HOME
CINEMA NEWS
GALLERY
TV NEWS
REVIEWS
CONTACT US

ಮಹಾನದಿ
ಜ಼ೀ ಕನ್ನಡ ಕಳೆದ ಹತ್ತು ವರ್ಷಗಳಿಂದ ಅತ್ತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ಗುಣ ಮಟ್ಟದ ಮನರಂಜನೆಗಾಗಿ ಮನೆಮಾತಾಗಿದೆ.ನಾಗಿಣಿ, ಗಂಗಾ, ಮಹಾದೇವಿಯಂಥ ವಿಭಿನ್ನ ಕಥಾಹಂಧರವುಳ್ಳ ಧಾರಾವಾಹಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ ಲಿಟಲ್ ಚಾಂಪ್ಸ್, ವೀಕೆಂಡ್ ವಿತ್ ರಮೇಶ್ ನಂತಹ ಜನಮೆಚ್ಚಿದ ರಿಯಾಲಿಟಿ ಶೋಗಳು ಯಶಸ್ಸಿನ ನಂತರ ಮಹಾನದಿಯನ್ನು ಕನ್ನಡಿಗರ ಮನೆಮನಗಳಿಗೆ ತಲುಪಲಿಕ್ಕೆ ಸಿದ‍್ಧವಾಗಿದೆ ಜ಼ೀ ಕನ್ನಡ.

“ಪದವಿಯ ಆಟಕೆ ಪ್ರೀತಿಯೇ ಪಗಡೆ” ಎಂಬ ಅಡಿಬರಹ ಹೊತ್ತು ಬರುತ್ತಿರುವ ಮಹಾನದಿ ರಾಜಕೀಯ ಹಿನ್ನೆಲೆಯಿರುವ ಪ್ರೇಮ ಕಥೆ. ನಾರಾಯಣ ಪಟ್ಟಣವೆಂಬ ಸಣ್ಣ ಊರಿನ ಪೋಸ್ಟ್ ಮಾನ್ ಮಗಳು ಮಧುರ ಊರಿನ ಎಂ.ಎಲ್.ಎ ವಿಕ್ರಂ ಸಿಂಹನಿಗೆ ತನ್ನ ಅಕ್ಕ ಮೇಘನನನ್ನು ಮದುವೆ ಮಾಡಿಸಲು ಹೋಗಿ ತಾನೇ ಅವನಿಂದ ಮೋಹಿತಳಾಗುತ್ತಾಳೆ. ಅವಳ ಇಡೀ ಕುಟುಂಬ ತಮಗೇ ಅರಿವಿಲ್ಲದಂತೆ ರಾಜಕೀಯ ಚದುರಂಗದ ದಾಳಗಳಾಗುತ್ತಾರೆ.

ಈ ಚಕ್ರವ್ಯೂಹದಿಂದ ಮಧುರಾ ಹೇಗೆ ಪಾರಾಗುತ್ತಾಳೆ? ಅಕ್ಕನ ಸಂಸಾರವನ್ನು ಹೇಗೆ ರೂಪಿಸುತ್ತಾಳೆ ಅನ್ನೋದೇ ಕಥೆಯ ಸಾರಾಂಶ. ರಾಜಕೀಯದ ಮಧ್ಯೆಯೇ ಉಳಿದು ಅಕ್ಕ ತಂಗಿ ಮಾನವೀಯತೆಯನ್ನು ಮೆರಯುತ್ತಾರೆ. ಸಮಾಜದ ಅನೇಕ ಅನ್ಯಾಯಗಳ ವಿರುದ್ಧ ದನಿಯೆತ್ತುತ್ತಾರೆ. ದೊಡ್ಡ ಬಿರುಗಾಳಿಯ ಎದುರು ಒಬ್ಬ ಹೆಣ್ಣುಮಗಳು ಹೇಗೆ ಗಟ್ಟಿಯಾಗಿ  ನಿಲ್ಲುತ್ತಾಳೆ ಅನ್ನುವುದು ಕಾರ್ಯಕ್ರಮದ ತಿರುಳು.

ಈಗಾಗಲೇ ಶ್ರೀರಸ್ತು ಶುಭಮಸ್ತು, ಚಿ ಸೌ ಸಾವಿತ್ರಿ, ಮಹಾದೇವಿ, ಪುನರ್ ವಿವಾಹದಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಶೃತಿ ನಾಯ್ಡುರವರು ಈ ಕಾರ್ಯಕ್ರಮದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸಿನಿಮಾ ನಟ ನಾಗಕಿರಣ್, ಕೀರ್ತಿ ರಾಜ್, ಭಾವನಾ ಬೆಳಗೆರೆ ಸೇರಿದಂತೆ ಹಲವಾರು ಪ್ರಸಿದ್ಧ ನಟರೂ ಹಾಗೂ ನುರಿತ ತಂತ್ರಜ್ಙರು ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಹಾನದಿ ಧಾರಾವಾಹಿಯು, ಇದೇ ಜುಲೈ 4ರಿಂದ, ಸಂಜೆ 7.00ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
-28/06/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore