HOME
CINEMA NEWS
GALLERY
TV NEWS
REVIEWS
CONTACT US

ವೀಕೆಂಡ್ “ಗರಂ ಮಸಾಲಾ”ದಲ್ಲಿ “ಗಿರಿಜಾ ಲೋಕೇಶ್” ನಾಟಿ ಅಡುಗೆ ಜೊತೆ ಘಾಟಿ ಮಾತು ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12.30ಕ್ಕೆ
“ಗರಂ ಮಸಾಲಾ” ಸ್ಟಾರ್ ಸುವರ್ಣ ವಾಹಿನಿಯ ವೀಕೆಂಡ್ ನಾನ್ ವೆಜ್ ಅಡುಗೆಯ ಕಾರ್ಯಕ್ರಮ. ಹೆಸರಿಗೆ ತಕ್ಕಂತೆ ಈ ಷೋನಲ್ಲಿ ವಿವಿಧ ರೀತಿಯ ರುಚಿಯಾದ ಹೊಸಬಗೆಯ ನಾನ್ ವೆಜ್ ಅಡುಗೆಗಳನ್ನು ತಯಾರಿಸಲಾಗುತ್ತದೆ.

ಈ ಷೋಗೆ ಹೆಸರಾಂತ ಚಿತ್ರನಟಿ ಗಿರಿಜಾ ಲೋಕೆಶ್ ತಮ್ಮ ಕೈಯಾರೆ ನಾಟಿ ಶೈಲಿಯಲ್ಲಿ ಅಡುಗೆಯನ್ನು ತಯಾರಿಸಿ ವೀಕ್ಷಕರಿಗೆ ನಟನೆಯ ಜೊತೆಗೆ ಅಡುಗೆಯಲ್ಲಿಯೂ ಪರಣ ತರು ಎಂದು ಎಂಬುದನ್ನು ಬಿಂಬಿಸಿದ್ದಾರೆ.

ಹಾಗೆ ಅಡುಗೆ ಮಾಡುವ ಜೊತೆಗೆ ಸ್ವಲ್ಪ ಚಿಟ್ ಚಾಟ್ ಇರಲಿ ಎಂದು ಗಿರಿಜಾ ಲೋಕೇಶ್ ತೆರೆ ಮರೆಯ ತಮ್ಮ ಸವಿನೆನೆಪನ್ನು ಪ್ರತಿ ಸಂಚಿಕೆಯಲ್ಲಿಯೂ ಹಂಚಿಕೊಳ್ಳುತ್ತಾರೆ.
“ಗರಂ ಮಸಾಲಾ”ಕಾರ್ಯಕ್ರಮದ ಮತ್ತೊಂದು ವೈಶಿಷ್ಠ್ಯ ಅಂದರೆ ಕರ್ನಾಟಕದ ಕಾಂಟೆಂಪರರಿ ಚೆಫ್ ಎಂದೆ ಪ್ರಸಿದ್ಧಿಯಾದ ಆನಂದ ದೇಶ – ವಿದೇಶಿ ಶೈಲಿಯ ನಾನ್ ವೆಜ್ ಅಡುಗೆಯ ಮಾಡುವ ವಿಧಾನವನ್ನು ಈ ಷೋನಲ್ಲಿ ತೋರಿಸುತ್ತಾರೆ.

ಇದಲ್ಲದೆ ಬೆಂಗಳೂರಿನ ವಿವಿಧ ಪಂಚತಾರಾ ಹೋಟೆಲ್‍ನ ಚೆಫ್‍ಗಳು ಭಾಗವಹಿಸಿ ತಮ್ಮ ಕೈಚಳಕದ ಕೈರುಚಿಯನ್ನು ನಾನ್ ವೆಜ್ ಪ್ರಿಯರಿಗೆ ತೋರಿಸುತ್ತಾರೆ. ಅನುಷಾಗೌಡ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. “ಗರಂ ಮಸಾಲಾ”ಷೋ ಪ್ರತಿವಾರ ಮನರಂಜನೆಯ ಮಸಾಲಾದ ಜೊತೆ ವೈವಿಧ್ಯಮಯ ನಾನ್ ವೆಜ್ ನೀಡಲಿದೆ.

“ಗರಂ ಮಸಾಲಾ”ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12.30ಕ್ಕೆ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತದೆ.
-6/04/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore