HOME
CINEMA NEWS
GALLERY
TV NEWS
REVIEWS
CONTACT US
೧೦೦ ಅಡಿ ಎತ್ತರದ ವೇದಿಕೆಯಲ್ಲಿ "ಡ್ಯಾನ್ಸ್ ಡ್ಯಾನ್ಸ್" ಷೋ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೭.೩೦ಕ್ಕೆ
ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ "ಡ್ಯಾನ್ಸ್ ಡ್ಯಾನ್ಸ್" ಎಂಬ ಹೊಸ ರಿಯಾಲಿಟಿ ಷೋ ಬೇರೆ ಡ್ಯಾನ್ಸ್ ಷೋಗಿಂತ ವಿಭಿನ್ನವಾಗಿದೆ. ದಕ್ಷಿಣ ಭಾರತದ ಟೆಲಿವಿಸನ್ ಇತಾಹಸದಲ್ಲಿ ಪ್ರಪ್ರಥಮ ಬಾರಿಗೆ ಭೂಮಿಯಿಂದ ಆಕಾಶಕ್ಕೆ ಹತ್ತಿರವಾಗುವ ಹಾಗೆ ಅತಿ ಎತ್ತರದ ವೇದಿಕೆಯಲ್ಲಿ ಹೆಜ್ಜೆ ಹಾಕಲು ಸಿದ್ಧವಾಗಿದೆ.ಸಹಜವಾಗಿ ಡ್ಯಾನ್ಸ್ ಷೋಗಳು ಒಳ ವೇದಿಕೆಯಲ್ಲಿ ಸಿಮಿತವಾಗಿರುತ್ತದೆ. ಆದರೆ ಡ್ಯಾನ್ಸ್ ಡ್ಯಾನ್ಸ್ ಷೋ ಹೊರ ವಲಯದಲ್ಲಿ ರೀಯಾಲಿಟಿ ಮಾಡುವುದರ ಮೂಲಕ ಸೈ ಎನಿಸಿಕೊಡಿದೆ. ಒಟ್ಟು ೧೦ ಜೋಡಿಗಳು ೧೦೦ ಅಡಿ ಎತ್ತರದಲ್ಲಿಯ ವೇದಿಕೆಯ ಮೆಲೆ ಭಯಾ ಬಿಟ್ಟು ಭಂಡೆದೆಯಿಂದ ಜಭರ್ದಸ್ತ ಪರ್ಫಾರ್ಮನ್ಸ್ ಮಾಡಿ ಸಾಹಸಕ್ಕೆ ಕೈ ಹಾಕಿದ್ದಾರೆ. ರೀಯಲ್ ಡ್ಯಾನ್ಸ್ ಜೊತೆ ರೀಯಲ್ ಫನ್ ಸಾಕಷ್ಟು ಮನರಂಜನೆ ಮತ್ತು ಮೈ ರೋಮಾಂಚಕಾರಿ ಪರ್ಫಾರ್ಮನ್ಸ್‌ಗಳ ಜೊತೆ ಪಕ್ಕಾ ಎಂಟರ್‌ಟೈನ್‌ಮೆಂಟ್ ಷೋ ಈ ವಾರದ ಸಂಚಿಕೆಯಲ್ಲಿದೆ.

ಇದೊಂದು ಹೊಸರೀತಿಯ ಸಾಧನೆ.ಈ ಪ್ರಯತ್ನಕ್ಕೆ ನಿಮಗೆ ಧನ್ಯವಾದಗಳು, ಮುಂಬರುವ ದಿನಗಳಲ್ಲಿ ಇನ್ನೂ ಕಠಿಣವಾಗಿ ಪರಿಶ್ರಮ ಪಡಬೇಕಾಗುತ್ತದೆ ಎಂದು ನೀರ್ಣಾಯಕರಾದ ಚಿನ್ನಿಪ್ರಕಾಶ್ ಹೇಳಿದ್ದಾರೆ. ಶರ್ಮಿಳಾ ಮಾಂಡ್ರೆ ಮತ್ತು ಶೃತಿ ಹರಿಹರನ್ ೧೦ ಜೋಡಿಗಳ ಈ ಸಾಹಸಕ್ಕೆ ಬೆರಗಾಗಿದ್ದಾರೆ.

ಸಾಹಸಮಯ ರೀಯಾಲಿಟಿ ಷೋ ಫೆಬ್ರವರಿ ೮ ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-8/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore