HOME
CINEMA NEWS
GALLERY
TV NEWS
REVIEWS
CONTACT US
ಸುವರ್ಣದಲ್ಲಿ ಹೊಸ ಧಾರಾವಾಹಿ ಜೀವನ ಚೈತ್ರ ಹಟಕ್ಕೆ ಪ್ರೀತಿಯ ಪಾಠ
ಎಂಟು ವರ್ಷಗಳಿಂದ ಉತ್ತಮ ಅಭಿರುಚಿಯ, ಜನಪ್ರಿಯ ಧಾರಾವಾಹಿಗಳನ್ನು ಕನ್ನಡಿಗ ವೀಕ್ಷಕರಿಗೆ ನೀಡುತ್ತ ಬಂದ ನಮ್ಮ ಸುವರ್ಣ ವಾಹಿನಿಯಲ್ಲಿ ಇನ್ನೊಂದು ಹೊಸ ಧಾರಾವಾಹಿ ಜೀವನ ಚೈತ್ರ'' ಏಪ್ರಿಲ್ ೨೫ರಿಂದ ಸಂಜೆ ೬ ಗಂಟೆಗೆ ಪ್ರಾರಂಭವಾಗಲಿದೆ.

ಜೀವನ ಚೈತ್ರ'' ಟೈಟಲ್‌ನ ಅಡಿ ಬರಹ ಹಟಕ್ಕೆ ಪ್ರೀತಿಯ ಪಾಠ'' ಹೇಳುವಂತೆ ಹಠದಿಂದ ಪ್ರೀತಿ ಎಂದೂ ಗೆಲ್ಲಲ್ಲ ಎನ್ನೋದು ಈ ಧಾರಾವಾಹಿಯ ಸಾರಾಂಶ. ತಂದೆ ತಾಯಿ ಇಲ್ಲದ ಜೀವನ್ ಒಬ್ಬ ಸಾಮಾನ್ಯ ಟೆಕ್ನೀಷಿಯನ್. ತನ್ನ ಮೂವರು ತಂಗಿಯಂದಿರನ್ನು ತಂದೆ ತಾಯಿ ಸ್ಥಾನದಲ್ಲಿ ನಿಂತು ಬೆಳೆಸಿರುತ್ತಾನೆ. ಅವನಿಗೆ ತನ್ನ ಸಂತೋಷಕ್ಕಿಂತ ತನ್ನ ಮೂವರು ತಂಗಿಯಂದಿರಾದ ಚಂದನಾ, ವಂದನಾ ಮತ್ತು ಕೀರ್ತನಾ ಅವರ ಖುಷಿಯೇ ಮುಖ್ಯ. ಹೂವಿನಂತೆ ಅವರನ್ನು ಬೆಳೆಸಿರುತ್ತಾನೆ. ಮೂವರು ತಂಗಿಯಂದಿರಿಗೆ ಒಳ್ಳೇ ಕಡೆ ಮದುವೆ ಮಾಡಿ ಅವರ ಬದುಕನ್ನು ಸುಂದರಗೊಳಿಸಬೇಕು ಎನ್ನುವುದಷ್ಟೇ ಅವನ ಕನಸು. ಆದರೆ ತಂಗಿಯಂದಿರಿಗೆ ಅಣ್ಣನಿಗೆ ತಕ್ಕ ಹೆಂಡತಿಯನ್ನು, ಮನೆ ಬೆಳಗೋ ಅತ್ತಿಗೆಯನ್ನು ತರಬೇಕು ಎನ್ನೋ ಆಸೆ. ಚೈತ್ರ ಎನ್ನೋ ಹುಡುಗಿ ಅಣ್ಣನಿಗೆ ಸರಿಯಾದ ಜೋಡಿ ಎಂದು ತಂಗಿಯಂದಿರು ನಿರ್ಧರಿಸುತ್ತಾರೆ. ಈ ನಡುವೆ ಜೀವನ್ ಹಿಂದೆ ಕಾವ್ಯಾ ಎನ್ನೋ ಶ್ರೀಮಂತ ಹುಡುಗಿ ಬೀಳುತ್ತಾಳೆ. ಆದರೆ ಜೀವನ್ ಕಾವ್ಯಾಳ ಪ್ರೀತಿ ನಿರಾಕರಿಸುತ್ತಾನೆ. ಆದರೆ ಹಠ ಬಿಡದ ಕಾವ್ಯಾ ಜೀವನ್‌ನ್ನು ತನ್ನವನನ್ನಾಗಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾಳೆ.

ಆರ್.ಎ.ಎಸ್ ನಾರಾಯಣನ್, ಎ.ಅಬ್ದುಲ್ಲಾ ನಿರ್ಮಿಸುತ್ತಿರುವ ಜೀವನ ಚೈತ್ರ''ಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಕೈಲಾಶ್ ಮಳವಳ್ಳಿ. ಜೀವನ ಚೈತ್ರ''ದಲ್ಲಿ ಜೀವನ್ ಆಗಿ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿರುವ ರಾಘವೇಂದ್ರ.ಎನ್ ನಟಿಸುತ್ತಿದ್ದಾರೆ. ''ಚೈತ್ರ'' ಆಗಿ ಪ್ರೀತಿ ಶ್ರೀನಿವಾಸ್, ಕಾವ್ಯಾ ಆಗಿ ಸಂಜನಾ ಚಿದಾನಂದ್ ನಟಿಸುತ್ತಿದ್ದಾರೆ. ಜೀವನ್ ತಂಗಿಯಂದಿರಾಗಿ ರಶ್ಮಿ, ದಿವ್ಯಾ, ಮೇಘಾ ನಟಿಸುತ್ತಿದ್ದಾರೆ.

ಒಬ್ಬ ಒಳ್ಳೇ ಅತ್ತಿಗೆ ತರಬೇಕು ಎನ್ನೋ ಆಸೆ ಹೊತ್ತ ಮೂವರು ತಂಗಿಯಂದಿರ ಕನಸು ನನಸಾಗುತ್ತಾ? ಜೀವನ್ ಚೈತ್ರ ಒಂದಾಗುತ್ತಾರಾ ಅಥವಾ ಊಹಿಸಲು ಅಸಾಧ್ಯವಾದ ಉಪಾಯಗಳಿಂದ ಕಾವ್ಯಾ ಜೀವನ್‌ನ್ನು ಒಲಿಸಿಕೊಂಡು ಬಿಡುತ್ತಾಳಾ? ಜೀವನ್ ಮತ್ತವನ ಕುಟುಂಬದ ಕಥೆ ಏನು? ಹೀಗೆ ಪ್ರತಿ ಕ್ಷಣ ಕುತೂಹಲದಿಂದ ಕೂಡಿದ, ಕುಟುಂಬದ ಎಲ್ಲರಿಗೂ ಇಷ್ಟವಾಗೋ ಭಾವನಾತ್ಮಕ ಧಾರಾವಾಹಿ ಜೀವನ ಚೈತ್ರ'' ಇದೇ ಏಪ್ರಿಲ್ ೨೫ರಿಂದ ಸಂಜೆ ೬ ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
-19/04/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore