HOME
CINEMA NEWS
GALLERY
TV NEWS
REVIEWS
CONTACT US
ಭಯೋತ್ಪಾದನೆ ಮಟ್ಟಹಾಕುವಲ್ಲಿ ಯೋಧನ ಹೋರಾಟ
ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸಿರುವ, ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ `ಮಾಸ್ ಲೀಡರ್' ಚಿತ್ರ. ರಾಜಕಾರಣ ಗಳು ಚುನಾವಣೆಗಳಲ್ಲಿ ಅಕ್ರಮ ಮತಗಳಿಸಿ ಅಧಿಕಾರದ ಚುಕ್ಕಾಣ ಹಿಡಿಯಲು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಮಾರಿಕೊಳ್ಳುವಂಥ ನೀಚತನಕ್ಕಿಳಿದಿರುವುದು ನಿಜಕ್ಕೂ ತಲೆತಗ್ಗಿಸುವಂಥ ವಿಚಾರ. ವೋಟಿಗಾಗಿ ಬಾಂಗ್ಲಾ ದೇಶದ ಜನರನ್ನು ನಮ್ಮ ದೇಶಕ್ಕೆ ಅಕ್ರಮದಿಂದ ಕರೆಸಿಕೊಂಡು ಅವರಿಗೆ ಮತದಾರರ ಗುರುತಿನ ಪತ್ರ, ಆಧಾರ್ ಕಾರ್ಡ್‍ನಂಥ ದಾಖಲೆ ಪತ್ರಗಳನ್ನು ಮಾಡಿಸಿಕೊಡುತ್ತಿದ್ದಾರೆ. ಹೀಗೆ ವಲಸೆ ಬಂದವರು ಇಲ್ಲೇ ಉಳಿದುಕೊಳ್ಳುವ ಕೆಲವರು ಭಯೋತ್ಪಾದಕ ಚಟುವಟಿಕೆಗಳಿಗಿಳಿಯುತ್ತಾರೆ. ಇಂಥ ಟೆರರಿಸ್ಟ್‍ಗಳನ್ನು, ರಾಜಕಾರಣ ಗಳನ್ನು ಹಾಗೂ ಭಯೋತ್ಪಾದನೆಯನ್ನ ಮಟ್ಟ ಹಾಕುವ ದೇಶಭಕ್ತನ ಕಥೆ ಹೇಳುವ ಚಿತ್ರವೇ ಮಾಸ್ ಲೀಡರ್.

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳುವ ವಲಸಿಗರು, ಚುನಾವಣೆ ಸಂದರ್ಭದಲ್ಲಿ ನಡೆಯುವ ಅಕ್ರಮಗಳು ಅಲ್ಲದೆ ಲವ್ ಜಿಹಾದ್‍ನಂಥ ಸೂಕ್ಷ್ಮ ವಿಚಾರಗಳ ಸುತ್ತ ನಿರ್ದೇಶಕ ನರಸಿಂಹ ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಚಿತ್ರದಲ್ಲಿ ಶಿವಣ್ಣ ಕ್ಯಾಪ್ಟನ್ ಶಿವರಾಜ್ ಪಾತ್ರದಲ್ಲಿ ಘರ್ಜಿಸಿದ್ದಾರೆ. ವಯಸ್ಸು ಐವತ್ತು ದಾಟಿದರೂ ಕೂಡ ಶಿವಣ್ಣ ಅವರಲ್ಲಿರುವ ಎನರ್ಜಿ ಸ್ವಲ್ಪವೂ ಕೂಡ ಕಡಿಮೆಯಾಗಿಲ್ಲ. ಆರಂಭದಲ್ಲಿ ಆ್ಯಕ್ಷನ್ ಹೀರೊ ಆಗಿ ಶಿವಣ್ಣ ಎಂಟ್ರಿ ಕೊಡ್ತಿದ್ದಂತೆಯೇ ಅಭಿಮಾನಿಗಳು ಖುಷಿಯಿಂದ ಪರದೆಯ ಮೇಲೆ ಕಾಯಿನ್ ಹಾಕುತ್ತಾರೆ. ಅಷ್ಟರಮಟ್ಟಿಗೆ, ಶಿವಣ್ಣನ ಪಾತ್ರ ಪ್ರೇP್ಷÀಕರಿಗೆ ಖುಷಿ ಕೊಡುತ್ತದೆ. ಇನ್ನು ಯೋಧರಾಗಿ ವಿಜಯï ರಾಘವೇಂದ್ರ ಹಾಗೂ ಗುರುರಾಜï ಸಿನಿಮಾದುದ್ದಕ್ಕೂ ಕ್ಯಾಪ್ಟನ್ ಶಿವರಾಜï ಜೊತೆ ಕಾಣ ಸಿಕೊಂಡಿದ್ದಾರೆ. ಅಲ್ಲದೆ ಒಬ್ಬ ಮುಸ್ಲಿಂ ಯುವಕನಾಗಿ ನೆಗೆಟಿವ್ ಶೇಡ್‍ನಲ್ಲಿ ಕಾಣ ಸಿಕೊಳ್ಳುವ ಲೂಸ್‍ಮಾದ ಯೋಗಿ ನೋಡುಗರ ಮನದಲ್ಲಿ ನಿಲ್ಲುತ್ತಾರೆ. ಶಿವರಾಜï ಪತ್ನಿಯಾಗಿ ಕಾಣ ಸಿಕೊಂಡಿರುವ ಪ್ರಣ ೀತಾಗೆ ಅಭಿನಯಕ್ಕೆ ಹೆಚ್ಚಿನ ಅವಕಾಶವಿಲ್ಲ. ಒಂದೆರಡು ದೃಶ್ಯಗಳು ಹಾಗೂ ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದಾರೆ. ಶಿವರಾಜ್ ತಂಗಿಯಾಗಿ ಕಾಣ ಸಿಕೊಂಡಿರುವ ಆಶಿಕಾ ತನ್ನ ಮುಗ್ದ ನಟನೆಯಿಂದ ಗಮನ ಸೆಳೆಯುತ್ತಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಓರ್ವ ಮುಸ್ಲಿಂ ಮಹಿಳೆಯಾಗಿ ನಾಯಕನ ಆಸರೆಯಲ್ಲಿರುವುದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಮಕೇತವಾಗಿ ಮೂಡಿಬಂದಿದೆ. ಉಳಿದಂತೆ ವಂಶಿ ಕೃಷ್ಣ, ಸುಧಾ ಬೆಳವಾಡಿ, ಶಂಕರ್ ಅಶ್ವಥ್, ಶರ್ಮಿಳಾ ಮಾಂಡ್ರೆ, ಪ್ರಕಾಶ್ ಬೆಳವಾಡಿ, ಚಿ.ಗುರುದತ್ ಇವರೆಲ್ಲರೂ ಚಿತ್ರಕ್ಕೆ ಜೀವ ತುಂಬಿದ್ದಾರೆ. ಇನ್ನೂ ನಟ ಶ್ರೀನಗರಕಿಟ್ಟಿ ಅವರ ಪುತ್ರಿ ಪರಿಣ ತ ಮುz್ದÁಗಿ ಕಾಣ ಸಿಕೊಂಡು ಗಮನ ಸೆಳೆಯುತ್ತಾರೆ. ಚಿತ್ರದ ಪ್ರಥಮಾರ್ಧ ವೇಗವಾಗಿ ಸಾಗಿದರೆ, ದ್ವಿತೀಯಾರ್ಧ ಸ್ವಲ್ಪ ನಿದಾನಗತಿಯಲ್ಲಿ ಸಾಗುತ್ತದೆ. ಪ್ರೇP್ಷÀಕರಿಗೆ ಬೋರಾಗದಂತೆ ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕ ಸಹನಾ(ನರಸಿಂಹ) ಯಶಸ್ವಿಯಾಗಿz್ದÁರೆ. ವೀರಸಮರ್ಥ್ ಅವರ ಸಂಗೀತ ಗಮನಸೆಳೆಯುತ್ತದೆ. ಗುರುಪ್ರಶಾಂತ ರೈ ಅವರ ಕ್ಯಾಮೆರಾ ವರ್ಕೇ ಇಡೀ ಚಿತ್ರದ ಹೈಲೈಟ್. ಚಿತ್ರದ ಎಡಿಟಿಂಗ್‍ನಲ್ಲಿ ಸಣ್ಣ ಪುಟ್ಟ ಮಿಸ್ಟೇಕ್ಸ್ ಎದ್ದುಕಾಣುತ್ತವೆ.
-Cine Circle News
-11/08/17

\
MASS LEADER TO RELEASE ON AUGUST 11
H
ere is good news for Shivarajkumar fans. All the decks are cleared for the release of the Shivarajkumar-starrer Mass Leader on Friday. The title issue between the two directors A M R Ramesh and Tarun Shivappa has been resolved amicably by producer K Manju.

Tarun Shivappa, one of the producers of Mass Leader, has confirmed that producer K Manju intervened and solved the ownership issue over the title Mass Leader. Director A M R Ramesh had approached a city civil court seeking to stay the release of the movie over title ownership, as he had registered the title Leader with Karnataka Film Chamber of Commerce.

“Happy to inform everyone that the Mass Leader issue between me and AMR Ramesh has been cleared with the help of K Manju who negotiated this problem between us. And Mass Leader will be releasing on August 11. We are very thankful to K Manju and AMR Ramesh,’’ Tarun Shivappa said.
-Cine Circle News
-8/08/17

MASS LEADER GETS U/A CERTIFICATE
T
he Regional Censor Board has given a U/A certificate to Kannada film Mass Leader in which Dr. Shivarajakumar played the lead role. According to director Narasimha, the Regional Censor Board officials have appreciated Mass Leader since it has no violence scenes. “The film will showcase in highlighting the rampant corruption in society. We have taken all measures not to hurt anyone while making this film. I am sure of movie buffs encouraging and supporting this film,’’ said Narasimha.

Dr. Shivarajkumar plays the role of an Army officer while Pranitha acts as his wife. The film has songs with mass appeal, item and patriotism and these songs were written by Kaviraj, Dr Nagendra Prasad, Chethan Kumar while Veer Samarth scored music. Vijay, Ganesh, Vikram and Thriller Manju have composed stunt scenes for this film while Sharmila Mandre, who played the role of a journalist, participated in an item song.
Baby Pranitha acted as the daughter of Dr. Shivarajkumar while Ashika played the sister role. Vijaya Raghavendra and Gururaj Jaggesh acted as Shivarajkumar’s followers while Yogi played the role of a terrorist.

The crew members expect the film to do well at the box office since it is being released this month. Its shooting was held under severe cold conditions (-4 degree Celsius) at Gulmarg.

Producer Tarun Shivappa has been busy in making arrangements to release Mass Leader at around 300 theatres across the state. Hardik Gowda is one of the two producers of this film.
-Cine Circle News
-2/08/17


MASS LEADER TO RELEASE ON AUGUST 11
D
r Shivarajkumar’s latest film Mass Leader is scheduled for release on August 11 at hundreds of theatres across the state. The big-budget film, directed by Narasimha and produced by Tarun Shivappa and Hardik Gowda, had shooting not only in Karnataka but also Andhra Pradesh and Kashmir amidst snowfall. Later its shooting was shifted to Manali when law and order situation became a cause of concern in Kashmir in January 2017. Shivarajkumar is playing the role of an army officer in this action, sentiment film.

Veera Samarth has scored music while Guru Prashant Rai worked behind the camera. The film has five songs such as Munde Nintru, Geleya Ennale, Abida Abida, Deepave Ninna and Ee Mannalli, sung by Chenthan Gandharva, Shreya Goshal, Veer Samarth, Supriya Lihith, Jubin Nautiyal, Aishwarya Rangarajan, Jogi Prem, Chintan Vikas and Govind Kurnool.

The lyrics were penned by Dr V Nagendra Prasad. Besides Dr Shivarajkumar, the film has star cast of Vijaya Raghavendra, Gururaj Jaggesh, Yogesh, Pranitha Subhash, Vanmshi Krishna, Sharmiela Mandre, Ashika Ranganath, Parinitha Kitty, Prakash Belawadi, Rockline Venkatesh and Bipasha Basu (in special appearance).
-Cine Circle News
-31/07/17

ಮಾಸ್ ಲೀಡರ್ ಹಾಡುಗಳ ವೈಭವ
2017ರ ಬಹು ನಿರೀಕ್ಷಿತ, ಅದ್ದೂರಿ ವೆಚ್ಚದ, ಬಹು ತಾರಾಗಣದ ‘ಮಾಸ್ ಲೀಡರ್’ ಚಿತ್ರದ ಧ್ವನಿಸಾಂದ್ರಿಕೆಯು ಭಾನುವಾರ ಅಂಬೇಡ್ಕರ್ ಭವನದಲ್ಲಿ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಲೋಕಾರ್ಪಣೆ ಮಾಡಿದರು. ಚಿತ್ರದಲ್ಲಿ ನಟಿಸಿದವರೆಲ್ಲರೂ ವೇದಿಕೆಗೆ ಬಂದು ಚುಟುಕು ಮಾತುಗಳನ್ನು ಹೇಳಿದರು. ಸರದಿಯಂತೆ ಯೋಗಿ ಮೂರು ಪದಗಳಲ್ಲಿ ಶಿವಣ್ಣರನ್ನು ಹೊಗಳಿದರು. ಕರೆ ಬಂದಾಗ ನಂಬಲಿಕ್ಕೆ ಆಗಲಿಲ್ಲ. ಮೊದಲ ದೃಶ್ಯ ಫೈಟ್. ಅದರಲ್ಲಿ ಶಿವಣ್ಣ ಒಂದು ಲುಕ್ ಕೊಟ್ಟಿದ್ದು ಸೂಪರ್ ಆಗಿತ್ತು. ನಾವೆಲ್ಲರೂ ಒಟ್ಟಿಗೆ ಊಟ ಮಾಡಿದ್ದೇವೆ. ಇಂತಹ ಅನುಭವ ಜೀವನದಲ್ಲಿ ಮರೆಯಲಾಗುವುದಿಲ್ಲ ಅಂತಾರೆ ಗುರುಜಗ್ಗೇಶ್. ಶಿವಣ್ಣರಲ್ಲಿ ತಾಳ್ಮೆ ಇದೆ. ಶೀರ್ಷಿಕೆ ಅವರಿಗೆ ಹೋಲುತ್ತದೆ ಎಂಬ ನುಡಿ ಶರ್ಮಿಳಾಮಾಂಡ್ರೆ ಅವರದು. ಎಲ್ಲಾ ತರಹದ ಹಾಡುಗಳಿಗೆ ಶಿವಣ್ಣ ನಟಿಸಿದ್ದಾರೆ. ಆದರೂ ಒಂದು ಹಾಡು ಬರೆಯುವುದು ಛಾಲೆಂಜಿಂಗ್ ಆಗಿತ್ತು. ಚಿತ್ರಕತೆ ಪ್ರಾರಂಭದಿಂದಲೂ ತಂಡದೊಂದಿಗೆ ಇದ್ದೇನೆ ಎಂದರು ಚೇತನ್‍ಕುಮಾರ್. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮಂತವರಿಗೆ ಶಿವಣ್ಣ ಪ್ರೋತ್ಸಾಹ ನೀಡುತ್ತಿರುವುದು ಅವರ ದೊಡ್ಡ ಗುಣ ಎಂಬ ಹೊಗಳಿಕೆ ಮಾತುಗಳು ಮೇಘನಾಗಾಂವ್ಕರ್‍ರಿಂದ ಕೇಳಿಬಂತು. ತಡವಾಗಿ ಆಗಮಿಸಿದ ಪುನೀತ್‍ರಾಜ್‍ಕುಮಾರ್ ಟೀಸರ್ ನೋಡಿ ಸೂಪರ್ ಅನಿಸಿತು. ಮೂವರು ಅಣ್ಣಂದಿರ ಮಾತುಗಳನ್ನು ಕೇಳಲು ಉತ್ಸುಕನಾಗಿದ್ದೇನೆ. ನಮ್ಮ ಇಡೀ ಕುಟುಂಬ ಬಾಲಣ್ಣನಿಗೆ ಪರಿಚಯವಿದೆ. ಅಭಿಮಾನಿಗಳಿಗೆ ಅಣ್ಣ ಮಾಸ್ ಲೀಡರ್, ಮನೆಯಲ್ಲಿ ನಮಗೆಲ್ಲರಿಗೂ ಸಿಂಪ್ಲಸಿಟಿ ಲೀಡರ್ ಅಂತ ನಿರೂಪಕಿ ಕಾವ್ಯಶಾ ಕೇಳಿದ ಗುಟ್ಟಿನ ಪ್ರಶ್ನೆಗೆ ಉತ್ತರಿಸಿದರು.

ಕನ್ನಡಿಗರು ಚಿತ್ರರಂಗವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಇತ್ತೀಚಿನ ಚಿತ್ರಗಳು ಹಿಟ್ ಆಗುತ್ತಿರುವುದು ಸಾಕ್ಷಿಯಾಗಿದೆ. ಡಾ.ರಾಜ್‍ಕುಮಾರ್ ನಮ್ಮಲ್ಲೆ ಇದ್ದಾರೆ. ಅವರು ಇಲ್ಲೆ ಮೂಲೆಯಲ್ಲಿ ನಿಂತು ಎಲ್ಲರನ್ನು ನೋಡುತ್ತಾ ಆರ್ಶಿವಾದ ಮಾಡುತ್ತಿದ್ದಾರೆ. ಸಂಪ್ರದಾಯ ವಂಶಸ್ಥರಿಂದ ಬಂದ ಶಿವಣ್ಣ ರೀಲ್‍ನಲ್ಲಿ ಮಾತ್ರ ಲೀಡರ್ ಆಗಿರದೆ, ರಿಯಲ್‍ನಲ್ಲೂ ಲೀಡರ್ ಆಗಿದ್ದಾರೆ. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು, ಪ್ರೀತಿಸುತ್ತಾ, ಎಲ್ಲರಲ್ಲಿ ತಾನು ಒಬ್ಬ ಅಂತು ತಿಳಿದುಕೊಂಡಿರುವುವವರು ಲೀಡರ್ ಆಗುವುದು. ಎಲ್ಲರಿಗೂ ಸಹಾಯ ಮಾಡಿ ಅವರ ಪ್ರವರ್ಧನೆಯನ್ನು ಬಯಸುವ ಹಾದಿಯಲ್ಲಿ ನಾನು ಇದ್ದೇನೆ. ಚಿತ್ರದ ಪರಿಕಲ್ಪನೆ ಅದ್ಬುತವಾಗಿದೆ. ರಾಷ್ಟ್ರಮಟ್ಟಿಗೆ ಗುರುತು ಸಿಗುವಂತೆ ನಿರ್ದೇಶನ ಮಾಡಿದ್ದಾರೆ. ಅವರ ಇಮೇಜ್ ಇನ್ನು ಎತ್ತರಕ್ಕೆ ಕರೆದುಕೊಂಡು ಹೋಗಲಿ. ಕನ್ನಡಿಗರ ಚಪ್ಪಾಳೆಯಿಂದ ನೂರು ದಿವಸ ಓಡಲಿ. ಅಂದು ಮತ್ತೆ ಮಾತನಾಡುತ್ತೇನೆ ಎಂದರು ಜಗ್ಗೇಶ್. ಇದರ ಮಧ್ಯೆ ಆಶಿಕಾ, ಶರ್ಮಿಳಾಮಾಂಡ್ರೆ, ನಾಯಕಿ ಪ್ರಣ ೀತಾಸುಭಾಷ್ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು.

ಚಿತ್ರೀಕರಣ ಸಂದರ್ಭದಲ್ಲಿ ನಿರ್ಮಾಪಕ,ನಿರ್ದೇಶಕರಿಗೆ ಬೈದಿದ್ದು ಉಂಟು. ಅವೆಲ್ಲವು ಪ್ರೀತಿಯಿಂದ ಅಷ್ಟೇ. ಟ್ರೈಲರ್‍ನ್ನು ಸುಂದರವಾಗಿ ತೋರಿಸಿದ್ದು ಗ್ರಿಪ್ ಇದೆ. ಭಾವನೆಗಳನ್ನು ಚೆನ್ನಾಗಿ ಹೇಳಿದ್ದಾರೆ. ನಾನೊಬ್ಬನೆ ಲೀಡರ್ ಆಗಿಲ್ಲ. ವಿಜಯ್‍ರಾಘವೇಂದ್ರ, ಗುರುಜಗ್ಗೇಶ್, ಯೋಗಿ, ಪ್ರಣ ೀತಾ ಎಲ್ಲಾ ಪಾತ್ರಗಳು ಲೀಡರ್ ಜೊತಗೆ ಬರುತ್ತದೆ. ರಿಯಾಲಿಟಿಗಳು ರೀಲಿಟಿಗೆ ಹೋಲಿಸುತ್ತೆ ಎಂದರು ಶಿವರಾಜ್‍ಕುಮಾರ್. ಅವಸಾನದಲ್ಲಿ ಬಾಲಕೃಷ್ಣರ ಕೈಗೆ ಮೈಕ್ ತಲುಪಿದಾಗ ಅವರ ತೆಲುಗು-ತಮಿಳು-ಕನ್ನಡ-ಇಂಗ್ಲೀಷ್ ಮಾತುಗಳು ಹೀಗಿತ್ತು: ಕನ್ನಡ ಅಭಿಮಾನಿಗಳಿಗೆ ನಮಸ್ಕಾರ, ರಾಜ್‍ಕುಮಾರ್ ಮಕ್ಕಳು ನನಗೆ ತಮ್ಮಂದಿರು. ಕನ್ನಡ ಅಂದರೆ ರಾಜ್‍ಕುಮಾರ್, ರಾಜಕುಮಾರ್ ಅಂದರೆ ಕನ್ನಡ. ಕಷ್ಟ ಸುಖ, ನೋವು ನಲಿವುನಿಂದ ಸಿದ್ದಪಡಿಸಿದ ಚಿತ್ರವು ಖಂಡಿತ ಹಿಟ್ ಆಗಲಿ. ಶ್ರೀಕೃಷ್ಣದೇವರಾಯ ತೆಲುಗು,ಕನ್ನಡ,ಕೊಂಕಿಣ ಯವರ ಎಂದು ತಿಳಿದಿಲ್ಲ. ಹಿಂದೂಪುರ ಶಾಸಕನಾಗಿ ಸೇವೆಯನ್ನು ಮಾಡುತ್ತಿದ್ದೇನೆ. ಒಂದು ಸಿನಿಮಾ ಸಂಗೀತದಿಂದ ಹಿಟ್ ಆದರೆ ಚಿತ್ರವು ಯಶಸ್ಸು ಗಳಿಸುತ್ತದೆ. ಆಡಿಯೋ ಕೂಡ ಆರ್ಥಿಕವಾಗಿ ಸಹಾಯವಾಗುತ್ತದೆ. ಸಂಗೀತಕ್ಕೆ ಬಲವಿದೆ. ಬೇಗನೆ ಬಿಡುಗಡೆ ಮಾಡಿ ಎಂದು ರಾಜ್‍ಕುಮಾರ್, ಎನ್‍ಟಿಆರ್ ಸಂಬಂದವನ್ನು ಮೆಲುಕು ಹಾಕಿ ಅವರಿಬ್ಬರು ಚಿತ್ರರಂಗದ ಎರಡು ಮುತ್ತುಗಳು. ಮತ್ತೆ ಮಾತು ಮುಂದು ವರೆಸುತ್ತಾ ಗೌತಮಿಪುತ್ರ ಚಿತ್ರಕ್ಕೆ ಶಿವಣ್ಣ ನಟಿಸಿದ್ದು ಖುಷಿ ಕೊಟ್ಟಿದೆ. ಅದಕ್ಕಾಗಿ ಕರ್ನಾಟಕ ಪ್ರಜೆಗಳಿಗೆ ಕೃತಜ್ಘತೆಗಳು. ಜಗ್ಗೇಶ್ ಚೆನ್ನಾಗಿ ಮಾತನಾಡಿ ನಗಿಸಿದ್ದಾರೆ. ಎನ್‍ಟಿಆರ್ ಬೊಬ್ಬಲಿಸಿಂಹ, ರಾಜ್‍ಕುಮಾರ್ ಕೆರಳಿದಸಿಂಹ. ನಾನು ಕೊಂಡವೀಟಿಸಿಂಹ, ಶಿವು ಸಿಂಹದಮರಿ ಅಂತ ಡೈಲಾಗ್ ಹೇಳಿ ಮಾತಿಗೆ ವಿರಾಮ ಹಾಕಿದರು. ಮುಂದೆ ಮಾಸ್ ಲೀಡರ್ 100 ದಿನ ಓಡಲಿ, ಶಿವಣ್ಣ ಯಾವಾಗಲೂ ಚೆನ್ನಾಗಿ ಇರಲಿ. ನನಗೆ ಅವರನ್ನು ಕಂಡರೆ ತುಂಬಾ ಇಷ್ಟ ಅಂತ ನಿರೂಪಕಿ ಹೇಳಿಕೊಟ್ಟಿದ್ದನ್ನು ಬಾಲಣ್ಣ ಕನ್ನಡದಲ್ಲಿ ಹೇಳಿದರು. ಧ್ವನಿಸಾಂದ್ರಿಕೆ ಬಿಡುಗಡೆ ನಂತರ ರಾಷ್ಟ್ರಗೀತೆಯೊಂದಿಗೆ ಸುಂದರ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ನಿರ್ಮಾಪಕ ತರುಣ್‍ಶಿವಪ್ಪ-ಹಾರ್ಧಿಕ್‍ಗೌಡ, ನಿರ್ದೇಶಕ ನರಸಿಂಹರವರ ಅಚ್ಚುಕಟ್ಟಾದ ಯೋಜನೆಯಂತೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸಮಾರಂಭದಲ್ಲಿ ರಾಗಿಣ , ಗಿರಿಜಾಲೋಕೇಶ್,ಗುರುನಂದನ್, ಲಹರಿವೇಲು ಇನ್ನು ಅನೇಕ ಗಣ್ಯರುಗಳು ಹಾಜರಿದ್ದರು. ಚಿತ್ರವು ಆಗಸ್ಟ್ ಎರಡನೆ ವಾರದಂದು ಬಿಡುಗಡೆಯಾಗುವ ಸಾದ್ಯತೆ ಇದೆ.
-12/07/17

MASS LEADER’ COMPLETES SHOOT
S
hivarajkumar starrer ‘Mass Leader’ has completed its shoot after a 63-day schedule on Saturday. The film for which the shoot happened in phases is produced by Tarun Shivappa and Hardhik Gowda while it is directed by Narasimha. Aahir Veer Samarth has scored the music and Guru Prashanth Rai is the cameraman. The film stars Pranita, Vijaya Raghavendra, Ashika, Guru Jaggesh, Sharmiela Mandre, Baby Parineeta and a host of others.

Producer Tarun Shivappa told visiting reporters on the sets of the film on the last day of the film’s shoot that he is eyeing an August release for the movie. He said the film’s audio will be launched very soon and it will include planting of a sapling by Shivanna. He said the film has been shot in Bengaluru, Jammu & Kashmir, Gulmarg, Kolkata, Qatar and other locales.

Director Narasimha said the film has reached the completion stage after a long haul on the sets which included fighting inclement weather and keeping the spirits high. He said soldiers of the Indian Army supported the team in completing the shoot as the cast and crew had to shoot in an area that was akin to a war situation. He said Shivanna’s enthusiasm and energetic presence boosted the team’s morale even in the adverse weather conditions.

Music director Veer Samarth said he was happy to be involved in a big project such as this as he was composing the music for a superstar. He said the film has five songs including two romantic numbers.

Guru Jaggesh said this film was a big break for him and added that it was unbelievable to see Shivanna’s energetic presence and involvement in the shoot. He said he plays a friend to Shivanna and his follower in the movie. Ashika said she plays Shivanna’s sister in her second movie.

Vijaya Raghavendra said Shivanna plays a leader who talks less and works more.

Shivarajkumar said all the characters in the movie portray leadership and said the climax portion is engaging. He said the film portrays realism and appreciated Harsha’s style and judgment. He said the film has a message that everyone is above religion and hoped that religious strife will come down. He said a lot of hard work had gone in the making which includes fighting the inclement weather especially the snowfall in Kashmir.
-19/06/17
ಕತಾರ್‍ನಲ್ಲಿ `ಮಾಸ್ ಲೀಡರ್' ಹಾಡು
ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ, ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ `ಮಾಸ್ ಲೀಡರ್` ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ `ಏನಿದೆ ನಿನ್ನ ಕಣ್ಣಲಿ ಹೇಳು ಪಿಸು ಮಾತಲಿ` ಎಂಬ ಹಾಡಿನ ಚಿತ್ರೀಕರಣ ಕತಾರ್ ಸಮೀಪದ ಜಕ್ರೀತ್ ಫಿûಲಂ ಸಿಟಿ ಹಾಗೂ ಸಮುದ್ರ, ಮರಭೂಮಿ ಒಂದೆಡೆಯಿರುವ ರಮಣ ೀಯ ಸ್ಥಳದಲ್ಲಿ ಮೂರು ದಿನಗಳ ಕಾಲ ನಡೆದಿದೆ. ಜಕ್ರೀತ್ ಫಿûಲಂ ಸಿಟಿಯಲ್ಲಿ ಹತ್ತು ವರ್ಷದ ಹಿಂದೆ ಧಾರಾವಹಿಯೊಂದರ ಚಿತ್ರೀಕರಣ ನಡೆದಿದ್ದು ಬಿಟ್ಟರೆ ಈ ಚಿತ್ರದ ಹಾಡು ಚಿತ್ರೀಕರಣಗೊಂಡಿದೆ ಎನ್ನುತ್ತಾರೆ ನಿರ್ಮಾಪಕರು. ಶಿವರಾಜಕುಮಾರ್ ಹಾಗೂ ಪ್ರಣ ೀತ ಅಭಿನಯಿಸಿದ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಭೂಷಣ್ ಉದಯ ಟಿವಿಯ ಕಿಕ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಶಿವರಾಜಕುಮಾರ್ ಭೂಷಣ್ ಅವರಿಗೆ ನೃತ್ಯ ನಿರ್ದೇಶನದ ಅವಕಾಶ ಕೊಡಿಸುವುದಾಗಿ ಹೇಳಿದ್ದರಂತೆ. ಭೂಷಣ್ ಈಗ `ಮಾಸ್ ಲೀಡರ್` ಚಿತ್ರದ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

. `ರೋಸ್' ಚಿತ್ರ ಖ್ಯಾತಿಯ ನರಸಿಂಹ(ಸಹನಾಮೂರ್ತಿ) ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ `ಲೀಡರ್' ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ದಂಪತಿಯ ಪುತ್ರಿ ಪುಟಾಣ ಪರಿಣ ತ ಅಭಿನಯಿಸುತ್ತಿದ್ದಾರೆ. ಶಿವರಾಜಕುಮಾರ್ ಮಗಳ ಪಾತ್ರದಲ್ಲಿ ಪರಿಣ ತ ಕಾಣ ಸಿಕೊಳ್ಳುತ್ತಿರುವುದು ವಿಶೇಷ. ಇದಲ್ಲದೆ, ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ವಿಜಯ ರಾಘವೇಂದ್ರ, ಗುರು ಜಗ್ಗೇಶ್ ಕೂಡಾ ಅಭಿನಯಿಸುತ್ತಿದ್ದಾರೆ ಮತ್ತು ಪ್ರಣ ೀತ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡಾ ಶಿವರಾಜ್ ಕುಮಾರ್ ಅವರೊಟ್ಟಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಈ ಚಿತ್ರದಲ್ಲಿ ಕಾಣ ಸಿಕೊಳುತ್ತಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನÀ ಈ ಚಿತ್ರಕ್ಕಿದೆ.

-6/04/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/