HOME
CINEMA NEWS
GALLERY
TV NEWS
REVIEWS
CONTACT US
ಹೊಸ ವರ್ಷದಲ್ಲಿ ಕರುನಾಡ ಮನೆಗಳಲ್ಲಿ “ಅಮ್ನೋರು” ಆಗಮನ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಜನವರಿ 20ರಿಂದ ಸೋಮವಾರದಿಂದ ಶನಿವಾರ ರಾತ್ರಿ7ಕ್ಕೆ
ಉದಯಟಿವಿ ದಿನದಿಂದ ದಿನಕ್ಕೆ ಹೊಸ ಕಥಾನಕಗಳಿಂದ ಜನರಮನಸ್ಸನ್ನು ಗೆಲ್ಲಲು ಹೊಸ ಪ್ರಯತ್ನಗಳನ್ನು ನಿಮ್ಮ ಮುಂದೆ ಹೊತ್ತು ತರುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಜನರಿಗೆ ಹತ್ತಿರವಾಗುವ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಿಂದ ಕೌತುಕಗಳ ಜೊತೆ ಸೃಜನಾತ್ಮಕ ಥೀಮ್‍ಗಳಿಂದ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಜನಪ್ರಿಯ ಧಾರಾವಾಹಿಗಳಾದ ನಂದಿನಿ, ನಾನು ನನ್ನ ಕನಸು, ಕಸ್ತೂರಿ ನಿವಾಸ, ಸೇವಂತಿ, ನಾಯಕಿ, ಜೀವನದಿ, ಕಾವೇರಿ ಧಾರವಾಹಿಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಇದೀಗ ದೇವಿಯ ಮಹಾತ್ಮೆ ಸಾರಿ, ಜನರ ಮನಗೆಲ್ಲಲು ತಯಾರಾಗಿರುವ ಹೊಸ ಸೂಪರ್ ನ್ಯಾಚುರಲ್ ಧಾರಾವಾಹಿಯೇ 'ಅಮ್ನೋರು'.
ಹೊಸ ವರುಷಕ್ಕೆ ಹೊಸ ಹುರುಪಿನಿಂದ ಫ್ರೇಮ್ಸ್ ನಿರ್ಮಾಣ ಸಂಸ್ಥೆ 'ಅಮ್ನೋರು' ಎಂಬ ಶೀರ್ಷಿಕೆಯನ್ನು ಹೊತ್ತು ದೈವ ಮತ್ತು ದುಷ್ಟ ಶಕ್ತಿಯಾಧಾರಿತ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಜ್ಜಾಗಿದೆ.

ಈ ಕಥೆಯು ಅಮ್ನೋರ ಪರಮಭಕ್ತರಾದ ಶಂಕರ ಹಾಗೂ ದಾಕ್ಷಾಯಣಿ ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹ ಮತ್ತು ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ, ಮಾಟಗಾತಿ ಧನಶೇಖರಿ ಮತ್ತು ಶಂಕರನ ಸಹೋದರ ವರದಪ್ಪನಿಂದಲೇ ಪ್ರಾಣವನ್ನು ಕಳೆದುಕೊಂಡಿರುವ ದಂಪತಿಗಳು. ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡುತ್ತಾ, ಮತ್ತೆ ಪುನರ್ಜನ್ಮ ಪಡೆದುಕೊಂಡು ಬರುವ ಜೋಡಿಗಾಗಿ ಕಾಯುತ್ತಿರುತ್ತದೆ. ಘೋರ ಮಾಟಗಾತಿ ಧನಶೇಖರಿ ವರದಪ್ಪನ ಜೊತೆ ಸೇರಿ ರುದ್ರಾಕ್ಷಿ ಮಾಲೆ ಹಾಗೂ ಅಮ್ನೋರ ವಿಗ್ರಹವನ್ನು ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿಕೊಳ್ಳುತ್ತಿರುವರು.

ಶಂಕರ ಹಾಗೂ ದಾಕ್ಷಾಯಣಿ ಅಮ್ನೋರ ವಿಗ್ರಹವನ್ನು ಪ್ರತಿμÁ್ಟಪಿಸಲು ಪುನಃ ಹುಟ್ಟಿ ಬರುತ್ತಾರಾ? 27 ವರ್ಷ–ಕಾಯುತ್ತಿರುವ ರುದ್ರಾಳ ಆಸೆಯು ನೆರವೇರುತ್ತಾ? ತದ್ವಿರುದ್ಧ ಆಲೋಚನೆಗಳನ್ನು ಹೊಂದಿರುವ ನಾಯಕ ಮತ್ತು ನಾಯಕಿ ಜೊತೆಯಾಗಿ ದೇವಸ್ಥಾನ ಪುನಃಶ್ಚೇತನಗೊಳಿಸುತ್ತಾರ? ಅನ್ನೋದೆ ಈ ಕಥೆಯ ತಿರುಳಾಗಿದೆ.

ಈ ಧಾರಾವಾಹಿಯು ಮೇಲುಕೋಟೆ ಹಾಗೂ ಇನ್ನಿತರ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸ ಬಗೆಯ ಅಉ ಮತ್ತು ತಂತ್ರಜ್ಞಾನ ಈ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.

ಹಲವಾರು ಖ್ಯಾತ ದೇವಿ ಮಹಾತ್ಮೆ ಸಾರುವ ಧಾರಾವಾಹಿಗಳನ್ನು ನೀಡಿರುವ ರಮೇಶ್ ಇಂದ್ರ ನಿರ್ಮಾಣ ಮತ್ತು ನಿರ್ದೇಶನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸೀಲಿಯನ್‍ಕಥೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಯಾಕರ್ ಛಾಯಾಗ್ರಹಣದಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ನಾಯಕಿಯಾಗಿ ಹೊಸ ಪ್ರತಿಭೆ ಅಕ್ಷರ ನಟಿಸುತ್ತಿದ್ದು, ನಾಯಕನಾಗಿ ಶಶಿ ನಟಿಸುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕರಾದ ಕೀರ್ತಿರಾಜ್ ತಮ್ಮ ವಿಭಿನ್ನ ಪಾತ್ರದಿಂದ ಜನರ ಮನಸ್ಸಲ್ಲಿ ನೆಲೆಸುವುದರಲ್ಲಿ ಸಂಶಯವೇ ಇಲ್ಲ.
ರೇಖಾ ರಾವ್, ಹರ್ಷಿತಾ, ಸಂಗೀತ ಭಟ್, ಅನಂತ್ ವೇಲು, ಶರ್ಮಿಳಾ,ಮಧು ಹೆಗಡೆ, ರೋಹಿಣಿ, ವಿಜಯಲಕ್ಷ್ಮಿ, ವಿಕ್ರಮ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡ ಧಾರಾವಾಹಿ ಅಮ್ನೋರು.
ಸುಂದರವಾಗಿ ಚಿತ್ರಿಸಲಾದ “ಅಮ್ನೋರು” ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಇದೇ ಜನವರಿ 20 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
11/01/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore