HOME
CINEMA NEWS
GALLERY
TV NEWS
REVIEWS
CONTACT US
ಕರ್ನಾಟಕದ ಪ್ರಪ್ರಥಮ ಇನ್ಫೋಟೈನ್‌ಮೆಂಟ್ ಚಾನೆಲ್ "ಸರಳ ಜೀವನ" ಫೆಬ್ರವರಿ ೧೯ ರಂದು ಲೋಕಾರ್ಪಣೆ!
ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಪ್ರತಿಬಿಂಬಿಸುವ, ಸದಭಿರುಚಿಯ ಮತ್ತು ಸಕಾರಾತ್ಮಕ ಚಿಂತನೆಗಳನ್ನೊಳಗೊಂಡ ಹಲವು ಕಾರ್ಯಕ್ರಮಗಳೊಂದಿಗೆ ನೂತನ ವಾಹಿನಿ "ಸರಳ ಜೀವನ" ಫೆಬ್ರವರಿ ೧೯ ರಂದು ಲೋಕಾರ್ಪಣೆಗೊಳ್ಳಲಿದೆ.

ದೈನಂದಿನ ಸುದ್ಧಿ ಮತ್ತು ಸೀರಿಯಲ್‌ಗಳ ಹೊರತಾಗಿ, ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿರುವ ಕನ್ನಡದ ವೀಕ್ಷಕರ ಆಶೋತ್ತರಗಳನ್ನು ಈಡೇರಿಸಲು ಬರುತ್ತಿರುವ ಈ ವಾಹಿನಿ, ನಮ್ಮ ಪುರಾಣ - ಇತಿಹಾಸಗಳ ಬಗ್ಗೆ, ನಮ್ಮ ಆಚರಣೆಗಳ ಹಿಂದಿನ ವಿಜ್ಞಾನದ ಬಗ್ಗೆ, ಕೃಷಿ - ಜಾನಪದ ಸೇರಿದ ಹಾಗೆ ಸಾಕಷ್ಟು ಮಾಹಿತಿಗಳನ್ನು ಮನರಂಜನೆಯ ಮೂಲಕ ವೀಕ್ಷಕರ ಮನಮುಟ್ಟುವಂತೆ ಪ್ರಸ್ತುತ ಪಡಿಸಲಿದೆ.

ಹಿರಿಯರು, ಮಕ್ಕಳು, ಯುವಕ - ಯುವತಿಯರು ಹೀಗೆ ಪ್ರತಿಯೊಬ್ಬರಿಗೂ ಉಪಯುಕ್ತವೆನಿಸುವ ಮಾಹಿತಿಯನ್ನು ಮನರಂಜನಾ ಮಾಧ್ಯಮದ ಮೂಲಕ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮದು.
ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೆರೆಸುವ ನಿಟ್ಟಿನಲ್ಲಿ, ಸರಳ ವಾಸ್ತು ಸಂಸ್ಥಾಪಕ ಡಾ|| ಚಂದ್ರಶೇಖರ ಗುರೂಜಿಯವರ ಮಾರ್ಗದರ್ಶನದಲ್ಲಿ, ಮನುಕುಲದ ಒಳಿತಿಗಾಗಿ ಎಂಬ ಧ್ಯೆಯ ವಾಕ್ಯದೊಂದಿಗೆ ಕನ್ನಡದ ಮೊಟ್ಟಮೊದಲ ವಿಶಿಷ್ಟ, ವಿಭಿನ್ನ ಮತ್ತು ವಿನೂತನ ಇನ್ಫೋಟೈನ್‌ಮೆಂಟ್ ಚಾನೆಲ್ ಸರಳ ಜೀವನ ಇದೇ ಫೆಬ್ರವರಿ ೧೯ರಿಂದ ನಿಮ್ಮ ಮನೆ ಮನಗಳನ್ನು ತಲುಪಲಿದೆ.
-9/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore