HOME
CINEMA NEWS
GALLERY
TV NEWS
REVIEWS
CONTACT US
ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮಬಾರಿಗೆ ಯುವತಿಯರ ಸ್ಟಂಟ್ ರಿಯಾಲಿಟಿ ಷೋ ಸುವರ್ಣ ವಾಹಿನಿಯ ಆಕ್ಷನ್ ಸ್ಟಾರ್ಗೆ ಹ್ಯಾಂಡ್ಸಮ್ ಸ್ಟಾರ್ ರಘು ಮುಖರ್ಜಿ ಸಾರಥ್ಯಮಾರ್ಚ್ ೧೯ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ಕ್ಕೆ
ಕನ್ನಡ ಕಿರುತೆರೆಗೆ ರಿಯಾಲಿಟಿ ಷೋ ನೀಡಿದ್ದು ಸುವರ್ಣವಾಹಿನಿ. ಅಂತೆಯೇ ಒಂದರ ಮೇಲೆ ಒಂದರಂತೆ ಹೊಸ ಹೊಸ ವಿವಿಧ ರೀತಿಯ ಷೋಗಳನ್ನು ನೀಡುತ್ತಾ ವೀಕ್ಷಕರ ಮನಗೆದ್ದ ಚಾನಲ್ ಎನಿಸಿಕೊಂಡಿದೆ. ಈಗ ಸುವರ್ಣದ ಮತ್ತೊಂದು ವಿನೂತನ ಮಾದರಿಯ ರಿಯಾಲಿಟಿ ಷೋ ನಾಡಿನ ಜನತೆಯ ಮಡಲಿಗೆ ಸೇರಲಿದೆ.

ಕನ್ನಡ ಕಿರುತೆರೆಯಲ್ಲಿ ಇದುವರೆಗೆ ಬಂದಿರುವ ಸಾಕಷ್ಡು ರಿಯಾಲಿಟಿಗಳಿಗಿಂತ ಇದೊಂದು ವಿಭಿನ್ನ ರಿಯಾಲಿಟಿ ಷೋ. ಈ ಷೋನ ಮುಖ್ಯ ಆಕರ್ಷಣೆ ಎಂದರೆ ಸಾಹಸ(ಆಕ್ಷನ್). ಸಾಹಸ ಚಟುವಟಿಕೆ ಎಂದೊಡನೆ ಎಲ್ಲರ ಮನಸ್ಸಲ್ಲಿ ಮೂಡಿಬರುವುದು,ಇದೊಂದು ಪುರುಷರಿಗೆ ಸೀಮಿತವಾದ ಕಾರ್ಯ. ಆದರೆ ಪುರುಷರಿಗೆ ಮಾತ್ರವಲ್ಲದೆ ಸ್ತ್ರೀಯರು ಕೂಡಾ ಪುರುಷರ ಸಮಾನವಾಗಿ ಸಾಹಸಮಯ ಕಾರ್ಯಗಳನ್ನು ಮಾಡಬಲ್ಲರು ಎಂಬುದನ್ನು ಸುವರ್ಣವಾಹಿನಿಯು ಈ ಷೋದ ಮೂಲಕ ಕರ್ನಾಟಕಕ್ಕೆ ಪರಿಚಯಿಸುತ್ತಿದ್ದಾರೆ.

ಈ ಉದ್ದೇಶದ ಹಿನ್ನಲೆ ಕರ್ನಾಟಕದ ೧೦ ಬಲಿಷ್ಠ ಯುವತಿಯರಿಗೆ ಈ ಆಕ್ಷನ್ ಸ್ಟಾರ್ವೇದಿಕೆ ಈಗ ಸಜ್ಜಾಗಿದೆ. ಅವರವರ ಮಾನಸಿಕ ಮತ್ತು ದೈಹಿಕ ಸಧೃಡತೆಯನ್ನು ಬಿಂಬಿಸುವುದು ಈ ಷೋನ ಮುಖ್ಯ ಉದ್ದೇಶವಾಗಿದೆ. ಪ್ರತಿ ಸಂಚಿಕೆಯಲ್ಲಿ ಈ ಹುಡುಗಿಯರು ತಮ್ಮ ಪ್ರಾಣ ಭೀತಿಯನ್ನು ಬದಿಗೊತ್ತಿ ಮೈ ರೋಮಾಂಚನಾಕಾರಿಯಾಗುವಂಥಹ ಟಾಸ್ಕ್‌ಗಳನ್ನು ಎದುರಿಸುವ ಚಾಲೆಂಜ್ ಇವರದ್ದಾಗಿದೆ. ಇದು ಸೆಟ್ ಹಾಕಿ ಒಂದೆಡೆ ಸೇರಿ ಆಡುವ ಷೋ ಅಲ್ಲಾ, ನಾಡಿನ ವಿವಿಧ ಪ್ರದೇಶಗಳಲ್ಲಿ ಸಾಹಸಮಯ ಚಟುವಟಿಕೆಗಳ ಮಾಡುವ ನೈಜತೆಯ ಷೋ ಆಗಿದೆ. ಪ್ರತಿವಾರವೂ ಸ್ಪರ್ಧಿಗಳ ಸಾಮರ್ಥ್ಯ ಮತ್ತು ವೀಕ್ಷಕರು ನೀಡುವ ಮತಗಳ ಅನುಸಾರವಾಗಿ ಈ ಯುವ ಸಾಹಸಿಯರಲ್ಲಿ ಒಬ್ಬರನ್ನು ಷೋ ದಿಂದ ಹೊರಗೆ ಕಳಿಸಲಾಗುತ್ತದೆ (ಎಲಿಮಿನೇಶವನ್). ಹೀಗೆ ಕೊನೆಗೆ ಒಬ್ಬರು ಆಕ್ಷನ್ ಸ್ಟಾರಾಗುತ್ತಾರೆ. ಈ ಷೋನ ಮೂಲಕ ಕರ್ನಾಟಕದ ಸ್ಟ್ರಾಂಗೇಷ್ಟ್ ಗರ್ಲ್ ಯಾರು ಆಗುತ್ತಾರೆ? ಎಂಬುದನ್ನು ಕಾದು ನೊಡಬೇಕಾಗಿದೆ.

ಪ್ರತಿಯೊಂದು ಷೋ ಗೆ ಒಬ್ಬ ಸಾರಥಿ ಅವಶ್ಯ. ಈ ಆಕ್ಷನ್ ಸ್ಟಾರ್ನ ಟಾಸ್ಕ್ ಮಾಸ್ಟರ್ ಅತಿ ಸುಂದರ ಯುವರಾಜ ಮಿ.ಇಂಡಿಯಾ ಮತ್ತು ಮಿ.ಇಂಟರನ್ಯಾಶನಲ್ ಗೆದ್ದ ಯುವ ನಾಯಕ ರಘು ಮುಖರ್ಜಿ. ಪ್ಯಾರೀಸ್ ಪ್ರಣಯ,ಸವಾರಿ,ದಂಡು ಪಾಳ್ಯ ಮತ್ತು ಇತರ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡ ಕಿರುತೆರೆಗೆ ಇದೇ ಮೊದಲ ಬಾರಿಗೆ ಹೆಜ್ಜೆ ಇಡುತ್ತಿದ್ದಾರೆ.

ಆರು ಅಡಿಗಿಂತ ಎತ್ತರವಿರುವ ಸಿಕ್ಸ್‌ಪ್ಯಾಕ್‌ನ ಮಾಡಲಿಂಗ್ ಹಿನ್ನಲೆ ಹೊಂದಿರುವ ರಘು ಮುಖರ್ಜಿ ಯುವತಿಯರ ಎದೆಬಡೆತವನ್ನು ಏರು ಪೇರು ಮಾಡಬಲ್ಲ ಸಾಮರ್ಥ್ಯ ಹೊಂದಿದವರು. ಇಂಥವರ ಮೊಟ್ಟ ಮೊದಲ ನಿರೂಪಣೆ ಹಾಗು ಹೆಣ್ಮಕ್ಕಳೇ ಸ್ಟ್ರಾಂಗ್ ಎನ್ನುವ ಸ್ಟಂಟ್ ರಿಯಾಲಿಟಿ ಷೋ ಆಕ್ಷನ್ ಸ್ಟಾರ್ ವೀಕ್ಷಕರ ಪ್ರೀತಿಗೆ ಪಾತ್ರವಾಗುತ್ತದೆ ಎಂಬುದು ಸುವರ್ಣ ವಾಹಿನಿಯ ಆಶಯ.
ಯುವಸಾಹಸಿಯರ ಸ್ಟಂಟ್ ರಿಯಾಲಿಟಿ ಷೋ ಆಕ್ಷನ್ ಸ್ಟಾರ್ ಮಾರ್ಚ ೧೯ ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
-15/03/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore