HOME
CINEMA NEWS
GALLERY
TV NEWS
REVIEWS
CONTACT US

ಉದಯಟಿವಿಯಲ್ಲಿ ಹೊಸ ಧಾರಾವಾಹಿ “ನಾನು ನನ್ನ ಕನಸು” ನಟಿ “ಪ್ರಿಯಾಂಕಉಪೇಂದ್ರ” ಸೀರಿಯಲ್ ಪ್ರಚಾರಕಿ ಆಗಸ್ಟ್ 5ರಿಂದ ಸೋಮವಾರದಿಂದ ಶುಕ್ರವಾರರಾತ್ರಿ8ಕ್ಕೆ
ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂರಂಜಿಸುತ್ತಿರುವಒಂದೇ ಹೆಸರುಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತಅರಿತಿರುವಉದಯ ಟಿವಿ, ಒಂದಕ್ಕಿಂತಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ಒಂದೊಂದುಕಥೆಯೂಕೂಡ ವಿಭಿನ್ನ.

ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ವಿಶಿಷ್ಟವಾದ ಪ್ರಯತ್ನ "ನಾನು ನನ್ನ ಕನಸು" ಸೇರಿಕೊಳ್ಳಲಿದೆ. ತಂದೆ, ಮಗಳಿಗೆ ಹೇಳಿರುವ ಒಂದು ಸುಳ್ಳು ಅವಳÀ ಕನಸಿಗೆ ಸ್ಫೂರ್ತಿಯಾಗಿರುತ್ತದೆ. ತಾನು ದೊಡ್ಡವಳಾಗಿ ಒಬ್ಬಡಾಕ್ಟರ್‍ಆಗಬೇಕೆಂಬುದೇ ನಮ್ಮ ಪುಟ್ಟಕಥಾನಾಯಕಿ ಅನುಳ ದೊಡ್ಡ ಕನಸು. ವಿಧಿಯ ಲೀಲೆಯಂತೆ, ತಂದೆಗೆ ಪೂರ್ಣ ಮಾಡಲಾಗದ ಆ ಕನಸನ್ನ ಪುಟ್ಟ ಮಗಳು ತನ್ನದಾಗಿಸಿಕೊಂಡು ಅದನ್ನ ನನಸಾಗಿಸುವ ಕಥೆಯೇ ಈ "ನಾನು ನನ್ನ ಕನಸು". ಆದರೆ ಕನಸಿನ ದಾರಿಯಲ್ಲಿಎಲ್ಲವೂ ಸುಗಮವಾಗಿರದೆ, ದೊಡ್ಡಆಘಾತವೊಂದನ್ನ ಅನು ಎದುರಿಸಬೇಕಾಗುತ್ತದೆ. ಅನುಳ ಕನಸಿಗೆ ಅಡ್ಡಗಾಲಾಗಿರುವ ವಿಲನ್‍ಗಳು ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೇ ಎಸೆಯುತ್ತಿದ್ದಾರೆ. ಆ ಎಲ್ಲ ಅಡೆತಡೆಗಳನ್ನ ಎದುರಿಸಿ ತನ್ನಕನಸನ್ನ ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆ ಎಂಬುದೇ ಈ ಕಥೆಯ ಜೀವಾಳ. ಹಾಗಂತ ಬಹುತೇಕ ಧಾರಾವಾಹಿಗಳಂತೆ, ಹೆಣ್ಣೊಬ್ಬಳ ಗೋಳಿನ ಕಥೆಯಂತೂಖಂಡಿತಅಲ್ಲ. ಕಷ್ಟಗಳನ್ನು ಧೈರ್ಯವಾಗಿಎದುರಿಸುತ್ತಾ ಲವಲವಿಕೆಯಿಂದಇರುವ ಹುಡುಗಿ ನಮ್ಮ ಅನು.

ಕಿರುತೆರೆಯಲ್ಲಿ ಮಿಂಚಿದ ಪುಟಾಣಿತಾರೆÀ“ಶೃತಾ” ಅನು ಪಾತ್ರ ನಿರ್ವಹಿಸುತ್ತಿದ್ದರೆ, ಕನಸನ್ನ ಹೇಳಿಕೊಟ್ಟ ತಂದೆಯಾಗಿ ಸಿನಿಮಾದಖ್ಯಾತ ನಟರಾದರಾಜೇಶ್ ನಟರಂಗಅವರು ನಿರ್ವಹಿಸುತ್ತಿದ್ದಾರೆ. ಅನುವಿನ ತಾಯಿಯಾಗಿಆರತಿಕುಲಕರ್ಣಿ ನಟಿಸುತ್ತಿದ್ದರೆ, ಅನುವಿನ ಕನಸಿಗೆ ಅಡ್ಡವಾಗಿರುವ ಮುಖ್ಯ ಖಳರಾಗಿ ನಿಶಿತಾ ಗೌಡ ನಟಿಸುತ್ತಿದ್ದಾರೆ. ಬಹಳ ವರ್ಷಗಳ ವಿರಾಮದ ನಂತರನಿಶಿತಾ ಗೌಡ ಮತ್ತೆಕಿರುತೆರೆಯಲ್ಲಿ ನಟಿಸುತ್ತಿರುವುದು ವಿಶೇಷ. ಇತರ ಮುಖ್ಯಪಾತ್ರಗಳಲ್ಲಿ ವಿಶಾಲ್‍ರಘು, ಹರೀಶ್,ಬಾಲನಟರಾಗಿ ಸ್ಕಂದ ನಟಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ, ನಾನು ನನ್ನ ಕನಸು ಧಾರಾವಾಹಿಯ ಪ್ರಮೋಷನ್‍ಗೆಖ್ಯಾತ ಸಿನೆಮಾತಾರೆ “ಪ್ರಿಯಾಂಕಉಪೇಂದ್ರ”ಅವರು ಭಾಗಿಯಾಗಿರುವುದುದೊಡ್ಡ ವಿಶೇಷ. ಇದರ ಪ್ರೋಮೋಗಳಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಥೆಯ ಮುಖ್ಯ ಘಟ್ಟಗಳನ್ನು ತೆರೆಯ ಮೇಲೆ ಬಂದು ಹೇಳಲಿದ್ದಾರೆ.

ಹಿಂದಿ ಟೆಲಿವಿಷನ್‍ನ ಬಹುಪ್ರಸಿದ್ಧ ಸಂಸ್ಥೆಯಾದ "ಶಶಿ ಸುಮೀತ್‍ಗ್ರೂಪ್", ನಾನು ನನ್ನ ಕನಸು ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ಹೈದರಾಬಾದ್‍ನಅದ್ದೂರಿ ಸೆಟ್‍ನಲ್ಲಿಚಿತ್ರೀಕರಣ ಭರದಿಂದ ಸಾಗಿದೆ. ಇಡೀಕನ್ನಡಟೆಲಿವಿಷನ್‍ನಲ್ಲಿಇಂಥಾಒಂದು ಸೆಟ್‍ಇದೇ ಮೊದಲ ಬಾರಿಗೆ ನೋಡಲು ಸಿಗುತ್ತಿದೆ ಎಂಬುದುಉದಯಟಿವಿಯ ಹೆಮ್ಮೆ. ಈ ಸೆಟ್ ನೋಡುಗರನ್ನ ನಿಬ್ಬೆರಗಾಗಿಸುವುದುಖಂಡಿತಎನ್ನುತ್ತದೆತಂಡ.

ಕಿರುತೆರೆಯಲ್ಲಿದೊಡ್ಡ ಹೆಸರಾಗಿರುವಛಾಯಾಗ್ರಾಹಕ ಮತ್ತು ನಿರ್ದೇಶಕರಾದಬಿ.ಕುಮಾರ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮಡೈಲಾಗ್ ಪಂಚ್‍ಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಅವರುಇದಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನೂ ವಿಶೇಷವೆಂದರೆ, ಇದಕ್ಕೆ ಸಿನೆಮಾ ಸಾಹಿತಿಯಾದಡಾ. ನಾಗೇಂದ್ರ ಪ್ರಸಾದ್‍ಅವರು ಸೊಗಸಾಗಿ ಶೀರ್ಷಿಕೆಗೀತೆ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡ ಸಿನೆಮಾದ ಬಹುಬೇಡಿಕೆಯ ಮ್ಯೂಸಿಕ್ ಡೈರೆಕ್ಟರ್‍ಆದ ಶ್ರೀಧರ್ ಸಂಭ್ರಮ್‍ಅವರು ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ಹಿರಿತೆರೆಯಜನಪ್ರಿಯ ಹಾಡಾದ "ಅಪ್ಪಾ ಐ ಲವ್ ಯೂ ಪಾ" ತರಹವೇ "ನಾನು ನನ್ನ ಕನಸು" ಶೀರ್ಷಿಕೆ ಗೀತೆ ಹಿಟ್‍ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತದೆತಂಡ.

ಗೋಲ್ಡ್ ವೋಚರ್ ಸ್ಪರ್ಧೆ : “ನಾನು ನನ್ನಕನಸು”ಧಾರಾವಾಹಿಯ ವೀಕ್ಷಕರಿಗೆ ಸುವರ್ಣಅವಕಾಶವನ್ನುಉದಯ ಟಿವಿ ಇದೇಆಗಸ್ಟ್ 5ರಿಂದ 9ರವರೆಗೆ “ಗೋಲ್ಡ್ ವೋಚರ್’ ಸ್ಪರ್ಧೆಯ ಮುಖಾಂತರಏರ್ಪಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಧಾರಾವಾಹಿಯನ್ನು ವೀಕ್ಷಿಸಿ ಕೇಳುವ ಪ್ರಶ್ನೆಗಳಿಗೆ ಸರಿಯಾದಉತ್ತರವನ್ನು ನೀಡಿ ಬಹುಮಾನವನ್ನು ಗೆಲ್ಲಬಹುದು
ಒಟ್ಟಾರೆಕನ್ನಡಕಿರುತೆರೆಯಲ್ಲಿ "ನಾನು ನನ್ನ ಕನಸು" ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆಕಾತುರವಾಗಿದೆ. ಇದೇಆಗಸ್ಟ್ 5 ರಿಂದ, ಸೋಮವಾರದಿಂದ ಶುಕ್ರವಾರರಾತ್ರಿ 8 ಗಂಟೆಗೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.
30/07/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore