HOME
CINEMA NEWS
GALLERY
TV NEWS
REVIEWS
CONTACT US

ಒಡಹುಟ್ಟಿದವರ ಸಂಬಂಧ ಬೆಸೆಯುವ ಹೊಸ ಧಾರಾವಾಹಿ ರಾಧಾ ರಮಣ
ಸದಾ ಹೊಸತನದ, ಸೃಜನಾತ್ಮಕ ಕತೆಗಳನ್ನು ಪರಿಚಯಿಸುತ್ತಾ ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿರುವ ಕಲರ್ಸ್ ಕನ್ನಡ ವಾಹಿನಿ ಇದೀಗ ಮತ್ತೊಂದು ವಿನೂತನ ಕತೆಯನ್ನು ಪರಿಚಯಿಸುತ್ತಿದೆ, ಅದುವೇ ರಾಧಾರಮಣ.

ಬಿಗ್‍ಬಾಸ್ ರಿಯಾಲಿಟಿ ಶೋ ದ ಜಾಗವನ್ನು ತುಂಬಲು ಸಿದ್ಧವಾಗುತ್ತಿರುವ ಅಪರೂಪದ ಕತೆ ರಾಧಾ ರಮಣ. ಜನವರಿ 16ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ರಾಧಾ ರಮಣ ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕತೆ. ಹುಟ್ಟುತ್ತಾ ಒಡಹುಟ್ಟಿದವರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಸದಾ ಸತ್ಯ. ಒಂದೇ ತಾಯಿಯ ಮಡಿಲಿನಲ್ಲಿ ಹುಟ್ಟಿದವರೂ ವರ್ತನೆ, ಸ್ವಭಾವದಲ್ಲಿ ತದ್ವಿರುದ್ಧರಾಗಿರುವುದು ಸಾಮಾನ್ಯ. ಆದರೆ ರಮಣನ ಕುಟುಂಬ ವಿಭಿನ್ನ ಮತ್ತು ವಿಶೇಷ. ಇಲ್ಲಿ ದಾಯಾದಿಗಳ ಹಗೆತನ ಇಲ್ಲ. ಕೋಟಿ ಕೋಟಿ ದುಡ್ಡಿದೆ. ಆದರೆ ಕೋಟಿಗಿಂತಲೂ ಮಿಗಿಲಾದ ಪ್ರೀತಿ ಇದೆ. ವಿಶೇಷವಾಗಿ ಆ ಮನೆಯ ಅಣ್ಣ - ತಂಗಿಯರನ್ನು ನೋಡಿದರೆ ಎಂಥವರಿಗೂ ಹೊಟ್ಟೆ ಕಿಚ್ಚಾಗುವುದು ಸಹಜ.

ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುವಂತೆ- "ಧಾರಾವಾಹಿಗಳು ವಾಹಿನಿಯನ್ನು ಸಧೃಡವಾಗಿರಿಸಿ, ಮೇಲ್ಮಟ್ಟಕ್ಕೇರಿಸುತ್ತವೆ. ರಾಧಾ ರಮಣ ಒಂದು ಧನಾತ್ಮಕ ಕತೆ. ಸಂಬಂಧಗಳು ಮೌಲ್ಯವನ್ನು ಕಳೆದುಕೊಳುತ್ತಿರುವ ಸಂದರ್ಭದಲ್ಲಿ, ಜವಾಬ್ದಾರಿಗಳಿಂದ ದೂರ ಸರಿಯುವ ಒಡಹುಟ್ಟಿದವರಿಗೊಂದು ಸೂಕ್ತ ಪಾಠವಾಗಬಲ್ಲದು ಈ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯು ಇಲ್ಲಿಯವರೆಗೂ ಫ್ರೆಶ್ ಕಂಟೆಂಟ್ ನೀಡಿದೆ. ಈಗಲೂ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ. ಪ್ರೈಮ್ ಟೈಮ್‍ನಲ್ಲಿ ಪ್ರಸಾರವಾಗುವ ರಾಧಾ ರಮಣ ಕೂಡ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನನ್ನದು."

ಕಲರ್ಸ್ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್ ಹೇಳುವಂತೆ, "ಕನ್ನಡ ಸಂಸ್ಕøತಿಯನ್ನು ಸಾರುವ, ಮನೆ-ಮನೆಗಳಿಗೆ ಹತ್ತಿರವಾಗುವ ಮತ್ತು ಯಾವಾಗಲೂ ಪಾಸಿಟಿವ್ ಯೋಚನೆಗಳನ್ನು ಪ್ರೇರೇಪಿಸುವ ಕತೆಗಳನ್ನು ನೀಡಬೇಕು ಎನ್ನುವುದು ನಮ್ಮ ಗುರಿ. ಈವರೆಗೆ ನಮ್ಮ ಚಾನೆಲ್ ಅಂತಹ ಹತ್ತು ಹಲವು ಧಾರಾವಾಹಿಗಳನ್ನು ನೀಡಿದೆ. 'ರಾಧಾ ರಮಣ' ಕೂಡಾ ಅಂತಹ ಒಂದು ಕತೆ. ಕನ್ನಡ ಪ್ರಾಧ್ಯಾಪಕಿ ಆರಾಧನಾ ಮತ್ತು ಬ್ಯುಸಿನೆಸ್‍ನಲ್ಲಿ ತೊಡಗಿರುವ ಇಂಗ್ಲಿಷ್ ಹುಡುಗ ರಮಣನ ನಡುವೆ ನಡೆಯುವ ಕತೆ. ಆರಾಧನಾ ಅಣ್ಣ ಮತ್ತು ರಮಣನ ತಂಗಿಗೆ ನಡೆಯುವ ಮದುವೆ ಜೊತೆ ಆರಂಭವಾಗುವ ಈ ಧಾರಾವಾಹಿ, ಕನ್ನಡ ಮನಸುಗಳಿಗೆ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ.”

ಧಾರಾವಾಹಿ ಬಗ್ಗೆ:-
ರಮಣ್-ಅನ್ವಿತಾ ಹಾಗೂ ಆದಿತ್ಯ-ಆರಾಧನಾ ಅನ್ನೋ ಅಣ್ಣ-ತಂಗಿಯರ ಸುತ್ತ ಸಾಗುವ ಕತೆ ಇದು. ರಮಣ್ ಒಬ್ಬ ಪರ್ಫೆಕ್ಟ್ ಹುಡುಗ. ಪ್ರತಿಯೊಂದರಲ್ಲೂ ಪರ್ಪೆಕ್ಷನ್ ಹುಡುಕುವವನು. ಆದರೆ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರಲು ಹೇಗೆ ಸಾಧ್ಯ? ತನ್ನ ತಂಗಿ ಅನ್ವಿತಾಳಿಗೆ ಪ್ರತಿಯೊಂದೂ ಬೆಸ್ಟ್ ಸಿಗಬೇಕು ಎನ್ನುವುದು ಅವನ ಕಾಳಜಿ. ಈ ಕಡೆ ಅನ್ವಿತಾ ಒಬ್ಬ ಪರ್ಫೆಕ್ಟ್ ಹುಡುಗನನ್ನು ಹುಡುಕಿದ್ದಾಳೆ. ಅವನೇ ಆದಿತ್ಯ! ಈಗ ಆದಿತ್ಯ-ಅನ್ವಿತಾ ಮದುವೆ ಮಾಡಬೇಕಿದೆ. ಆದರೆ ಅದಕ್ಕೆ ಒಂದು ತೊಡಕಿದೆ. ತನ್ನ ತಂಗಿ ಆರಾಧನಾ ಮದುವೆ ಮಾಡದೇ ತಾನು ಆಗುವುದಿಲ್ಲ ಅನ್ನೋದು ಆದಿತ್ಯನ ಹಠವಾದ್ದರಿಂದ ಆರಾಧನಾಳಿಗೆ ಹುಡುಗನ ಹುಡುಕುವ ಅನಿವಾರ್ಯತೆಯಲ್ಲಿ ರಮಣ ಸಿಲುಕುತ್ತಾನೆ. ಸ್ಕೂಲ್ ಟೀಚರ್ ಆಗಿರುವ ಆರಾಧನಾಳಿಗೆ ತನ್ನಂತಹ ಪರ್ಫೆಕ್ಟ್ ಹುಡುಗನನ್ನೇ ರಮಣ್ ಹುಡುಕುತ್ತಾನಾ? ತಂಗಿ ಆರಾಧನಾಳ ಮದುವೆ ಮಾಡಿದ ಮೇಲೆಯೇ ತನ್ನ ಮದುವೆ ಎಂಬ ಆದಿತ್ಯನ ಹಠದ ಕನಸು ನನಸಾಗುತ್ತದೆಯಾ? ಒಟ್ಟಿನಲ್ಲಿ ಒಂದೇ ಮಂಟಪದಲ್ಲಿ ಎರಡು ಮದುವೆಗಳು ಆಗುವುದು ಖಂಡಿತವೇ? ಮೊದಲಾದ ಪ್ರಶ್ನೆಗಳಿಗೆ ಜನವರಿ 16 ರಂದು ಉತ್ತರ ಸಿಗಲಿದೆ.

ಕಲರ್ಸ್ ಕನ್ನಡ ವಾಹಿನಿಯು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಮನೋರಂಜನಾ ವಾಹಿನಿ. ವೀಕ್ಷಕರಿಗೆ ಗುಣಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದು ಕುಲವಧು, ಪುಟ್ಟಗೌರಿ ಮದುವೆ, ಗಾಂಧಾರಿ, ಅಗ್ನಿಸಾಕ್ಷಿ, ಅಕ್ಕ, ಲಕ್ಷ್ಮೀ ಲಕ್ಷ್ಮೀ ಬಾರಮ್ಮ, ಮನೆದೇವ್ರು, ಕಿನ್ನರಿ, ಯಶೋಧೆ, ಬಿಗ್‍ಬಾಸ್, ಡಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್ ಮೊದಲಾದ ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ ಈಗ ರಾಧಾ ರಮಣ ಸೇರ್ಪಡೆಯಾಗಲಿದೆ.

ಕಲಾವಿದರ ಬಳಗ:
ಆರಾಧನಾ - ಶ್ವೇತಾ ಪ್ರದೀಪ್, ರಮಣ್ - ಸ್ಕಂಧ, ಅನ್ವಿತಾ - ರಕ್ಷಾ, ಆದಿತ್ಯ - ಸಿಬ್ಬು, ಸೀತಾರಾದೇವಿ - ಸುಜಾತಾ, ಸರಸ್ವತಿ - ಸುಚಿತ್ರ, ದಿನಕರ್ ಪ್ರಸಾದ್ - ರಾಜ್ ಗೋಪಾಲ್ ಜೋಷಿ

ತಾಂತ್ರಿಕ ವರ್ಗ:-
ಕತೆ: ಕಲರ್ಸ್ ಕನ್ನಡ ಫಿಕ್ಷನ್ ತಂಡ; ಲೇಖಕರು: ವಿಶಾಲಾ ರಾಜಪುರೋಹಿತ್
ಸಂಭಾಷಣೆ: ಡಾ.ಮಾಲತಿ ಬೇಳೂರು; ನಿರ್ಮಾಣ: ನೀಲಾ ಪ್ರೋಡಕ್ಷನ್; ನಿರ್ಮಾಪಕರು: ಎಮ್ ಸುಬ್ರಹ್ಮಣ್ಯ ; ನಿರ್ದೇಶಕರು: ಶಿವ ಪೂಜೇನ ಅಗ್ರಹಾರ; ಛಾಯಾಚಿತ್ರಗ್ರಾಹಕ: ಯೋಗೇಶ್; ಸಂಕಲನ: ಮನು ಮಲ್ಲೇಶ್; ಪ್ರೊಡಕ್ಷನ್ ಮ್ಯಾನೆಜರ್: ಹೇಮಂತ್ ಹೊಯ್ಸಳ
ಸಾಹಿತ್ಯ: ವಿಕಾಸ್ ನೇಗಿಲೋಣ ; ಸಂಗೀತ: ಕಾರ್ತಿಕ್ ಶರ್ಮಾ; ಹಾಡಿದವರು: ಶ್ರುತಿ

ಕಾರ್ಯಕ್ರಮ: ರಾಧಾ ರಮಣ
ಪ್ರಸಾರ ದಿನ: ಜನವರಿ 16
ಪ್ರಸಾರ ಸಮಯ: ಸಂಜೆ 9 ಗಂಟೆಗೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ
-15/01/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore