HOME
CINEMA NEWS
GALLERY
TV NEWS
REVIEWS
CONTACT US
ಕಿರುತರೆಯಲ್ಲಿ ಮತ್ತೆ ಸರಿಗಮಪ ಲಿಟ್ಲ್ ಚಾಂಪ್ಸ್
ಜೀó ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡಿದ್ದ ರಿಯಾಲಿಟಿ ಷೋ ‘ಸರಿಗಮಪ ಲಿಟ್ಲ್ ಚಾಂಪ್ಸ್’ ಸೀಸನ್-14ಅನ್ನು ಆರಂಭಿಸುತ್ತಿದೆ. 13ರಲ್ಲಿ ಅನ್ವಿತಾಶ್ರೀಧರ್ ವಿಜೇತರಾಗಿದ್ದರು. ಈಗಾಗಲೇ ರಾಜ್ಯದÀ 30 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ಅವಕಾಶ ವಂಚಿತರಾದವರಿಗೆ ವೇದಿಕೆ ಕಲ್ಪಿಸಿದೆ. ಇಲ್ಲಿವರೆಗೂ ನಾಲ್ಕರಿಂದ ಐದು ಜಿಲ್ಲೆಗ¼ಲ್ಲಿÀ ನಡೆಯುತ್ತಿದ್ದ ಆಡಿಷನ್ ಇದೇ ಮೊದಲಬಾರಿಗೆ ಎಲ್ಲಾ ಜಿಲ್ಲೆಗಳಲ್ಲಿ ನಡೆದಿದೆ. ಎಂದಿನಂತೆ ಮೊದಲ ಸಂಚಿಕೆ ಮೆಗಾ ಆಡಿಷನ್‍ನಲ್ಲಿ 30 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಯಾರು ತಮ್ಮ ಇಂಪಾದ ದನಿಯಿಂದ ತೀರ್ಪುಗಾರರ ಕಣ ್ಣಗೆ ಕಟ್ಟಿದ ಬಟ್ಟೆಯನ್ನು ತೆರೆಸುತ್ತಾರೋ ಅವರು ಸೀಸನ್‍ನಲ್ಲಿ ಮುಂದುವರೆಯುತ್ತಾರೆ. ಈ ಬಾರಿಯ ತೀರ್ಪುಗಾರರಾಗಿ ಅರ್ಜುನ್‍ಜನ್ಯ, ವಿಜಯಪ್ರಕಾಶ್ ಅವರ ಜೊತೆಗೆ ಸ್ವರಮಾಂತ್ರಿಕ ಹಂಸಲೇಖ ಇರುವುದು ವಿಶೇಷವಾಗಿದೆ. ನಿರೂಪಣೆಗೆ ಹೆಸರಾದ ಅನುಶ್ರೀ ಅವರು ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಎಂದಿನಂತೆ 15 ಜನ ಜ್ಯೂರಿ ಸದಸ್ಯರುಗಳು ಇರುತ್ತಾರೆ. ಸೀಸನ್ 14 ಡಿಸೆಂಬರ್ 9ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
-08/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore