Àತ್ಯಹರಿಶ್ಚಂದ್ರ ಮಾತುಕತೆ
ಹಾಸ್ಯ ಚಿತ್ರ ‘ಸತ್ಯಹರಿಶ್ಚಂದ್ರ’ ಮೂರು ಹಾಡುಗಳು, ಎರಡನೆ ಟ್ರೈಲರ್ ಮತ್ತು ಫುಲ್ಲಿ ಫುಲ್ಮಿ ಮೂರು ವಿಷಯಕ್ಕೆ ಸಂಬಂದಿಸಿದಂತೆ ಸುದ್ದಿ ನೀಡಲು ಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕ ದಯಾಳ್‍ಪದ್ಮನಾಭನ್ ಪ್ರಯೋಗಾತ್ಮಕ ಚಿತ್ರಗಳ ನಂತರ ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾ ಮಾಡಲಾಗಿದೆ. ಜಾಕ್‍ಮಂಜುರವರು ವಿತರಣೆ ಮಾಡುತ್ತಿರುವುದರಿಂದ ದುಗುಡ ಕಡಿಮೆಯಾಗಿದೆ. ಮನರಂಜನೆ ಇರುವುದರಿಂದ ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸಲಾಗಿದೆ. ಕೊನೆ 20 ನಿಮಿಷ ಮಾರ್ಮಿಕ ಸನ್ನಿವೇಶಗಳು ಬರಲಿದ್ದು, ಪ್ರೇಕ್ಷಕನಿಗೆ ರಸದೌತಣ ನೀಡಲಿದೆ. ಬದುಕುವುದಕ್ಕೆ ನಾನಾ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದು, ಅವಸಾನದಲ್ಲಿ ಪ್ರಾಮಾಣಿಕವಾಗಿ ನಿಜ ಹೇಳಿದರೆ ಅದು ಕೊನೆವರೆಗೂ ನೆಮ್ಮದಿಯನ್ನು ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಹೇಳಲಾಗಿದೆ. ಎರಡು ಮಂಜುಗಳು ಸೇರಿರುವುದರಿಂದ ಶಕ್ತಿ ಬಂದಂತೆ ಆಗಿದೆ ಎಂದರು. ಐಕಾನ್ ಚಿತ್ರದ ಹಾಡು ಕುಲದಲ್ಲಿ ಮೇಲಾವುದೋ ಗೀತೆಗೆ ನೃತ್ಯ ನಿರ್ದೇಶನ ಮಾಡಲು ಅವಕಾಶ ಬಂದಾಗ ನಿರಾಕರಿಸಿದ್ದೆ, ನಿರ್ದೇಶಕರು ಬಲವಂತವಾಗಿ ಕೆಲಸ ಮಾಡಿಸಿದ್ದಾರೆ. ಅದಕ್ಕಾಗಿ ಥ್ಯಾಂಕ್ಸ್ ಎನ್ನುತ್ತಾರೆ ಇಮ್ರಾನ್‍ಸರ್ದಾರಿಯಾ. ಎನ್‍ಆರ್‍ಐ ಆಗಿ ಕಾಣಿಸಿಕೊಂಡಿದ್ದೇನೆ. ಕಷ್ಟದಲ್ಲಿದ್ದಾಗ ನಾಯಕ ಸಹಾಯ ಮಾಡುತ್ತಾರೆ. ಕನ್ನಡದಲ್ಲಿ ಎರಡನೆ ಸಿನಿಮಾ ಎಂದು ಹೇಳಿಕೊಂಡರು ನಾಯಕಿ ಸಂಚಿತಾದಪಡುಕೋಣೆ. ಮತ್ತೋಬ್ಬ ನಾಯಕಿ ಭಾವನಾರಾವ್ ವಿವರ ನೀಡದೆ ಜಾರಿಕೊಂಡರು.


ಮುಂದೆ ಓದಿರಿ..................................
CLICK HERE FOR MORE CINEMA NEWS................!!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR