HOME
CINEMA NEWS
GALLERY
TV NEWS
REVIEWS
CONTACT US

ಸೂಪರ್ ಜೋಡಿಯಲ್ಲಿ “ಒಳ್ಳೆ ಹುಡುಗ ಪ್ರಥಮ್” ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ
ಸೂಪರ್ ಜೋಡಿಯಲ್ಲಿ ಪ್ರತಿ ವಾರ ಸೆಲಬ್ರಿಟಿಗಳು ಆಗಮಿಸುತ್ತಿದ್ದಾರೆ.ಅಂತೆಯೇ ಈ ವಾರವೂ ಜನ-ಮನ ಗೆದ್ದ ಒಳ್ಳೆ ಹುಡುಗನ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ.
ಬರೀ ಕಿರಿಕ್‍ನಲ್ಲೇ ಹೆಸರಾಗಿದ್ದ ಪ್ರಥಮ್ ಮತ್ತು ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಜೋಡಿ ಸೂಪರ್ ಜೋಡಿಯಲ್ಲಿ ತಮ್ಮ ಜೀವನದ ಸಿಹಿ ಕಹಿ ಕ್ಷಣಗಳನ್ನ ಹಂಚಿಕೊಂಡು ಮನದಾಳದ ಮಾತುಗಳ ಮೂಲಕ ಒಬ್ಬರನ್ನ ಒಬ್ಬರು ಅಪ್ಪಿ ಖುಷಿ ಪಟ್ಟ ಅದ್ಬುತ ಸ್ವಾರಸ್ಯಕರ ಸಂಗತಿ ಈ ವಾರದ ಸಂಚಿಕೆಯಲ್ಲಿದೆ.

ಒಳ್ಳೆ ಹುಡುಗ ಪ್ರಥಮ್‍ನ ಹೊಗಳಿದ ವೆಂಕಟ್ ಎಲ್ಲರನ್ನು ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಇವರೀರ್ವರ ಗೆಳತನದ ಬಗೆಗೆ ಸಂತಸ ವ್ಯಕ್ತ ಪಡೆಸಿದ ಸೂಪರ್ ಜೋಡಿಗಳು ಹರ್ಷೋದ್ಗಾರದಿಂದ ಅವರ ಗೆಳತನವನ್ನು ಕೊಂಡಾಡಿದರು.

ತಮ್ಮ ಪ್ರೀತಿಯ ದ್ಯೋತಕವಾಗಿ ಈ ಜೋಡಿಗಳುಒಂದಿಷ್ಟು ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಹಾಗೆ ಪ್ರಥಮ್ ಎಲ್ಲಾ ಜೋಡಿಗಳಿಗೆ ಶುಭಕೋರಿ ಸೂಪರ್ ಜೋಡಿ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡೆಸಿದ್ದಾರೆ.

ಹಾಗೆ ಈ ವಾರ ಹಗ್ಗ ಜಗ್ಗಾಟ ಮತ್ತು ಅಡುಗೆಯ ಟಾಸ್ಕ್‍ನಲ್ಲಿ ಈ ಸೂಪರ್ ಜೋಡಿಗಳು ಎಲ್ಲರನ್ನು ಮನರಂಜಿಸಿದ್ದಾರೆ.
ಅಂತಿಮವಾಗಿ ಉಳಿದ 7 ಜೋಡಿಗಳ ಮಧ್ಯೆ ಯಾರು ಎಲಿಮಿನೇಶನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸೂಪರ್ ಜೋಡಿ ಸೀಸನ್ 2 ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.
-26/02/17

ಕಿರುತೆರೆಯಲ್ಲಿಯೇ ಪ್ರಪ್ರಥಮ ಬಾರಿಗೆ ಸೂಪರ್ ಜೋಡಿ -2 ಯಿಂದ “ಫ್ಲ್ಯಾಶ್ ಮಾಬ್” ಎಳ್ಳು ಬೆಲ್ಲದ ಸುಗ್ಗಿ ಸಂಭ್ರಮದಲ್ಲಿ ನಿನಾಸಂ ಸತೀಶ್,ಶೃತಿ ಹರಿಹರನ್,ಚಿಕ್ಕಣ್ಣ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ
ಅದ್ಧೂರಿ ಸಂಭ್ರಮದೊಂದಿಗೆ ಪ್ರಾರಂಭವಾದ ಸೂಪರ್ ಜೋಡಿ – 2 ಈ ವಾರ ಅದ್ಭುತ ದಾಖಲೆಯನ್ನು ನಿರ್ಮಿಸಲು ದಾಪುಗಾಲು ಹಾಕಿದೆ. ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ “ಫ್ಲ್ಯಾಶ್ ಮಾಬ್” ಮಾಡುವುದರ ಮೂಲಕ ಎಲ್ಲರ ಗಮನ ಸೆಳದಿದೆ. ಬೆಂಗಳೂರಿನ ಮಂತ್ರಿಸ್ಕ್ವೇರ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವೀಕ್ಷಕರ ಮದ್ಧ್ಯೆ ಸೂಪರ್ ಜೋಡಿಗಳು ನೃತ್ಯ ಮತ್ತು ಹಾಡುಗಳನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.

ನೈಜೇರಿಯಾದ ಆಡೋ ಅಬ್ದುಲ್ಲಾ “ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು” ಹಾಡನ್ನು ಹಾಡಿದರೆ, ಸೌಮ್ಯಾ ಬೆಲ್ಲಿ ಡ್ಯಾನ್ಸ್ ಮಾಡಿದರು. ಅಮೃತವರ್ಷಿಣ ಯ ವರ್ಷಾ, ಹರಹರ ಮಹಾದೇವದ ಸತಿ, ಸೈ ಡ್ಯಾನ್ಸ್‍ನ ಸೌಮ್ಯಾ ಜೋಡಿಗಳು ನೆರದ ಜನರ ಸಮ್ಮೂಖದಲ್ಲಿ ಒಂದಿಷ್ಟು ಸ್ಟೇಪ್‍ನ್ನು ಹಾಕಿ ಎಲ್ಲರನ್ನು ರಂಜಿಸಿದರು.

ನಿರೂಪಕ ಅಕುಲ್ ಬಾಲಾಜಿ ಸೂಪರ್ ಜೋಡಿ – 2 ಟೈಟಲ್ ಟ್ರ್ಯಾಕ್ ಗೆ ಡ್ಯಾನ್ಸ್‍ನ ಮುಖಾಂತರ ಎಂಟ್ರಿಕೊಟ್ಟು ಸೇರಿದ್ದ ಸಭಿಕರನ್ನು ತಮ್ಮ ಮಾತಿನ ವರಸೆಯಿಂದ ಗಮನಸೆಳೆದರು.

ಈ ವಾರ ಸೂಪರ್ ಜೋಡಿ – 2ಯಲ್ಲಿ ಡಬಲ್ ಧಮಾಕಾ ಅಂತನೇ ಹೇಳಬಹುದು. ಒಂದಡೆ “ಪ್ಲಾಶ್ ಮೊಬ್” ಆದರೆ ಇನ್ನೊಂದೆಡೆ ಸಂಕ್ರಾಂತಿಯ ಸಂಭ್ರಮ. ಏಳ್ಳು-ಬೆಲ್ಲದ ಸುಗ್ಗಿ ಸಂಭ್ರಮದೊಂದಿಗೆ ಹಳ್ಳಿ ಸೊಗಡಿನ ಸಂಪ್ರದಾಯಕ ಡೊಳ್ಳು ಕುಣ ತಗಳ ಮೂಲಕ, ಜೋಡಿಗಳು ಅದ್ಧೂರಿಯಾಗಿ ಆಖಾಡಕ್ಕೆ ಏಂಟ್ರಿ ಕೊಟ್ರು, ಹುಚ್ಚವೆಂಕಟ್ ಅವರು ಜೋಡಿಗಳಿಗೆ ಹಬ್ಬದ ವಿಶೇಷವಾಗಿ ಅಕ್ಕ-ತಂಗಿಯರಿಗೆ, ಉಡುಗೊರೆ ಕೊಟ್ಟು ಆಶೀರ್ವಾದ ಮಾಡಿದರು.

ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಕನ್ನಡದ ಸಿನಿಮಾ ಸ್ಟಾರ್‍ಗಳು ಆಗಮಿಸಿ ಮತ್ತಷ್ಟು ಮೆರಗನ್ನು ನೀಡಿದರು.
“ಲೀ” ಚಿತ್ರತಂಡದಿಂದ ಸುಮಂತ ಶೈಲೆಂದ್ರ, ನಭ್‍ನಟೇಶ್, ಸ್ನೇಹ, ಕಾಮಿಡಿಕಿಂಗ್ ಚಿಕ್ಕಣ್ಣ ಸೂಪರ್ ಜೋಡಿ ಸೆಟ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ್ರೆ, “ಬ್ಯೂಟಿಪುಲ್ ಮನಸುಗಳು”ಚಿತ್ರದ ನಾಯಕ ನೀನಾಸಂ ಸತೀಶ್ ಆಕುಲ್ ಜೋತೆ ಕಿಕ್ ಕೋಟ್ರೆ ಶೃತಿಹರಿಹರನ್ ಮಾತಿನಲ್ಲೇ ಮೂಡಿ ಮಾಡಿ ಡಬ್ಬಲ್ ಧಮಾಕ ಸೃಷ್ಟಿಸಿದರು.

ಕರುನಾಡ ವೀಕ್ಷಕರಿಗೆ ಒಟ್ಟಾರೆ ಈ ವಾರ ಡಬಲ್ ಧಮಾಕ ಡಬಲ್ ಖುಷಿಯನ್ನು ಸೂಪರ್ ಜೋಡಿ ನೀಡಲಿದೆ. ಸಂಕ್ರಾಂತಿಯ ಸಂಭ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.
-13/01/17

2017ರ ಸ್ಟಾರ್ ಸುವರ್ಣದ ಮೊದಲ ರಿಯಾಲಿಟಿ ಷೋ “ಸೂಪರ್ ಜೋಡಿ -2
ಸೆಂಚುರಿ ಸ್ಟಾರ್ ‘ರಮೇಶ ಅರವಿಂದ’ರಿಂದ ವಿದ್ಯುಕ್ತ ಚಾಲನೆ ಕಾಳಿಸ್ವಾಮಿ, ಹುಚ್ಚಾ ವೆಂಕಟ್ ಮತ್ತು ಬಿಡ್ಡ ಆದಿ ಲೊಕೆಶ್ ಜೋಡಿಗಳ ಮಸ್ತ್ ಎಂಟ್ರಿ ಜನವರಿ 7ರಿದ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ 2017ರಲ್ಲಿ ಕರುನಾಡ ವೀಕ್ಷಕರಿಗೆ ಸಂಪೂರ್ಣವಾಗಿ ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯ ಹೊಸವರ್ಷದ ಮೊದಲ ರಿಯಾಲಿಟಿ ಷೋ “ಸೂಪರ್ ಜೋಡಿ ಸಿಜನ್ 2”ನ್ನು ಇದೇ ಶನಿವಾರದಿಂದ ರಾತ್ರಿ 8ಕ್ಕೆ ವೀಕ್ಷಕರ ಮಡಲಿಗೆ ಹಾಕಲಿದೆ.

ಈಗಾಲೇ ಸಾಕಷ್ಟು ರಿಯಾಲಿಟಿ ಷೋಗಳನ್ನು ನೀಡಿ ಜನಮನ ಗೆದ್ದಿರುವ ಸ್ಟಾರ್ ಸುವರ್ಣದ ಯಶಸ್ವಿಯ ರಿಯಾಲಿಟಿ ಷೋ ದಲ್ಲಿ ಸೂಪರ್ ಜೋಡಿಯೂ ಕೂಡಾ ಒಂದು. ಸೀಜನ್ ಒಂದರಲ್ಲಿ ಕಿರುತೆರೆ, ಹಿರುತೆರೆ ಯ10 ಜೋಡಿಗಳು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿದ್ದರು. ಈಗ ಅದೇ ಉತ್ಸಾಹದಿಂದ ಸೀಜನ್ 2 ನ್ನು ಪ್ರಾರಂಭಿಸಲು ಹೊರಟಿದೆ.
“ಸೂಪರ್ ಜೋಡಿ 2”ಅದ್ಧೂರಿ ವೇದಿಕೆಯಲ್ಲಿ ಹತ್ತು ಕಲರ್‍ಫುಲ್, ಬ್ಯೂಟಿಫುಲ್, ಎಮೋಶನಲ್, ಕಾಮೆಡಿ ಜೋಡಿಗಳು ಎಂಟ್ರಿ ಕೊಡುವುದರ ಮೂಲಕ ಕಿರುತೆರೆಯಲ್ಲಿ "ಸೂಪರ್ ಜೋಡಿ" ಆಗೋದಕ್ಕೆ "ರಣರಂಗಕ್ಕೆ" ಬಂದಿದ್ದಾರೆ.

ಪುಷ್ಪಕ ವಿಮಾನದ ಪೈಲೆಟ್ “ಸೆಂಚುರಿ ಸ್ಟಾರ್” ರಮೇಶ್ ಅರವಿಂದ್ ಈ ಷೋಗೆ ಚಾಲನೆ ನೀಡಿದ್ದಾರೆ. ಜೋಡಿಗಳಲ್ಲಿ ಹೊಂದಾಣ ಕೆ ಎಂಬುದು ಬಹಳ ಮುಖ್ಯ ಅದನ್ನು ಸಾಧಿಸದ ವರೇ ಸೂಪರ್ ಜೋಡಿಗಳು, ಜೋಡಿಗಳ ಬಾಂಧವ್ಯವನ್ನು ತೋರಿಸುವಂಥ "ಸೂಪರ್ ಜೊಡಿ - 2" ಪ್ರಾರಂಭಿಸುತ್ತಿರವ ಸ್ಟಾರ್ ಸುವರ್ಣ ವಾಹಿನಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶ್ಲಾಘನೆ ನೀಡಿದರು. ಇದೇ ಸಂದರ್ಭದಲ್ಲಿ ರಮೇಶ್ ಅರವಿಂದ್ ಈ ಜೋಡಿಗಳ ಸುಂದರೀಯರ ಜೊತೆ ಒಂದಷ್ಟು ಸ್ಟೇಪ್ ಹಾಕಿ ಶುಭ ಹಾರೈಸಿದರು.
ಸೂಪರ್ ಜೋಡಿಯ ಮೊದಲ ಸಂಚಿಕೆಯಲ್ಲಿ ಫೈರಿಂಗ್ ಸ್ಟಾರ್‍ನ ಪಂಚ್ ಡೈಲಾಗ್ಸ್, ಕಾಮಿಡಿ ಕೌಂಟರ್‍ಗಳು ಜೊತೆಗೆ ಮನದಾಳದ ಮಾತುಗಳನ್ನು ಮೊಟ್ಟ ಮೊದಲ ಬಾರಿಗೆ ಜೋಡಿ ಜೊತೆ ಹುಚ್ಚ ವೆಂಕಟ್ ಹಂಚಿಕೊಂಡರು.

ಆದಿ ಲೋಕೇಶ ಮತ್ತು ಆಂಜ್ಯಲೀನ ಜೋಡಿ ರ್ಯಾಪ್ ಸಾಂಗ ಹಾಡುವುದರ ಮೂಲಕ ಗ್ಯ್ರಾಂಡ್ ಎಂಟ್ರಿ ಕೊಟ್ಟರೇ,ಹೆಂಡತಿ ಜೊತೆ ಲವ್ ಸ್ಟೂರಿಯನ್ನು ನೆನೆದು ಗುಟ್ಟನ್ನು ಕಾಳಿ ಸ್ವಾಮಿ ಬಿಚ್ಚಿಟ್ಟರು. ನಗುತ್ತಾ ನಗುಸುತ್ತಾ ಎಲ್ಲರ ಮನಸ್ಸು ಸೆಳೆದ ಕಾಮಿಡಿ ಜೋಡಿ ವಿಕ್ರಮ್ ಸೂರಿ ಮತ್ತು ನಮಿತ, ಸೂಪರ್ ಡ್ಯಾನ್ಸ್ ಮಾಡಿ ಎಲ್ಲರಿಗೆ ಚಾಲೆಂಜ್ ಮಾಡಿದ ಬ್ಯೂಟಿ ಅಂಡ್ ಟ್ಯಾಲೆಂಟ್ ಹರ ಹರ ಮಾಹದೇವನ ಸತಿ ಮತ್ತು ಕಾರ್ತಿಕ ಎಲ್ಲರನ್ನು ರಂಜಿಸಿದ್ದಾರೆ.

ಅಸಲಿ ಜೋಡಿಗಳ ರಿಯಾಲಿಟಿ ಷೋ ಕರ್ನಾಟಕದ ಹತ್ತು ಜನಪ್ರೀಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ ಜೋಡಿಯಾಗಲು ಸಿದ್ಧರಾಗಿದ್ದಾರೆ. ಈ ಸೀಜನ್ ನ ಟಾಸ್ಕಗಳು ಕಲ್ಪನೆಗೊ ಮೀರಿದ್ದು, ಒಟ್ಟಾರೆ ಅಭಿಮಾನಿಗಳಿಗೆ ಈ ಷೋ ಡಬ್ಬಲ್ ಧಮಾಕ ಡಬ್ಬಲ್ ಥ್ರಿಲ್ ನೀಡಲಿದೆ.

ಈಗಾಗಲೇ ಕರ್ನಾಟಕದ ಮನೆಮಾತಾಗಿರುವ ಅಕುಲ್ ಈ ಸೀಜನ್‍ನ ನಿರೂಪಕ. ಎಂದಿನಂತೆ ತಮ್ಮ ಮಾತಿನ ವರಸೆಯಿಂದ ಎಲ್ಲರನ್ನು ಗಮನಸೆಳೆಯಲಿದ್ದಾರೆ.
ಇನ್ನೂಳಿದ ಜೋಡಿಗಳಾದ ನೈಜೇರಿಯಾ ಹುಡುಗ ಆಡೋ ಅಬ್ದುಲ್ ಮತ್ತು ಕೃಪಾ, ಅಮೃತವರ್ಷಿಣ ಯ ಸ್ವಾತಿ ಮತ್ತು ಅನೀಲ್, ಸೈ ಮಾಮ್ಸ್‍ನ ಸೌಮ್ಯಾ ಮತ್ತು ಭಾನು ಪ್ರಕಾಶ್, ಗೀತಾಂಜಲಿ ಧಾರಾವಾಹಿಯ ನಿಶಿತಾ ಗೌಡಾ ಮತ್ತು ಪ್ರಸನ್ನ್ ಮತ್ತು ನಟ ಅರುಣ್ ಮತ್ತು ಮಾಧುರ್ಯಾ ಕಣದಲ್ಲಿದ್ದಾರೆ.
ಹತ್ತು ಜೋಡಿಗಳ “ಸೂಪರ್ ಜೋಡಿ ಸಿಜನ್ 2” ಇದೇ ಜನವರಿ 7ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸ್ಟಾರ್ ಸುವರ್ಣ ಚಾನಲ್ ನಲ್ಲಿ ಮೂಡಿಬರಲಿದೆ.
-6/01/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore