HOME
CINEMA NEWS
GALLERY
TV NEWS
REVIEWS
CONTACT US
ಶುರುವಾಗುತ್ತಿದೆ ಬಿಗ್ ಬಾಸ್ ಸೀಸನ್-5
ಕಳೆದ ಸಲ ಕಲರ್ಸ್ ವಾಹಿನಿಯಲ್ಲಿ ಬಿಗ್‍ಬಾಸ್-4 ಪ್ರಸಾರಗೊಂಡು ಹೆಚ್ಚು ಮನ್ನಣೆ ಗಳಿಸಿತ್ತು. ಅದರಂತೆ ಈಗ ‘ಬಿಗ್‍ಬಾಸ್ ಸೀಸನ್-5’ ಶುರು ಮಾಡಲು ಪ್ರಕ್ರಿಯೆಗಳು ಮುಗಿದಿವೆ. ಸೆಲಬ್ರಿಟಿಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಸಾಮಾನ್ಯ ಜನರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಬೇಡಿಕೆಗಳು ಬಂದಿದ್ದವು. ಇದನ್ನು ಮನಗಂಡ ವಾಹಿನಿ ಮುಖ್ಯಸ್ಥ ಪರಮೇಶ್ವರ್‍ಗುಂಡ್ಕಲ್ ಒಟ್ಟು 17 ಸ್ಪರ್ಧಿಗಳ ಪೈಕಿ ಆರು ಸಾಮಾನ್ಯ ಜನರು ಮನೆಯೊಳಗೆ ಪ್ರವೇಶಿಸಲು ಜಾಹಿರಾತು ನೀಡಿದ್ದಾರೆ. ಅದರಂತೆ 40000 ವಿಡಿಯೋ ಅರ್ಜಿಗಳು ಬಂದಿದೆ. ಇದನ್ನು ಪರಿಶೀಲಿಸಿ 150 ಮಂದಿಯನ್ನು ಭೇಟಿ ಮಾಡಿ ಅಂತಿಮವಾಗಿ ಆರು ಜನರು ವಾಹಿನಿಯ ಕ್ರಿಯೆಟೀವ್ ಮುಖ್ಯಸ್ಥೆಯಾಗಿರುವ ವೈಷ್ಣವಿ ಸಾರಥ್ಯದಲ್ಲಿ ಆಯ್ಕೆಯಾಗಿದ್ದಾರೆ. ಈ ಸಲ ಹಲವು ವಿಶೇಷತೆಗಳಿಂದ ಕೂಡಿದ್ದು, ಹೊಚ್ಚ ಹೊಸ ಮನೆಯನ್ನು ನಿರ್ಮಿಸಲಾಗಿದೆ. 2016ರಲ್ಲಿ ನಡೆಸಿದ ಕಾರ್ಯಕ್ರಮವು ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಿತ್ತು. ಸೀಸನ್-5ದಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗ ಬಹುದೆಂಬ ನಿರೀಕ್ಷೆ ಇದೆ.

ನಾಲ್ಕು ಸೀಸನ್‍ಗೆ ಸುದೀಪ್ ನಿರೂಪಕರಾದಂತೆ, ಐದನೇ ಬಾರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದರಿಂದ ಬಿಗ್‍ಬಾಸ್‍ಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಹೊಸ ರೂಪ, ಗೆಟಪ್‍ನಲ್ಲಿ ಕಾಣ ಸಿಕೊಂಡು ಸ್ಪರ್ಧಾಳುಗಳಿಗೆ ಉತ್ತೇಜನ ನೀಡಲು ಸಜ್ಜಾಗುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಸುದೀಪ್‍ಗೆ ಹೆಚ್ಚು ಸಂತಸ ತಂದಿದೆ. ಬೇರೆ ಭಾಷೆಗಳ ಕಾರ್ಯಕ್ರಮಗಳು ಲೂನವಾಲದಲ್ಲಿ ನಡೆಯುತ್ತಿದೆ. ಸತತ ಐದನೇ ಬಾರಿ ನಡೆಸಿಕೊಡುತ್ತಿರುವುದರಿಂದ ಸ್ಪರ್ಧಾಳುಗಳ ಹೆಸರುಗಳನ್ನು ಕೇಳದೆ, ಒಪ್ಪಂದ ಷರತ್ತುನ್ನು ಓದದೆ ಸಹಿ ಮಾಡಿದ್ದಾರಂತೆ. 2000 ತಂತ್ರಜ್ಘರು ಕೆಲಸ ಮಾಡಲಿದ್ದು, 17 ಜನರಲ್ಲಿ 9 ಪುರುಷರು, 8 ಮಹಿಳೆಯರು ಅದರಲ್ಲೂ ಹೊರನಾಡ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರಂತೆ. ಇದೇ 15ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದ್ದು, ಪ್ರತಿ ರಾತ್ರಿ 8 ರಿಂದ 9 ಘಂಟೆಯವರೆಗೂ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್‍ಬಾಸ್‍ನ್ನು ನೋಡಬಹುದಾಗಿದೆ.
-13/10/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore