HOME
CINEMA NEWS
GALLERY
TV NEWS
REVIEWS
CONTACT US

ದರ್ಗಾಕ್ಕೆ ಭೇಟಿ ನೀಡಿದ ಶಿವಣ್ಣ
ಶಿವಲಿಂಗ ಚಿತ್ರವು ಶಿವರಾತ್ರಿ ಹಬ್ಬದಂದು ೨೫ ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಚಿತ್ರದಲ್ಲಿ ನಾಯಕಿ ವೇದಿಕಾಗೆ ದೆವ್ವ ಆವರಿಸಿಕೊಂಡಾಗ ಅದನ್ನು ಹೋಗಲಾಡಿಸಲು ದರ್ಗಾದಲ್ಲಿ ಪ್ರಾರ್ಥನೆ ಮಾಡಿಸುವ ಸನ್ನಿವೇಶವನ್ನು ಶ್ರೀರಂಗಪಟ್ಟಣದ ಮಸೀದಿಯಲ್ಲಿ ಚಿತ್ರೀಕರಣವನ್ನು ನಡೆಸಲಾಗಿತ್ತು. ಅಂದುಕೊಂಡಂತೆ ಚಿತ್ರವು ಹಿಟ್ ಆದ ಸಂದರ್ಭ ಹಾಗೂ ಶಿವಣ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ೩೦ ವರ್ಷಗಳು ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಕಾಟನ್‌ಪೇಟೆಯಲ್ಲಿರುವ ಮಸ್ತಾನ್‌ದರ್ಗಾಕ್ಕೆ ಶುಕ್ರವಾರ ಸಂಜೆ ನಮಾಜು ಮಾಡುವ ಸಮಯದಲ್ಲಿ ಭೇಟಿ ನೀಡಿದರು. ಅಲ್ಲಿನ ಮೌಲಿಗಳು ಇವರನ್ನು ಧಾರ್ಮಿಕ ಪದ್ದತಿಯಂತೆ ಬರಮಾಢಿಕೊಂಡು ನವಿಲುಗರಿಯ ಮೇಲೆ ಕೂರಿಸಿ, ಶಾಲು ಹೊದಿಸಿ ಗೌರವ ಸಲ್ಲಿಸಿದ್ದಾರೆ. ಶಿವರಾಜ್‌ಕುಮಾರ್ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳು ಏಳಿಗೆ ಹೊಂದಲಿ, ಮತ್ತು ವೈಯಕ್ತಿಕವಾಗಿ ಮೂರು ದಶಕಗಳ ಕಾಲ ಅಭಿನಯರಂಗದಲ್ಲಿ ಸೇವೆ ಮಾಡಿದ್ದಕ್ಕೆ ಹರಕೆಯಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರತಿ ವರ್ಷ ನಡೆಯುವ ಬೆಂಗಳೂರು ಕರಗವು ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿದ ತರುವಾಯ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಪದ್ದತಿ ಗತಕಾಲದಿಂದಲೂ ನಡೆಯುತ್ತಾ ಬಂದಿದೆ ಎಂಬುದರ ವಿಷಯವನ್ನು ಓದುಗರ ಅವಗಾಹನೆಗೆ ತರಲಾಗುತ್ತಿದೆ.
-13/03/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore