HOME
CINEMA NEWS
GALLERY
TV NEWS
REVIEWS
CONTACT US

ಸ್ಟಾರ್ ಸುವರ್ಣದ ಹೊಸ ರಿಯಾಲಿಟಿ ಷೋ “ಸೂಪರ್ ಜೋಡಿ -2
ಸ್ಟಾರ್ ಸುವರ್ಣ ವಾಹಿನಿಯ ಯಶಸ್ವಿಯ ರಿಯಾಲಿಟಿ ಷೋ ದಲ್ಲಿ ಸೂಪರ್ ಜೋಡಿಯೂ ಕೂಡಾ ಒಂದು. ಸೀಜನ್ ಒಂದರಲ್ಲಿ ಕಿರುತೆರೆ,ಹಿರುತೆರೆ ಯ10 ಜೋಡಿಗಳು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿದ್ದರು. ಈಗ ಅದೇ ಉತ್ಸಾಹದಿಂದ ಸೀಜನ್ 2 ನ್ನು ಪ್ರಾರಂಭಿಸಲು ಹೊರಟಿದೆ.

ಈಗಾಗಲೇ ಈ ಷೋಗೆ ಸಂಬಂಧ ಪಟ್ಟ ಪ್ರೋಮೋ ವಾಹಿನಿಯಲ್ಲಿ ಬಿತ್ತಾರವಾಗುತ್ತಿದೆ. “ನಾವು ಎಂಥಾ ಸನ್ನಿವೇಷವನ್ನು ಎದುರಿಸುತ್ತೇವೆ, ಆದರೆ ಹೃದಯದಲ್ಲಿರುವವರು ಎದರು ಬಂದಾಗ ಆ ಕ್ಷಣ ಜೀವ ಜಲ್ ಎನ್ನುತ್ತದೆ” ಎಂಬ ಪ್ರೋಮೋ ಕಂಟೆಂಟಿನಲ್ಲಿಯೇ ಜೋಡಿಗಳ ಅನ್ಯೋನ್ಯ ಪ್ರೀತಿಯ ಬಗೆಗೆ ಹೇಳಲಾಗಿದೆ ಆದರೆ ದಿಲ್ ಜೋತೆ ಧಮ್ ಇರಬೇಕು ಈ ಷೋನ ಜಯಮಾಲೆ ಧರಿಸಲು.

ಅಸಲಿ ಜೋಡಿಗಳ ಬಾಂಧವ್ಯವನ್ನು ತೋರಿಸುವಂಥ ರಿಯಾಲಿಟಿ ಷೋ "ಸೂಪರ್ ಜೊಡಿ" ಕರ್ನಾಟಕದ ಹತ್ತು ಜನಪ್ರೀಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ ಜೋಡಿಯಾಗಲು ತಯಾರಿ ನಡೆಸಿದ್ದು, ಆಟವಾಡುತ್ತಾ ಹರಟೆ ಹೊಡೆಯುತ್ತಾ , ಕೊಟ್ಟಿರುವ ಟಾಸ್ಕ್‍ಗಳನ್ನು ಎದುರಿಸಲು ರೆಡಿಯಾಗಿದ್ದಾರೆ. ಈ ಸೀಸನ್ ನ ಟಾಸ್ಕಗಳು ಕಲ್ಪನೆಗೊ ಮೀರಿದ್ದು , ಒಟ್ಟಾರೆ ಅಭಿಮಾನಿಗಳಿಗೆ ಈ ಸಾರ್ತಿ ಡಬ್ಬಲ್ ಧಮಾಕ ಡಬ್ಬಲ್ ಥ್ರಿಲ್ ಗ್ಯಾರಂಟಿ.

ಈಗಾಗಲೇ ಕರ್ನಾಟಕದ ಮನೆಮಾತಾಗಿರುವ ಅಕುಲ್ ಈ ಸೀಜನ್‍ನ ನಿರೂಪಕ. “ಸೂಪರ್ ಜೋಡಿ” ಯಲ್ಲಿ ಈ ಸೀಜನ್‍ನಲ್ಲಿ ಯಾರು ಆ ಹತ್ತು ಜೋಡಿಗಳು ? ಯಾವ ರೀತಿ ಈ ಜೋಡಿಗಳು ರಂಜಿಸುತ್ತಾರೆ ಎಂಬುದನ್ನು ಕಾದುನೋಡಬೆಕಾಗಿದೆ.
-27/11/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore