HOME
CINEMA NEWS
GALLERY
TV NEWS
REVIEWS
CONTACT US

ಶತಕದ ಸಂಭ್ರಮದಲ್ಲಿ “ಅವಳು” ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ
ಉದಯವಾಹಿನಿಯಲ್ಲಿ ಪ್ರಸಾರವಾಗ್ತಿರೋ ಧಾರಾವಾಹಿ ``ಅವಳು-ಕಥೆಯಾದವಳು'' ವಿಭಿನ್ನ ಕಥಾಹಂದರದಿಂದ ಈಗಾಗಲೇ ಜನಮೆಚ್ಚುಗೆ ಪಡೆದಿದೆ. ಹಲವಾರು ತಿರುವುಗಳಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಗೆ ಈಗ ನೂರನೇ ಸಂಚಿಕೆಯ ಸಂಭ್ರಮ. ಗುರುರಾಜ್ ಕುಲಕಣ ್ ನಿರ್ಮಾಣದ, ನಾಗರಾಜ್ ಉಪ್ಪುಂದ ನಿರ್ದೇಶನದ ಈ ಧಾರಾವಾಹಿಯಲ್ಲಿ ಪ್ರಸಿದ್ಧ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮೇಘನಾ, ಹೆಸರಾಂತ ಸಂಗೀತಗಾರ ಪ್ರವೀಣ್ ಡಿ ರಾವ್, ಪದ್ಮಾಜಾ ರಾವ್, ದೀಪಾ ಸ್ವಾಮಿ , ಶೋಭಾ ರೈ, ರಾಕೇಶ್ ಮಯ್ಯ ಮುಂತಾದ ಕಲಾವಿದ ಭಾವಪೂರ್ಣ ಅಭಿನಯ, ಅವಳು ಧಾರಾವಾಹಿಯನ್ನ ಜನ ಮೆಚ್ಚಲು ಪ್ರಮುಖ ಕಾರಣ.

ತನ್ನ ತಂಗಿಯ ಹಿತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿರುವ ಮಾನಸಾಳ ತ್ಯಾಗಮಯ ಜೀವನವೇ `ಅವಳು-ಕಥೆಯಾದವಳು''. ತಂಗಿ ಶ್ವೇತಾಳ ಮದುವೆ ಮಾಡಿಸೋ ಸಲುವಾಗಿ, ತನ್ನ ಜೀವನದ ಆಸೆಯನ್ನು ಬಲಿ ಕೊಟ್ಟು ಪದ್ಮಾಳ ಗಂಡ ಮಧುಸೂದನನ್ನು ಮದ್ವೆಯಾಗುತ್ತಾಳೆ ಮಾನಸಾ. ಇಷ್ಟೇ ಅಲ್ಲದೇ ಮಯೂರಿಯ ಆಸ್ತಿ ದುರಾಸೆಗೆ ಮಾನಸಾ ತನ್ನ ತಾಯ್ತಾನವನ್ನೇ ತ್ಯಾಗ ಮಾಡಲು ನಿರ್ಧರಿಸಿ ತನ್ನ ಗರ್ಭಕೋಶವನ್ನೇ ತೆಗೆಸುತ್ತಾಳೆ. ಇಂತಹ ಆಕಸ್ಮಿಕ ಘಟನೆಯ ನಂತರ ಮಾನಸಾಳ ಬದುಕು ಹೇಗೆ ಬದಲಾಗುತ್ತದೆ. ಆಕೆ ತನ್ನ ಸ್ವಂತ ತಂಗಿಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿ ಬಂದರೂ ಹೇಗೆ ಈ ಸನ್ನಿವೇಶಗಳನ್ನು ನಿಭಾಯಿಸುತ್ತಾಳೆ- ಮುಂತಾದ ಕುತೂಹಲಕರ ತಿರುವುಗಳೊಂದಿಗೆ ಧಾರಾವಾಹಿಯು ಮುಂದೆ ಸಾಗಲಿದೆ.
-9/09/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore