HOME
CINEMA NEWS
GALLERY
TV NEWS
REVIEWS
CONTACT US
"ಡ್ಯಾನ್ಸ್ ಡ್ಯಾನ್ಸ್" ಷೋ ನಲ್ಲಿ ಖುಷಿಯಾದ "ಖುಷಬು"
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋ ಪ್ರತಿ ಸಂಚಿಕೆ,ಪ್ರತಿವಾರ ಹೊಸತನದಿಂದ ಕೂಡಿದೆ. ಹಾಗೆ ಸೂಪರ್ ಹಿಟ್ ಸೆಲಬ್ರಿಟಿಗಳಿಂದ ವೇದಿಕೆ ರಂಗು ರಂಗಿನಿಂದ ಕೂಡಿದೆ. ಈ ವಾರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್‌ರವರ ಅದ್ಭುತ ಚಿತ್ರ ರಣಧೀರದ ನಾಯಕಿ ಖುಷಬು ಈ ವಾರದ ವಿಶೇಷ ಅತಿಥಿ.

ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ರೀಯಾಲಿಟಿ ಷೋಗೆ ಎವರ್‌ಗ್ರೀನ್ ನಟಿ ಖುಷಬುರವರ ವೇದಿಕೆ ಆಗಮನವೇ ತುಂಬಾ ಡಿಫರೆಂಟಾಗಿದೆ.ಅವರು ನಟಿಸಿರುವ ಚಿತ್ರಗಳ ಹಾಡಿಗೆ ಸ್ಟೇಪ್ ಹಾಕುವ ಮೂಲಕ ಆಹ್ವಾನಿಸಲಾಯಿತು. ಪ್ರತಿಯೊಂದು ಡ್ಯಾನ್ಸ್‌ಗೆ ಹಂಸಕ್ಷೀರ ನ್ಯಾಯದಂತೆ ಅಭಿಪ್ರಾಯವನ್ನು ನೀಡಿದ್ದಾರೆ.

ನಟಿ ಖುಷಬು ಕನ್ನಡ ಬಗೆಗೆ ಅವರಿಗಿದ್ದ ಪ್ರೀತಿ ವಿಶ್ವಾಸವನ್ನು ಹೇಳುತ್ತಾ,ನಾನೋಬ್ಬ ಜನಪ್ರೀಯ ನಟಿಯಾಗಿದ್ದೇನೆಂದರೆ ನನ್ನ ನಟನೆಗೆ ರವೀಚಂದ್ರನ್ ಗುರುಗಳು, ಡ್ಯಾನ್ಸ್ ಕಲಿತಿದ್ದರೆ ಚಿನ್ನಿ ಮಾಸ್ಟರ್ ಕಾರಣ ಎಂದು ಖುಷಬು ಅವರಿಬ್ಬರಿಗೆ ಅಭಿನಂದನೆ ಸಲ್ಲಿಸಿದರು. ನೀರ್ಣಾಯಕರಲ್ಲೊಬ್ಬರಾದ ಚಿನ್ನಿ ಪ್ರಕಾಶ್ ಮಾಸ್ಟರ್ ರಣದೀರ ಚತ್ರಿಕರಣದ ಸಮಯದಲ್ಲಾದ ಘಟನೆಯನ್ನು ವಿವರಿಸುತ್ತಾ ರವಿಚಂದ್ರನ್ ಒಬ್ಬ ಶ್ರೇಷ್ಠ್ ನಿರ್ದೇಶಕ ಹಾಗೆ ಖುಷುಬು ಅವರು ಒಬ್ಬ ಪ್ರೋಫೇಶನಲ್ ನಟಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೌತೀಶ್ ಗಾಜಿನ ತಾಜಮಹಲನ್ನು ಖುಷಬು ಅವರಿಗೆ ಉಡುಗರೆಯಾಗಿ ನೀಡಿದರು. ಹಾಗೆ ಅವರ ಜೊತೆಗೆ ಒಂದಿಷ್ಟು ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಖುಷಬು ಅವರಿಗೆ ಪೇಂಟಿಂಗ್ ಅಂದರೆ ತುಂಬಾ ಇಷ್ಟ ಅದಕ್ಕಾಗಿ ಅಭಿಮಾನಿಗಳಿಂದ ಒಂದು ಫೋಟೊ ಫ್ರೇಮ್‌ನ್ನು ನೀಡಲಾಯಿತು.ಬಹಳ ಖುಷಿಯಿಂದ ನಡೆಯುತ್ತಿದ್ದ ಷೋ ನಡುವೆ ಖುಷಬು ವೇದಿಕೆಯಿಂದ ಹೊರಗೆ ಹೋಗುತ್ತಾರೆ. ಅಜೀತ್ ಮತ್ತು ಹರ್ಷಿತಾ ಪರ್ಫಾರ್ಮನ್ಸ್ ಮುಗಿದ ನಂತರ ಷೋ ನಡುವೆ ಹಾಗೆ ಎದ್ದು ಹೋದ ಕಾರಣವೇನು? ಎಂಬುದನ್ನು ಕಾದು ನೋಡಬೇಕಾಗಿದೆ.
ಕನ್ನಡ ಚಿತ್ರರಂಗದ ಹೀರೋಗಳು ವೇದಿಕೆಗೆ ಬಂದಾಗ ಖುಷಬು ಆಶ್ಚರ್ಯ ಚಿಕಿತರಾದ ಪ್ರಸಂಗವೂ ನಡೆದಿದೆ. ಜೂನಿಯರ್ ರವಿಚಂದ್ರನ್ ಸ್ಟೇಜ್ ಮೇಲೆ ಬಂದೊಡನೆ ಖುಷಬು ನಿಜವಾದ ಕ್ರೇಜಿಸ್ಟಾರ್ ಎಂದು ಉತ್ಸಾಹದಿಂದ ವೇದಿಕೆಗೆ ನಡೆದರು.ಹಾಗೆ ಜೂನಿಯರ್ ವಿಷ್ಣುವರ್ಧನ್ ಅವರೊಡನೆ ಡ್ಯಾನ್ಸ್ ಮಾಡಿದ್ದಾರೆ.

ಖುಷಬು ಜಡ್ಜ್‌ಮೆಂಟ್‌ನ ಖುಷಿ ಖುಷಿಯಾದ ಡ್ಯಾನ್ಸ್ ಡ್ಯಾನ್ಸ್ ಷೋ ಇದೇ ಬುಧವಾರದಿಂದ (೧೦.೦೨.೨೦೧೬) ಸುವರ್ಣವಾಹಿನಿಯಲ್ಲಿ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.
-8/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore