HOME
CINEMA NEWS
GALLERY
TV NEWS
REVIEWS
CONTACT US

"ಡ್ಯಾನ್ಸ್ ಡ್ಯಾನ್ಸ್" ಷೋ ನಲ್ಲಿ "ಶಿಲ್ಪಾ ಶೆಟ್ಟಿ" 'ಬೆಲ್ಲಿ ಡ್ಯಾನ್ಸ್ ಮಾಡಿದ ಮಂಗಳೂರ ಬೆಡಗಿ'
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋ ನ ಪ್ರತಿವಾರ ಡಿಫರೆಂಟಾಗಿ ಮೂಡಿ ಬರುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲ ಅತಿಥಿಯಾಗಿ ಬಂದದ್ದು ವೇದಿಕೆಯ ಮೇಲೆ ಕ್ರೇಜಿ ಲೋಕವನ್ನೇ ನೀರ್ಮಾಣ ಮಾಡಿದ ಹಾಗೆ ಇತ್ತು.ಇನ್ನೂ ಹಿಂದಿನ ಸಂಚಿಕೆಯಲ್ಲಿ ಖುಷ್ಬು ಎಂಟ್ರಿ ಎಲ್ಲರ ಮನದಲ್ಲಿ ತಲ್ಲಣ ಉಂಟು ಮಾಡಿತ್ತು. ಈ ವಾರದ ಸಂಚಿಕೆಯಲ್ಲಿ ಕನ್ನಡದವರೇ ಆದ ಬಾಲಿವುಡ್‌ನಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಮಂಗಳೂರಿನ ಬೆಡಗಿ "ಶಿಲ್ಪಾ ಶೆಟ್ಟಿ" ವಿಶೇಷ ಅತಿಥಿ.

ಫಿಲ್ಮ್ ಫೇರ್ ನಿಂದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶಿಲ್ಪಾ ಶೆಟ್ಟಿಯವರನ್ನು ರಾಣಿಯರ ಹಾಗೆ ಪಲ್ಲಕ್ಕಿಯ ಮೂಕಾಂತರ ವೇದಿಕೆಗೆ ಕರೆತಂದಿರುವ ಕ್ಷಣಗಳು ಬಲು ರಂಜನೀಯವಾಗಿದೆ.. ಹಾಗೆ ೧೦ ಸ್ಪರ್ಧಿಗಳು ಅವರ ಮೆಲೆ ಪುಷ್ಪ ವೃಷ್ಠಿಯನ್ನು ಗೈದಿರುವರು.ಪಲ್ಲಿಕ್ಕಿಯಿಂದ ಇಳಿದ ಶಿಲ್ಪಾ ನಿರೂಪಕ ಅಕುಲ್ ಜೊತೆ ಸ್ಟೆಪ್ ಹಾಕಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧಿಗಳಿಗೆ ಈ ಮೊದಲು ಒಂದು ಟಾಸ್ಕ್‌ನ್ನು ನೀಡಲಾಗಿತ್ತು ಸ್ವತ: ದುಡಿದು ಅದರಿಂದ ಬರುವ ಹಣದಿಂದ ಶಿಲ್ಪಾ ಶೆಟ್ಟಿ ಅವರಿಗೆ ಉಡುಗರೆಯನ್ನು ನೀಡಬೇಕೆಂದಿತ್ತು,ಅದರೆ ತುಣುಕುಗಳನ್ನು ನೋಡಿ ಶಿಲ್ಪಾ ಎಲ್ಲ ಸ್ಪರ್ಧಿಗಳಿಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.

ಸ್ಪರ್ಧಿ ಅಭಿಶೇಕ್ ಮುತ್ತೈದಿ ಬಾಗಿಣವಾಗಿ ಸೀರೆ ಹಣ್ಣು ತಾಂಬೂಲವನ್ನು ಉಡುಗರೆಯಾಗಿ ನೀಡಿದ್ದಾರೆ. ಅವರು ಉಡುಗರೆಯಾಗಿ ಕೊಟ್ಟ ಸೀರೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ವಿಶೇಷವೆಂದರೆ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧಿ ಶಿಲ್ಪಾ ಮತ್ತು ಶಿಲ್ಪಾ ಶೆಟ್ಟಿಯವರ ಫ್ರೋಫೈಲ್ ಒಂದೆತರನಾಗಿದೆ. ಇವರಿಬ್ಬರು ಶ್ರೇಷ್ಠ ಸುಂದರಿ ಅವಾರ್ಡ ತೆಗೆದುಕೊಂಡಿದ್ದಾರೆ.ಹಾಗೆ ಇಬ್ಬರು ವಾಲಿಬಾಲ್ ಆಟಗಾರರು ಹಾಗಾಗಿ ಇವರಿಬ್ಬರ ನಡುವೆ ವೇದಿಕೆಯ ಮೇಲೆ ವಾಲಿಬಾಲ್ ಸ್ಪರ್ಧೆ ನಡೆಯುತ್ತದೆ ಇದೇ ಸಂದರ್ಭದಲ್ಲಿ ಶ್ರವಂತ್ ಮತ್ತು ಶ್ರಾವ್ಯಾ ಸಂಪಾದಿಸಿದ ಹಣವನ್ನು ಶಿಲ್ಪಾ ಶೆಟ್ಟಿಯವರ ಮುಖಾಂತರ ಎನ್.ಜಿ.ಓ.ಗೆ ನೀಡಲಾಗುತ್ತದೆ.ಇದರಿಂದ ಸಂತೋಷಗೊಂಡ ಅವರು ಇವರಿಬ್ಬರಿಗೂ ಶುಭ ಹಾರೈಸುತ್ತಾರೆ.

ಮಂಗಳೂರು ಮಲ್ಲಿಗೆ ಮತ್ತು ಶಿಲ್ಪಾ ಮತ್ತು ಅವರ ಮಗನ ಭಾವಚಿತ್ರವನ್ನು ಉಡುಗರೆಯಾಗಿ ಪಡೆದ ಶಿಲ್ಪಾ "ಆಯ್ ಲವ್ ಡ್ಯಾನ್ಸ್ ಡ್ಯಾನ್ಸ್" ಎಂದು ಷೋ ಗೆ ಅಭಿನಂದನೆಯನ್ನು ಸಲ್ಲಿಸಿರುವರು.
" ದಿಲ್ ನೇ ಏ ಕಹಾ ಹೈ ದಿಲ್ ಸೆ" ಗೆ ಶಿಲ್ಪಾ ಶಟ್ಟಿಯವರ ಸ್ಟೆಫ್ಸ್ ಮತ್ತೆ ಧಡಕನ್ ಚಿತ್ರವನ್ನು ನೆನಪಿಗೆ ತಂದುಕೊಡುತ್ತದೆ.

ಈ ಷೋನಲ್ಲಿ ಜಿಲೇಬಿ ಮತ್ತು ಪಾನಿಪೂರಿಯನ್ನು ವೇದಿಕೆಗೆ ತಂದಾಗ ಶಿಲ್ಪಾ ಆ ತಿನಿಸುಗಳ ಇಷ್ಟದ ಬಗೆಗೆ ಹೇಳಿ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. ಭೌತಿಷ್‌ಗೆ ಸೂಪರ್‌ಗಿಂತ ಮೇಲೆ ಎಂಬ ಬಿರುದನ್ನು ನೀಡಿ ಪ್ಲೇನ್ ಕಿಸ್ ಕೊಡಲು ಹೋದಾಗ ಆತ ನಾಚಿಕೊಂಡಿರುವ ಸಂದರ್ಭ ಈ ಸಂಚಿಕೆಯಲ್ಲಿದೆ. ಶಿಲ್ಪಾ ಶೆಟ್ಟಿ ಮತ್ತು ಲಾಸ್ಯಾ ಈ ಷೋನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ.

"ಶಿಲ್ಪಾ ಶೆಟ್ಟಿ ಡ್ಯಾನ್ಸ್ ಡ್ಯಾನ್ಸ್ ವಿಶೇಷ" ಇದೇ ಸೋಮವಾರದಿಂದ(೧೫.೦೨.೨೦೧೬) ಸುವರ್ಣ ವಾಹಿನಿಯಲ್ಲಿ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.
-12/02/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore