HOME
CINEMA NEWS
GALLERY
TV NEWS
REVIEWS
CONTACT US
ಸುವರ್ಣ ಲೇಡೀಸ್ ಕ್ಲಬ್‌ಗೆ ೫ ವರ್ಷಗದಗಿನ ವೇದಿಕೆಯ ಮೇಲೆ ಸೆಲಬ್ರಿಟಿಗಳ ಹರ್ಷ ಇದೇ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ೧೨ಕ್ಕೆ ಸುವರ್ಣ ಪ್ಲಸ್‌ನಲ್ಲಿ
ಸ್ರೀ ಎಂಬುದು ಭೂಮಿ ತುಕದ ಶಕ್ತಿ, ಚಿರಂತನ ಸ್ಪೂರ್ತಿ, ಇತಿಹಾಸ ಶೋಭಿಸುತ್ತಿರುವುದು ಮಹಿಳೆಯರ ತ್ಯಾಗಗಳಿಂದ. ಭವಿಷ್ಯ ಪ್ರಜ್ವಲಿಸುವುದು ಮಹಿಳೆಯರ ಏಳ್ಗೆಯಿಂದ. ಇಂತಹ ಮಹಿಳಾ ಶಕ್ತಿಯ ಸಂಕೇತವಾಗಿ ಟೆಲಿವಿಷನ್ ಇತಿಹಾಸದಲ್ಲಿಯೇ ಮೊಟ್ಟಮೊದಲಬಾರಿಗೆ ಸುವರ್ಣವಾಹಿನಿ ಸಂಘಟಿಸಿದ್ದೆ ಸುವರ್ಣ ಲೇಡೀಸ್ ಕ್ಲಬ್.

ಮನರಂಜನೆಯನ್ನು ನೀಡೋದರಲ್ಲಿ ಮಾತ್ರವಲ್ಲ. ವೀಕ್ಷಕರನ್ನು ತಲುಪೋದರಲ್ಲೂ ಸುವರ್ಣ ಡಿಫರೆಂಟ್! ವೀಕ್ಷಕರ ಜತೆ ನೇರ ಸಂಪರ್ಕ ಸಾಧಿಸಿ, ಅವರ ಬೇಕು ಬೇಡಗಳಿಗೆ ತಕ್ಕಂತೆ ಕಾರ್‍ಯಕ್ರಮ ರೂಪಿಸುವ ಸುವರ್ಣದ ಕಳಕಳಿಯ ಫಲವೇ `ಸುವರ್ಣ ಲೇಡೀಸ್ ಕ್ಲಬ್. ಹೀಗಾಗಿ ನಮ್ಮ ನಾಡಿನ ಹೆಣ್ಣು ಮಕ್ಕಳನ್ನು ಚಾನೆಲ್‌ನ ಪ್ರವರ್ತಕರಾಗಿ, ಕಾರ್ಯಕ್ರಮ ರೂಪಿಸುವ ಶಿಲ್ಪಿಗಳಾಗಿ, ವೀಕ್ಷಕರ ಜತೆಗಿನ ಕೊಂಡಿಗಳಾಗಿ, ಎಲ್ಲಕ್ಕಿಂತ ಮಿಗಿಲಾಗಿ ಎಡವಿದಾಗ ಎಚ್ಚರಿಸುವ ಮಾರ್ಗದರ್ಶಕರಾಗಿ ತೊಡಗಿಸಿಕೊಳ್ಳುವ ವೇದಿಕೆಯನ್ನು ಪ್ರಪ್ರಥಮವಾಗಿ ೫ವರ್ಷದ ಹಿಂದೆ ಗದಗನಲ್ಲಿ ಪ್ರಾರಂಭಿಸಲಾಯಿತು.

ಲೇಡೀಸ್ ಕ್ಲಬ್ ಸಾಗಿ ಬಂದ ಹಾದಿ ಸುವರ್ಣಮಯ. ಒಂದಕ್ಕಿಂತ ಒಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್‍ಯಕ್ರಮಗಳು. ಸಂಘದ ಸದಸ್ಯೆಯರು ಮತ್ತು ಅವರ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ರಂಗು ರಂಗಿನ ರಸಸಂಜೆಗಳು, ಹಬ್ಬ ಹರಿದಿನಗಳ ಅರ್ಥಪೂರ್ಣ ಆಚರಣೆ, ಚರ್ಚಾ ಸ್ಪರ್ಧೆ. ನೃತ್ಯ ಗೀತೆ ಹೀಗೆ ಸದಾ ಚಟುವಟಿಕೆಯಿಂದಿರುವ ಲೇಡೀಸ್ ಕ್ಲಬ್ ಸುವರ್ಣ ವಾಹಿನಿಯ ಪಾಲಿಗೆ ಹೆಮ್ಮೆಯ ಸಂಕೇತ.

ಈ ಎಲ್ಲ ಮನರಂಜನಾ-ಪ್ರತಿಭಾ ಪ್ರದರ್ಶನಗಳ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದರಲ್ಲಿ ಮಹಿಳೆಯರು ಮುಂದಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಮಹಳಾ ಜಾಗೃತಿ ಕಾರ್ಯಕ್ರಮಗಳು ಆರೋಗ್ಯ ಕುರಿತು ತಿಳುವಳಿಕೆ, ಪರಿಸರದ ಬಗೆಗಿನ ಕಾಳಜಿ, ಕಾನೂನು ಅರಿವುಗಳಂಥಹ ಕಾರ್ಯಕಮಗಳನ್ನು ನೀಡಿದ ಲೇಡೀಸ್ ಕ್ಲಬ್ ಸದಸ್ಯೆಯರು ಸಾಮಾಜಿಕ-ರಾಷ್ಟ್ರೀಯ ಕಳಕಳಿಗೆ ಸಾಕ್ಷಿಯಾಗಿದ್ದಾರೆ.

೧೨೩ ಸದಸ್ಯರಿಂದ ಪ್ರಾರಂಭವಾದ ಈ ಸಂಸ್ಥೆ ತನ್ನ ಪುಟ್ಟ ಪುಟ್ಟ ಹೆಜ್ಜೆಯಿಂದ ಇಂದಿಗೆ ೨೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು ಕರ್ನಾಟಕದ ತುಂಬೆಲ್ಲ ಮನೆಮಾತಾಗಿ ಈಗ ತನ್ನ ೫ವರ್ಷದ ಹುಟ್ಟು ಹಬ್ಬವನವನು ವಿಜ್ರಂಭಣೆಯಿಂದ ಆಚರಿಸಿಕೊಂಡಿತು. `ಸುವರ್ಣ ಲೇಡೀಸ್ ಕ್ಲಬ್ ನ ಜನ್ಮಸ್ಥಳ ಗದಗನಲ್ಲಿಯೇ ೫ನೇವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ಮತ್ತೊಂದು ವಿಶೇಷ. ಸಹಸ್ರಾರು ವೀಕ್ಷಕರ ಜೊತೆಗೆ ನಾಡಿನ ಎಲ್ಲ ಸುವರ್ಣ ಲೇಡೀಸ್ ಕ್ಲಬ್‌ನ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದಂರು.

೫ ವಸಂತ ಪೂರ್ಣಗೊಳಿಸಿದ ಕಾರ್ಯಕ್ರಮದ ವೇದಿಕೆ ರಂಗುರಂಗಿನಿಂದ ಕೂಡಿ ಮದುವಣಗಿತ್ತಿಯ ಹಾಗೆ ಸಜ್ಜಾಗಿತ್ತು. ಅಲ್ಲದೆ ಈ ಸಮಾರಂಭಕ್ಕೆ ಸುವರ್ಣವಾಹಿನಿಯ ದುರ್ಗಾಮತ್ತು ಗುಂಡ್ಯಾನ ಹೆಂಡ್ತಿಧಾರವಾಹಿಯ ಪಾತ್ರಧಾರಿಗಳ ಉಪಸ್ಥಿತಿ ವೇದಿಕೆನ್ನು ಹಬ್ಬದ ವಾತಾವರಣದಂತೆ ಮೆರಗು ನೀಡಿತ್ತು.

ಸುವರ್ಣ ವಾಹಿನಿಯ ಕಾರ್ಯಕ್ರಮಗಳ ಜೊತೆಗೆ ನೂತನ ಷೋಗಳಿಗೆ ತನ್ನದೇ ಆದ ಬಣ್ಣ ಬಣ್ಣದ ಚಿತ್ತಾರಗಳನ್ನು ಹೊಂದಿರುವ ಟೈಟಲ್‌ಗಳು ಜನರ ಇಚ್ಛೆಗಳಿಗೆ ಪಾತ್ರವಾಗಿವೆ. ಕಲರ್‌ಫುಲ್ ಶಿರ್ಷಿಕೆಗಳನ್ನು ನೀಡುವುದರಲ್ಲಿ ಸುವರ್ಣ ಎತ್ತಿದ ಕೈ. ಹಾಗೆ ಸುವರ್ಣ ಲೇಡೀಸ್ ಕ್ಲಬ್‌ನ ೫ವರ್ಷದ ಸಂಭ್ರಮದ ಈ ಸಮಯದಲ್ಲಿ ನೂತನ ವಿನ್ಯಾಸದಿಂದ ಕೂಡಿದ ೩ಡಿ ಎಫೆಕ್ಟ್‌ನ ಕಲರ್ ಫುಲ್ ಟೈಟಲ್ ವೀಕ್ಷಕರ ಮಡಿಲಿಗೆ ಸೇರಿತು.

ಮನರಂಜನೆ ಜೊತೆಗೆ ಸಮಾಜದ ಬಗೆಗೆ ಕಳಕಳಿ ಇರುವ ಸುವರ್ಣ ಲೇಡೀಸ್ ಕ್ಲಬ್ ಇದೇ ಸಂದರ್ಭದಲ್ಲಿ ಆರ್ಥಿಕ ತೊಂದರೆಯಲ್ಲಿರುವ ಕೆಲವರಿಗೆ ಟೇಲರಿಂಗ್ ಮಷೀನ್,ವಿದ್ಯಾಭ್ಯಾಸಕ್ಕಾಗಿ ಶಾಲೆಯ ವಾರ್ಷಿಕ ಫಿ,ತರಕಾರಿ ಮಾರುವ ವೃದ್ಧೆಗೆ ಸೂರುಗಳನ್ನು ನೀಡಿ ಸಾರ್ವಜನಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ಇದರ ಜೊತಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸುವರ್ಣ ಪುರಸ್ಕಾರ ೨೦೧೬ನ್ನು ನೀಡಿ ಗೌರವಿಸಲಾಯಿತು. ೫ವರ್ಷದ ಗದಗ ಜಿಲ್ಲೆಯ ಸಾಧನೆಗೆ ಸುವರ್ಣ ಸಂಪದ ೨೦೧೬ ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಭವ್ಯ ಸಮಾರಂಭಕ್ಕೆ ಪೂಜ್ಯ ಶ್ರೀ ನಿರ್ಭಯಾನಂದ ಸ್ವಾಮಿಜಿಯವರು ಸಾನಿಧ್ಯವಹಿಸಿ ಸುವರ್ಣ ಲೇಡೀಸ್ ಕ್ಲಬ್‌ನ ಸಾಧನೆಯನ್ನು ಕುರಿತು ಪ್ರಶಂಸೆ ವ್ಯಕ್ತ ಪಡಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವ್ಹಿ.ಸಂಕನೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಸುವರ್ಣ ವಾಹಿನಿಯ ಕಾರ್ಯಕ್ರಮಗಳ ಬಗೆಗೆ ಮತ್ತು ಸಂಸ್ಥೆಯ ಬೆಳವಣ ಗೆಗೆ ಅಭಿನಂದನೆ ಸಲ್ಲಿಸಿದರು. ಸುವರ್ಣ ವಾಹಿನಿಯ ಸ್ಟ್ಯಾಟರ್ಜಿ ಹೆಡ್ ಅನೀಲ್ ನಾರಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಲೇಡೀಸ್ ಕ್ಲಬ್‌ನ ಮುಂದಿನ ಯೋಜನೆಗಳನ್ನು ಕುರಿತು ಮಾತನಾಡಿದರು. ಸುವರ್ಣ ಲೇಡೀಸ್ ಕ್ಲಬ್ ಹುಬ್ಬಳ್ಳಿ ವಿಭಾಗದ ಸಂಯೋಜಕರಾದ ಶ್ರೀಮತಿ ಉಮಾ ಮುಕುಂದ ಅತಿಥಿಗಳಾಗಿ ಆಗಮಿಸಿದ್ದರು. ಸುವರ್ಣ ಲೇಡೀಸ್ ಕ್ಲಬ್ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸುವರ್ಣ ವಾಹಿನಿಯ ಹೆಮ್ಮೆಯ ಸಂಸ್ಥೆ ಸುವರ್ಣ ಲೇಡೀಸ್ ಕ್ಲಬ್ ನ ೫ ವರ್ಷ ದಾಖಲೆಯ ದೃಷ್ಯಾವಳಿಗಳು ಇದೇ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ೧೨ಕ್ಕೆ ಸುವರ್ಣ ಪ್ಲಸ್ನಲ್ಲಿ ಮೂಡಿಬರಲಿದೆ.
-13/04/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore