HOME
CINEMA NEWS
GALLERY
TV NEWS
REVIEWS
CONTACT US

ಉದಯಟಿವಿಯಧಾರಾವಾಹಿ “ಕ್ಷಮಾ” ಆಗಷ್ಟ್ 5ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 9.30ಕ್ಕೆ
ಆಸೆಗೆ ಜಗ್ಗದವಳು, ಸಹನೆಗೆ ಪ್ರತಿರೂಪ ಇವಳು, ನೊಂದರೂ ನಗುವನ್ನೇ ಹಂಚುವವಳು ಕ್ಷಮಾ.ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವಕ್ಷಮಾಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಡನಿಲ್ಲದ ಹೆಣ್ಣೊಬ್ಬಳು ಸಮಾಜದಲ್ಲಿ ಹೇಗೆಲ್ಲಾ ಪರಿಪಾಟಲುಗಳನ್ನು ಅನುಭವಿಸುತ್ತಾಳೆ ತನ್ನ ಮಕ್ಕಳನ್ನು ಬೆಳೆಸಲು ಎಷ್ಟೆಲ್ಲ ತ್ಯಾಗಗಳನ್ನು ಮಾಡುತ್ತಾಳೆ ಎನ್ನುಕಥಾಹಂದರವನ್ನು ಹೊಂದಿರುವಧಾರಾವಾಹಿ ಕ್ಷಮಾ. ಈ ಧಾರಾವಾಹಿ ಉದಯಟಿವಿಯಲ್ಲಿಗಂಟೆಗೆ ಪ್ರಸಾರವಾಗುತ್ತಿದ್ದು ಈಗ ಸಮಯ ಬದಲಾಗಿದೆಅಂದರೆಇದೇಆಗಸ್ಟ್5ರಿಂದ8ಗಂಟೆಯ ಬದಲಾಗಿ9.30ಕ್ಕೆÉ ಪ್ರಸಾರವಾಗುತ್ತದೆ. ಬಿ.ಸುರೇಶ್ ಬರವಣಿಗೆಯಲ್ಲಿ ಮೂಡಿಬರುತ್ತಿರುವಕ್ಷಮಾ ಹೆಣ್ಣುಮಕ್ಕಳ ಫೇವರೇಟ್ ಸೀರಿಯಲ್. 9.30 ಕ್ಕೆ ಎಲ್ಲರೂ ಮನೆಗೆ ಬಂದು ಊಟ ಮಾಡುವ ಸಮಯ ಹಾಗಾಗಿ ಇನ್ನು ಹೆಚ್ಚು ಜನರನ್ನು ಸೆಳಯಲು ನಮಗೆ ಸಿಕ್ಕಿರುವ ಸದವಕಾಶಎನ್ನುತ್ತಾರೆಕ್ಷಮಾಧಾರಾವಾಹಿಯಯಜಮಾನಿ ಕಂ ನಿರ್ಮಾಪಕಿ ಶೈಲಜಾ ನಾಗ್. ಆಗಸ್ಟ್5ರಿಂದ ಬದಲಾದ ಸಮಯದಲ್ಲಿ ಬರುತ್ತಿದೆಕ್ಷಮಾ ಸೋಮವಾರದಿಂದ ಶುಕ್ರವಾರರಾತ್ರಿ9.30 ಕ್ಕೆ ನಿಮ್ಮಉದಯಟಿವಿಯಲ್ಲಿ.

“ಕ್ಷಮಾ” ಆಗಷ್ಟ್ 5ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 9.30ಕ್ಕೆÉ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
30/07/19

ಉದಯಟಿವಿಯಲ್ಲಿ ಹೊಸ ಧಾರಾವಾಹಿ “ಕ್ಷಮಾ” ಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8.00ಕ್ಕೆ
ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನಕಥೆಯೊಂದನ್ನು ನಿಮ್ಮ ಮುಂದೆತರಲು ಸಜ್ಜಾಗಿದೆ. ಮಹಿಳೆ ಇಂದುಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದುಕಾರ್ಯಕ್ಷೇತ್ರದಲ್ಲೂಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹಾಗಾಗೀನೇ ಹೆಣ್ಣನ್ನುಕ್ಷಮೆಗೆ ಮತ್ತೊಂದು ಹೆಸರುಎನ್ನುತ್ತಾರೆ. ಭೂಮಿಗೆ ಮತ್ತೊಂದುರೂಪಎನ್ನುತ್ತಾರೆ. ಇಂತಹ ಭೂಮಿತೂಕದ ಹೆಣ್ಣಿನಕಥೆ“ಕ್ಷಮಾ”ಉದಯಟಿವಿಯಲ್ಲಿಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8ಕ್ಕೆ ಶುರುವಾಗಲಿದೆ.

ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿಅನುಭವಿಸುವ ಪರಿಪಾಟಲುಗಳು ಕಥೆಯ ಜೀವಾಳ. ಕ್ಷಮಾಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗತನ್ನ ಸಂಸಾರದಜವಾಬ್ದಾರಿಯನ್ನು ಹೊತ್ತ ವೀರಮಹಿಳೆ. ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸಕೊಡುವಲ್ಲಿ ಸಫಲಳಾಗುತ್ತಾಳಾ? ಸಮಾಜಒಂಟಿ ಮಹಿಳೆಗೆ ಸೂರು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡÀತ್ತಾ? ಇಂತಹ ಸೂಕ್ಷ್ಮ ಎಳೆಯೊಂದಿಗೆ ಸಾಗುವ ಕಥೆಕ್ಷಮಾ.

ಧಾರಾವಾಹಿರಂಗದಲ್ಲಿ ಹತ್ತಾರು ಸೂಪರ್‍ಹಿಟ್‍ಧಾರಾವಾಹಿ ಕೊಟ್ಟಿರುವ ಭಾರತೀಶ್ ನಿರ್ದೇಶನ ಮತ್ತು ಮೀಡಿಯಾ ಹೌಸ್ ನಿರ್ಮಾಣಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿಕ್ಷಮಾ ಪಾತ್ರಧಾರಿಯಾಗಿ ಶ್ವೇತಾರಾವ್ ಮಾಡುತ್ತಿದ್ದುಇತರತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರುಇದ್ದಾರೆ.
“ಕ್ಷಮಾ” ಮಾರ್ಚ್ 4 ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8 ಗಂಟೆಗೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.
26/02/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore