HOME
CINEMA NEWS
GALLERY
TV NEWS
REVIEWS
CONTACT US

ಹೊಸಬರ ಸ್ಟಾರ್‍ಕನ್ನಡಿಗ
ಹೊಸಬರೇ ಸೇರಿಕೊಂಡು ‘ಸ್ಟಾರ್‍ಕನ್ನಡಿಗ’ ಚಿತ್ರದಕತೆಯು ಸಿನಿಮಾದೊಳಗೊಂದು ಸಿನಿಮಾಇರುವುದು ವಿಶೇಷ. ಯುವಕರತಂಡವೊಂದುಚಿತ್ರ ಮಾಡಲುತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದಅವರ ಆಕಾಂಕ್ಷೆಗಳು ಬೇರೆಕಡೆಗೆ ವಾಲುತ್ತದೆ.ಅಂತಿಮವಾಗಿ ಪ್ರೀತಿ, ಬದುಕುಇದರಲ್ಲಿಯಾವುದುಗೆಲ್ಲುತ್ತೆಎಂಬುದುಕತೆ ಸಾರಾಂಶವಾಗಿದೆ. ಪವರ್‍ಸ್ಟಾರ್, ಛಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್ ಮೂವರ ಹಿಂದೇ ಸ್ಟಾರ್‍ಇರುತ್ತಾನೆ. ಗಾಂದಿನಗರದಗಲ್ಲಿಗೂಜನರ ದಿಲ್ಲಿಗೂ ಈ ಸ್ಟಾರ್ ಸೂಪರ್‍ಸ್ಟಾರ್‍ಎಂದು ಪೋಸ್ಟರ್‍ನಲ್ಲಿ ಮುದ್ರಣವಾಗಿರುವಪದಗಳಿಗೆ ಉತ್ತರವು ನೋಡಿದಾಗ ತಿಳಿಯುತ್ತದಂತೆ.

ಹಲವು ವಿಭಾಗಗಳಲ್ಲಿ ಕೆಲಸ ಮಾಡಿದಅನುಭವಇರುವವಿ.ಆರ್.ಮಂಜುನಾಥ್‍ಗೆಏನಾದರೂ ಸಾಧಿಸಬೇಕೆಂಬ ಛಲ ಬಂದಿದೆ. ಬೆಂಬಲಕ್ಕೆ ಗೆಳಯರಾದ ಮೂವರುಆಟೋಚಾಲಕರು ಕೈ ಜೋಡಿಸಿದ್ದರಿಂದ ಸಿನಿಮಾ ಬಿಡುಗಡೆ ಹಂತದವರೆಗೂ ಬಂದಿದೆ.ಚಿತ್ರಕತೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಿರ್ಮಾಣಜೊತೆಗೆ ನಾಯಕನಾಗಿ ನಿರ್ದೇಶಕನ ಪಾತ್ರದಲ್ಲಿಇವರು ಕಾಣಿಸಿಕೊಂಡಿದ್ದಾರೆ.ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಐದು ಹಾಡುಗಳಿಗೆ ಪವನ್‍ಪಾರ್ಥ ಸಂಗೀತ ಸಂಯೋಜಿಸಿದ್ದಾರೆ.ಕತೆಯಲ್ಲಿ ಬರುವಶಾಲಿನಿಭಟ್‍ಆಟೋಚಾಲಕಿಯಾಗಿ ನಾಯಕಿ. ನಿರ್ಮಾಪಕನಾಗಿರಾಕ್‍ಲೈನ್‍ಸುಧಾಕರ್, ಆಟೋ ಮಾಲೀಕನಾಗಿಕೊಬ್ರನಾಗರಾಜ್, ಇವರೊಂದಿಗೆ ಹೊಸ ಪ್ರತಿಭೆಗಳಾದ ಕಿರಣ್, ರೋಹಿತ್, ಕೆವಿನ್, ಮೋಹನ್ ಮುಂತಾದವರು ನಟಿಸಿದ್ದಾರೆ. ಸಂಕಲನ ಶಿವಕುಮಾರಸ್ವಾಮಿ, ಛಾಯಾಗ್ರಹಣ ಮಹದೇವ್, ನೃತ್ಯ ಫ್ರಾನ್ಸಿಸ್-ಪ್ರತಾಪ್‍ಮೆನುಅವರದಾಗಿದೆ.ಸಿನಿಮಾದ ಮೊದಲ ಪೋಸ್ಟರ್‍ನ್ನುಕಲಾವಿದರು, ತಂತ್ರಜ್ಘರಅಮ್ಮಂದಿರು ಲೋಕಾರ್ಪಣೆ ಮಾಡಿ ಮಕ್ಕಳ ಸಾಹಸಕ್ಕೆ ಚಾಲನೆ ಕೊಟ್ಟರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/07/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore