HOME
CINEMA NEWS
GALLERY
TV NEWS
REVIEWS
CONTACT US
ಕಲರ್ಸ್‍ಕನ್ನಡದಲ್ಲಿಕನ್ನಡದಕೋಟ್ಯಾಧಿಪತಿ
ಕಲರ್ಸ್‍ಕನ್ನಡ ವಾಹನಿಗೆ ಮತ್ತೆಪುನೀತ್‍ರಾಜ್‍ಕುಮಾರ್ ‘ಕನ್ನಡದಕೋಟ್ಯಾಧಿಪತಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪುನೀತ್2000ದಲ್ಲಿ ಕೌನ್ ಬನೇಗ ಕರೋರ್‍ಪತಿಗೆಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿದ್ದನ್ನು ಅಪ್ಪಾಜಿತಪ್ಪದೆ ನೋಡುತ್ತಿದ್ದರು. 2011ರಂದು ಕನ್ನಡದಲ್ಲಿ ನಡೆಸಿಕೊಡಲು ಕರೆ ಬಂದಾಗ ಭಯವಾಯಿತು.. ನಂತರ ಸಿದ್ದಾರ್ಥ್‍ಬಸು ಅವರಲ್ಲಿತರಭೇತಿ ಪಡೆದುಕೊಂಡು, ಅಣ್ಣಂದಿರುಧೈರ್ಯತುಂಬಿದ್ದರಿಂದ ಹಾಟ್ ಸೀಟಿಗೆ ಬರಲಾಯಿತು.ಸ್ಪರ್ಧಿಗಳು ಕೊಡುತ್ತಿದ್ದಉತ್ತರ ನನ್ನಜೀವನದ ಬದಲಾವಣೆ, ಅವರುಗಳಿಂದ ಸಾಕಷ್ಟು ಜ್ಘಾನ ಸಂಪಾದನೆಆಯಿತು.ಸರಸ್ವತಿ ಮೂಲಕ ಲಕ್ಷಿಯನ್ನು ಹೊತ್ತುಕೊಂಡು ಹೋಗುತ್ತಾರೆ.ಇದುಯಾವಾಗಲೂ ನನಗೆ ವಿಶೇಷವಾಗಿದೆಎಂದು ಹೇಳಿದರು.

ಪುನೀತ್ ನಮ್ಮೊಂದಿಗೆ ಕೈ ಜೋಡಿಸಿರುವುದು ಹೆಮ್ಮೆ ವಿಷಯ.ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು ಕೋಟಿರೂಪಾಯಿಗೆಲ್ಲಲುಅವರು ಪಡುವ ಪ್ರಯತ್ನ, ಬುದ್ದಿವಂತಿಕೆ ಮುಂತಾದವುಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ವೂಟ್ ಮತ್ತು ಮೈ ಜಿಯೋ ಆಪ್‍ಗಳಲ್ಲಿ ‘ಪ್ಲೇಅಲಾಂಗ್’ ಮೂಲಕ ಕಾರ್ಯಕ್ರಮ ವೀಕ್ಷಿಸುವಜನರುಕಾರ್ಯಕ್ರಮದಜೊತೆಜೊತೆಗೆ ಕೇಳಲಾಗುವ ಪ್ರಶ್ನಗಳಿಗೆ ಉತ್ತರಿಸಿ ಬಹುಮಾನಗೆಲ್ಲಲುಅವಕಾಶವಿರಲಿದೆ. ಈ ಬಾರಿ ನಾಲ್ಕು ಲೈಫ್‍ಲೈನ್‍ಡಬ್ಬಲ್‍ಡಿಪ್ ಪರಿಚಯಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ಮೈಸೂರು, ಬೆಂಗಳೂರು ಮತ್ತು ಮಂಗಳೂರು ಕಡೆಗಳಿಂದ ಆಯ್ದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಒಟ್ಟು40 ಕಂತುಗಳು ಬರಲಿದ್ದು, ಫಿನಾಲೆಯಲ್ಲಿ ಸೆಲಬ್ರಟಿಯನ್ನುಕರೆಸಲುಚಿಂತನೆ ನಡೆಸಲಾಗಿದೆಎಂದು ವಾಹಿನಿ ಮುಖ್ಯಸ್ಥ ಪರಮೇಶ್ವರ್‍ಗುಂಡ್ಕಲ್ ಹೇಳುತ್ತಾರೆ.ಸೋನಿ ಪಿಕ್ಚರ್ಸ್‍ನಸ್ಟುಡಿಯೋ ನೆಕ್ಸ್ಟ್ ನಿರ್ಮಾಣ ಮಾಡುತ್ತಿರುವ ಶೋ ಇದೇಜೂನ್22ರಿಂದ ಪ್ರತಿ ಶನಿವಾರ ಮತ್ತು ಭಾನುವಾರರಾತ್ರಿ8ಗಂಟೆಗೆ ಪ್ರಸಾರವಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
18/06/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore