HOME
CINEMA NEWS
GALLERY
TV NEWS
REVIEWS
CONTACT US
ಉದಯ ಟಿವಿಯಲ್ಲಿ ಪ್ರಿಮೀಯರ್ ಚಲನಚಿತ್ರ “ಅಪೂರ್ವÀ” ಇದೇ ಭಾನುವಾರ ಸಂಜೆ 6ಕ್ಕೆ
ಕನ್ನಡದ ಹೆಮ್ಮೆಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಪ್ರಯೋಗಾತ್ಮಕ ಚಲನಚಿತ್ರ ಅಪೂರ್ವ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸ್ಯಾಂಡಲ್ ವುಡ್ ಮಟ್ಟಿಗೆ ಅಪೂರ್ವ ಪ್ರಯೋಗಾತ್ಮಕ ಹಾಗೂ ಭಾವನಾತ್ಮಕ ಚಲನಚಿತ್ರ. ವಿಭಿನ್ನ ವಯಸ್ಕರ ಪ್ರೀತಿ-ಪ್ರೇಮ ಹಾಗೂ ಮನಸ್ಥಿಯನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ನಾಯಕ ರವಿಚಂದ್ರನ್ 61 ವರ್ಷದವರಾಗಿದ್ದರೆ ನಾಯಕಿ ಅಪೂರ್ವಾಗೆ 19 ವರ್ಷ. ಇಬ್ಬರೂ ಅಚಾನಕ್ಕಾಗಿ ಒಂದು ಮಾಲ್‍ನ ಲಿಫ್ಟ್ ನಲ್ಲಿ ಸಿಕ್ಕಿಬೀಳುತ್ತಾರೆ. ಇದೇ ಸಂದರ್ಭದಲ್ಲಿ ಆ ಮಾಲ್‍ನಲ್ಲಿ ಭಯೋತ್ಪಾದಕರ ದಾಳಿಯಾಗುತ್ತದೆ. ಹೀಗಾಗಿ ಇಬ್ಬರೂ ಲಿಫ್ಟ್‍ನಲ್ಲಿ ಏಕಾಂತದಲ್ಲಿ ಅನೇಕ ಸಮಯವನ್ನು ಕಳೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ವಯಸ್ಸಿನ ಅಂತರ ಮೀರಿ ಹುಟ್ಟುವ ಪ್ರೀತಿ ಮುಂದೇನಾಗುತ್ತದೆ ಎಂಬುದು ಈ ಚಿತ್ರದ ಕಥೆ.

ಈ ಚಿತ್ರದಲ್ಲಿ ಸುದೀಪ್ ಪ್ರಕಾಶ್ ರಾಜ್ ಹಾಗೂ ರವಿ ಶಂಕರ್ ಅತಿಥಿ ನಟರಾಗಿ ಕಾಣ ಸಿಕೊಂಡಿರುವುದು ವಿಶೇಷ. ಚಿತ್ರದ ಹಾಡನ್ನು ಸ್ವತಃ ರವಿಚಂದ್ರನ್ ಅವರೇ ರಚಿಸಿದ್ದಾರೆ. ಚಿತ್ರದಲ್ಲಿ ಮೂಡಿಬಂದಿರುವ ಎಂಟೂ ಹಾಡುಗಳೂ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದರಲ್ಲೂ ಈ ಚಿತ್ರದ ಹಾಡುಗಳನ್ನು ಶಿವರಾಜ್ ಕುಮಾರ್, ರಮೇಶ್ ಅರವಿಂದ್, ದರ್ಶನ್, ಪುನೀತ್ ರಾಜ್ ಕುಮಾರ್ ಹಾಗೂ ಉಪೇಂದ್ರ ಸೇರಿದಂತೆ ಸ್ಯಾಂಡಲ್ ವುಡ್‍ನ ಹಲವಾರು ನಟರು ಪ್ರೇಮಿಗಳ ದಿನದಂದೇ ಬಿಡುಗಡೆಗೊಳಿಸಿದ್ದು ಚಿತ್ರದ ಮತ್ತೊಂದು ವಿಶೇಷ.

ವಯಸ್ಕ ನಾಯಕ ಹಾಗೂ ಹದಿಹರೆಯದ 19ರ ಪೋರಿ ನಡುವೆ ವಾಸ್ತವದಲ್ಲಿ ಹುಟ್ಟಲಾಗದ ಪ್ರೇಮವನ್ನು ತೆರೆಯ ಮೇಲೆ ಅದ್ಭುತವಾಗಿ ಚಿತ್ರಿಸಿರುವ ಪ್ರೇಮಕಾವ್ಯ “ಅಪೂರ್ವ”.
ಈ ಚಲನಚಿತ್ರ ಕಿರುತೆರೆಯ ಮೊಟ್ಟ ಮೊದಲ ಬಾರಿಗೆ ಇದೇ ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
-9/09/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore