HOME
CINEMA NEWS
GALLERY
TV NEWS
REVIEWS
CONTACT US
"ಡ್ಯಾನ್ಸ್ ಡ್ಯಾನ್ಸ್" ಷೋ ನಲ್ಲಿ "ಮೀನಾ ಮತ್ತು ಸುಧಾರಾಣ "
ಇದೇ ಬುಧವಾರ (೨೪.೦೨.೨೦೧೬)ದಿಂದ ರಾತ್ರಿ ೭.೩೦ಕ್ಕೆ.
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋ ನಲ್ಲಿ ಖ್ಯಾತ ನಟಿ ಮೀನಾ ಮತ್ತು ಸುಧಾರಾಣ ವಿಶೇಷ ಅತಿಥಿ.ಈ ವಾರ ಕನ್ನಡ ಚಲನ ಚಿತ್ರರಂಗದ ದಿಗ್ಗಜರ ರೌಂಡ್ ನಲ್ಲಿ ಇವರಿಬ್ಬರು ನಿರ್ಣಾಯಕರಾಗಿ ಆಗಮಿಸಿದ್ದಾರೆ.

ನಟಿ ಮೀನಾ ಕನ್ನಡ ಬಾಷೆ ಮತ್ತು ಕನ್ನಡ ಜನರಿಗೆ ಅವರಿಗೆ ಕೊಟ್ಟ ಪ್ರೋತ್ಸಾಹಕ್ಕೆ ಈ ಸಮಯದಲ್ಲಿ ಅಭಿನಂದನೆ ಸಲ್ಲಿಸಿರುವರು. ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಬಗೆಗೆ ಮಾತನಾಡುತ್ತಾ ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ ಎಂದರು. ನಿಮ್ಮ ನೆಚ್ಚಿನ ನಾಯಕರು ಯಾರು? ಎಂಬ ಪ್ರಶ್ನೆಗೆ ಶಿವಾಜಿ ಗಣೇಶನ್ ಮತ್ತು ಕನ್ನಡದಲ್ಲಿ ಡಾ.ರಾಜಕುಮಾರ್ ಎಂದು ಹೇಳಿದ್ದಾರೆ. ಚಿಕ್ಕವರಿರುವಾಗ ಚಾಕಲೇಟ್ ಕೊಟ್ಟರೆ ಮಾತ್ರ ನಟಿಸುತ್ತಿದ್ದೆ ಎಂಬ ಅವರ ಬಾಲ್ಯಜೀವನದ ಬಗೆಗೆ ಮೆಲಕು ಹಾಕಿರುವರು. ಮೀನಾ ಮೈ ಅಟೋಗ್ರಾಫ್ ನ "ಅರಳುವ ಹೂವುಗಳೆ"ಹಾಡನ್ನು ಈ ವೇದಿಕೆಯಲ್ಲಿ ಹಾಡಿದ್ದಾರೆ.

ಸುಧಾರಾಣ ಯವರು ಬಾಲ್ಯ ಜೀವನದ ಬಗೆಗೆ ಹೇಳುತ್ತಾ ವರನಟ ಡಾ.ರಾಜಕುಮಾರರ ಮತ್ತು ಶಂಕರನಾಗ್ ಬಗೆಗೆ ಅವರಿಗಿದ್ದ ಗೌರವವನ್ನು ಹಂಚಿಕೊಂಡಿದ್ದಾರೆ. ನಟಿ ಮೀನಾ ಕನ್ನಡದಲ್ಲಿ ನಟಿಸಿದಾಗ ಅವರಿಗೆ ಹಿನ್ನಲೆ ಧ್ವನಿಯನ್ನು ನೀಡಿದರ ಬಗೆಗೆ ಸುಧಾರಾಣ ಹೇಳಿಕೊಂಡರು.

ಲೇಝೆಂಡ್‌ಗಳ ಸುತ್ತಿನಲ್ಲಿ ಡಾ.ರಾಜಕುಮಾರ,ಡಾ.ವಿಷ್ಣುವರ್ಧನ್,ಕರಾಟೆಕಿಂಗ್ ಶಂಕರನಾಗ್ ರವಿಚಂದ್ರನ್ ಹಾಡುಗಳಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡಿದರೆ,ಮೀನಾ,ಸುಧಾರಾಣ ನಿರೂಪಕ ಅಕುಲ್ ಜೊತೆ ಅಟೋನಲ್ಲಿ ಕುಳಿತು ಒಂದಿಷ್ಟು ಸ್ಟೆಪ್ ಹಾಕಿದ್ದಾರೆ.

"ಮೀನಾ ಮತ್ತು ಸುಧಾರಾಣ ಡ್ಯಾನ್ಸ್ ಡ್ಯಾನ್ಸ್ ವಿಶೇಷ" ಇದೇ ಬುಧವಾರದಿಂದ(೨೪.೦೨.೨೦೧೬) ಸುವರ್ಣ ವಾಹಿನಿಯಲ್ಲಿ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.
-26/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore