HOME
CINEMA NEWS
GALLERY
TV NEWS
REVIEWS
CONTACT US

CHALLENGING STAR ‘DARSHAN’, GORGEOUS STAR ‘RAMYA’ & ACTRESS ‘NIKITHA’ ON ‘DANCE DANCE
K
arnataka’s biggest dance show, Suvrana TV’s ‘Dance Dance’ has now reached its finale. ‘Dance Dance’, which has created many milestones in Indian television, has reached its finale and is all set to make a new record.

For the first time in the history of television, dance stage was set up outdoors and has spread the pride of Kannada in foreign locations too.

After 10 long years, Kannada box office Badshah, Challenging Star ‘Darshan’, Sandalwood queen ‘Ramya’ and Nikitha will shake legs to mesmerize everyone.

Along with this, on the huge stage of ‘Dance Dance’, performance of ‘Action Star’ participants, contestants of ‘Halli Hyda Pyatege Banda’, eliminated contestants of ‘Dance Dance’ will also perform and entertain us. Grand entry of the judges and performances by contestants of ‘Pyate Hudgeer Halli Life’ will add colour to the show.

In 120 days, the contestants of ‘Dance Dance’ have taken 120 steps. In each step, they have made noise and won the hearts of the people of Karnataka.

The final 5 pairs of contestants are waiting to wear the crown of ‘Dance Dance’.

Who among the 5 pairs will be the winner?
Who will walk away with the grand 10 lac prize money?

‘Dance Dance’ grand Finale will be telecast on Suvarna TV from this Wednesday (20th July 2016).
-15/07/16

ಬ್ಯಾಂಕಾಂಗ್ ನಲ್ಲಿ “ಡ್ಯಾನ್ಸ್ ಡ್ಯಾನ್ಸ್ ”ನ ಬೃಹತ್ ವೇದಿಕೆ ಕನ್ನಡದ ಕಂಪನ್ನು ಥೈಲ್ಯಾಂಡಿನಲ್ಲಿ ಹರಡಿದ ಡ್ಯಾನ್ಸಿಂಗ್ ಸೂಪರ್ ಜೋಡಿಗಳು
ಸುವರ್ಣ ವಾಹಿನಿಯ “ಡ್ಯಾನ್ಸ್ ಡ್ಯಾನ್ಸ್” ಷೋ ಹೆಜ್ಜೆ ಹೆಜ್ಜೆಗೂ ಹೊಸತನವನ್ನು ಸೃಷ್ಠಿಸಿ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.ಹಾಗೆ ಈಗ ಅಂತಹದೊಂದು ಹೊಸ ಸಾಧನೆಗೆ ದಾಪುಗಾಲು ಹಾಕಿದ್ದಾರೆ. 50ಕ್ಕೂ ಹೆಚ್ಚು ಸಿಬ್ಬಂಧಿ, 6 ಸೂಪರ್ ಜೋಡಿಗಳು ಕನ್ನಡ ನಾಡಿನಿಂದ ತೆರಳಿ ಕನ್ನಡದ ಸಂಸ್ಕøತಿಯ ಕಂಪನ್ನು ಹರಡಲು ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ಮಹಾನ್ ವೇದಿಕೆಯನ್ನು ನಿರ್ಮಿಸಿದ್ದಾರೆ.

ದೇಶ ಯಾವುದೇ ಇರಲಿ ಭಾಷೆ ಯಾವುದೇ ಇರಲಿ ಆದರೆ ಕಲೆಗೆ ಮಾತ್ರ ಎಲ್ಲೆಡೆ ಒಂದೇ ಬೆಲೆ. ಹಾಗೆ “ಡ್ಯಾನ್ಸ್ ಡ್ಯಾನ್ಸ್” ಷೋನಲ್ಲಿ ಇಲ್ಲಿಯವರೆಗೆ ಬೆರೆ ಭಾಷೆ, ನಡೆ ನುಡಿ,ಸಂಸ್ಕøತಿಯನ್ನು ಬಿಂಬಿಸುವ ವೈವಿಧ್ಯಮಯವಾದ ನೃತ್ಯಗಳನ್ನು ಮಾಡಿ ಎಲ್ಲರಲ್ಲಿ ಸೈ ಅನಿಸಿಕೊಂಡಿದ್ದಾರೆ. ಭಾರತೀಯ ಸಂಸ್ಕøತಿಯನ್ನು ಬಿಂಬಿಸುವದರ ಜೋತೆಗೆ ಈಗ ವಿದೇಶಿ ಸಂಸ್ಕøತಿಯನ್ನು ನಾಡಿನ ಜನತೆ ಮುಂದೆ ನೀಡಲು ಸಜ್ಜಾಗಿದ್ದಾರೆ. ಅವರವರ ದೇಶಕ್ಕೆ ತಕ್ಕಹಾಗೆ ನಾನಾ ವಿಧವಾದ ಪದ್ಧತಿಸಂಸ್ಕøತಿಗಳು ಇರುತ್ತವೆ.ಹಾಗೆ ಥೈಲ್ಯಾಂಡನ ಒಂದು ನೃತ್ಯ ಪದ್ಧತಿ ಎಂದರೆ “ತಾಯ್ ಡ್ಯಾನ್ಸ್” ಅಂತಹ ವಿಭಿನ್ನ ಕಲೆಯ “ತಾಯ್ ಡ್ಯಾನ್ಸ್” ಮಾಡಿ ಈ ಡ್ಯಾನ್ಸ್ ಜೋಡಿಗಳು ಮತ್ತೆ ಎಲ್ಲರ ಗಮನಸೆಳದಿದ್ದಾರೆ.

135 ಅಡಿ ಉದ್ದದ,35 ಅಡಿ ಎತ್ತರದ ಥೈಲ್ಯಾಂಡಿನ ಐತಿಹಾಸಿಕ ಪ್ರಸಿದ್ಧ ದೇವಾಲಯ “ಡ್ರ್ಯಾಗಾನ್”ಗೆ ತೆರಳಿ ಥೈ ನಾಡಿನ ಪದ್ಧತಿಯಂತೆ ತಾಯ್‍ನಾಡಿಗೆ ನಮನ ಸಲ್ಲಿಸಿ ಡ್ಯಾನ್ಸ್ ಡ್ಯಾನ್ಸ್ ನ್ನು ಪ್ರಾರಂಭಿಸಿದ್ದು ಬಹಳ ವಿಶೇಷವಾಗಿದೆ.

ಈ ಡ್ಯಾನ್ಸಿಂಗ್‍ನ ಸೂಪರ ಜೋಡಿಗಳ ರಿಯಾಲಿಟಿ ಇದೇ ಸೋಮವಾರ(04.07.2016) ದಿಂದ ಶುಕ್ರವಾರದವರೆಗೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-4/07/16

ಡ್ಯಾನ್ಸ್ ಡ್ಯಾನ್ಸ್ ಷೋ” ನಲ್ಲಿ ಚಿತ್ರರಂಗದ ದಿಗ್ಗಜರು
ಸುವರ್ಣ ವಾಹಿನಿಯ “ಡ್ಯಾನ್ಸ್ ಡ್ಯಾನ್ಸ್” ಷೋನಲ್ಲಿ ಮೇಲಿಂದ ಮೆಲೆ ಮಹಾನ್ ನಟರನ್ನು ಕರೆತಂದು ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ. ಹಾಗೆ ಈ ವಾರದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರನ್ನು ಈ ವೇದಿಕೆ ಬರಮಾಡಿಕೊಂಡಿದೆ.

ಕನ್ನಡಚಿತ್ರರಂಗದ ನಟ ನಿರ್ಮಾಪಕ ರಾಘವೇಂದ್ರರಾಜಕುಮಾರ್ ಈ ವಾರ ಡ್ಯಾನ್ಸ್ ಡ್ಯಾನ್ಸ್ ಷೋ ನ ವಿಶೇಷ ನಿರ್ಣಾಯಕರಾಗಿ ಆಗಮಿಸಿದ್ದಾರೆ. ಸ್ಪರ್ಧಿಗಳಿಗೆ ಉತ್ತೆಜನ ನೀಡುತ್ತಾ ರಾಘಣ್ಣ ಸ್ಪರ್ಧಿಗಳು ಇಲ್ಲಿ ನೀಡುವ ನೃತ್ಯ ಪ್ರದರ್ಶನ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಕುಮಾರ ವಿನಯ ರಾಘವೇಂದ್ರ ರಾಜಕುಮಾರ ನಟಿಸುತ್ತಿರುವ “ರನ್ ಆ್ಯಂಟನಿ”ಚಿತ್ರದ ಬಗೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.“ರನ್ ಆ್ಯಂಟನಿ”ಚಿತ್ರದ ನಾಯಕ ವಿನಯ ರಾಘವೇಂದ್ರ ರಾಜಕುಮಾರ ತಮ್ಮ ಚಿತ್ರದ ಬಗೆಗೆ ಅನಿಸಿಕೆಯನ್ನು ಹಂಚಿಕೊಂಡು ಹಾಗೆ “ಡ್ಯಾನ್ಸ್ ಡ್ಯಾನ್ಸ್” ಷೋನಲ್ಲಿ ಸ್ಪರ್ಧಿಗಳ ಜೊತೆ ಒಂದಿಷ್ಟು ಸ್ಟೆಪ್ ಹಾಕಿದರು.

ಇನ್ನೋರ್ವ ವಿಶೇಷ ನಿರ್ಣಾಯಕಿಯಾಗಿ ರಾಗಿಣ ದ್ವೀವೇದಿ ಕೂಡಾ ಈ ಸೆಟ್‍ಗೆ ಆಗಮಿಸಿದ್ದಾರೆ. ಡ್ಯಾನ್ಸ್ ನೊಂದಿಗೆ ಎಂಟ್ರಿ ಮಾಡಿದ ರಾಗಿಣ ಎಲ್ಲರನ್ನು ರಂಜಿಸಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಷೋನ ಸ್ಪರ್ಧಿಗಳ ಪ್ರತಿಭೆಗಳನ್ನು ಮೆಚ್ಚಿಕೊಂಡಿರುವ ಇವರು, ಈ ಎಲ್ಲ ಸ್ಪರ್ಧಿಗಳು ಇನ್ನಷ್ಟು ಎತ್ತರಕ್ಕೆ ಮಟ್ಟಕ್ಕೆ ಬೆಳಯಬೇಕು ಎಂದು ಹಾರೈಸಿದ್ದಾರೆ.

ಇಂತಹ ನಟ-ನಟಿಯರ ಜೊತೆ ವಿಶೇಷ ಅತಿಥಿಯಾಗಿ ಹರ್ಷಿಕಾ ಪೂನಚ್ಚಾ ಆಗಮಿಸಿರುವರು. ತಾವು ನಟಿಸುತ್ತಿರುವ “ಬೀಟ್”ಚಿತ್ರದ ಬಗೆಗೆ ಅಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಷೋ ತಮಗೆ ತುಂಬಾ ಇಷ್ಟ್ ಈ ಷೋನ್ನು ತಪ್ಪದೆ ನೊಡುತ್ತೇನೆ ಎಂದು ಡ್ಯಾನ್ಸ್ ಡ್ಯಾನ್ಸ್ ಷೋ ಬಗೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಕನ್ನಡ ಚಲನ ಚಿತ್ರ ರಂಗದ ದಿಗ್ಗಜರ ವಿಶೇಷ ಡ್ಯಾನ್ಸ್ ಡ್ಯಾನ್ಸ್ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-30/06/16

ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ತಾಜ್ ಮಹಲ್ ಎದುರು ಸುವರ್ಣ ಡ್ಯಾನ್ಸ್ ಡ್ಯಾನ್ಸ್ ಷೋ ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೭.೩೦ಕ್ಕೆ
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋನಲ್ಲಿ ಸ್ಪರ್ಧಿಗಳು ಸ್ಟೇಜ್ ಮೇಲೆ ಕುಣ ದ್ರು, ಅತಿ ಎತ್ತರ ಪ್ರದೇಶದಲ್ಲಿ ತೇಲಾಡುತ್ತಾ ಸ್ಟೆಪ್ ಹಾಕಿದ್ರು, ಬೆಂಕಿಯಲ್ಲಿ ಹಾರುತ್ತಾ ಡ್ಯಾನ್ಸ್ ಮಾಡಿದ್ರು, ಪ್ರೀ ಸೈಲ್‌ನಲ್ಲಿ ಟಪ್ಪಾಂಗುಚ್ಚಿ ಹಾಕಿದ್ರು, ಸೆಲಬ್ರಿಟಿಗಳ ಮುಂದೆ ಸೈ ಎನಿಸಿಕೊಂಡ್ರು ಹಾಗೆ ಹಳ್ಳಿಯ ಸೊಬಗಿನ ಕೆಸರುಗದ್ದೆಯಲ್ಲಿ ಕುಣ ದು ಎಲ್ಲರ ಗಮನಸೆಳೆದ್ರು, ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಮಾಡಿದ್ರು ಹಾಗೆ ಅತಿ ಆಳದ ಅಥರಪಿಲ್ಲಿ ಪಾಲ್ಸ್‌ನಲ್ಲಿ ಕುಣ ದು ದಾಖಲೆಯನ್ನು ನಿರ್ಮಿಸಿದ್ರು. ಈಗ ಜಗತ್ತಿನ ೭ ಅದ್ಭುತಗಳಲ್ಲಿ ಒಂದಾದ ಭಾರತದ ಪ್ರಸಿದ್ಧ ತಾಣ ತಾಜ್ ಮಹಲ್ ಮುಂದೆ ಸ್ಪರ್ಧಿಗಳು ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

ಜಗತ್ತಿನ ಅದ್ಭುತ ತಾಜ್ ಮಹಲ್ ಆದರೆ, ಜಗತ್ತಿನಲ್ಲಿಯೇ ಮೊದಲ ಬಾರಿಗೆ ತಾಜ್ ಮಹಲ್ ಮುಂದೆ ಡ್ಯಾನ್ಸ್ ರಿಯಾಲಿಟಿ ಷೋ ನಡೆಸಿದ ಕೀರ್ತಿ ಸುವರ್ಣ ವಾಹಿನಿಯದ್ದಾಗಿದೆ.

ತಾಜ್‌ಮಹಲ್ ಇದೊಂದು ಪ್ರೀತಿಯ ಸಂಕೇತವಾಗಿದೆ. ಅಂತೆಯೇ ಈ ಸಂಕೇತದ ದ್ಯೋತಕವಾಗಿ ಡ್ಯಾನ್ಸ್ ಡ್ಯಾನ್ಸ್, ತಾಜ್ ಮಹಲ್ ಮುಂದೆ ವೇದಿಕೆ ನಿರ್ಮಿಸಿ ಪ್ರೀತಿಯ ಹಬ್ಬವನ್ನು ಆಚರಿಸಿತು. ಲವ್ ಥೀಮ್ ಮೇಲೆ ಡ್ಯಾನ್ಸ್ ಮಾಡಿದ ಸ್ಪರ್ಧಿಗಳ ಪರ್ಫಾರ್ಮನ್ಸ್ ಮತ್ತೊಮ್ಮೆ ಷಹಜಹಾನ್ ಮತ್ತು ಮಮತಾಜ್ರ ಪ್ರೀತಿಯನ್ನು ವೀಕ್ಷಕರಿಗೆ ನೆನಪಿಸಿಕೊಟ್ಟಂತಾಗಿದೆ.

ಈ ಜಾಗದ ಮಹಿಮೆಯನ್ನು ಉಪಯೋಗಿಸಿಕೊಂಡು ಕೆಲವರು ತಮ್ಮ ತಮ್ಮ ಪ್ರೀತಿಯ ಅನುಭವವನ್ನು ಹಂಚಿಕೊಂಡರು ಮತ್ತೆ ಕೆಲವರು ತಮ್ಮ ಮನದಾಳದ ಪ್ರೀತಿಯನ್ನು ಈ ಪ್ರೀತಿಯ ವೇದಿಕೆಯಲ್ಲಿ ಹೊರಹಾಕಿದರು.

ಸುವರ್ಣ ವಾಹಿನಿ ಪ್ರತಿಯೊಂದು ಹಂತದಲ್ಲಿ ಹೊಸತನವನ್ನು ನೀಡುತ್ತಾ ಬಂದಿದೆ ಅಂತೆಯೇ ಡ್ಯಾನ್ಸ್ ಡ್ಯಾನ್ಸ್ ಷೋದ ಮೂಲಕ ತಾಜ್ ಮಹಲ್ ಎದರು ರಿಯಾಲಿಟಿ ಷೋ ಮಾಡಿ ಕನ್ನಡದ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಠಿಸಿದ ಹೆಮ್ಮೆ ಸುವರ್ಣ ವಾಹಿನಿಯದ್ದಾಗಿದೆ.

ಪ್ರೀತಿಯ ಸಂಕೇತ ತಾಜ್ ಮಹಲ್ ಮುಂದೆ ಡ್ಯಾನ್ಸ್ ಡ್ಯಾನ್ಸ್ ಇದೇ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-23/04/16

ಬೆಳದಿಂಗಳಾಗಿ ಬಂದ ಚಿನ್ನದ ಮಲ್ಲಿಗೆ ಹೂ ಜಯಾಪ್ರದ ಜೊತೆ ಲೆಟ್ಸ್ ಡ್ಯಾನ್ಸ್ ಇನ್ ಡ್ಯಾನ್ಸ್ ಡ್ಯಾನ್ಸ್ ಇದೇ ಬುಧವಾರದಿಂದ ರಾತ್ರಿ ೭.೩೦ಕ್ಕೆ
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್, ಜಗತ್ ಪ್ರಸಿದ್ಧ ನಟ-ನಟಿಯರನ್ನು ಬರಮಾಡಿಕೊಂಡ ಮೊದಲ ವೇದಿಕೆಯಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಖುಷಬು, ಶಿಲ್ಪಾ ಶೆಟ್ಟಿ, ಸುಧಾರಾಣ ಮತ್ತು ಮೀನಾ ಅವರ ಉಪಸ್ಥಿತಿ ಈ ಷೋನ ವೇದಿಕೆಯ ರಂಗಿಗೆ ಇನ್ನಷ್ಟು ಮೆರಗು ನೀಡಿತ್ತು. ಹಾಗೆ ಈ ಸಾಲಿಗೆ ಈಗ ಮತ್ತೊಬ್ಬ ಸಿನಿಮಾ ದಿಗ್ಗಜರು ಸೇರಿದ್ದಾರೆ. ಈಡಿ ಭಾರತದಲ್ಲಿ ಪ್ರಸಿದ್ಧಿ ಪಡೆದ ಪ್ರಖ್ಯಾತ ನಟಿ ಜಯಪ್ರದ ಈ ವಾರದ ವಿಶೇಷ ಅತಿಥಿ.

೧೯೭೪ರಲ್ಲಿ ತೆಲುಗು ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿದ ಜಯಪ್ರದ ಮಲಿಯಾಳಂ, ತಮಿಳ್, ಹಿಂದಿ, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದ ನಟಿ ಎನಿಸಿಕೊಂಡಿದ್ದಾರೆ. ಇವರು ೯೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಕೀರ್ತಿ ಪಡೆದುಕೊಂಡಿದ್ದಾರೆ. ೧೯೭೪ ರಿಂದ ಇಲ್ಲಿಯವರೆಗೆ ಒಟ್ಟು ೪೦ಕ್ಕೂ ಹೆಚ್ಚು ವರ್ಷದ ಚಿತ್ರರಂಗದ ಅನುಭವ ಇವರದ್ದಾಗಿದೆ. ಇವರು ವಿವಿಧ ಭಾಷೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ತೆಲುಗುವಿನಲ್ಲಿ ೧೯೮೩ರಲ್ಲಿ ಸಾಗರ ಸಂಗಮಂ ಚಿತ್ರಕ್ಕೆ ದಕ್ಷಿಣ ಭಾರತದ ಫಿಲ್ಮ್ ಫೇರ್ ಅವಾರ್ಡ ಅತ್ಯುತ್ತಮ ನಟಿ ಮತ್ತು ೨೦೦೭ ಇವರ ಸಾಧನೆಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಕಲಾಶ್ರಿ, ಕಲಾ ಸರಸ್ವತಿ, ನರ್ಗೀಸ್ ದತ್ತಾ ಗೋಲ್ಡ್ ಮೆಡಲ್, ಶಕುಂತಲಾ ಕಲಾ ರತ್ನಂ ಪ್ರಶಸ್ತಿಗಳಿಂದ ಇವರನ್ನು ಸನ್ಮಾನಿಸಲಾಗಿದೆ.

ಕನ್ನಡ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ನಾಡಿನ ಜನತೆಯ ಮನ ಗೆದ್ದ ಮನಮೋಹಕ ನಟಿ ಜಯಪ್ರದ. ೧೯೭೭ರಲ್ಲಿ ಸನಾದಿ ಅಪ್ಪಣ್ಣ ಚಿತ್ರದಿಂದ ಕನ್ನಡ ಸಿನಿಮಾ ಲೋಕಕ್ಕೆ ಪ್ರವೇಶ ಮಾಡಿದ ಇವರು ವರನಟ ನಟ ಸಾರ್ವಭೌಮ ಡಾ. ರಾಜ್‌ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ್ ರಂತಹ ಮೇರು ನಟರ ಜೊತೆ ಅಭಿನಯಿದಿದ ಖ್ಯಾತಿ ಇವರದ್ದಾಗಿದೆ. ಹಾಗು ಪವರ್ ಸ್ಟಾರ್ ಪುನಿತ್ ರಾಜಕುಮಾರ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ. ಹುಲಿ ಹಾಲಿನ ಮೇವು, ಕವಿರತ್ನ ಕಾಳೀದಾಸ, ಶಬ್ಧವೇದಿ ಮತ್ತು ಈ ಬಂಧನ ಇವರ ಪ್ರಮುಖ ಚಿತ್ರಗಳಲ್ಲಿ ಕೆಲವೊಂದಾಗಿವೆ.
ಪ್ರತಿ ವಾರ ಡ್ಯಾನ್ಸ್ ಡ್ಯಾನ್ಸ್ ಷೋ ಒಂದೊಂದು ಥೀಮ್ ಮೇಲೆ ನಡೆಯುತ್ತದೆ ಹಾಗೆ ಡೆಡಿಕೇಶನ್ ರೌಂಡ್ ಈ ವಾರದ ಥೀಮ್ ಆಗಿದೆ. ಇಲ್ಲಿ ಪ್ರತಿಯೊಂದು ಜೋಡಿಗಳು ತಾವು ಮಾಡುವ ನೃತ್ಯವನ್ನು ತಮಗೆ ಇಷ್ಟ್ ಇರುವವವರಿಗೆ ಸಮರ್ಪಿಸುತ್ತಾರೆ. ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ ತಮ್ಮ ಸಂಬಂಧಿಗಳಿಗೆ ಅರ್ಪಿಸಿದ್ದಾರೆ.

ನಟಿ ಜಯಪ್ರದಾ ಓ ಹೋ ಪ್ರೇಮ ಕಾಶ್ಮೀರ ಹಾಡಿಗೆ ಸ್ಟೇಪ್ ಹಾಕುತ್ತಾ ಸ್ಟೇಜ್ ಮೇಲೆ ಬಂದ ಕ್ಷಣ ಮತ್ತೆ ಶಬ್ಧವೇದಿ ಚಲನಚಿತ್ರವನ್ನು ನೆನಪಿಗೆ ತಂದುಕೊಟ್ಟಿತು. ಇವರು ಕೂಡ ಈ ತಮ್ಮ ಡ್ಯಾನ್ಸ್‌ನ್ನು ಕನ್ನಡ ನಾಡಿನ ಜನತೆಗೆ ಸಮರ್ಪಿಸಿದ್ದಾರೆ. ಕಿರುತೆರೆಗೆ ಮೊದಲ ಬಾರಿಗೆ ಇಂತಹ ವೇದಿಕೆಯನ್ನು ಅಲಂಕರಿಸಿದ್ದಕ್ಕೆ ನಟಿ ಜಯಪ್ರದ ಸಂತಸ ವ್ಯಕ್ತ ಪಡಿಸಿದ್ದಾರೆ.

ಪ್ರಖ್ಯಾತ ನಟಿ ಜಯಪ್ರದ ಜೊತೆ ಡ್ಯಾನ್ಸ್ ಡ್ಯಾನ್ಸ್ ವಿಶೇಷ ಇದೇ ಬುಧವಾರ (೨೩.೦೩.೨೦೧೬) ದಿಂದ ಸುವರ್ಣ ವಾಹಿನಿಯಲ್ಲಿ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.
-22/03/16

ಸಿನಿಮಾದಲ್ಲಿ ಬಾಹುಬಲಿ, ಕಿರುತರೆಯಲ್ಲಿ ಡ್ಯಾನ್ಸ್ ಡ್ಯಾನ್ಸ್ ಕೇರಳದ ಅಥಿರ್‌ಪಿಲ್ಲಿ ಕಡಲ ಅಂಚಿನಲ್ಲಿ ಸುವರ್ಣ ನೃತ್ಯೋತ್ಸವ ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೭.೩೦ಕ್ಕೆ
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋ ವಾರದಿಂದ ವಾರಕ್ಕೆ ರಂಗೇರ್‍ತಾಯಿದೆ. ವಿವಿಧ ರೀತಿಯ ಸಾಹಸಮಯ ನೃತ್ಯ ಪ್ರದರ್ಶನದಲ್ಲಿ ಸ್ಪರ್ಧಿಗಳು ಗಟ್ಟಿ ಮನಸ್ಸಿನಿಂದ ಹೆಜ್ಜೆ ಹಾಕಿ ತಮ್ಮ ನ್ಯಪುಣ್ಯತೆಯನ್ನು ಕನ್ನಡನಾಡಿನ ಜನತೆಯ ಮುಂದೆ ಪ್ರದರ್ಶನ ಮಾಡುತ್ತಿದ್ದಾರೆ.

ದೂರದ ಸುಂದರ ತಾಣದ ಕಡಲ ಅಂಚಿನಲ್ಲಿ, ಕೇರಳದ ಪ್ರಸಿದ್ಧ ತಾಣವಾದ ಅಥಿರ್‌ಪಿಲ್ಲಿ ಫಾಲ್ಸ್ನಲ್ಲಿ ಡ್ಯಾನ್ಸ್ ಡ್ಯಾನ್ಸ್ ವೇದಿಕೆ ಸಜ್ಜಾಗಿದೆ. ೩೩೦ ಅಡಿ ಅಗಲ, ೮೨ ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಗುಂಡಿಗೆ ಇದ್ದವರು ಮಾತ್ರ ಹೆಜ್ಜೆ ಹಾಕಲು ಸಾದ್ಯ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಎಷ್ಟು ಶ್ರಮಿಸಬೇಕಾಗುವುದೋ ಅಷ್ಟೇ ವೇದಿಕೆ ನಿರ್ಮಿಸಲು ಕಷ್ಟಪಡಬೇಕಾಗುತ್ತದೆ. ಅಂತೆಯೇ ಅಥಿರ್‌ಪಿಲ್ಲಿ ಫಾಲ್ಸ್ ನ ಅಂಚಿನಲ್ಲಿ ಪ್ರಾಣ ಭಿತಿಯನ್ನು ಭೇದಿಸಿ ಈ ಷೋಗಾಗಿ ಸೆಟ್‌ನ್ನು ನಿರ್ಮಿಸಲಾಗಿದೆ.

ಈ ಸ್ಥಳ ಪ್ರವಾಸಿಗರಿಗೆ ಅಷ್ಟೇ ಅಲ್ಲದೇ ಸಿನಿಮಾ ಜನರಿಗೂ ಕೂಡ ಉತ್ತಮವಾದ ಲೊಕೆಶನ್. ಅಂತೆಯೇ ೨೫ಕ್ಕೂ ಹೆಚ್ಚು ಚಲನಚಿತ್ರಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ತಮಿಳ್, ಮಲೆಯಾಳಂ, ಇಂಗೀಷ್, ತೆಲಗು ಹಾಗು ಬಾಲಿವುಡ್ ಚಿತ್ರಗಳಲ್ಲಿ ಇಲ್ಲಿಯ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ. ಖ್ಯಾತ ನಿರ್ದೇಶಕ ಮಣ ರತ್ನಂ ನಿರ್ದೇಶನದ ಹಿಂದಿ ಚಲನಚಿತ್ರ ದಿಲ್ ಸೆ ಮತ್ತು ತಮಿಳ್‌ನ ಇರುವರ್, ಇಂಗ್ಲೀಷ್‌ನ ಬಿಫೋರ್ ದಿ ರೇನ್ಸ್, ಹಾಗೆ ಖ್ಯಾತ ನಿರ್ದೇಶಕ ಶಂಕರ್ ನಿರ್ದೆಶನದ ಮುದಲ್‌ವನ್ ಚಿತ್ರಗಳು ಕೂಡಾ ಇದೇ ಸುಂದರ ಸ್ಥಳದಲ್ಲಿ ಚಿತ್ರಿಸಲ್ಪಟ್ಟಿವೆ.

ಈ ಮನಮೋಹಕ ತಾಣದಲ್ಲಿ ಅದೇಷ್ಟೋ ಚಲನಚಿತ್ರಗಳು ಚಿತ್ರಿಸಲ್ಪಟ್ಟಿದ್ದರೂ ೨೦೧೫ರಲ್ಲಿ ಇದೇ ಸ್ಥಳದಲ್ಲಿ ವೈವಿದ್ಯಮಯವಾಗಿ ಚಿತ್ರಿಸಲ್ಪಟ್ಟ ಬಾಹುಬಲಿ ಜಗತ್‌ಪ್ರಸಿದ್ಧಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗೆಯೇ ಕಿರುತೆರೆಯಲ್ಲಿ ಅದಷ್ಟೋ ರಿಯಾಲಿಟಿ ಷೋಗಳು ಬಿತ್ತರಿಸಿದ್ದರೂ ಡ್ಯಾನ್ಸ್ ಡ್ಯಾನ್ಸ್ ಅದಲ್ಲೆಕ್ಕಿಂತ ವಿಭಿನ್ನ,ವಿಶಿಷ್ಟ ಮತ್ತು ಅದ್ಭುತವಾದ ರಿಯಾಲಿಟಿ ಷೋ. ಟೆಲಿವ್ಹಿಸನ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಈ ತಾಣದಲ್ಲಿ ರಿಯಾಲಿಟಿ ಷೋ ನಡೆಸುತ್ತಿರುವ ಹೆಗ್ಗಳಿಕೆ ಸುವರ್ಣ ವಾಹಿನಿಯದ್ದಾಗಿದೆ.

ಮೊದಲ ವಾರದಿಂದಲೂ ಹರಸಾಹಸದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನೃತ್ಯಪಟುಗಳು ವೀಕ್ಷಕರಿಗೆ ಕಣ್ಮನ ತೆರೆಸಿದ್ದಾರೆ. ಸುಂದರ ಮನಮೋಹಕ ಸೆಟ್ ಮೇಲೆ ಡ್ಯಾನ್ಸ್ ಮಾಡಿದ್ದು ಕೆಲವು ದಿನಗಳಾದ್ರೆ, ೧೦೦ ಅಡಿಗಿಂತ ಎತ್ತರ ಪ್ರದೇಶದಲ್ಲಿ ಹೆಜ್ಜೆ ಹಾಕಿದ್ದು ಕೆಲವು ದಿನಗಳು. ವಿಶ್ವವಿಖ್ಯಾತ ಸೆಲಿಬ್ರಿಟಿಗಳ ಮುಂದೆ ತಮ್ಮ ನೈಪೂಣ್ಯತೆಯನ್ನು ತೋರಿಸಿದ್ದಲ್ಲದೆ, ಭಯವನ್ನು ಬದಿಗೊತ್ತಿ ಬೆಂಕಿಯಲ್ಲಿ ಹಾರಾಡಿದ ಇವರ ಟ್ಯಾಲೆಂಟ್ ಬಹಳ ಮನರಂಜನೆ ನಿಡಿತ್ತು. ಅಷ್ಟಲ್ಲದೆ ಹಳ್ಳಿಯ ಸೊಗಡನ್ನು ಮತ್ತೆ ನೆನಪಿಸಿ ಕೊಟ್ಟ ಈ ಸ್ಪರ್ಧಿಗಳು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಕಳೆದ ವಾರದ ಸಂಚಿಕೆಯಲ್ಲಿ ದಕ್ಷಿಣ ಭಾರತದ ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಮಾಡಿ ದಾಖಲೆಯನ್ನು ನಿರ್ಮಿಸಿದ್ದಾರೆ.

ಹೀಗೆ ವಾರದಿಂದ ವಾರಕ್ಕೆ ವಿಭಿನ್ನ ಟಾಸ್ಕ್‌ಗಳನ್ನು ಎದುರಿಸುತ್ತಿರುವ ಇವರು ಈಗ ಹಿಂದೆಂದು ನೋಡದ, ಮೈ ನವಿರೇರಿಸುವ ರೋಮಾಂಚಕಾರಿ ಟಾಸ್ಕನ್ನು ಮಾಡುವದರ ಮೂಲಕ ಮತ್ತೊಂದು ಧಾಖಲೆಯನ್ನು ನಿರ್ಮಿಸುತ್ತಿದ್ದಾರೆ.

ಈ ನೀರಿನಲ್ಲಿ ಮೀನುಗಳ ಸಾಲು, ಕಾಲಿಟ್ಟರೆ ಜಾರುವ ಜಾಗ ಹಾಗೆ ತಂಪಾಗಿ ಬಿಸುವ ಗಾಳಿಯ ಮಧ್ಯೆ ನೃತ್ಯ ಮಾಡುವರಿಗೆ ಇದೊಂದು ದೊಡ್ಡ ಚಾಲೆಂಜ್. ನೀರಿನ ಆಳದಲ್ಲಿ ಧುಮುಕಿ ಡ್ಯಾನ್ಸ್‌ನ ಹೊಸ ಇತಿಹಾಸವನ್ನು ಸೃಷ್ಟಿಸಲು ಪ್ರಾಣದ ಭಯವಿಲ್ಲದೇ ೭ ಜೋಡಿಗಳು ಹೇಗೆ ಈ ಅಖಾಡದಲ್ಲಿ ಗೆಲ್ಲುವರು ಎಂಬುದನ್ನು ಈ ಸೋಮವಾರದ (೧೪.೦೩.೨೦೧೬) ಸಂಚಿಕೆಯಿಂದ ನೋಡಬಹುದಾಗಿದೆ.

ಮೈ ರೋಮಾಂಚನಕಾರಿ ರೀಯಾಲಿಟಿ ಷೋ ಡ್ಯಾನ್ಸ್ ಡ್ಯಾನ್ಸ್ ಸಂಚಿಕೆಗಳು ಇದೇ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-11/03/16
ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಡ್ಯಾನ್ಸ್ ಷೋ ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೭.೩೦ಕ್ಕೆ
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಎಂಬ ಹೊಸ ರಿಯಾಲಿಟಿ ಷೋನಲ್ಲಿ ಸ್ಪರ್ಧಿಗಳು ಸ್ಟೇಜ್ ಮೇಲೆ ಕುಣ ದ್ರು, ಅತಿ ಎತ್ತರ ಪ್ರದೇಶದಲ್ಲಿ ತೇಲಾಡುತ್ತಾ ಸ್ಟೆಪ್ ಹಾಕಿದ್ರು, ಬೆಂಕಿಯಲ್ಲಿ ಹಾರುತ್ತಾ ಡ್ಯಾನ್ಸ್ ಮಾಡಿದ್ರು, ಪ್ರೀ ಸೈಲ್‌ನಲ್ಲಿ ಟಪ್ಪಾಂಗುಚ್ಚಿ ಹಾಕಿದ್ರು, ಸೆಲಬ್ರಿಟಗಳ ಮುಂದೆ ಸೈ ಎನಿಸಿಕೊಂಡ್ರು ಹಾಗೆ ಹಳ್ಳಿಯ ಸೊಬಗಿನ ಕೆಸರುಗದ್ದೆಯಲ್ಲಿ ಕುಣ ದು ಎಲ್ಲರ ಗಮನಸೆಳೆದ್ರು ಆದರೆ ಈಗ ಮತ್ತೊಂದು ಹರಸಾಹಸಕ್ಕೆ ಕೈ ಹಾಕಿದ್ದಾರೆ.

ದಕ್ಷಿಣ ಭಾರತದ ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಮಾಡಿ ಮತ್ತೊಂದು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ.೧೭೫ಕ್ಕೂ ಹೆಚ್ಚು ಕ್ರ್ಯೂವ್ ಜೊತೆ,ಮಹಾನ್ ಘಟಾನುಘಟಿ ತ್ರಿಮೂರ್ತಿಗಳ ತೀರ್ಪಿನಲ್ಲಿ ಡ್ಯಾನ್ಸ್ ಡ್ಯಾನ್ಸ್ ಗೆ ತಕ್ಕ ಹಾಗೆ ಇದೊಂದು ಸವಾಲ್ ಆಗಿದೆ. ಪ್ರಚಂಡ ಜೋಡಿಗಳು ತಮ್ಮ ಭಯ ಬಿಟ್ಟು ಮೈರೋಮಾಂಚನಕಾರಿ ಆಗುವ ಹಾಗೆ ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಮಾಡಿ ಎಲ್ಲರನ್ನು ರಂಜಿಸಲಿದ್ದಾರೆ.

ಭಯಾನಕ ಸಾಹಸಮಯ ಈ ಷೋನಲ್ಲಿ ೧೫ ಕ್ಯಾಮರಾಗಳು,ಹೇಲಿಕ್ಯಾಮ್‌ಗಳು,೪ ಗೋಪುರಗಳು, ಒಂದು ಜಿಮ್ಮಿ ಜಿಬ್ಬ್ ಮತ್ತು ೨ಟ್ರ್ಯಾಕ್ ಗಳನ್ನು ಬಳಿಸಿಕೊಂಡು ಏರ್‌ಪೋರ್ಟ ರನ್ನ್ ವೇಯಲ್ಲಿ ಹೆಜ್ಜೆ ಹಾಕಿದ್ದು ನೋಡುಗರಿಗೆ ಎರಡು ಕಣ್ಣುಗಳು ಸಾಲದಂತೆ ಭಾಸವಾಗುತ್ತದೆ.

ಸಾಹಸಮಯ ರೀಯಾಲಿಟಿ ಷೋ ಡ್ಯಾನ್ಸ್ ಡ್ಯಾನ್ಸ್ ಚಾಲೇಂಜಿಂಗ್ ಎಪಿಸೋಡ್ ಇದೇ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-4/03/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore