HOME
CINEMA NEWS
GALLERY
TV NEWS
REVIEWS
CONTACT US

ಸೂಪರ್‍ಜೋಡಿ ಗ್ರ್ಯಾಂಡ್ ಫಿನಾಲೆಯಲ್ಲಿ” ಡಾ.ಅಂಬರೀಶ್‍ಮತ್ತು ಸುಮಲತಾ ಜೋಡಿ ಇದೇ ಭಾನುವಾರ(ಏಪ್ರೀಲ್ 23) ಸಂಜೆ7ಕ್ಕೆ
ಹಲವಾರು ಸಂಚಿಕೆಗಳಿಂದ ಕಾಯುತ್ತಿದ್ದ ಸೂಪರ್ ಜೋಡಿಯ ಕೊನೆಯ ಘಟ್ಟೀಗ ತಲುಪಿದೆ. ಯಾರ್ ಆಗ್ತಾರೆ ಕರ್ನಾಟಕದ ಸೂಪರ್ ಜೋಡಿ? ಎಂಬ ಇಷ್ಟು ದಿನದ ಕುತೂಹಲಕಾರಿಯಾಗಿದ್ದ ಶೋಗೆ ಈ ವಾರ ತೆರೆ ಬೀಳಲಿದೆ. ಬೃಹದಾಕಾರವಾದ ಆವರಣದಲ್ಲಿ ಬಣ್ಣ ಬಣ್ಣದ ಲೈಟ್‍ಗಳಿಂದ ಅಲಂಕರಿಸಿ ಕಿಕ್ಕಿರಿದ ಸಾವಿರಾರು ಅಭಿಮಾನಿಗಳ ಜೈಕಾರದಿಂದ ವಿಭಿನ್ನವಾಗಿ ವೈವಿದ್ಯಮಯವಾಗಿ ವಿಜೃಂಬಿಸಿತ್ತು ಸೀಸನ್ 2 ಗ್ರ್ಯಾಂಡ್ ಫಿನಾಲೆ ವೇದಿಕೆ. ತಮ್ಮ ನೆಚ್ಚಿನ ಸೂಪರ್ ಜೋಡಿಗಳಿಗೆ ಪ್ರೋತ್ಸಹಿಸಲು ದಿಂಡು ದಿಂಡಾಗಿ ಬಂದಿತ್ತು ಅಭಿಮಾನನಿಗಳ ಬಳಗ.

ಡಾ|| ಅಂಬರೀಶ್ ಅವರು ಗ್ರ್ಯಾಂಡ್ ಫಿನಾಲೆಯ ಗ್ರ್ಯಾಂಡ್ ಎಂಟ್ರಿಗೆ ಚಪ್ಪಾಳೆ ಕೂಗಾಟಗಳಿಂದ ಅಭಿಮಾನಿಗಳು ಪ್ರೋತ್ಸಹಿಸಿದರು. ತಮ್ಮ ಅಭಿಮಾನಿಗಳ ಜೊತೆ ಹಾಡಿ, ಕುಣ ದು, ಡೈಲಾಗ್ ಹೊಡೆದು ತಮ್ಮ ಅಭಿಮಾನಿಗಳನ್ನು ಸಂತೋಷ ಪಡಿಸಿದರು. ಗ್ರ್ಯಾಂಡ್ ಫಿನಾಲೆಯ ಜೋಡಿಗಳಿಗೆ ಆಶೀರ್ವದಿಸಿ ಜೋಡಿಗಳು ಕೇಳಿದ ಪ್ರಶ್ನೆಗಳಿಗೆ ಬುದ್ದಿವಂತಿಕೆಯಿಂದ ಉತ್ತಿರಿಸಿ ಖುಷಿ ಪಟ್ಟರು.
ಸ್ಯಾಂಡಲ್‍ವುಡ್‍ನ ಅಪ್ರತಿಮ ಸೌಂದರ್ಯವಂತೆ ಐಂದ್ರಿತ ರೈ ರ ರೋಮಾಂಚನಕಾರಿ ನೃತ್ಯ ವೇದಿಕೆಗೆ ಮತ್ತುಷ್ಟು ರಂಗು ತುಂಬಿತು.

ಸೀಸನ್ 1 ನ ವಿನ್ನರ್ ಆದ ವಿನಯ್ ಗೌಡ ಮತ್ತು ನಿಶ್ಚಿತ ಗೌಡ ವೇದಿಕೆಗೆ ಆಗಮಿಸಿ ತಮ್ಮ ಸಿಹಿ ಜರ್ನಿಯನ್ನು ನೆನೆದು ಹಂಚಿಕೊಂಡರು. ಕಾಮಿಡಿ ತರಂಗ ವಿಶ್ವ ಮತ್ತು ಸಾತ್ವಿಕರ ಕಾಮಿಡಿಯ ಜಲಕ್ ಎಲ್ಲರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ರೆಹಮಾನ್ ಮತ್ತು ಸಬೀನ ಅವರು ವೇದಿಕೆಯಲ್ಲಿ ತಮ್ಮ ಪ್ರೇಮ ಪ್ರಸಂಗವನ್ನ ನ್ಯೂಸ್ ರೀಡರ್ ಮೂಲಕ ಎಲ್ಲರನ್ನು ನಕ್ಕು ನಲಿಸಿದರು.

ಹ್ಯಾಪಿ ನ್ಯೂ ಇಯರ್ ತಂಡದಿಂದ ಭರ್ಜರಿ ಡ್ಯಾನ್ಸ್ ಬಿ.ಸಿ ಪಟೇಲ್ ಅವರ ಹಾಡು, ಶೃತಿ ಹರಿಹರನ್ ಅವರ ಡ್ಯಾನ್ಸ್ ಬಂದಿದ್ದ ಪ್ರೇಕ್ಷಕರಿಗೆ ಮನರಂಜನೆಯ ಔತಣವನ್ನೇ ನೀಡಿದರು.
ಹರ್ಷಿತ ಪೂಣಚ್ಚ್ ಅವರ ವಿಭಿನ್ನ ಹಾಡುಗಳಿಗೆ ಹೆಜ್ಜೆ ಹಾಕಿ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಮತ್ತುಷ್ಟು ಮೆರಗು ನೀಡಿದರು. ಗ್ರ್ಯಾಂಡ್ ಫಿನಾಲೆ ಜೋಡಿಗಳಿಂದ ಗ್ರ್ಯಾಂಡ್ ಡ್ಯಾನ್ಸ್ ಪರ್‍ಫಾಮೆನ್ಸ್ ಕೊಟ್ಟು. ಪ್ರೋತ್ಸಹಿಸಲು ಬಂದಿದ್ದ ತಮ್ಮ ಅಭಿಮಾನಿಗಳಿಗೆ ಮೆಚ್ಚಿಸಿದರು.

ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಅವರ ಜೋಡಿ ವೇದಿಕೆಯಲ್ಲಿ ತಮ್ಮ ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟು ಒಬ್ಬರಿಗೊಬ್ಬರು ನಾಚಿಕೊಂಡರು. ಅಂತಿಮವಾಗಿ ಗ್ರ್ಯಾಂಡ್ ಫಿನಾಲೆಯ ಸ್ಪರ್ಧಿಗಳ ಅಂಕಗಳನ್ನ, ಅವರು ಭಾಗವಹಿಸಿದ ನಡವಳಿಕೆಯನ್ನ ಮತ್ತು ಹೊಂದಾಣ ಕೆ ಶಿಸ್ತುನ್ನ ಪರಿಗಣ ಸಿ ಅಂತಿಮವಾಗಿ ಕರ್ನಾಟಕದ ನೆಚ್ಚಿನ ಸೂಪರ್ ಜೋಡಿ ಟೈಟಲ್ ಜೊತೆ ಹತ್ತು ಲಕ್ಷ ನಗದು ಬಹುಮಾನ ನೀಡಿ, ಸನ್ಮಾನಿಸಲಾಯಿತು.
ಒಟ್ಟಿನಲ್ಲಿ ಈ ಸೀಸನ್ ಸೂಪರ್ ಜೋಡಿ 2 ಭರ್ಜರಿ ಮನರಂಜನೆ ತ್ರಿಲ್ಲಿಂಗ್ ಗಿಮಿಕ್ ಹಾಡು ಕುಣ ತ ಮೋಜು ಮಸ್ತಿಯಿಂದ ನಿಮ್ಮನೆಲ್ಲ ರಂಜಿಸಲಿದೆ. ಇದೇ ಭಾನುವಾರ ( ಏಪ್ರೀಲ್ 23) ಸಂಜೆ 7 ಕ್ಕೆ ಸ್ಟಾರ್ ಸುವರ್ಣವಾಹಿನಿಯಲ್ಲಿ .
-21/04/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore