HOME
CINEMA NEWS
GALLERY
TV NEWS
REVIEWS
CONTACT US

ಉದಯ ಸಿಂಗರ್ ಜೂನೀಯರ್ಸ್ ನಲ್ಲಿ ಸುಮಾ ಶಾಸ್ತ್ರಿಯವರು ಭಾವುಕರಾಗಿದ್ದು ಏಕೆ? ನಟ ಚೇತನ್ ಜೊತೆ ಸ್ಟೆಪ್ ಹಾಕಿದ 5ವರ್ಷದ ಬಾಲಕಿ ಶಿಖಾ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ
ಉದಯ ಸಿಂಗರ್ ಜೂನೀಯರ್ಸ್ ವಾರವಾರಕ್ಕೂ ಸಂಗೀತದ ಕಂಪು ನೀಡುತ್ತಿದೆ.ಅಂತೆಯೇ ಚಿತ್ರರಂಗದ ದಿಗ್ಗಜರುಗಳು ಆಗಮಿಸಿ ಮಕ್ಕಳಿಗೆ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ವಾರದ ಸಂಚಿಕೆಯಲ್ಲಿಯೂ ಕೂಡ ಆದಿನಗಳು ನಾಯಕನಟ ಆಗಮಿಸಿ ಮತ್ತಷ್ಟು ವೇದಿಕೆಗೆ ರಂಗನ್ನು ತಂದಿದ್ದಾರೆ.

ತಮ್ಮ ಅತಿರಥ ಚಿತ್ರದ ಪ್ರಮೋಶನ್‍ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉದಯ ಸಿಂಗರ್ ಜೂನೀಯರ್ಸ್‍ನಲ್ಲಿ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ಒಂದಿಷ್ಟು ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ.ಹಾಗೆ ಶಿಖಾ ಕಾರ್ಯಕ್ರಮದ ನಿರೂಪಣೆ ಮಾಡುತ್ತ ಎಲ್ಲರನ್ನು ಆಕರ್ಷಿಸಿದ್ದಾಳೆ.
ಇದಲ್ಲದೇ ತನುಷ್ ರೆಟ್ರೋ ಸ್ಟೈಲ್‍ನಲ್ಲಿಯ ಹಾಡನ್ನು ಹಾಡಿದರ ಜೊತೆಗೆ ಆ ಹಾಡಿಗೆ ತಕ್ಕಂತೆ ಉಡುಪು ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಇಷ್ಟಲ್ಲದೆ ನಿರ್ಣಾಯಕರಾದ ಮನೋ ರಾಕ್ ಅ್ಯಂಡ್ ರೋಲ್ ಗೆ ಡ್ಯಾನ್ಸ್ ಮಾಡಿ ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ.

ಇಷ್ಟೆಲ್ಲಾ ಮನರಂಜನೆಯ ಮದ್ಧೆ ಸುಮಾ ಶಾಸ್ತ್ರಿಯವರು ಭಾವುಕರಾದ ಪ್ರಸಂಗ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನೀಯರ್ಸ್‍ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ರಕ್ಷೀತ್ ಭಟ್ ಎಂಬ ಸ್ಪರ್ಧಿ ಲವ್ ಇನ್ ಮಂಡ್ಯಾ ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತವಾಗಿ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.

ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಹೆಳುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸ್‍ರನ ಕೊನೆಯ ಸ್ಟೆಜ್‍ನಲ್ಲಿ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡ ಬೇಡಿ ಎಂದು ಎಷ್ಟೇ ಹೇಳಿದರು, "ಇಲ್ಲಾ ಇದು ನಂದೆ ಹಾಡು" ಎಂದು ಹೆಳಿದ್ದರು ಹಾಗೆ ಅದೇ ಅವರ ಕೊನೆಯ ಹಾಡು ಆಗಿಹೊಯಿತು ಎಂದು ಈ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ನೆನಸಿಕೊಂಡಾಗ ಅಲ್ಲಿದ್ದ ಎಲ್ಲರೂ ಭಾವುಕರಾಗಿ ಕಣ ್ಣರನ್ನು ಹಾಕಿದರು.
ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
-13/12/17

ಉದಯ ಸಿಂಗರ್ ಜೂನೀಯರ್ಸ್ ನಲ್ಲಿ "ಪ್ರೇಮಾ" ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ
ಸುಮಾರು ಒಂದು ದಶಕದ ನಂತರ ನಟಿ ಪ್ರೇಮಾ ಉದಯ ಟಿವಿಯ ಉದಯ ಸಿಂಗರ್ ಜೂನೀಯರ್ಸ್ ಮೂಲಕ ಮತ್ತೆ ತೆರೆಯ ಮೇಲೆ ಕಾಣ ಸಿಕೊಂಡಿದ್ದಾರೆ.
ವಿಶೇಷ ಅತಿಥಿಗಳಾಗಿ ಆಗಮಿಸಿದ ಪ್ರೇಮಾ ಕನಸುಗಾರನ ಜೊತೆ "ಎಲ್ಲೋ ಅದು ಎಲ್ಲೋ" ಹಾಡಿಗೆ ಸ್ಟೆಪ್ ಹಾಕುವ ಮುಖಾಂತರ 17 ವರ್ಷದ ಹಿಂದಿನ ತಮ್ಮ "ಕನಸುಗಾರ" ಚಿತ್ರದ ಮೂಲಕ ನೋಡುಗರಿಗೆ ರವಿಚಂದ್ರನ್ ಮತ್ತು ಪ್ರೇಮಾ ಜೋಡಿಯನ್ನು ಮತ್ತೆ ಪರದೆ ಮೇಲೆ ನೋಡುವಂತಾಗಿದೆ.

ರವಿಚಂದ್ರನ್ ಮತ್ತು ಪ್ರೇಮಾರವರ ಜೋಡಿಯ ಗೀತೆಗಳು ಯಾವಾಗಲು ಅದೃಷ್ಟವನ್ನು ತಂದಿದೆ.ಇವರ ಜೊತೆ ಅಭಿನಯದ ಚಿತ್ರ ಸುಪರ್‍ಹಿಟ್ ಆಗಿದೆ ಎಂದು ಕ್ರೇಜಿಸ್ಟಾರ್ ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಪ್ರೇಮಾ ತಮ್ಮ "ಮತ್ತೆ ಬಾ ಉಪೇಂದ್ರ" ಚಿತ್ರದ ಪ್ರಚಾರಕ್ಕಾಗಿ ಆಗಮಿ ಮಕ್ಕಳ ಹಾಡುಗಳಿಗೆ ಸಂತಸ ವ್ಯಕ್ತ ಪಡಿಸಿದರು. ಅಷ್ಟಲ್ಲದೆ ಎಲ್ಲ ಸ್ಪರ್ಧಿಗಳಿಗೆ ಧನಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತ ಎಲ್ಲರನ್ನು ಉತ್ತೇಜಿಸಿದರು.

ಉದಯ ಸಿಂಗರ್ ಜೂನೀಯರ್ಸ್‍ನಲ್ಲಿ ಪ್ರೇಮಾ "ಬಾಳ ಬಂಗಾರ ನೀನು" ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದ್ದಾರೆ.

ಕನಸುಗಾರರ ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
-08/12/17
ರವಿಚಂದ್ರನ್ ಕೆಲಸಕ್ಕೆ ಫಿದಾ ಆದಾ ಮಾಲಾಶ್ರೀ
ಕಳೆದವಾರದಿಂದ ಪ್ರಸಾರವಾಗುತ್ತಿರುವ ರಿಯಾಲಿಟಿ ಷೋ ‘ಉದಯ ಸಿಂಗರ್ ಜೂನಿಯರ್ಸ್’ಗೆ ಪ್ರತಿ ವಾರ ಸೆಲೆಬ್ರಟಿಗಳು ಆಗಮಿಸುತ್ತಾರೆಂದು ಹೇಳಲಾಗಿತ್ತು. ಅದರಂತೆ ಈ ವಾರ ಗತಕಾಲದ ಕನಸಿನ ರಾಣ ಮಾಲಾಶ್ರೀ ವೇದಿಕೆಗೆ ಆಗಮಿಸಿ ರಾಮಾಚಾರಿ ಚಿತ್ರದಲ್ಲಿ ನಟಿಸುವಾಗ ಆದ ಅನುಭವಗಳನ್ನು ಮೆಲುಕು ಹಾಕಿ ಹಾಗೆ ಸುಮ್ಮನೆ ಎನ್ನುವಂತೆ ಯಾರಿವಳು ಹಾಡಿಗೆ ರವಿಚಂದ್ರನ್ ಅವರೊಂದಿಗೆ ಹೆಜ್ಜೆ ಹಾಕಿ ರಂಜಿಸಿದರು. ಅವರು ಹೇಳುವಂತೆ ರಾಮಾಚಾರಿ ಚಿತ್ರೀಕರಣ ಸಂದರ್ಭದಲ್ಲಿ ಏನ್‍ಆಗ್ತಿದೆ. ಯಾಕೆ ಇಷ್ಟೆಲ್ಲಾ ಶಾಟ್ ತಗೊಳ್ತಾ ಇದ್ದಾರೆ ಅಂತ ಒಂದೂ ತಿಳಿದಿರಲಿಲ್ಲ. ಹಾಡನ್ನು ತೆರೆಯ ಮೇಲೆ ನೋಡಿದಾಗ ರವಿಚಂದ್ರನ್ ಅನ್ನೋ ಅಗಾಧ ಶಕ್ತಿಯ ಅರಿವು ಈ ರೀತಿ ಕೆಲಸ ಮಾಡುತ್ತಾರಾ ಅಂತ ಖುಷಿ ಆಯಿತು. ಅವರ ಯಶಸ್ಸಿನ ಗುಟ್ಟು ಇದೇ ಅಂತ ತಿಳಿಯಿತು.ಅವರಿಂದ ಸಾಕಷ್ಟು ಕಲಿತಿರುವೆ. ಕನ್ನಡ ಚಿತ್ರರಂಗಕ್ಕೆ ರವಿಸರ್ ನೀಡಿದ ಕೊಡುಗೆ ಯಾರು ಮರೆಯಲಾಗದು ಎಂದರು.

ಮಾಲಾಶ್ರೀ ಮತ್ತು ರವಿಚಂದ್ರನ್ ವಿಶೇಷವನ್ನು ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ವಾಹಿನಿಯಲ್ಲಿ ವೀಕ್ಷಿಸಬಹುದು.
-29/11/17
ಅಪ್ಪಾ ಐ ಲವ್ ಯು ಪಾ” ಹಾಡಿಗೆ ಭಾವುಕರಾದ ಕ್ರೇಜಿ ಸ್ಟಾರ್ಶ ನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ
ಈಗಾಗಲೇ ಉದಯ ಟಿವಿಯಲ್ಲಿ ಪ್ರಸಾರವಾಗುವ "ಉದಯ ಸಿಂಗರ್ ಜೂನಿಯರ್ಸ್"ಕನ್ನಡಿಗರಿಗೆ ಅಚ್ಚು ಮೆಚ್ಚಿನ ಕಾರ್ಯಕ್ರಮವಾಗಿದೆ. ನಿರ್ಣಾಯಕರಾದ ರವಿಚಂದ್ರನ್ ಮತ್ತು ಮನೋ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹಾಗೆ ಹಾಡನ್ನು ಹೇಳಿ ವೇದಿಕೆಯ ಮೇಲೆ ಸಂಗೀತದ ರಸದೌತಣವನ್ನು ನೀಡುವ ಮೂಲಕ ಮಕ್ಕಳು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರತೀವಾರವೂ ಕೂಡ ಒಂದೊಂದು ವಿಷಯದ ಮೇಲೆ ಶೋ ನಿರ್ಮಾಣವಾಗುತ್ತದೆ. ಅಂತೇಯೇ ಈವಾರ ನಿಮಗೆ "ಇಷ್ಟವಾದ ಹಾಡು" ಎಂಬ ವಿಷಯದ ಮೇಲೆ ಇತ್ತು. ಸ್ಪರ್ಧಿಗಳು ತಮಗೆ ಇಷ್ಟವಾದ ಹಾಡುಗಳನ್ನು ಆಯ್ಕೆಮಾಡಿಕೊಂಡು ಹಾಡುತ್ತಿದ್ದರು. ಸಿರಿ ಎಂಬ ಸ್ಪರ್ಧಿ ತನಗೆ ತನ್ನ ತಂದೆ ಕಂಡರೆ ಇಷ್ಟ ಎಂದು ಚೌಕ ಚಲನಚಿತ್ರದ "ಅಪ್ಪಾ ಐ ಲವ್ ಯು ಪಾ" ಎಂಬ ಹಾಡನ್ನು ತಮ್ಮ ತಂದೆಗೋಸ್ಕರ ಹಾಡಿದಾಗ ಆ ಹಾಡನ್ನು ಕೇಳುತಿದ್ದÀಂತೆಯೇ ಕ್ರೇಜಿಸ್ಟಾರ್ ರವಿಚಂದ್ರನ್ ಭಾವುಕರಾದರು. ಇದೇ ಸಂದರ್ಭದಲ್ಲಿ ತಮ್ಮತಂದೆಯನ್ನು ನೆನೆಸಿಕೊಂಡು ಅವರಿಬ್ಬರ ಒಡನಾಟದ ಬಗೆಗೆ ಹಂಚಿಕೊಂಡಿದ್ದಾರೆ.

ರವಿಚಂದ್ರನ್ ಎನೇ ಕೇಳಿದರೂ ಎಷ್ಟೇ ದುಡ್ಡನ್ನು ಕೇಳಿದರೂ ಯಾವದಕ್ಕೂ ಪ್ರಶ್ನೆಮಾಡದೆ ಕೊಡುತ್ತಿದ್ದರಂತೆ.

ಅಷ್ಟೇ ಅಲ್ಲದೇ ನನ್ನಲ್ಲಿ ಯಾವುದೇ ಟ್ಯಾಲೆಂಟ್ ಇಲ್ಲ, ಯಾವುದೇ ರೀತಿ ಕ್ರಿಯೇಟಿವಿಟಿ ಇಲ್ಲ ಆದರೂ ನನ್ನ ತಂದೆ ನನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಇವತ್ತು ಅವರು ನಮ್ಮ ಮಧ್ಯೆ ಇಲ್ಲವಾದರೂ ನನ್ನ ಒಳಗಡೆ ಯಾವತ್ತು ಇದ್ದೇ ಇರುತ್ತಾರೆ. ನನ್ನ ತಂದೇನೆ ಗ್ರೇಟ್ ಎಂದು ತಮ್ಮ ತಂದೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಹಾಗೆ ಕ್ರೇಜಿಸ್ಟಾರ್ ತಂದೆಯನ್ನು ಕಂಡರೆ ಹೆದರುತ್ತಿದ್ದರಾ? ಕತೆ ಹೆಳುತ್ತಾ ಅವರ ತಂದೆ ಕಣ ್ಣೀರಿಟ್ಟಿದ್ದು ಏಕೆ? ಇವೆಲ್ಲವನ್ನು ರವಿಚಂದ್ರನ್ ಅವರ ಮೂಲಕ ತಿಳಿಯೋಣ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುವ "ಉದಯ ಸಿಂಗರ್ ಜೂನಿಯರ್ಸ್" ನಲ್ಲಿ.
-24/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore