`ರಾಜ್ ವಿಷ್ಣು’ ಚಿತ್ರಕ್ಕೆ ವಿಶೇಷ ಹಾಡು
ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ಖುಷಿಯಲ್ಲಿದ್ದಾರೆ. ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ 37ನೇ ಚಿತ್ರ `ರಾಜ್‍ವಿಷ್ಣು' ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋದು ರಾಮು ಅವರ ಖುಷಿಗೆ ಕಾರಣ. ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ `ರಾಜ್ ವಿಷ್ಣು’ ಚಿತ್ರದ ವಿಶೇಷ ಹಾಡೊಂದರ ಚಿತ್ರೀಕರಣ ನೆಲಮಂಗಲ ಬಳಿಯಿರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಸ್ಟುಡಿಯೋದಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಶರಣ್ ಮತ್ತು ವೈಭವಿ ಕಾಂಬಿನೇಷನ್ನಿನಲ್ಲಿ `ನನ್ನೋಡುದ್ರೆ ಧೂಳ್ ಕಣ್ಣೋಡುದ್ರೆ ಧೂಳ್’ ಎಂಬ ಡ್ಯುಯೆಟ್ ಹಾಡಿನ ಚಿತ್ರೀಕರಣವನ್ನು ನಾಲಕ್ಕು ದಿನಗಳ ಕಾಲ ಮಾಡಲಾಗಿದೆÉ. ಈ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೂಲಕ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಂತಾಗಿದೆ. ಈಗಾಗಲೇ ಡಬ್ಬಿಂಗ್, ಸಿಜಿ ಮುಂತಾದ ಕೆಲಸಗಳೂ ಮುಗಿದಿವೆ. ಬಾಕಿ ಉಳಿದಿರುವ ಕೆಲವೇ ಕೆಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು `ರಾಜ್ ವಿಷ್ಣು` ಇನ್ನೇನು ತೆರೆಗೆ ಬರಲಿದೆ. ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ `ರಜನಿ ಮುರುಘ' ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು `ರಾಜ್ ವಿಷ್ಣು' ಸಿನಿಮಾವನ್ನು ರೂಪಿಸಲಾಗಿದೆÉ. ಈ ಹಿಂದೆ `ಅಧ್ಯಕ್ಷ' ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು `ರಜನಿ ಮುರುಘ' ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಗುತ್ತಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ `ರಾಜ್ ವಿಷ್ಣು' ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.

ಮುಂದೆ ಓದಿರಿ.............................................


CLICK HERE FOR MORE CINEMA NEWS......!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR