HOME
CINEMA NEWS
GALLERY
TV NEWS
REVIEWS
CONTACT US
ಕುಟುಂಬ’ದೊಂದಿಗೆ ಬಾಂಧವ್ಯ ಬೆಸೆದು!
ಜೀ ಕನ್ನಡ ವಾಹಿನಿ ಟಿವಿ ಪರದೆಯ ಮೇಲೆ ಮಿಂಚುವ ತಾರೆಗಳನ್ನು ಒಂದೆಡೆÀ ಸೇರಿಸಿತ್ತು. ಸದಾ ನವನವೀನ ಕಾರ್ಯಕ್ರಮಗಳನ್ನು ಕನ್ನಡಿಗರ ಮುಂದಿಡುತ್ತಾ, ಮನರಂಜನೆಯ ಪ್ಯಾಕೇಜ್ ಹೊತ್ತು ತರುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಳಗಕ್ಕೆ ಪ್ರಶಸ್ತಿ ನೀಡಿ ವಂದಿಸಲು ಮುಂದಾಗಿತ್ತು. ವೀಕೆಂಡ್ ವಿಥ್ ರಮೇಶ್, ಡ್ರಾಮಾ ಜ್ಯೂನಿಯರ್ಸ್, ಸರೆಗಮಪ ಲಿಟಲ್ ಚಾಂಪ್ಸ್. ನಾಗಿಣ , ಗಂಗಾದಂತಹ ವಿಶಿಷ್ಟ ಯಶಸ್ವಿ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಾ ವೀಕ್ಷಕರನ್ನು ಮನಸೂರೆಗೊಳಿಸುವ ವಾಹಿನಿ ತನ್ನ ಇಡೀ ಬಳಗವನ್ನು ಒಂದೆಡೆ ಕಲೆ ಹಾಕಿ ಜೀ ಕನ್ನಡ ‘ಕುಟುಂಬ’ ಅವಾಡ್ರ್ಸ್ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸಿತು. ಈ ಅದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣ.

ವೀಕ್ಷಕರ ಮನಗೆದ್ದ ಜೀ ಕನ್ನಡ ವಾಹಿನಿಯ ಎಲ್ಲಾ ತಾರೆಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರೆ, ಆ ಸಂತಸದೊಟ್ಟಿಗೆ ಜೊತೆಯಾಗಲು ಕನ್ನಡ ಚಿತ್ರರಂಗದ ತಾರಾ ಬಳಗವೇ ಆಗಮಿಸಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್, ರಚಿತಾ ರಾಮ್. ಗುರುಕಿರಣ್, ಮಾಲಾಶ್ರೀ, ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ, ಹರ್ಷಿಕಾ ಪೂಣಚ್ಚ ಮುಂತಾದ ತಾರಾ ಮೆರುಗು ಈ ಸುಂದರ ಕಾರ್ಯಕ್ರಮದಲ್ಲಿತ್ತು. ಪ್ರಖ್ಯಾತ ನೃತ್ಯಪಟು ಪ್ರಭುದೇವನ್ ತಂದೆ ಸುಂದರಮ್ ಮಾಸ್ಟರ್ ಈ ವಯಸ್ಸಿನಲ್ಲೂ ಅದ್ಭುತ ನೃತ್ಯ ಪ್ರದರ್ಶನ ನೀಡಿದರೆ, ಮಾಲಾಶ್ರೀ ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ ಮತ್ತು ವಾಹಿನಿ ಎಲ್ಲಾ ತಾರಾ ಬಳಗ ಹೆಜ್ಜೆ ಹಾಕಿ ಇಡೀ ಸಭಿಕರನ್ನು ರಂಜಿಸಿತು.

ವೇದಿಕೆಯ ಮೇಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಮೇಶ್ ಅರವಿಂದರ ಮಾತುಕತೆಗೆ ಇಡೀ ಸಭಾಂಗಣವೇ ಮೆಚ್ಚುಗೆ ಸೂಚಿಸಿತು. ಕರ್ನಾಟಕದ ಸ್ಟಾರ್ ಪುಟಾಣ ಗಳಾದ ಡ್ರಾಮಾ ಜ್ಯುನಿಯರ್ಸ್ ಮಕ್ಕಳ ಜೊತೆಗೂಡಿ ವಿಜಯ್ ರಾಘವೇಂದ್ರೆ ಮತ್ತು ಮಾಸ್ಟರ್ ಆನಂದ್ ಲವಲವಿಕೆಯ ಸಮಾರಂಭದ ಸಾರಥ್ಯ ವಹಿಸಿದ್ದು ವಿಶೇಷ. ಸಮಾರಂಭದುದ್ದಕ್ಕೂ ವಾಹಿನಿ ವೀಕ್ಷಕರ ತಾರೆಗಳÀ ಮನ ಮಿಡಿವ ಮಾತುಗಳು ಮೂಡಿಬಂದದ್ದು ಸಮಾರಂಭದ ಸಂತಸ ಹೆಚ್ಚಿಸಿದ್ದು ಸುಳ್ಳಲ್ಲಾ. ದಶಕದ ಪಯಣವನ್ನು ನೆನೆಯುತ್ತಾ ಪ್ರಸ್ತುತ ವಾಸ್ತವತೆಯ ಗೆಲುವನ್ನು ಮೆಲುಕು ಹಾಕುತ್ತಾ, ಮುಂದಿನ ಹೆಜ್ಜೆಗಳೊಟ್ಟಿಗೆ ಮನರಂಜನೆಯ ರಸದೌತಣ ಕೊಡವ ಸೂಚನೆ ನೀಡಿತು ವಾಹಿನಿ.

ಸುಂದರ ಸಮಾರಂಭದಲ್ಲಿ ತೆರೆಯ ಮೇಲಿನ ಕಲಾವಿದರೊಟ್ಟಿಗೆ ತೆರೆಮರೆಯ ತಾರೆಗಳನ್ನೂ ವೇದಿಕೆ ಏರಿಸಿ ನಮಿಸಿದ್ದು ಈ ಕಾರ್ಯಕ್ರಮದ ವಿಶೇಷ. ರಂಗು ರಂಗಿನ ಈ ಸಮಾರಂಭವನ್ನು ವೀಕ್ಷಿಸುವ ಸಂತಸವನ್ನು ವೀಕ್ಷಕರಿಗೆ ನೀಡುತ್ತಿರುವ ವಾಹಿನಿ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಪ್ರಸಾರ ಮಾಡಲಿದೆ.
-20/10/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore