HOME
CINEMA NEWS
GALLERY
TV NEWS
REVIEWS
CONTACT US
ಕಾವೇರಿಯ ಮಹಾಸಂಚಿಕೆ ಸೋಮವಾರ ಸಂಜೆ 7ಕ್ಕೆ
ಉದಯ ಟಿವಿ ಕನ್ನಡ ಕಿರುತೆರೆಗೆ ಸಾಕಷ್ಟು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದೆ. 2 ದಶಕಗಳಿಂದ ದಂಡಪಿಂಡಗಳು, ದುಡ್ಡು ದುಡ್ಡು ದುಡ್ಡು, ಕಾವ್ಯಾಂಜಲಿ, ಕುಂಕುಮ ಭಾಗ್ಯ, ಕಾದಂಬರಿ ಮೊದಲಾದ ಹತ್ತು ಹಲವಾರು ನವನವೀನ ಕಥೆಗಳೊಂದಿಗೆ ಪ್ರೇಕ್ಷಕರನ್ನು ಮೆಚ್ಚಿಸಿದೆ. ಈಗ ಆ ಸರಣ ಯಲ್ಲಿ ಕಾವೇರಿ ಧಾರಾವಾಹಿಯೂ ಸೇರ್ಪಡೆಯಾಗಿದೆ.

ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕಾವೇರಿ ಈಗಾಗಲೇ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ವೀಕ್ಷಕರ ಫೇವರೇಟ್ ಧಾರಾವಾಹಿಯಾಗಿದೆ. ಮಧ್ಯಮ ವರ್ಗದ ಹುಡುಗಿ ಕಾವೇರಿ. ಕಾವೇರಿಯ ಶುದ್ಧಮನಸ್ಸಿಗೆ ಫಿದಾ ಆಗುವ ಮಿಥುನ್ ಆಕೆಯನ್ನು ಮನಸಾರೆ ಪ್ರೀತಿಸುತ್ತಾನೆ. ತನ್ನ ಸ್ನೇಹಿತೆಯನ್ನು ದುಷ್ಟ ರಾಕಿಯಿಂದ ಕಾಪಾಡುವ ಕಾವೇರಿ ಅವನನ್ನು ಪೋಲೀಸ್ ವಶಕ್ಕೆ ಒಪ್ಪಿಸುತ್ತಾಳೆ. ಇದೇ ಕೋಪಕ್ಕೆ ಪ್ರತೀಕಾರವಾಗಿ ಕಾವೇರಿಯ ಬದುಕನ್ನೇ ಬರಡು ಮಾಡಬೇಕೆಂದು ಯೋಚಿಸಿ ರಾಕಿ ಆಕೆಯನ್ನು ಮದುವೆ ಮನೆಯಿಂದ ಅಪಹರಿಸಿ ಅವಳ ವ್ಯಕ್ತಿತ್ವಕ್ಕೇ ಮಸಿಬಳೆವ ಹುನ್ನಾರ ಮಾಡಿ, ಅದರಲ್ಲಿ ಸಫಲನೂ ಆಗುತ್ತಾನೆ. ಈಗ ಕಾವೇರಿಯ ಮದುವೆಯೂ ಮುರಿದು ಬಿದ್ದು ಮನೆಯವರಿಂದಲೂ ತಿರಸ್ಕಾರಕ್ಕೊಳಗಾಗಿ ಬೀದಿ ಪಾಲಾಗುತ್ತಾಳೆ. ಅಸಹಾಯಕಳಾದ ಕಾವೇರಿಯನ್ನು ಆಕೆಯ ಸ್ನೇಹಿತ ಸಂತೋಷ್ ತನ್ನ ಮನೆಯಲ್ಲಿರಿಸಿಕೊಂಡು ಆಕೆ ಮತ್ತೆ ಸಹಜ ಮನಸ್ಥಿತಿಗೆ ಬರಲು ಸಹಾಯ ಮಾಡುತ್ತಾನೆ. ಸಮಾಜದ ಮುಂದೆ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಬಿದ್ದು ಕಾವೇರಿ ಮದುವೆಯಾದೇ ತನ್ನ ಕೊರಳಿಗೆ ಮಾಂಗಲ್ಯ ಧರಿಸಿಕೊಳ್ಳುತ್ತಾಳೆ ಮತ್ತು ತನ್ನದಲ್ಲದ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಾಳೆ. ಹೀಗೆ ಮದುವೆಯಾಗದೇ ಮಡದಿ , ಜನ್ಮ ನೀಡದೇ ತಾಯಿಯಾದ ಕಾವೇರಿಯ ಬಾಳಪಥ ಎತ್ತ ಸಾಗತ್ತೆ? ಅನ್ನೋದೇ ಸಸ್ಪೆನ್ಸ್. ಹೀಗೆ ಕಾವೇರಿ ಧಾರಾವಾಹಿ, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಅಪರೂಪದ ಕಥೆ.

ಈಗ ಇದರಲ್ಲಿ ಮತ್ತೊಂದು ತಿರುವು. ಕಾವೇರಿ ಬದಲಾಗಿದ್ದಾಳೆ. ಅಂದರೆ ಕಾವೇರಿ ಪಾತ್ರಧಾರಿ ಬದಲಾಗಿದ್ದಾರೆ. ಕಾವೇರಿ ಪಾತ್ರವನ್ನು ಇನ್ನು ಮುಂದೆ ಶೋಭಾ ಶೆಟ್ಟಿ ನಿರ್ವಹಿಸುತ್ತಾರೆ.

ಹೊಸ ರೂಪದಲ್ಲಿ ಬರುವ ಕಾವೇರಿಯ ಸಂಚಿಕೆ ಇದೇ ಸೋಮವಾರದಿಂದ ಅಂದ್ರೆ ಡಿಸೆಂಬರ್ 11 ರಿಂದ ಶುರುವಾಗತ್ತೆ ಮತ್ತು ಇದೇ ಕಾರಣಕ್ಕೆ ಸೋಮವಾರ ಮತ್ತು ಮಂಗಳವಾರ ಒಂದು ಗಂಟೆಯ ಮಹಾ ಎಪಿಸೋಡ್ ಕೂಡ ಇದೆ. ಹಾಗಾಗಿ ಕಾವೇರಿ ಮೊದಲಿಗಿಂತಲೂ ವೀಕ್ಷಕರನ್ನು ಸೆರೆ ಹಿಡಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾದರೆ ಹೊಸ ರೂಪದಲ್ಲಿ ಹರಿಯಲಿರುವ ಕಾವೇರಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.
-8/12/17
Udaya TV Presents New Fiction Show “KAVERI” From 26th June, Monday to Friday at 8pm.
K
aryeshu daasi karune sumantri bhojesu maata , Is a true saying. There is always a woman behind a successful man. She is a wife for a person where she is not married to him and a mother of two kids without giving birth to them, because it is her necessity. The essence of the story itself is about the necessity of Kaveri.

She is a happy living and a daring girl. She likes to do social work but she is unable to do it due to her financial status. Whenever a female gets harassed she would be the first Person to raise her voice, this character changes her life in the future.

Our hero Santosh wishes to see everyone happy around him, in spite of having a good wealth where he can sit and eat for years, his character and simplicity are itself gem. He treats everyone as his family, he is the only son of the owner of “Lakshmi group of company “, who is one of the richest Person in Karnataka. He is the pampered son of Padmavathi. He never values his dad and his richness. In spite of being the only son he stays away from his family and runs a company by himself names as “sai group of company”. It is coz of his anger and cheating done by his father; this secret is between them where padmavathi also does not have any clue of it. Padmavathi is upset because her son stays away from them living as an orphan. If Santosh is back home, Ramachandra is afraid that his secrets would be revealed. Therefore, he always consoles padmavathi and handles the situation accordingly. The story of cheating would be known in future.

Kaveri belongs to a middle class family, after her graduation she starts working for a company. The whole family is dependent on her earning. Her father Appanna works in the Lich house where he burns dead bodies, he is drunk 24/7, more than benefits he always brings trouble. Mother Renuka works for a garment factory and helps her daughter in small works. rashmi and raksha are two sisters who are pursuing their education. It’s Kaveri s dream that both her sisters complete their education, get married and settle in their life, she rejects all the proposals of marriage which she gets and works for her family.
Santosh meets Kaveri accidentally. Later on without Kaveri s knowledge Santosh meets Kaveri. Santosh falls in love seeing Kaveri’s character. The time he thinks of confessing his love to her he gets the information that her marriage is fixed he feels sad and keeps quiet, he blesses her to stay happy in her life by heart.

The moment Kaveri and Santosh come across each other a guy named Mithun who works with Kaveri also comes close where they become good friends, friendship into love later on it takes a diversion of a triangle love love story in between santosh, kaveri and Mithun, where Mithun and Kaveri are ready to get knot.

At the same time UdayaTV is conducting contest for Audience ie “ Dharavahi Nodi Chinnagelli” from June 26th to July 7th 2017, Where in the audience have to answer the questions asked during end of the episode and can win up to 100gm Gold.
Banner: New D2 Media
Director: Vinod
Artists: Princy Krishnan, Ashwini Gowda, Srikanth Heblikar, Vinay Ramprasad, Suresh Rai Etc
“KAVERI” starts from June 26th at (Mon – Fri) 8 PM only on Udaya TV.
-20/16/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore