HOME
CINEMA NEWS
GALLERY
TV NEWS
REVIEWS
CONTACT US

ನಾಗಿಣಿ ಪ್ರೆಸ್ ನೋಟ್
ಕಳೆದ ಎರೆಡು ವರ್ಷಗಳಲ್ಲಿ ಜೀ ಕನ್ನಡ ತನ್ನ ಕಾರ್ಯಕ್ರಮ ನಿರೂಪಣೆಯಲ್ಲಿ ಹೊಸತನ ಮೈಗೂಡಿಸಿಕೊಂಡ ಪರಿಣಾಮವಾಗಿ ಕನ್ನಡಿಗರಿಗೆ ಭರಪೂರ ಮನರಂಜೆನೆಯನ್ನ ನೀಡುತ್ತಿದೆ. ಇಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿರೋ ಗುಣಮಟ್ಟ ಹಾಗು ಮನರಂಜನೆಯ ಬಗ್ಗೆ ಪ್ರೇಕ್ಷಕರಿಂದ ಮೆಚ್ಚಿಗೆಯ ಮಾತುಗಳು ಕೇಳಿಬರುತ್ತಿವೆ. ಎರೆಡು ವರ್ಷಗಳಲ್ಲಿ ಮೂಡಿಬಂದಂತ ಫಿಕ್ಷನ್ ಹಾಗು ನಾನ್ ಫಿಕ್ಷನ್ ಕಾರ್ಯಕ್ರಮಗಳಿಂದ ಜೀ ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀರಸ್ತು ಶುಭಮಸ್ತು, ಪುನರ್ ವಿವಾಹ, ಗೃಹಲಕ್ಷ್ಮಿ, ಶ್ರೀಮಾನ್ ಶ್ರೀಮತಿ ಹಾಗು ಭಕ್ತಿರಸ ಪ್ರಧಾನವಾದ ಮಹಾದೇವಿ ಧಾರಾವಾಹಿಗಳು ಇಂದಿಗೂ ಯಶಸ್ವಿಯಾಗಿ ಪ್ರಸಾರವಾಗುತ್ತಿವೆ. ಜೊತೆಯಲ್ಲಿ ನಾನ್ ಫಿಕ್ಷನ್ ಕಾರ್ಯಕ್ರಮಗಳಾದ, ವೀಕೆಂಡ್ ವಿಥ್ ರಮೇಶ್, ಸರಿಗಮಪ ಸೀಸನ್ ೧೦ ಹಾಗು ೧೧ ಕನ್ನಡಿಗರ ಮನೆಮಾತಾಗಿವೆ.

ಈಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯ ನಿರ್ಮಾಣಕ್ಕೆ ಜೀ ಕನ್ನಡ ಮುಂದಾಗಿದೆ. ದೈವ ಭಯ ಮತ್ತು ಧೈವ ಭಕ್ತಿಗಳ ಪ್ರತೀಕವಾಗಿರುವ ನಾಗಿಣಿ ಧಾರಾವಾಹಿ ಇದೆ ಫೆಬ್ರವರಿ ೮ರಿಂದ ರಾತ್ರಿ ೯ಕ್ಕೆ ಪ್ರಸಾರವಾಗಲಿದೆ. ಮನುಷ್ಯನ ದುರಾಸೆ, ಅಹಂಕಾರ, ದೈವದೆಡೆಗಿನ ಆತನ ನಿರ್ಲಕ್ಷ, ಹಾಗೂ ಅದರಿಂದ ಆತ ಅನುಭವಿಸುವ ನೋವು, ನಿರಾಸೆಗಳನ್ನ ಹೇಳೋ ಪ್ರಯತ್ನವನ್ನ ಈ ಧಾರಾವಾಹಿಯ ಮೂಲಕ ತೋರಿಸಲಿದ್ದೇವೆ.. ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕಾಲ್ಪನಿಕ ಕಥೆಗೆ ಈಗಿನ ಕಾಲಘಟ್ಟದ ನೈಜ ದೃಶ್ಯಗಳನ್ನು ಹೆಣೆದು ಪ್ರೇಕ್ಷಕರ ಮುಂದಿಡಲಿದ್ದೇವೆ. ಯಾವುದೋ ಮೂಡನಂಬಿಕೆಗಳನ್ನು ಪ್ರೋತ್ಸಾಹಿಸದೆ, ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ಇಡೀ ಧಾರಾವಾಹಿಯನ್ನು ನಿರ್ಮಾಣ ಮಾಡಲಿದ್ದೇವೆ.

ತನ್ನವರನ್ನು ನಾಗಮಣಿಯ ದುರಾಸೆಯಿಂದ ಕಳೆದುಕೊಂಡ ನಾಗಿಣಿ, ಸರ್ಪಲೋಕದಿಂದ ಮನುಷ್ಯಲೋಕಕ್ಕೆ ಬಂದು ಸೇಡು ತೀರಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಮನುಷ್ಯ ಪ್ರಪಂಚಕ್ಕೆ ಬಂದ ಮೇಲೆ ನಾಗಿಣಿ ಅನುಭವಿಸುವ ಸನ್ನಿವೇಶಗಳ ಒಟ್ಟು ಸರಮಾಲೆಯೇ ನಾಗಿಣಿಯ ಕಥಾಹಂದರವಾಗಿವೆ. ಭಕ್ತಿಪ್ರಧಾನವಾದ ಈ ಧಾರಾವಾಹಿಯಲ್ಲಿ ಗ್ರಾಫಿಕ್ಸ್ ಕೂಡ ಒಂದು ಪಾತ್ರವಾಗಿ ಮೂಡಿಬರಲಿದ್ದು ಎಲ್ಲಾ ಸಂಚಿಕೆಗಳು ಕುತೂಹಲದಿಂದ ಕೂಡಿಬರುವ ವಿಶ್ವಾಸವಿದೆ ಎಂದು ಜೀಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ,

ಶುಭಮಂಗಳ, ಅಗ್ನಿಸಾಕ್ಷಿ, ಮಧುಬಾಲದಂತ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವಧನ ಈ ಧಾರಾವಾಹಿಯ ನಿರ್ದೇಶಕರಾಗಿದ್ದಾರೆ. ತಾರಾಗಣದಲ್ಲಿ ದೀಕ್ಷಿತ್, ದೀಪಿಕ ದಾಸ್, ಆಶಾಲತ , ಸಂಜಯ್ ಜಯಶ್ರೀರಾಜ್, ರಘು ಮಂಡ್ಯ, ಅರ್ಜುನ್ ಮೈಸೂರು,ಇನ್ನು ಹಲವು ನುರಿತ ಕಲಾವಿದರಿದ್ದಾರೆ. ನಿರ್ಮಾಣ ಎಂ.ವಿ ಹರೀಶ್ ಬಾಬು ಹಾಗೂ ಸಿಂಧು,/ ಸಾಹಿತ್ಯ ಹಾಗು ಚಿತ್ರಕಥೆ ನವಿಲುಗರಿ ಸೋಮು,/ ಕಾರ್ಯಕಾರಿ ನಿರ್ಮಾಪಕರು ಅಂಬಿಕ,/ ನಿರ್ಮಾಣ ನಿರ್ವಹಣೆ ಶಶಿಕುಮಾರ್,/ ಸಂಕಲನ ಅನಿ ಅನಿಲ್,/ ಛಾಯಾಗ್ರಹಣ ನಟರಾಜ್ ಮುದ್ದಾಲ,/ ರವಿಶಂಕರ್ ಮಿರ್ಲೆ ಸಂಭಾಷಣೆ,/ ಸಂಗೀತ ವಿಜಯ್ ಕೃಷ್ಣ ಮೈಸೂರು,/ ಸಹನಿರ್ದೇಶನ ಅಜಯ್ ವಿನಾಯಕ್, ಮಹೇಶ್, ಮಲ್ಲಿಕಾರ್ಜುನ್,/ ಹಣಕಾಸು ನಿರ್ವಹಣೆ ವಿದ್ಯಾದೀಶ ಕುಲಕರ್ಣಿ,/ ಜನಾರ್ಧನ ಪೂಜಾರಿ ಕಲೆ, ಹಾಗೂ ಚೇತನ್ ಅರ್ಚನ ಅವರ ವಸ್ತ್ರವಿನ್ಯಾಸ ಈ ಧಾರಾವಾಹಿಗಿದೆ.
-11/02/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore