HOME
CINEMA NEWS
GALLERY
TV NEWS
REVIEWS
CONTACT US

ಉದಯ ಟಿವಿಯಲ್ಲಿಹೊಸ ಧಾರಾವಾಹಿ "ಚಂದ್ರಕುಮಾರಿ" ಜನವÀರಿ 7ರಿಂದ ರಾತ್ರಿ 8.00ಕ್ಕೆ
ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನುಕನ್ನಡದಕಿರುತೆರೆಗೆತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದಕಥಾಹಂದರ ಹೊಂದಿರುವ “ಚಂದ್ರಕುಮಾರಿ” ಧಾರಾವಾಹಿ ಇದೇಜನವರಿ 7 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಶತಮಾನಗಳ ಹಿಂದೆ ನಡೆದು ಹೋಗಿದ್ದ್ದಅಮ್ಮ ಮಗಳ ನಡುವಿನ ಸಂಘರ್ಷದಕಥೆಗೆ ಮತ್ತೆ ಮರುಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇಚಂದ್ರಕುಮಾರಿಧಾರಾವಾಹಿಯ ಜೀವಾಳ. ಈಗಾಗಲೇ ನಂದಿನಿ, ಜೈ ಹನುಮಾನ್‍ನಂಥಅದ್ದೂರಿ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಲೋಕದಲ್ಲಿಯೇ ಹೊಸ ದಾಖಲೆ ಬರೆದ ಉದಯ ಟಿವಿ ಚಂದ್ರಕುಮಾರಿ ಮೂಲಕ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ನಿಟ್ಟಿನಲ್ಲಿದೆ. ಹೊಸ ಕಾಲದಯುವ ವೀಕ್ಷಕರಅಭಿರುಚಿಗೆತಕ್ಕಂತೆಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂಅದ್ದೂರಿತನಎದ್ದುಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದಚಿತ್ರೀಕರಣ, ಸಂದರ್ಭಕ್ಕೆತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್‍ಗಳು ವೀಕ್ಷಕರ ಮನರಂಜನೆಗೆ ಭರ್ಜರಿ ಸರಕುಒದಗಿಸುತ್ತವೆ.

ಇದರಜೊತೆ ಸಂಬಂಧಗಳ ಮಹತ್ವ, ಪ್ರೀತಿ, ಆ್ಯಕ್ಷನ್‍ಎಲ್ಲವೂಇದ್ದು ನೋಡುಗರಿಗೆಖಂಡಿತವಾಗಿಯೂಇಷ್ಟವಾಗಲಿದೆ. ಚಂದ್ರಕುಮಾರಿಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದುತುಂಬಾನೆಕಲರ್‍ಫುಲ್ಲಾಗಿಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತದಖ್ಯಾತ ನಿರ್ಮಾಣ ಸಂಸ್ಥೆಯಾದರಡಾನ್, ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಜೊತೆಗೆಖ್ಯಾತ ನಟಿರಾಧಿಕಾ ಶರತ್‍ಕುಮಾರ್ ಹಾಗೂ ನಮ್ಮ ಕನ್ನಡಚಿತ್ರರಂಗದÀಖ್ಯಾತಕಲಾವಿದರು ಮತ್ತು ಕಲಾ ನಿರ್ದೇಶಕರಾದಅರುಣ್ ಸಾಗರ್, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಶೋಭಾ ನಾಯ್ಡುಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.

“ಚಂದ್ರಕುಮಾರಿ”ಇದೇಜನವರಿ 7ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
12/01/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore