HOME
CINEMA NEWS
GALLERY
TV NEWS
REVIEWS
CONTACT US
ತಕಧಿಮಿತಾ ರಿಯಾಲಿಟಿ ಶೋ
ಮೂರು ವರ್ಷದ ನಂತರ ಕನ್ನಡದ ಅತಿ ದೊಡ್ಡದಾದ ರಿಯಾಲಿಟಿ ಶೋ ‘ತಕಧಿಮಿತ’ ಪ್ರಾರಂಭವಾಗುತ್ತಿದೆ. ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರು ಇವರೊಂದಿಗೆ ಹೊಸ ಪ್ರಯೋಗ ಎನ್ನುವಂತೆ 14 ಸಾಮಾನ್ಯ ವರ್ಗಕ್ಕೆ ಸೇರಿರುವ ಪ್ರತಿಭೆ ಇರುವ ನೃತ್ಯಪಟುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ಸದರಿ ಶೋನಲ್ಲಿ ಒಬ್ಬೋಬ್ಬ ಸೆಲೆಬ್ರಿಟಿಯೊಂದಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ತಂಡವಾಗಿ ಭಾಗವಹಿಸುತ್ತಾರೆ. ಅಂತಹ ಹದಿನಾಲ್ಕು ಜೋಡಿಗಳು ಸ್ಪರ್ಧೆಯಲ್ಲಿ ಗೆಲ್ಲಲು ಪೈಪೋಟಿ ನಡೆಸುತ್ತಾರೆ. ತೀರ್ಪುಗಾರರು ನೀಡುವ ಅಂಕಗಳ ಆಧಾರದಲ್ಲಿ ಕನಿಷ್ಟ ಅಂಕ ಪಡೆಯುವ ಮೂರು ಜೋಡಿಗಳು ಡೇಂಜರ್ ಝೋನ್‍ಗೆ ತಲುಪುತ್ತಾರೆ. ಇಂತಹ ಸ್ಪರ್ಧಿಗಳು ತಮ್ಮ ಬೆಂಬಲಿಗರ ಮತ ಯಾಚಿಸಲು ಅವಕಾಶ ವಿರುತ್ತದೆ. ಕಡಿಮೆ ಮತ ಪಡೆಯುವ ಸ್ಪರ್ಧಿಯು ಶೋದಿಂದ ಎಲಿಮಿನೇಟ್ ಆಗುತ್ತಾರೆ.

ಎಂದಿನಂತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಂದಿಗೆ ಹೊಸದಾಗಿ ನಟಿ ಸುಮನ್‍ರಂಗನಾಥ್ ಮತ್ತು ಸುಪ್ರಸಿದ್ದ ಶಾಸ್ತ್ರೀಯ ಶೈಲಿಯ ನೃತ್ಯಗಾತಿ ಅನುರಾಧವಿಕ್ರಾಂತ್ ತೀರ್ಪುಗಾರರಾಗಿದ್ದಾರೆ. ಅಂತಿಮವಾಗಿ ವಿಜೇತ ಜೋಡಿಗಳಿಗೆ ಹತ್ತು ಲಕ್ಷ ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮದ ನಿರ್ದೇಶಕಿ ಶ್ರದ್ದ, ಮುಖ್ಯಸ್ಥರಾಗಿ ಪರಮೇಶ್ವರ್‍ಗುಂಡ್ಕಲ್ ಸಾರಥ್ಯದಲ್ಲಿ ನಡೆಯಲಿದೆ. ನಿರೂಪಕ ಅಕುಲ್‍ಬಾಲಾಜಿ ನಡೆಸಿಕೊಡುವ ಶೋ ಫೆಬ್ರವರಿ 2ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8 ಘಂಟಗೆ ಹದಿನಾರು ವಾರಗಳ ಕಾಲ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/01/19




For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore