HOME
CINEMA NEWS
GALLERY
TV NEWS
REVIEWS
CONTACT US
ಶಶಿಕುಮಾರ್‍ಗೆ ಬಿಗ್‍ಬಾಸ್ ಸೀಸನ್-6 ಕಿರೀಟ
ವಿದ್ಯಾವಂತ ರೈತನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಶಶಿಕುಮಾರ್ ಸೀಸನ್ 6ರ ರಿಯಾಲಿಟಿ ಶೋ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಗಾಯಕ ನವೀನ್‍ಸಜ್ಜು ರನ್ನರ್ ಅಪ್ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಟಿ ಕವಿತಾಗೌಡ ಮೂರನೆ ಸ್ಥಾನಕ್ಕೆ ತೃಪ್ತಿಯಾಗಿದ್ದಾರೆ. ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದ ಆ್ಯಂಡ್ರು ಮತ್ತು ರ್ಯಾಪಿಡ್‍ರಶ್ಮಿ ಶನಿವಾರವೇ ಮನೆ ನಿರ್ಗಮಿಸಿರುವ ಮೂಲಕ ಫಿನಾಲೆ ಹಂತದಿಂದ ಹೊರಗುಳಿದಿದ್ದರು. ಒಟ್ಟು 18 ಸ್ಪರ್ಧಿಗಳಿದ್ದ ಮನೆಯಲ್ಲಿ ವಿಜೇತರಾಗಿರುವ ಶಶಿಕುಮಾರ್‍ಗೆ 50. ಲಕ್ಷ ರೂ. ಬಹುಮಾನ ಹಾಗೂ ಟ್ರೋಫಿಯನ್ನು ವಿತರಿಸಲಾಗಿದೆ.

ಈ ಸಲ ಸೆಮಿ ಸೆಲಬ್ರಟಿಗಳೆಂಬ ಹೊಸ ಕಲ್ಪನೆಯೊಂದಿಗೆ ಕಿರುತೆರೆ, ಚಿತ್ರರಂಗ, ರಂಗಭೂಮಿ ಸೇರಿದಂತೆ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿತ್ತು. ಭಾನುವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳು ಹಾಜರಾಗುವ ಮೂಲಕ ವೇದಿಕೆಗೆ ಕಳೆ ಬಂದಿತ್ತು. ಕಾರ್ಯಕ್ರಮದ ಕೇಂದ್ರಬಿಂದುವಾಗಿ ಕಿಚ್ಚ ಸುದೀಪ್ ಎಲ್ಲರ ಮನಸೆಳೆದರು. ಇಲ್ಲಿಯವರೆವಿಗೂ ವಿಜಯರಾಘವೇಂದ್ರ, ಅಕುಲ್‍ಬಾಲಾಜಿ, ಶ್ರುತಿ, ಪ್ರಥಮ್ ಮತ್ತು ಚಂದನ್‍ಶೆಟ್ಟಿ ಈ ಹಿಂದಿನ ಐದು ಆವೃತ್ತಿಗಳಲ್ಲಿ ವಿಜಯಶಾಲಿಗಳಾಗಿದ್ದಾರೆ. ಸೀಸನ್-6 ರಿಯಾಲಿಟಿ ಶೋ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
28/01/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore