HOME
CINEMA NEWS
GALLERY
TV NEWS
REVIEWS
CONTACT US
ಮತ್ತೇ ವೀಕೆಂಡ್ ವಿಥ್ ರಮೇಶ್
ನಟ ರಮೇಶ್‍ಅರವಿಂದ್ ನಡೆಸಿಕೊಡುವ ‘ವೀಕೆಂಡ್ ವಿಥ್ ರಮೇಶ್’ ಮೂರು ಸೀಸನ್ ಕಾರ್ಯಕ್ರಮವು ಯಶಸ್ವಿಯಾಗಿತ್ತು. ಈಗ ಸೀಸನ್-4 ಶುರುಮಾಡಲು ವಾಹಿನಿ ಸಿದ್ದತೆಗಳನ್ನು ಮಾಡಿಕೊಂಡಿದೆ. ಹಿಂದಿನ ಸೀಸನ್‍ಗಳಲ್ಲಿ ಸಾಧಕರ ಬಾಲ್ಯ, ಕಷ್ಟ-ಸುಖ, ಸಂತಸದ ಕ್ಷಣಗಳು ಹೀಗೆ ಅವರು ಸವೆಸಿದ ಪೂರ್ಣ ಹಾದಿಯನ್ನು ಒಂದು ಗಂಟೆಯೊಳಗೆ ಎಲ್ಲವನ್ನು ತೆರೆದಿಡುವಲ್ಲಿ ಸಪಲರಾಗಿದ್ದರು. ಚಿತ್ರರಂಗ ಸೇರಿದಂತೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಕೆಂಪುಕುರ್ಚಿದಲ್ಲಿ ಕೂರಿಸಿ ಅವರ ಅನುಭವಗಳನ್ನು ಹೇಳಿಕೊಂಡಿದ್ದರು. ಈ ಬಾರಿ ಸೀಸನ್-4 ಪ್ರೋಮೋ ತಯಾರಿಸಲು ತಂಡವು ಮಡಕೇರಿಯ ಮಂದಾಲಪಟ್ಟಿಯ ತುತ್ತ ತುದಿಯ ಮೇಲೆ ಸೆಟ್‍ನ್ನು ನಿರ್ಮಿಸಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ.

ಹಿಂದಿನ ಸೀಸನ್‍ಗಳಿಗೆ ಡಾ.ವೀರೇಂದ್ರಹಗ್ಗಡೆ, ರಾಹುಲ್‍ಡ್ರಾವಿಡ್, ಅನಿಲ್‍ಕುಂಬ್ಳೆ ಅವರನ್ನು ಕರೆತರಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ತಂಡವು ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರನ್ನು ಕರೆತರುವಲಲ್ಲಿ ಸಪಲರಾಗಿದ್ದಾರೆ. ಅದರಿಂದಲೇ ಮೊದಲ ಕಂತು ಇವರಿಂದಲೇ ಶುರುವಾಗಲಿದೆ. ಹಿಂದಿನ ಮೂರು ಸೀಸನ್‍ಗಳಲ್ಲಿ 65 ಸಾಧಕರು ಭಾಗವಹಿಸಿದ್ದು, ನಾಲ್ಕನೇ ಸೀಸನ್ ಮುಗಿದ ಬಳಿಕ ಅವರೆಲ್ಲರನ್ನು ಕರೆಸಿ ಮತ್ತೋಂದು ಅದ್ಬುತ ಕಾರ್ಯಕ್ರಮ ಮಾಡಿ ನಾಲ್ಕು ಸೀಸನ್‍ನ ಸಿಡಿ ಹಾಗೂ ವೀಕೆಂಡ್ ವಿಥ್ ರಮೇಶ್ ಪುಸ್ತಕವನ್ನು ಬಿಡುಗಡೆ ಮಾಡಲು ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರಹುಣಸೂರು ಯೋಜನೆ ಹಾಕಿಕೊಂಡಿದ್ದಾರೆ. ಏಪ್ರಿಲ್ 20ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಾಯ್ರಕ್ರಮವು ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/04/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore