HOME
CINEMA NEWS
GALLERY
TV NEWS
REVIEWS
CONTACT US
ವಿನೂತನಚಿತ್ರತಿತಿತಿ.ಮೀನಾ ಬಜಾರ್.,
ವಿನೂತನ ಶೀರ್ಷಿಕೆ ಹೊಂದಿರುವ‘ತಿತಿತಿ.ಮೀನಾಬಜಾರ್.,’ ಚಿತ್ರದ ನಾಲ್ಕು ಪೋಸ್ಟರ್‍ಗಳನ್ನು ಹೋಟೆಲ್‍ಕಾರ್ಮಿಕರು, ಆಡೋಚಾಲಕರು, ಕಾಲೇಜು ವಿದ್ಯಾರ್ಥಿಗಳು ಮತ್ತುರಂಗಭೂಮಿ ಕಲಾವಿದರುಗಳಿಂದ ಅನಾವರಣಗೊಳಿಸಲಾಯಿತು. ಕತೆಯಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರುಅದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಚಿತ್ರದ ಸಾರವನ್ನುಗೌಪ್ಯವಾಗಿಟ್ಟರು.ಇಡೀ ಪ್ರಪಂಚ ಬಜಾರ್‍ನಿಂದತುಂಬಿಕೊಂಡಿದೆ.ಇಲ್ಲಿ ಏನು ಬೇಕಾದರೂ, ಎಲ್ಲವು ಸಿಗುತ್ತದೆಂದು ತುಣುಕುಗಳಲ್ಲಿ ಬರುವಡೈಲಾಗ್‍ಕುತೂಹಲ ಹುಟ್ಟಿಸಿದೆ. ಐದು ಪಾತ್ರದಲ್ಲಿ ಮುಖ್ಯವಾಗಿ ಬರಲಿದ್ದು, ಒಂದೊಂದು ಪಾತ್ರಕ್ಕೂ ವಿಶೇಷತೆಇರಲಿದ್ದು, ಅದರ ಮೇಲೆಯೇಚಿತ್ರವು ನಿಂತುಕೊಳ್ಳುತ್ತದಂತೆ.

ರಾಣಸುನಿಲ್‍ಕುಮಾರ್ ಸಿಂಗ್ ಗ್ಯಾಪ್ ನಂತರಎರಡನೇ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ, ಆಕ್ಷನ್‍ಕಟ್ ಹೇಳುವ ಜೊತೆಗೆ ನಿರ್ದೇಶಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೇರ,ದಿಟ್ಟ, ನಿರಂತರ ಹೆಣ್ಣು ಮಗಳಾಗಿ ಬಾಂಬೆ ಮೂಲದ ಶ್ರೀಜಿತಾಘೋಷ್ ನಾಯಕಿ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಐಟಂಡ್ಯಾನ್ಸರ್‍ಆಗಿದ್ದ ಆಲಿಷಾ ಕುಣಿಯುವುದನ್ನು ಪಕ್ಕಕ್ಕೆ ಇಟ್ಟುಮೊದಲಬಾರಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆರಂಗಿತರಂಗಅರವಿಂದ್, ರಾಜೇಶ್‍ನಟರಂಗ, ಮಧುಸೂಧನ್, ಜೀವ, ಭಾಸ್ಕರ್, ಲಕ್ಷೀಹೆಗಡೆ, ರೂಪೇಶ್‍ಕುಮಾರ್ ಮುಂತಾದವರು ನಟಿಸಿದ್ದಾರೆ.ಸಂಗೀತಕದ್ರಿಮಣಿಕಾಂತ್, ಛಾಯಾಗ್ರಹಣ ಮಾಥ್ಯುರಾಜನ್, ಸಂಕಲನ ಶ್ರೀಕಾಂತ್, ನೃತ್ಯ ಸುಜಿ-ಅನೀ-ಕಲ್ಪನ್, ಸಾಹಸ ರಿಯಲ್‍ಸತೀಶ್‍ಅವರದಾಗಿದೆ.ಕನ್ನಡದಲ್ಲಿ ‘ಯುಎ’ ತಲುಗುದಲ್ಲಿ ‘ಯು’ ಪ್ರಮಾಣ ಪತ್ರ ಪಡೆದುಕೊಂಡಿರುವಚಿತ್ರಕ್ಕೆ ಸೋದರ ನಾಗೇಂದ್ರಸಿಂಗ್ ಅವರು ಸಿಂಗ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/09/19







For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore