HOME
CINEMA NEWS
GALLERY
TV NEWS
REVIEWS
CONTACT US

4ನೇ “ಸುವರ್ಣ ಪರಿವಾರ ಅವಾಡ್ರ್ಸ್” ನಲ್ಲಿ ಸ್ಟಾರ್‍ಗಳ ದರ್ಬಾರ್ ವಾಕ್ ಚಮತ್ಕಾರದಲ್ಲಿ ಜಗ್ಗೇಶ್, ಹಾಟ್ ಪರ್ಪಾರ್ಮನ್ಸ್ ನೀಡಿದ ರಾಗಿಣಿ ದ್ವೀವೇದಿ ಜೂನ್ 25 ಮತ್ತು 26 ರಂದು ಸಂಜೆ 6ಕ್ಕೆ
ಸತತವಾಗಿ 9ವರ್ಷಗಳಿಂದ ಕನ್ನಡಿಗರಿಗೆ ನಾನ್ ಸ್ಟಾಪ್ ಮನರಂಜನೆಯನ್ನು ನೀಡುತ್ತಾ ಬಂದ ಜನಮನಗೆದ್ದ ಸುವರ್ಣ ವಾಹಿನಿಯ ಕಾರ್ಯಕ್ರಮಗಳಿಗೆ ಹಾಗೆ ವೀಕ್ಷಕರನ್ನು ರಂಜಿಸಿದ ಸುವರ್ಣ ಪರಿವಾರದ ಸದಸ್ಯರನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಉತ್ಸವ “4ನೇ ಸುವರ್ಣ ಪರಿವಾರ ಅವಾಡ್ರ್ಸ್ 2016” ಇದೇ ಜೂನ್ 25 ಮತ್ತು 26ರಂದು ಸಂಜೆ 6ಗಂಟೆಗೆ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸುವರ್ಣ ಸ್ಟಾರ್‍ಗಳ ಯಶಸ್ಸಿನ ಹಾದಿಯಲ್ಲಿ ಹೈ ಸ್ಪೀಡ್ ಮನರಂಜನೆಯ ಮಹಾ ಸಾಗರದ ಮಧ್ಯೆ ಭವ್ಯ ವೇದಿಕೆಯಲ್ಲಿ 4ನೇ ಸುವರ್ಣ ಪರಿವಾರ ಅವಾಡ್ರ್ಸ್ ಗೆ ಮತ್ತಷ್ಟು ಮೆರಗು ನೀಡಿದ್ದು “ಸ್ಯಾಂಡಲ್‍ವುಡ್ ಸ್ಟಾರ್”ಗಳು.ಒಬ್ಬರಾದ ಮೇಲೆ ಒಬ್ಬರಂತೆ ವೇದಿಕೆಗೆ ಆಗಮಿಸಿದ ಕನ್ನಡ ಚಿತ್ರರಂಗದ ದಿಗ್ಗಜರಿಂದ ಸ್ಟೇಜ್ ಇನ್ನಷ್ಟು ಕಲರ್‍ಫುಲ್ ಆಗಿ ಕಾಣಿಸಿದೆ. ಸುವರ್ಣ ಪರಿವಾರದ ಈ ಸುಂದರ ಹಬ್ಬ ಸ್ಟಾರ್‍ಗಳಿಂದ ಶೋಭಿಸಿದೆ.

ಮಾತಿನ ಮಲ್ಲ,ಚಾಣಾಕ್ಷ ನವರಸ ನಾಯಕ ಜಗ್ಗೇಶ್ ತಮ್ಮ ವಾಕ್‍ಚಾತುಯ್ರ್ಯದಿಂದ ನಗೆ ಹಬ್ಬ ನೀಡಿ ಎಲ್ಲರ ನಗುವಿಗೆ ಕಾರಣರಾದರು. ರಾಗಿಣಿ ದ್ವೀವೇದಿ ತಮ್ಮ ಹಾಟ್ ಫುಲ್ ಪರ್ಪಾರ್ಮಮ್ಸ್ ನೀಡಿ ಪಡ್ಡೆ ಹೈಕಳ ಹಾರ್ಟ ಬೀಟ್‍ನ್ನು ಕುಣಿಯುವಂತೆ ಮಾಡಿದ್ದಾರೆ.

ಈ ಸಂಭ್ರಮಕ್ಕೆ ನವ ಜೋಡಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ ಆಗಮಿಸಿ ಮತ್ತಷ್ಟು ಮೆರಗು ತಂದಿದ್ದಾರೆ. ಅಷ್ಟಲ್ಲದೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸರ್ ಸುವರ್ಣ ಪರಿವಾರದ ಬಗೆಗೆ ಇದೇ ಸಂದರ್ಭದಲ್ಲಿ ಕೊಂಡಾಡಿದ್ದಾರೆ.

ಇತ್ತೀಚಿನ ಯಂಗ್ ಸ್ಟಾರ್‍ಗಳಾದ ವಿಜಯ ಸೂರ್ಯ,ಶ್ರದ್ಧಾ ಈ ವೇದಿಕೆಯ ಮೇಲೆ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಸ್ವೀಟ್ ಹಾರ್ಟ್ ಸಂತೋಷನ ಮನದಾಳದ ಮಾತುಗಳು,ಹೀರಿಯ ನಟಿ ಅಮೃತವರ್ಷಿಣಿಯ ಶಕುಂತಲಾದೇವಿ ಹೇಮಾ ಚೌದ್ರಿಯವರ ಘನ ಉಪಸ್ಥಿತಿ ಈ ರಂಗುರಂಗಿನ ವೇದಿಕೆಗೆ ಮನಸೂರೆಗೊಳ್ಳುವಂತಿದೆ.
ಕಲಾವಿದರಿಗೆ ಸ್ಟಾರ್‍ಗಳಿಂದ, ಹಿರಿಯರಿಂದ ಮತ್ತು ಗಣ್ಯವ್ಯಕ್ತಿಗಳಿಂದ ನೀಡಿದ ಹೆಮ್ಮೆಯ ಹೊಗಳಿಕೆ ಈಡಿ ಸುವರ್ಣ ಪರಿವಾರಕ್ಕೆ ಸಂತಸತಂದಂತಾಗಿದೆ.
ಇಂತಹ ಅದ್ಭುತ,ಹೃದಯ ಸ್ಪರ್ಷಿಸಿದ ಕ್ಷಣಗಳು ಇದೇ ಜೂನ್ 25 ಮತ್ತು 26ರಂದು ಸಂಜೆ 6ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
-16/06/16


“ಸುವರ್ಣ ಪರಿವಾರ ಅವಾಡ್ರ್ಸ್ 2016”
ನಿಮ್ಮ ನೆಚ್ಚಿನ ನಟನನಟಿಯರನ್ನು ಆಯ್ಕೆಗೆ ಸುವರ್ಣ ಅವಕಾಶ

ಕರ್ನಾಟಕದ ಹೆಮ್ಮೆಯ ಚಾನಲ್ ಸತತವಾಗಿ 9ವರ್ಷಗಳಿಂದ ಕನ್ನಡಿಗರಿಗೆ ನಾನ್ ಸ್ಟಾಪ್ ಮನರಂಜನೆಯನ್ನು ನೀಡುತ್ತಾ ಬಂದಿದೆ. ರಿಯಾಲಿಟಿ ಷೋಗಳ ಯಶಸ್ವಿ ಸರಣಿಗಳು, ಮನಸೂರೆಗೊಂಡಿರುವ ವಿಭಿನ್ನ ಕತೆಯ ಧಾರಾವಾಹಿಗಳನ್ನು ನೀಡಿ ಜನಮನಗೆದ್ದ ಚಾನಲ್ ಸುವರ್ಣ.

ವೀಕ್ಷಕರು ಹರಿಸಿ ಹಾರೈಸಿದ ವೈಭವದ ಪರಾಕಾಷ್ಠೆಯಲ್ಲಿ ಮನ ಮುಟ್ಟುವ ಕಾರ್ಯಕ್ರಮಗಳಿಗೆ ಈಗ ಒಂದು ಸುದಿನ.ನಿಮ್ಮನ್ನು ರಂಜಿಸಿ ನಿಮ್ಮ ಆಶೀರ್ವಾದಕ್ಕೆ ಕಾರಣರಾದ ಸುವರ್ಣ ಪರಿವಾರದ ಸದಸ್ಯರನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಉತ್ಸವ “4ನೇ ಸುವರ್ಣ ಪರಿವಾರ ಅವಾಡ್ರ್ಸ್ 2016” ಕಳೆದ ವರ್ಷದಲ್ಲಿ ಸುವರ್ಣ ಸದಸ್ಯರುಗಳು ನೀಡಿದ ಮನರಂಜನೆಯ ಹಿನ್ನಲೆಯಲ್ಲಿ ಒಟ್ಟು 37 ಅವಾಡ್ರ್ಸ್‍ಗಳನ್ನು ನೀಡಿ ಗೌರವಿಸುತ್ತಿದೆ. ಸೀರಿಯಲ್ ವಿಭಾಗದಲ್ಲಿ 23 ಮತ್ತು ನಾನ್ ಫಿಕ್ಷನ್‍ನಲ್ಲಿ 8 ಪಶಸ್ತಿಗಳಿವೆ.ಅಲ್ಲದೇ 6 ವಿಶೇಷ ಪ್ರಶಸ್ತಿಗಳಿವೆ.

ದುರ್ಗಾಧಾರಾವಾಹಿಯ ನಕುಲ್, ಅವನು ಮತ್ತೆ ಶ್ರಾವಣಿಯ ಸೂರ್ಯ, ಅನುರೂಪದ ತೇಜಸ್ವಿ, ಜೀವನ ಚೈತ್ರದ ಜೀವನ್ ನೆಚ್ಚಿನ ನಾಯಕರ ಸಾಲಿನಲ್ಲಿದ್ದರೆ, ದುರ್ಗಾಧಾರಾವಹಿಯಿಂದ ದುರ್ಗಾ, ಅವನು ಮತ್ತೆ ಶ್ರಾವಣಿಯ ಶ್ರಾವಣಿ, ಅಮೃತವರ್ಷಿಣಿಯ ಅಮೃತ, ಅಮ್ಮಾ ಧಾರಾವಾಹಿಯಿಂದ ಶ್ಯಾಲಿನಿ ಸ್ಪರ್ಧಿಗಳಾಗಿದ್ದಾರೆ. ದುರ್ಗಾ,ಅವನು ಮತ್ತೆ ಶ್ರಾವಣಿ,ಅಮ್ಮ,ಅಮೃತವರ್ಷಿಣಿ ಧಾರಾವಾಹಿಗಳು ನೆಚ್ಚಿನ ಧಾರಾವಾಹಿಯ ಸಂಭವನೀಯ ಪಟ್ಟಿಯಲ್ಲಿವೆ.

ಅಷ್ಟಲ್ಲದೆ ಆ್ಯಕ್ಷನ್ ಸ್ಟಾರ್,ಹಳ್ಳಿ ಹೈದ ಪ್ಯಾಟೇಗ್ ಬಂದ,ಪುಟಾಣಿ ಪಂಟ್ರು ಮತ್ತು ಡ್ಯಾನ್ಸ್ ಡ್ಯಾನ್ಸ್ ನೆಚ್ಚಿನ ರಿಯಾಲಿಟಿ ಷೋನ ಸಾಲಿನಲ್ಲಿವೆ.
ಭೌತೀಶ್ ಮತ್ತು ಇಂಚರ (ಹಳ್ಳಿ ಹೈದ ಪ್ಯಾಟೇಗ್ ಬಂದ), ವಿಶ್ವನಾಥ್ ಮತ್ತು ಅಕ್ಷೀತಾ(ಸೂಪರ್ ಜೋಡಿ), ತೌಶೀರ್,ಪ್ರಣಮ್ಯ ಮತ್ತು ಶಿಲ್ಪಾ ಮಂಜುನಾಥ (ಡ್ಯಾನ್ಸ್ ಡ್ಯಾನ್ಸ್) ಮತ್ತು ಮೋಕ್ಷ್ (ಪುಟಾಣಿ ಪಂಟ್ರು) ನೆಚ್ಚಿನ ರಿಯಾಲಿಟಿ ಷೋ ಸ್ಪರ್ಧಿಗಳ ಸಾಲಿನಲ್ಲಿದ್ದಾರೆ.

ನಿಮ್ಮನ್ನು ರಂಜಿಸಿದ ಕಾರ್ಯಕ್ರಮಗಳ ಮತ್ತು ನಟನಟಿಯರ ಆಯ್ಕೆಗೆ ಇದೊಂದು ಸುವರ್ಣ ಅವಕಾಶ.ನಿಮ್ಮ ಮೆಚ್ಚುಗೆಯನ್ನು www.suvarnaparivaarawards.tv ಈ ವೆಬ್ ಸೈಟ್‍ನಲ್ಲಿ ವೋಟ್ ಮುಖಾಂತರ ವ್ಯಕ್ತ ಪಡಿಸ ಬಹುದು.

-1/06/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore