HOME
CINEMA NEWS
GALLERY
TV NEWS
REVIEWS
CONTACT US

ಉದಯಟಿವಿಯಲ್ಲಿ ಹೊಸ ಧಾರಾವಾಹಿ “ಸೇವಂತಿ” ಫೆ.25ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 7.30ಕ್ಕೆ
ಕನ್ನಡದ ಮನರಂಜನಾಕ್ಷೇತ್ರದಲ್ಲಿಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ಹೊಸ ಸೇರ್ಪಡೆ“ಸೇವಂತಿ”.

ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ. ಹೊಸ ತಂತ್ರಜ್ಞಾನ, ವಿನೂತನಕಥಾ ಹಂದರ, ನವಿರಾದ ನಿರೂಪಣೆಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನುಉಣಬಡಿಸಲು ಸಿದ್ಧತೆ ನಡೆಸಿದೆಉದಯ ಟಿವಿ. ‘ಸೇವಂತಿ’ ಎಂಬ ಈ ಸುಂದರಧಾರಾವಾಹಿ ಫೆ. 25 ರಿಂದ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಒಂದಾಗಬೇಕೆಂದುಕೊಂಡಾಗದೂರವಾಗುವ, ದೂರವಾಗಬೇಕೆಂದುಕೊಂಡಾಗಒಂದಾಗಲುಬಯಸುವ ಹುಡುಗಿಯಕಥೆ ‘ಸೇವಂತಿ’ - ಒಂದುದೃಶ್ಯ ವೈಭವವಾಗಿ ವೀಕ್ಷಕರ ಮುಂದೆ ಬರಲಿದೆ.
ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಬಹಳ ದಿನಗಳ ನಂತರಕಿರುತೆರೆಗೆಆಗಮಿಸುತ್ತಿರುವಹಿರಿಯ ನಟಿ ಭಾರತಿ ವಿಷ್ಣುವರ್ದನ್‍ಮುಖ್ಯ ಭೂಮಿಕೆಯಲ್ಲಿನಟಿಸುತ್ತಿದ್ದಾರೆ. ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ, ಸಂಗೀತ,ಗಿರೀಶ್‍ಅಭಿನಯಿಸುತ್ತಿದ್ದಾರೆ.

ಚೆಂದುಳ್ಳಿ ಚೆಲುವೆ ನಟಿ ಪಲ್ಲವಿ ಗೌಡ ಸೇವಂತಿ ಪಾತ್ರಕ್ಕೆಜೀವತುಂಬುತ್ತಿದ್ದಾರೆ. ಇವರಜೋಡಿಯಾಗಿ ಹ್ಯಾಂಡ್ ಸಮ್ ಶಿಶಿರ್ ಅವರು ನಾಯಕಅರ್ಜುನ್ ಆಗಿ ವೀಕ್ಷಕರನ್ನುರಂಜಿಸಲು ಬರುತ್ತಿದ್ದಾರೆ.
“ಸೇವಂತಿ”ಇದೇ ಫೆಬ್ರವರಿ 25 ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 7.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.
26/02/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore