೊತ್ತು ತರುತ್ತಿದೆ. ಪುನರ್ಜನ್ಮದ ಎಳೆಯನ್ನು ಈ ಧಾರಾವಾಹಿಯ ಪ್ರಮುಖ ಕಥಾವಸ್ತುವಾಗಿಸಿದ್ದು, ಕರ್ನಾಟಕದ ಜಿ¯್ಲÉಯೊಂದರಲ್ಲಿ ನಡೆದ ನೈಜ ಘಟನೆಯನ್ನೇ ಈ ಧಾರಾವಾಹಿಗೆ ಸ್ಪೂರ್ತಿಯಾಗಿ ತೆಗೆದುಕೊಂಡು ನಿರೂಪಿಸಲಾಗಿದೆ.

ರಾಕ್‍ಲೈನ್ ಸಂಸ್ಥೆ ಎಂದಮೇಲೆ ಅಲ್ಲಿ ಅದ್ದೂರಿತನಕ್ಕೇನೂ ಕೊರತೆಯಿರುವುದಿಲ್ಲ. ಈ ಕಾರಣಕ್ಕಾಗಿಯೇ ಜನುಮದ ಜೋಡಿ ಧಾರಾವಾಹಿಯ ಒಂದು ಸಿನಿಮಾದ ರೀತಿಯಲ್ಲಿ ಹೈಬಡ್ಜೆಟ್‍ನೊಂದಿಗೆ ನಿರ್ಮಾಣವಾಗುತ್ತಲಿದೆ. ಜನುಮದ ಜೋಡಿ ತಂಡ ಈಗಾಗಲೇ ರಾಜಸ್ಥಾನದ ಜೈಪುರ ಸೇರಿದಂತೆ ವಿವಿಧ ಲೊಕೇಶನ್‍ಗಳಲ್ಲಿ ಚಿತ್ರೀಕರಣ ನಡೆಸಿದೆ. ಇನ್ನು ಈ ಧಾರಾವಾಹಿಯ ಪೆÇೀಷಕ ಪಾತ್ರದಲ್ಲಿ ನಟ ದೊಡ್ಡಣ್ಣ ಕಾಣ ಸಿಕೊಂಡರೆ, ನಾಯಕ, ನಾಯಕಿಯಾಗಿ ವಿವೇಕ್‍ಸಿಂಹ ಹಾಗೂ ನಟಿ ನೇಹಾಪಾಟೀಲï ಅಭಿನಯಿಸುತ್ತಿz್ದÁರೆ. ನಾಗೇಂದ್ರ ಶಾ, ನಿಶ್ಚಿತಾ ಗೌಡ, ವಿದ್ಯಾಮೂರ್ತಿ ಉಳಿದ ತಾರಾಗಣದಲ್ಲಿz್ದÁರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಜೊತೆ ಜೊತೆಯಲಿ ಎಂಬ ಧಾರಾವಾಹಿಯನ್ನು ಕೊಟ್ಟ ರಘುಚರಣï ಈ
ಧಾರಾವಾಹಿಯನ್ನು ರಚಿಸಿz್ದÁರೆ. ರಾಘು ಶಿವಮೊಗ್ಗ ಜನುಮದ ಜೋಡಿ ಧಾರಾವಾಹಿಯನ್ನು ನಿರ್ದೇಶಿಸುತ್ತಿz್ದÁರೆ. ಆ. 8ರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಞಜಿಞe ಜನ್ಮಾಂತರದ ಪ್ರೇಮಕಥೆ ಜನುಮದ ಜೋಡಿ ಕನ್ನಡಿರನ್ನು ರಂಜಿಸಲು ಬರುತ್ತಲಿದೆ.
-4/08/16 

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore