HOME
CINEMA NEWS
GALLERY
TV NEWS
REVIEWS
CONTACT US
ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ
ಚಂದನವನದಲ್ಲಿ ಉದ್ದ ಹೆಸರಿನ ಚಿತ್ರಗಳು ಬರುತ್ತಿರುವಂತೆ ‘ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಎನ್ನುವ ಚಿತ್ರವೊಂದು ಸೆಟ್ಟೇರಿದೆ. ಹಲವು ವರ್ಷಗಳ ಕಾಲ ಕೆಲಸ ಮಾಡಿ ಸೇವೆಯಿಂದ ನಿವೃತ್ತಿ ಆದವರ ಬದುಕು ಈ ರೀತಿ ಇರುತ್ತದೆ. ಇಂತಹ ಗುಣವುಳ್ಳವರು ಯಾವುದೇ ಕರೆಗಳನ್ನು ಸ್ವೀಕಾರ ಮಾಡುವುದಿಲ್ಲವಂತೆ. ಅಲ್ಲದೆ ಹೊಸ ಸ್ನೇಹಿತರೊಂದಿಗೆ ಸಂಪರ್ಕ ಬೆಳಸಲು ಹೋದಾಗ ಅವರು ಬ್ಯುಸಿಯಾಗಿರುತ್ತಾರೆ. ಇಂತಹುದೆ ಅಂಶಗಳನ್ನು ತೆಗೆದುಕೊಂಡು ಸಾಮುವೇಲ್ ಟೋನಿ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿವೃತ್ತಿ ನೌಕರನ ಪಾತ್ರದಲ್ಲಿ ದೇವರಾಜ್‍ಗೆ ವಿಶೇಷವಾದ ಗಡ್ಡ ಇರುವುದರಿಂದ ಮುಂಬೈನ ಸುಭಾಷ್ ಮೇಕಪ್ ಮಾಡುತ್ತಿರುವುದು ವಿಶೇಷವಾಗಿದೆ. 80ರ ದಶಕದ ಮೂವರು ನಾಯಕಿಯರಾದ ಭವ್ಯ, ತಾರಾ ಮತ್ತು ಶೃತಿ ಜೋಡಿಗಳಾಗಿ ಅಭಿನಯಿಸುತ್ತಿದ್ದಾರೆ. ಮೂರು ಜನರು ದೇವರಾಜ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದರು. ತಾರಾ ಹೆಬ್ಬಟ್ ರಾಮಕ್ಕ ನಂತರ ಮತ್ತೋಮ್ಮೆ ಜೋಡಿಯಾಗಿ ನಟಿಸಲು ಅವಕಾಶ ಸಿಕ್ಕಿದೆ.

ಹಿಂದಿನ ಎರಡು ಚಿತ್ರಗಳಲ್ಲಿ ಹಳ್ಳಿ ಡ್ರೆಸ್‍ನಲ್ಲಿ ಕಾಣ ಸಿಕೊಂಡಿದ್ದ ತಿಥಿ ಖ್ಯಾತಿ ಪೂಜಾಗೆ ಇದರಲ್ಲಿ ಮಾಡರ್ನ್ ಕಾಸ್ಟ್ಯೂಮ್ ಇರುವುದರಿಂದ ಸಹಜವಾಗಿ ಸಂತಸ ತಂದಿದೆಯಂತೆ. ಹಿರಿಯ ಕಲಾವಿದರು ಅಭಿನಯಿಸುತ್ತಿರುವುದರಿಂದ ಕತೆ ಕೇಳದೆ ನಟಿಸುತ್ತಿದ್ದಾರೆ ನಿರಂಜನ್‍ದೇಶ್‍ಪಾಂಡೆ. ಬಾಲಿವುಡ್‍ನಲ್ಲಿ 15 ವರ್ಷ ಕೆಲಸ ಮಾಡಿರುವ ಸುಬ್ಬಯ್ಯಕುಟ್ಟಪ್ಪ ಛಾಯಗ್ರಹಣ ಇದೆ. ವಿ.ನಾಗೇಂದ್ರಪ್ರಸಾದ್ ಸಾಹಿತ್ಯಕ್ಕೆ ಮನೋಜ್‍ಜಾರ್ಜ್ ಸಂಗೀತ ಸಂಯೋಜಿಸಿತ್ತಿದ್ದಾರೆ. ಸಂಕಲನ ಕ್ರೇಜಿಮೈಂಡ್ಸ್, ನೃತ್ಯ ಕಲೈ ನಿರ್ವಹಿಸುತ್ತಿದ್ದಾರೆ. ಸಗಟು ವ್ಯಾಪಾರ ಮಾಡುತ್ತಿರುವ ಹೆಚ್.ಎನ್.ಮಧುಸೂದನ್ ಮೊದಲ ಬಾರಿ ನಿರ್ಮಾಪಕ ಮತ್ತು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಬೆಂಗಳೂರು, ಮಂಗಳೂರು, ಕೇರಳ, ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮಹೂರ್ತ ಸಮಾರಂಭಕ್ಕೆ ಸಾರಾಗೋವಿಂದು ಆಗಮಿಸಿ ಶುಭಹಾರೈಸಿದರು.
-11/11/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore