HOME
CINEMA NEWS
GALLERY
TV NEWS
REVIEWS
CONTACT US

ಅಮೃತವರ್ಷಿಣ ಯ” 5 ವರ್ಷದ ಸಾರ್ಥಕ ಕ್ಷಣಗಳು ತುಮಕೂರಿನಲ್ಲಿ ನಡೆದ “ಅಮೃತಘಳಿಗೆ” ಇದೇ ಭಾನುವಾರ ಸಂಜೆ 6ಕ್ಕೆ
“ಅಮೃತವರ್ಷಿಣ ” ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಧಾರಾವಾಹಿ. 5ವರ್ಷಗಳ ಹಿಂದೆ ಪ್ರಾರಂಭವಾದ ಈ ಧಾರಾವಾಹಿ ಕಿರುತೆರೆಯಲ್ಲಿ ಸಂಚಲನಮೂಡಿಸಿದೆ.ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಧಾರಿಗಳು ಕರುನಾಡ ಜನತೆಯ ಮನದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ.

ಹಿರಿಯ ನಟಿಯರಾದ ಅಭಿನಯ ಶಾರದೆ ಜಯಂತಿ,ಹೇಮಾ ಚೌದರಿ, ಅವರು ಹಿರಿ-ಕಿರಿಯರ ನಡುವಿನ ಬಾಂಧ್ಯವ್ಯವನ್ನು ಎತ್ತಿತೋರಿಸುವಂತೆ ನಟಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇಂತಹ 5 ವರ್ಷದ ಸಾಧನೆ ಮಾಡಿದ “ಅಮೃತವರ್ಷಿಣ ”ಯ “ಅಮೃತಘಳಿಗೆ”ಯ ಮಹಾ ಕಾರ್ಯಕ್ರಮವನ್ನು ಇತ್ತೀಚೆಗೆ ತುಮಕೂರಿನಲ್ಲಿ 10000ಸಾವಿರಕ್ಕಿಂತ ಹೆಚ್ಚು ವೀಕ್ಷಕರ ಸಾಕ್ಷಿಯಲ್ಲಿ ನೆರವೇರಿಸಲಾಯಿತು.

ಅದ್ಭುತವಾದ ಸೆಟ್‍ನಲ್ಲಿ ಹಲವಾರು ಮನರಂಜನೆ ಜೊತೆಗೆ ಸಮಾಜಮುಖಿ ಕಾರ್ಯಕ್ರಮವೂ ನಡೆಯಿತು. ಕಿರುತೆರೆಯ ರಿಯಾಲಿಟಿ ಸ್ಟಾರ್ ಅಕುಲ್ ಬಾಲಜಿ ನಿರೂಪಣೆಗೆ ಶಾಲಿನಿ ಮತ್ತು ಪವನ್ ಸಾಥ್ ನೀಡಿದರು.

ಶಾಲಿನಿ ಮತ್ತು ಪವನ್ ತಮ್ಮ ಮಗನಾದ ಅಕುಲ್‍ಗೆ ಮದುಮಗಳನ್ನು ಹುಡುಕುವುದು ಎಂಬ ಕಾನ್ಸಪಟ್‍ನಿಂದ ರಂಗುರಂಗಿನ ವೇದಿಕೆಗೆ ಎಂಟ್ರೀಕೂಟ್ಟು ಲೈಟಾಗಿ ಕಾಲೆಳೆದು ಕ್ಯೂಟಾಗಿ ಕಿಚಾಯಿಸಿದ್ರು.

ಇದೇ ಸಂದರ್ಭದಲ್ಲಿ ಹಿರಿಯ ನಟಿ ಹೇಮಾಚೌದರಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಾರ್ಥಕತೆಯ ಕ್ಷಣಗಳಿಗೆ ಚಂದನವನದ ತಾರೆಯರಾದ ಮಾನ್ವಿತ ಹರೀಶ್, ಹರಿಪ್ರಿಯ, ಸಂಯುಕ್ತ, ಭಾವನಾ, ವಸಿಷ್ಠ, ಅನೂಪ್ ಸಿಳೀನ್, ರೋಹಿತ್ ಪದಕಿ ಆಗಮಿಸಿ ಮತ್ತಷ್ಟು ಮೆರಗನ್ನು ನೀಡಿದರು..

ವಿದ್ಯಾನಗರಿ ತುಮಕೂರಿನ ಈ ಮಹಾ ವೇದಿಕೆಯಲ್ಲಿ ಅದೇ ನಗರದ ವೃದ್ದಾಶ್ರಮದವರಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಯಿತು.
“ಅಮೃತವರ್ಷಿಣ ” ತಂಡಕ್ಕೆ ಶುಭಕೋರಲು ಹಿರಿಯ ನಟಿ ಲಿಲಾವತಿಯವರು ಆಗಮಿಸಿ ಹಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು. ಹಾಗೆ ವಿನೋದ್‍ರಾಜ್ ತಮ್ಮ ನೃತ್ಯದ ಮೂಲಕ ಎಲ್ಲರನ್ನು ಮನೋರಂಜಿಸಿದರು. ಒಂದೇ ವೇದಿಕೆಯಲ್ಲಿ ಇಡೀ ಸ್ಟಾರ್ ಪರಿವಾರ ಸೇರಿ ಹಾಡು - ನೃತ್ಯಗಳ ಮೂಲಕ ಎಲ್ಲರನ್ನು ರಂಜಿಸಿ ಸಂಭ್ರಮಿಸಿತು.
5 ವರ್ಷದ ಅಮೃತವರ್ಷಿಣ ಯ ಸಾರ್ಥಕ ಕ್ಷಣಗಳು ಇದೇ ಭಾನುವಾರ ಸಂಜೆ 6ಕ್ಕೆ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.
-26/04/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore