HOME
CINEMA NEWS
GALLERY
TV NEWS
REVIEWS
CONTACT US
ಫೆಬ್ರವರಿ ೨೨ರಿಂದ ಸುವರ್ಣ ವಾಹಿನಿಯಲ್ಲಿ ಗುಂಡ್ಯಾನ ಹೆಂಡ್ತಿ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ೬.೩೦ಕ್ಕೆ
ಸುವರ್ಣ ವಾಹಿನಿ ವೀಕ್ಷಕರ ಅಭಿಲಾಷೆಗೆ ತಕ್ಕ ಹಾಗೆ ವಿಭಿನ್ನ ರುಚಿಯ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವದರಲ್ಲಿ ಎತ್ತಿದ ಕೈ. ಕೆಲವು ದಿನಗಳ ಹಿಂದೆ ಪ್ರಾರಂಭವಾದ ದುರ್ಗಾ ಮತ್ತು ಅಮ್ಮ ಧಾರಾವಾಹಿ ಎಲ್ಲರ ಮನೆಮಾತಾಗಿವೆ.ಅದೇ ಹಾದಿಯಲ್ಲಿ ಮತ್ತೊಂದು ಧಾರಾವಾಹಿಯನ್ನು ಪ್ರಾರಂಭಿಸಲು ಸುವರ್ಣ ಕ್ಷಣಗಣನೆಯಲ್ಲಿದೆ.
ಕರ್ನಾಟಕ ವಿವಿಧ ಭಾಷೆ,ಸಂಸ್ಕೃತಿಯನ್ನು ಹೊಂದಿದ ನಾಡು ಪ್ರತಿ ಜಿಲ್ಲೆಯಲ್ಲಿಯೂ ತನ್ನದೇ ಆದ ನಡೆ ನುಡಿಯನ್ನು ಹೊಂದಿದೆ. ಮಂಗಳೂರಿನ ಭಾಷೆ ಒಂದಾದರೆ, ಬೆಂಗಳೂರಿನ ಭಾಷೆನೆ ಬೇರೆ.ಕೊಡಗಿನ ಸಂಸ್ಕೃತಿ ವಿಭಿನ್ನ ಹಾಗೆ ಉತ್ತರ ಕರ್ನಾಟಕದ ಶೈಲಿ ಮತ್ತೊಂದು ರೀತಿ ವಿಭಿನ್ನವಾಗಿದೆ.

ಉತ್ತರ ಕರ್ನಾಟಕದ ಭಾಷೆ ಎಲ್ಲರಿಗೂ ಇಷ್ಟವಾದ ಭಾಷೆ. ಮಾತಿನ ಶೈಲಿ ತುಂಬಾ ಹೃದಯವಂತಿಕೆಯಿಂದ ಕೂಡಿರುತ್ತದೆ. ಈ ಭಾಷೆಯ ಅದೆಷ್ಟೋ ಧಾರಾವಾಹಿಗಳು,ಚಲನಚಿತ್ರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿವೆ.ಅಂತೆಯೇ ಸುವರ್ಣ ಚಾನಲ್ ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕದ ಶೈಲಿಯಲ್ಲಿ ಮತ್ತೊಂದು ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲು ಸಿದ್ಧವಾಗಿದೆ.

ಧಾರಾವಾಹಿಗುಂಡ್ಯಾನ ಹೆಂಡ್ತಿ ಶೀರ್ಷಿಕೆಯಲ್ಲಿಯೇ ಹೇಳುವ ಹಾಗೆ ಈ ಧಾರಾವಾಹಿಯಲ್ಲಿ ಗುಂಡ್ಯಾನ ಹೆಂಡತಿಯ ಸುತ್ತ ಈ ಕಥೆ ಇದೆ.ಉತ್ತರ ಕರ್ನಾಟಕದ ಜಮೀನ್ದಾರ ದೇಸಾಯಿ ಮನೆತನದ ಹುಡುಗ ಗುಂಡ್ಯಾ ಎಸ್.ಎಸ್‌ಎಲ್.ಸಿಯಲ್ಲಿ ೪ ಬಾರಿ ಅನುತ್ತೀರ್ಣ ಹೊಂದಿದ ಹುಡುಗ.ಗುಂಡ್ಯಾನಿಗೆ ಮದುವೆಮಾಡಿ ಆಸ್ತಿ ಕಬಳಿಸಬೇಕೆಂಬುದು ಈ ಮನೆಯವರ ದುರಾಸೆ.ಇಲ್ಲಿ ಗುಂಡ್ಯಾನ ಅಜ್ಜಿ ಆಸ್ತಿಗಾಗಿ ತಂತ್ರವನ್ನು ರಚಿಸಿರುತಾರೆ.ಆತಂತ್ರದ ಯಾವುದು? ಅದನ್ನು ಬೇಧಿಸಲು ಕುತಂತ್ರಿಗಳಿಗೆ ಆಗುತ್ತಾ ಎಂಬುದೇ ಈ ಧಾರಾವಾಹಿಯ ಕತೆ.

ಮೂರು ಗಂಟು,ನೂರು ಗುಟ್ಟು ಎಂಬ ಸಹ ಶೀರ್ಷಿಕೆಯನ್ನು ಹೊಂದಿರುವ ಈ ಧಾರಾವಾಹಿಯಲ್ಲಿ ಕಮಲಿ ಇನ್ನೊಬ್ಬ ಮುಖ್ಯ ಪಾತ್ರಧಾರಿ.ಬಡ ಕುಟುಂಬದಿಂದ ಬಂದಿರುವ ಇವಳು ತಂದೆ ತಾಯಿಯರನ್ನು ಕಳೆದು ಕೊಂಡಿರುತ್ತಾಳೆ.ಅದನ್ನು ರೈತರ ಆತ್ಮ ಹತ್ಯೆ ಎಂದು ಬಿಂಬಿಸಿರುತ್ತಾರೆ. ಅದನ್ನು ನಂಬದ ಕಮಲಿ ಅವರ ಸಾವು ಕೊಲೆ ಎಂಬ ಅನುಮಾನದಿಂದ ಸಾವಿಗೆ ಕಾರಣರಾದವರನ್ನು ಹುಡುಕುವುದನ್ನು ಗುರಿಯಾಗಿಟ್ಟುಕೊಂಡಿರುತ್ತಾಳೆ.ಸಾಕಷ್ಟು ತೊಂದರೆಗಳನ್ನು ಅನುಭವಿಸುವ ಇವಳು ದೇಸಾಯಿಯವರ ಮನೆಗೆ ಕಾಲಿಟ್ಟ ಕಾರಣವಾದರು ಏನು? ಎಂಬುದು ಈ ಧಾರಾವಾಹಿಯ ಇನ್ನೊಂದು ಟ್ವಿಷ್ಟ್.

ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿರುವ ಗುಂಡ್ಯಾನ ಹೆಂಡ್ತಿ ಧಾರಾವಾಹಿಗೆ ಕಥೆ ಹಾಗು ಪ್ರಸ್ತುತಿ ಶ್ರೀಮತಿ ನಂದಿತಾ ಯಾದವ್ ಅವರದ್ದು. ಶ್ರೀ ವ್ಹಿ.ಸೋಮಶೇಖರ್ ನಿರ್ದೇಶನ ಮಾಡುತ್ತಿದ್ದಾರೆ, ಅಂಜುಮ್ ರಿಜ್ವಿ ಈ ಧಾರಾವಾಹಿಯ ನಿರ್ಮಾಪಕರು. ರಾಘವೇಂದ್ರ.ಜಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಗುಂಡ್ಯಾನ ಪಾತ್ರದಲ್ಲಿ ಸಮೀಪ್,ಕಮಲಿಯ ಪಾತ್ರವನ್ನು ಸುದೀಪನಾ ಪ್ರಭುದೇವ್ ವಹಿಸಿಕೊಂಡಿದ್ದಾರೆ.ಹಾಗೆ ಹೆಸರಾಂತ ನಟ ರಮೆಶ್ ಪಂಡಿತ್,ನಟಿ ಸುಂದಶ್ರೀ, ಶಶಿಕುಮಾರ,ಹುಬ್ಬಳ್ಳಿಯ ಬಸವರಾಜ ತಿರ್ಲಾಪೂರ,ಸುಷ್ಮಾ ನಾಣಯ್ಯ,ಪವಿತ್ರಾ ಮತ್ತು ಭವಾನಿ ಈ ಧಾರಾವಾಹಿಯ ಪಾತ್ರಧಾರಿಗಳಾಗಿದ್ದಾರೆ.

ಫೆಬ್ರವರಿ ೨೨ ರಿಂದ ಸೋಮವಾರದಿಂದ ಶನಿವಾರದ ವರೆಗೆ ಸಂಜೆ ೬.೩೦ಕ್ಕೆ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಗುಂಡ್ಯಾನ ಹೆಂಡ್ತಿಪ್ರಾರಂಭವಾಗಲಿದೆ.
-26/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore