HOME
CINEMA NEWS
GALLERY
TV NEWS
REVIEWS
CONTACT US
ಪಾಪಕ್ಕೆ ಈ ಜನ್ಮದಲ್ಲೆ ಶಿಕ್ಷೆ ಖಚಿತ
ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ರಹಸ್ಯ ಕುರಿತ ‘ಜವ’ ಚಿತ್ರವು ಇದೇ ತಿಂಗಳು ಹತ್ತೋಂಬರಂದು ಬಿಡುಗಡೆಯಾಗುವ ಲಕ್ಷಣಗಳು ಕಂಡು ಬಂದಿತ್ತು. ಆದರೆ ಅದೇ ದಿನದಂದು ಸಾಕಷ್ಟು ಚಿತ್ರಗಳು ತೆರೆಗೆ ಬರುತ್ತಿರುವುದರಿಂದ ಧಾವಂತಿಸದೆ ಫಬ್ರವರಿ 2ರಂದು ಜನರಿಗೆ ತೋರಿಸಲು ಸಜ್ಜಾಗಿದ್ದಾರೆ. ವಿಷಯವನ್ನು ಹೇಳಿಕೊಳ್ಳಲು ಮತ್ತು ಟ್ರೈಲರ್‍ನ್ನು ತೋರಿಸುವ ಸಲುವಾಗಿ ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು. ಎಂದಿನಂತೆ ಪೋಲೀಸ್ ಅಧಿಕಾರಿಯಾಗಿ ಕಾಣ ಸಿಕೊಂಡಿರುವ ಸಾಯಿಕುಮಾರ್ ಮಾತನಾಡಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ಸೈಕಾಲಾಜಿಕಲ್. ಫಿಲಾಸಫಿಕಲ್ ಹಾಗೂ ಕಮರ್ಷಿಯಲ್ ಅಂಶಗಳು ಇರುವುದರಿಂದ ಸಿನಿಮಾದ ಮೇಲೆ ಹೆಚ್ಚು ಆಸಕ್ತಿ ಬಂದಿದೆ. ಸಮವಸ್ತ್ರ ಧರಿಸಿದ್ದರೂ ವಿಭಿನ್ನವಾಗಿದೆ. ಅಣ್ಣ-ತಮ್ಮ ಲವಕುಶರಂತೆ ಕೆಲಸ ಮಾಡಿರುವುದು ತೆರೆ ಮೇಲೆ ಚೆಂದ ಕಾಣ ಸುತ್ತದೆ. ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದರು. ಮೊದಲಬಾರಿ ಕತೆ ಬರೆದು ನಿರ್ದೇಶನ ಮಾಡಿರುವ ಅಭಯ್‍ಚಂದ್ರ ಸಿನಿಮಾದ ತಿರುಳನ್ನು ಹೇಳಿದರೆ ಸಾರಾಂಶ ಬಿಟ್ಟುಕೊಟ್ಟಂತೆ ಆಗುತ್ತದೆ. ಹಾಲಿವುಡ್ ಚಿತ್ರಗಳಂತೆ ಹಿನ್ನಲೆ ಸಂಗೀತ ನೀಡುವ ಪ್ರಯತ್ನ ಮಾಡಲಾಗಿದೆ. ಚಿತ್ರ ನೋಡಿ ಅಂತ ಪ್ರಶ್ನೆಗಳಿಂದ ಜಾರಿಕೊಂಡರು.

ಹಿರಿ ಮಗ ಆರು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾನೆ. ಕಿರಿಯವನಿಗೆ ಅನುಭವ ಇಲ್ಲ. ಆದರೂ ಅವನ ನಿರ್ದೇಶನದ ಮೇಲೆ ನಂಬಿಕೆ ಇಟ್ಟು ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಬೇಕು. ಏನೇ ಮಾಡಿದರೂ ಈ ಜನ್ಮದಲ್ಲೆ ಅನುಭವಿಸಬೇಕು ಎಂಬುದಾಗಿದೆ. ಬಿಡುಗಡೆ ದಿನಾಂಕ ಹುಟ್ಟು ಹಬ್ಬವಾಗಿರುವುದರಿಂದ ಮಕ್ಕಳು ಉಡುಗೊರೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದು ಸುರೇಶ್ಚಂದ್ರ. ಯಮಧರ್ಮರಾಯನಿಗೆ ಜವ ಅಂತ ಕರೆಯುವುದುಂಟು. ಹಿನ್ನಲೆ ಸಂಗೀತವನ್ನು ವಿನೂತನ ರೀತಿಯಲ್ಲಿ ಮಾಡಲಾಗಿದೆ. ಮಾದ್ಯಮದ ಪ್ರೋತ್ಸಾಹ ಬೇಕೆಂದು ಅವಲತ್ತು ಮಾಡಿಕೊಂಡರು ಸಂಗೀತ ನಿರ್ದೇಶಕ ವಿನಯ್‍ಚಂದ್ರ. ಎಲ್ಲಾ ಕನ್ನಡ ಚಿತ್ರಗಳಂತೆ ಜವ ಇರುವುದಿಲ್ಲ. ಸಾಯಿಕುಮಾರ್ ಅವರೊಂದಿಗೆ ನಟಿಸುವ ಭಾಗ್ಯ ಸಿಗಲಿಲ್ಲವೆಂಬುದೇ ಬೇಸರವಾಗಿದೆ ಎಂಬುದು ಭವಾನಿಪ್ರಕಾಶ್ ನುಡಿ. ಸಣ್ಣ ಪಾತ್ರಗಳಲ್ಲಿ ಕಾಣ ಸಿಕೊಂಡಿರುವ ಅಕ್ಷತಾ, ಮದನ್ ನಾಲ್ಕು ಮಾತಿಗೆ ವಿರಾಮ ಹಾಕಿದರು. ನಿರ್ಮಾಪಕರುಗಳಾದ ವಚನ್‍ಶೆಟ್ಟಿ, ವಿರೇಂದ್ರವಿದ್ಯಾರ್ಥ್ ನಮ್ಮನ್ನು ಹರಸಿ,ಬೆಳಸಿ ಎಂದರು. ವಿತರಕ ರಮೇಶ್‍ಬಾಬು ಬಿಡುಗಡೆಯ ಜವಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ತಿಳಿಸಿದರು. ಎರಡು ನಿಮಿಷದ ತುಣುಕುಗಳು ದೊಡ್ಡ ಪರದೆ ಮೇಲೆ ಪ್ರದರ್ಶಗೊಂಡಿದ್ದು, ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿದೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್

ಹೊರಬಂದ ಜವ ಗೀತೆಗಳು
ಹಿರಿಯ ಪತ್ರಕರ್ತ ಸುರೇಶ್‍ಚಂದ್ರ ಹಿರಿಯಪುತ್ರ ವಿನಯ್‍ಚಂದ್ರ ಸಂಗೀತ ನಿರ್ದೇಶಕ, ಅಭಯ್‍ಚಂದ್ರ ಮೊದಲ ಬಾರಿ ಕತೆ ಬರೆದು ನಿರ್ದೇಶನ ಮಾಡಿರುವ ‘ಜವ’ ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮವು ಸೋಮವಾರ ತಾಜ್ ವಿವಾಂತದಲ್ಲಿ ಸರಳವಾಗಿ ನಡೆಯಿತು. ವಿನಯ್ ಚಂದ್ರ ಮಾತನಾಡುತ್ತಾ ಜನರಿಗೆ ಉತ್ತಮ ಚಿತ್ರಗಳನ್ನು ನೀಡುವ ಪ್ರಯುಕ್ತ ಅರ್ಬನ್ ಮೀಡಿಯಾ ಗ್ರೂಪ್ ಸಂಸ್ಥೆ ಹುಟ್ಟು ಹಾಕಲಾಗಿದ್ದು ಪ್ರಥಮ ಪ್ರಯತ್ನವಾಗಿ ‘ಜವ’ ಸಿನಿಮಾ ಮುಗಿಸಿದ್ದೇವೆ. ಮನೋಹರ್ ಹಾಗೂ ಎಸಿಗೌಡ ಸಾಹಿತ್ಯದ ನಾಲ್ಕು ಹಾಡುಗಳು ಇರಲಿವೆ ಎಂಬುದರ ವಿವರ ನೀಡಿದರು. ಮಿಸ್ಟ್ರಿ ಥ್ರಿಲ್ಲರ್ ಕತೆಗೆ ಪೂರಕವಾಗಿ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ ಎಂದು ಹೇಳಿದರು ಅಭಯ್‍ಚಂದ್ರ. ನಾಯಕನಾಗಿ ಅಭಿನಯಿಸಿರುವ ಸಾಯಿಕುಮಾರ್ ರಂಗಿತರಂಗ ಮಾಡುವಾಗ ನಾಯಕ-ನಿರ್ದೇಶಕರನ್ನು ರಾಮಲಕ್ಷಣ ಅಂತ ಕರೆಯುತ್ತಿದ್ದೆ. ಇದರಲ್ಲಿ ಇವರಿಬ್ಬರು ಲವ-ಕುಶ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸತನ ಸಿನಿಮಾಗಳು ಬರುತ್ತಿವೆ. ಅದರಲ್ಲೂ ಯುವಕರು ಪ್ರಯೋಗಾತ್ಮಕವಾಗಿ ಚಿತ್ರ ಮಾಡುತ್ತಿರುವುದು ಹೆಮ್ಮೆಯ ವಿಷಯ. ಎ.ಕೆ.47 ಕ್ಲೈಮಾಕ್ಸ್ ತೆಲುಗು ಸ್ಟಂಟ್‍ನ್ನು ಶಿವರಾಜ್‍ಕುಮಾರ್ ನನ್ನ ಪರವಾಗಿ ಮಾಡಿದ್ದರು ಅಂತ ನೆನಪು ಮಾಡಿಕೊಂಡರು.

ಸಿಡಿ ಬಿಡುಗಡೆ ಮಾಡಿದ ಶಿವರಾಜ್‍ಕುಮಾರ್ ಶೀರ್ಷಿಕೆ ವಿನೂತನವಾಗಿದೆ. ಇದನ್ನು ಕೇಳಿದ ತಕ್ಷಣ ನೋಡಬೇಕು ಅನಿಸುತ್ತದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು. ಸಾಹಿತಿ ವಿ.ಮನೋಹರ್ ಗೆಳಯ ಸುರೇಶ್‍ಚಂದ್ರರೊಂದಿಗೆ ಕೆಲಸ ಮಾಡಿದ ದಿನಗಳನ್ನು ಹೇಳಿಕೊಂಡರು. ನಾಯಕಿ ಅಕ್ಷತಾರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಕಾರ್ಯಕ್ರಮದಲ್ಲಿ ಅನೂಪ್‍ರೇವಣ್ಣ, ನಟಿ ಭಾವನ ಮುಂತಾದವರು ಹಾಜರಿದ್ದರು. ಉಷಾಉತ್ತಪ್ ಹಾಡಿರುವ ಟೈಟಲ್ ಗೀತೆ, ಮತ್ತೋಂದು ಹಾಡನ್ನು ತೋರಿಸಲಾಯಿತು. ಮುಂದೆ ಇದೇ ಸಂಸ್ಥೆಯಿಂದ ಶಿವರಾಜ್‍ಕುಮಾರ್ ನಾಯಕತ್ವದಲ್ಲಿ ‘ಬ್ಲಾಕ್ ಸಿ ನಂ.135’ ಚಿತ್ರ ಮಾಡುವುದಾಗಿ ತಂಡವು ಹೇಳಿಕೊಂಡಿತು.
-17/10/17

JAVA’ SHOOT TO BEGIN FROM NOV 21
J
ava, a mystery thriller and a suspense film will begin shoot from November 21. The film is being produced by Vachan Shetty and Veerendra V. The film is directed by Abhay Chandra and his brother Vinay Chandra will be scoring the music. The film stars Saikumar, Dileep Raj, Nagini Bharana, Akshata, Madan and Bhavani Prakash among others.

Director Abhay Chandra told reporters that the film Java means death. He said many people wondered about the title as it was his first film. But, the debutant director said the title will evoke curiosity among people to watch the movie. He said the movie is a two-year dream that is being realized today. The director said he was a fan of Saikumar and thought it was a pleasure to work with the actor.

Music composer Vinay Chandra said he had worked for six months to make music. The film has three songs out of which one of them will be used in the film and the remaining will be promotional songs. He said Usha Uthup has sung a song. Java will be shot in Chikkamagaluru and Bengaluru. Vinay Chandra said he along with his friends have floated a new audio company called UMG audio.

Nagini Bharana said after CBI Shankar she was donning the greasepaint for Java. She said she was actively involved in cinema all these years as a costume designer and other production related activities. She said she is glad to have got an opportunity to act in the movie after a long gap.

Producer Vachan Shetty has produced four Malayalam films and one Tamil film and Java is his first Kannada film.

Saikumar said he is playing the cop in the film. He said Rangitaranga gave him a change of image. He said he heard the story for Rangitaranga from the two brothers in the same hotel and now he heard the story of Java from another two brothers.

Soundarraj is the editor. Veena is handling the marketing. Nandakumar is the cameraman. The cameraman said he is using light and shadow play in the movie for which a camera is being imported from the US.

Senior journalist Sureshchandra said his sons Vinay and Abhay had grown up independently by pursuing their own interests. He said he has acted 20 films in the last 30 years as a journalist.
-18/11/16


SONG RECORDING POOJA HELD FOR NEW FILM ‘JAVA
S
enior journalist Sureshchandra Lingenahalli’s elder son Vinaychandra began song recording for the forthcoming Kannada film ‘Java’ which is incidentally being directed by his younger brother Abhayachandra.

Music director Vinaychandra told reporters that the film Java will have three songs that include a promo song and another one sung by Usha Uthup. He said a designer bike will be used in a song the first look of which will be released next month. Vinaychandra said Java is a mystery thriller.

Director Abhayachandra who has penned the story said the film is about an incident that happens in one night. There are five guys who are holed up in a house and what happens is what the story is all about, he said. Dilip Raj and Bhavani Prakash play two important roles and the remaining three of them come from theatre background. Bhavani Prakash said she will act in the movie provided the director Abhayachandra sings for the movie. Saikumar is playing the role of a catalyst.   

The film will be shot in Bengaluru and Chikkamagaluru. Shoot for the film will begin next month.

Java is produced by Vachan Shetty and Veerendra Vidyavrat. The film is produced jointly under the banners Innostorm Entertainment Group and Blue Aubrey Entertainment Pvt Ltd. Nanda Kumar will be the cameraman and Soundarrajan is the editor.
-13/09/16


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore