HOME
CINEMA NEWS
GALLERY
TV NEWS
REVIEWS
CONTACT US
ಐ ಲವ್ ಯು 50 ನಾಟ್‍ಔಟ್
ಹಿಟ್‍ಚಿತ್ರ ‘ಐ ಲವ್ ಯು’ 50ನೇ ದಿನದಕಾರ್ಯಕ್ರಮವು ಸಿಟಾಡೆಲ್ ಹೋಟೆಲ್‍ದಲ್ಲಿ ಸರಳವಾಗಿ ನಡೆಯಿತು.ಎಲ್ಲರೂ ಮಾತನಾಡಿದ ನಂತರಆರ್.ಚಂದ್ರು ಸಿನಿಮಾ ಹುಟ್ಟಿದ್ದು, ಯಶಸ್ಸುಕಂಡಿದ್ದು, ಎಲ್ಲವನ್ನು ನೆನಪು ಮಾಡಿಕೊಂಡರು. ನೂರನೇ ದಿವಸದಕಾರ್ಯಕ್ರಮವನ್ನುಅದ್ದೂರಿಯಾಗಿ ನಡೆಸಲುಚಿಂತನೆ ನಡೆಸಲಾಗಿದೆ.ತಮಿಳಿನಲ್ಲಿ ಶಿವ-ಅಜಿತ್ ಜೋಡಿಯಲ್ಲಿ ಸತತಐದು ಚಿತ್ರಗಳು ತೆರೆಕಂಡಿದೆ. ಅದರಂತೆಉಪ್ಪಿ ಸರ್‍ಜೊತಗೆಒಂದರ ನಂತರಚಿತ್ರ ಮಾಡುವ ಬಯಕೆಇದೆಎನ್ನುತ್ತಹೆಚ್ಚು ಸಮಯತೆಗೆದುಕೊಂಡರು.

ಇದಕ್ಕೂ ಮುನ್ನಉಪೇಂದ್ರ ಮಾತನಾಡಿ ಜನಗಳು ಲವ್ ಯುಅಂತ ಸಿನಿಮಾವನ್ನುಇಲ್ಲಿಯವರೆಗೂತೆಗೆದುಕೊಂಡು ಹೋಗಿದ್ದಾರೆ.ಆಗಿನ ಕಾಲದಲ್ಲಿ ಹೆಚ್ಚೆಂದರೆ 30 ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ 300 ಕೇಂದ್ರಗಳಲ್ಲಿ ತೆರೆಗೆ ಬರುತ್ತಿರುವುದರಿಂದಎರಡು ವಾರ ಪ್ರದರ್ಶನಕಂಡರೆ ಗಳಿಕೆ ಬರುತ್ತದೆ. ಅಂತಹುದರಲ್ಲಿಚಂದ್ರು ಪ್ರಯತ್ನಐವತ್ತನೆ ದಿನಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸದ್ಯ ಖಾಕಿ,ಖಾದಿ, ಕಾವಿ ಸಂತೋಷದಿಂದಇದ್ದಾರೆ. ಇದರಿಂದ ಪ್ರಜೆಗಳು ಹೇಗೆ ಚಪ್ಪಾಳೆ ಹೊಡಿತಾರೆ.ಅದಕ್ಕಾಗಿ ಪ್ರಜಾಕೀಯ ಪಕ್ಷ ಹುಟ್ಟಿ ಹಾಕಿದ್ದು, ರಾಜಕೀಯ ನನಗೆ ಗೊತ್ತಿಲ್ಲ. ಅಧಿಕಾರವನ್ನು ನಾಡಿನಿಂದ ಪ್ರಜೆಗಳಿಗೆ ಒಪ್ಪಿಸೋದು ನಮ್ಮ ಪಕ್ಷದಧ್ಯೇಯವಾಗಿದೆ.ಇದೆಲ್ಲಾತಮಾಷೆಗೆ ಹೇಳುತ್ತಿರುವುದು.ಒಂದುಚಿತ್ರವು ನಿರ್ಮಾಪಕರಿಗೆ ಲಾಭ ಬಂದರೆ ಸಾಲದು, ವಿತರಕ, ಪ್ರದರ್ಶಕರಿಗೆದುಡ್ಡುಬಂದು, ಪ್ರೇಕ್ಷಕ ಖುಷಿ ಪಟ್ಟರೆ ನಿಜವಾದ ಗೆಲುವು ಎಂದುಹೇಳಿದರು.

ಐಡಿಜಿಪಿ ಭಾಸ್ಕರರಾವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತುಜ್ಯೋತಿಷಆನಂದ್‍ಗುರೂಜಿತಂಡದ ಶ್ರಮವನ್ನು ಪ್ರಶಂಸೆ ಮಾಡಿ, ಕಲಾವಿದರು, ತಂತ್ರಜ್ಘರು ಮತ್ತು ಮಾದ್ಯಮದವರಿಗೆ ಫಲಕಗಳನ್ನು ವಿತರಣೆ ಮಾಡಿದರು. ಸೋನುಗೌಡ, ಸಂಗೀತ ನಿರ್ದೇಶಕರಾದಗುರುಕಿರಣ್, ಡಾ.ಕಿರಣ್‍ತೋಟಂಬೈಲು, ಲಹರಿವೇಲು, ವಿತರಕರುಗಳಾದ ಮೋಹನ್‍ದಾಸ್‍ಪೈ, ಮೋಹನ್ ಮುಂತಾದವರುಉಪಸ್ತಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
1/08/19ಐ ಲವ್ ಯು ಸಿಲ್ವರ್ ಜುಬ್ಲಿಡೇಸ್
ಬಾಕ್ಸ್‍ಆಫೀಸ್‍ಚಿಂದೆ ಎಂಬ ಫ್ಲೆಕ್ಸ್‘ಐ ಲವ್ ಯು’ ಚಿತ್ರದ ಪೋಸ್ಟರ್‍ದಲ್ಲಿಕಾಣುತ್ತಿತ್ತು.ಇಪ್ಪತ್ತೈದು ದಿನಗಳನ್ನು ಪೂರೈಸುತ್ತಿರುವುದರಿಂದ ನಿರ್ಮಾಪಕ,ನಿರ್ದೇಶಕಆರ್.ಚಂದ್ರು ಸಣ್ಣದೊಂದು ಸಂತೋಷಕೂಟವನ್ನು ಹಮ್ಮಿಕೊಂಡಿದ್ದರು.

ಚಂದ್ರು ಮಾತನಾಡುತ್ತಾಕನಕ ಮಾಡಿದಾಗಲೂಅದೇಊರ ಪ್ರೇಮಕತೆಎಂದುಕುಟುಕಿದ್ದರು.ಅಪ್‍ಡೇಟ್‍ಆಗಿಲ್ಲವೆಂದುಹೇಳುತ್ತಿದ್ದು, ನನ್ನ ಕಿವಿಗೂ ಬಂತು..ಬೇಸತ್ತು ಈ ಸಲ ಏನಾದರೂ ಹೊಸದೊಂದುಕತೆ ಮಾಡಲು 1000 ಜನರ ಸಂದರ್ಶನ ನಡೆಸಲಾಗಿತ್ತು.ಒಮ್ಮೆ ಆಪ್ತ ಗೆಳಯನಿಗೆ ಒಂದು ಲೈನ್ ಹೇಳಿದಾಗ ಇದೇ ಸರಿ ಮುಂದುವರೆಸುಎಂದುಧೈರ್ಯತುಂಬಿದರು.ಅಂದೇಉಪ್ಪಿ ಸರ್‍ಗೆ ಫೋನ್ ಮಾಡಿದಾಗ ಆಕಡೆಯಿಂದಲೂ ಹಸಿರು ನಿಶಾನೆ ಸಿಕ್ಕಿತು. ಇಂದುಜನಚಿತ್ರವನ್ನು ಮೆಚ್ಚಿಕೊಂಡು ಲವ್ ಯುಎಂದಿದ್ದಾರೆ.ನಿರ್ದೇಶಕನಾಗಿ ಗೆಲುವು ಕಂಡರೂ, ನಿರ್ಮಾಪಕನಾಗಿ ನೋವು ಇತ್ತು. ವಿತರಕರು ಮಾರ್ಕೆಟ್‍ಇದೆಅಂತ ಹಣಕೊಡುತ್ತಲೇಇದ್ದಾರೆ. ಯಶಸ್ಸಿನಿಂದ ಜವಬ್ದಾರಿ ಜಾಸ್ತಿ ಆಗಿದೆ.ಈಗಾಗಲೇ ಲಾಭಕಂಡಿದ್ದೇನೆ. ವಿತರಕರಾದದಯಾನಂದಪೈ, ಧೀರಜ್‍ಅಂತಹವರುಚಿತ್ರರಂಗದಲ್ಲಿಇದ್ದರೆ ನಿರ್ಮಾಪಕರು ನಿರಾಳರಾಗುತ್ತಾರೆ.ಯಾವುದೇಒಂದುಚಿತ್ರವುಗೆಲ್ಲಬೇಕಾದರೆಅದರಲ್ಲಿತಂಡದ ಶ್ರಮಇರುತ್ತದೆಂದುಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮಾತನಾಡಿದಉಪೇಂದ್ರಇಂತಹ ಸಂತಸದಕ್ಷಣಇಡೀಉದ್ಯಮಕ್ಕೆ ಬರಬೇಕು.ಹಿಟ್‍ಅಂದತಕ್ಷಣ ನಿರ್ಮಾಪಕ, ವಿತರಕ ಮತ್ತು ಹಂಚಿಕೆದಾರರಿಗೆ ಮಾತ್ರ ಹೋಗಬಾರದು.ಚಿತ್ರಮಂದಿರದ ಬಳಿ ಪಾನಿಪುರಿ ಮಾರುವವರು, ದ್ವಿಚಕ್ರ ಪಾರ್ಕಿಂಗ್‍ಅವರಿಗೆದುಡ್ಡು ಬಂದರೆ ಆಗ ಅದುಯಶಸ್ಸುಎನ್ನಬಹುದು. ವಿತರಕರು ಸಂಪೂರ್ಣ ಗಳಿಕೆ ವಿವರವನ್ನುಕೊಡುತ್ತಲೆಇದ್ದು, ಈ ಕೇಂದ್ರದಿಂದ ಇಷ್ಟು ಬಂದಿದೆ, ಅಂತ ಹೇಳುತ್ತಲೇ ಇದ್ದರು. ಸಿನಿಮಾವು ಯಶಸ್ಸಿಗೂ ಮೀರಿ ಮೇಲಕ್ಕೆ ಹೋಗುತ್ತಿದೆ.ಚಂದ್ರು ಸಿನಿಮಾ ಬಿಟ್ಟು ಬೇರೆನೂಯೋಚಿಸುವುದಿಲ್ಲ ಅಂತಹವರಿಗೆ ಲಾಭಬಂದರೆ ಮುಂದೆಇದಕ್ಕಿಂತಲೂಒಳ್ಳೆ ಚಿತ್ರ ಮಾಡಬಹುದು. ಅವರುಇನ್ನಷ್ಟುಅಭಿರುಚಿಯ ಚಿತ್ರಗಳನ್ನು ಜನರಿಗೆಕೊಡಲಿ ಎಂದರು.
ಸಂಗೀತಒದಗಿಸಲು ಅವಕಾಶ ನೀಡುತ್ತಾ, ಒಂದು ವರ್ಷ ಏನು ಮಾತನಾಡೋಲ್ಲ. ನಂತರಅದೇ ಮಾತನಾಡುತ್ತೇಅಂತಚಂದ್ರು ಹೇಳಿದ್ದು ಸಾಬಿತಾಗಿದೆ. ಸಕ್ಸಸ್‍ಕಂಡವರನ್ನು ನೋಡುತ್ತಾಇದ್ದವನಿಗೆ, ಇಂದುಅವರೊಂದಿಗೆ ಬೆರೆತಿದ್ದು ಸುಕೃತಎನ್ನಬಹುದುಅಂತಾರೆಡಾ.ಕಿರಣ್‍ತೋಟಂಬೈಲು.ಮೂರನೇ ವಾರದಲ್ಲಿ 325 ಕೇಂದ್ರಗಳಲ್ಲಿ ಪ್ರದರ್ಶನಕಾಣುತ್ತಿರುವುದು ಸುಲಭದ ಮಾತಲ್ಲಎಂಬುದು ಹಿನ್ನಲೆ ಶಬ್ದ ಒದಗಿಸಿರುವ ಗುರುಕಿರಣ್‍ಖುಷಿಯ ಮಾತು.

ವಿತರಕರಾದ ಮೋಹನ್‍ದಾಸ್‍ಪೈ, ಪುತ್ರ ಧೀರಜ್‍ಕಲೆಕ್ಷನ್‍ಜೋರಾಗಿದೆ. ಗಲ್ಲಾ ಪಟ್ಟಿಗೆ ತುಂಬಿಸಿಕೊಳ್ಳುತ್ತಾ ಇದ್ದೇವೆ. ಚಂದ್ರುಅವರಿಗೆ ಹತ್ತು ಸಿನಿಮಾ ಮಾಡುವಷ್ಟು ಹಣ ಬರುತ್ತದೆಂದು ವಿವರ ನೀಡಲಿಲ್ಲ. ಉಪೇಂದ್ರಅಣ್ಣ ಮಗ ನಟ ನಿರಂಜನ್, ಸಹನಟಿ ವಿದ್ಯಾ ಖುಷಿ ಹಂಚಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/06/19ಉಪ್ಪಿಗೆ ಖುಷಿ ಕೊಟ್ಟ ಐಲವ್ ಯು
ಅದ್ದೂರಿ ‘ಐಲವ್ ಯು’ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಪ್ರೀತಿಯಿಂದ ಲವ್ ಯುಅಂತಅಪ್ಪಿಕೊಂಡಿದ್ದಾರೆ. ಶುಕ್ರವಾರಕನ್ನಡ,ತೆಲುಗು ಭಾಷೆಯಲ್ಲಿತೆರೆಕಂಡು ಮೊದಲ ದಿನವೇ ಚಿತ್ರಮಂದಿರದಲ್ಲಿಹೌಸ್‍ಫುಲ್‍ಬೋರ್ಡ್ ಹಾಕಿದ್ದಾರೆ. ಇದರಖುಷಿಯನ್ನು ಹಂಚಿಕೊಳ್ಳಲು ನಿರ್ಮಾಪಕರು ಸಂತೋಷಕೂಟಏರ್ಪಾಟು ಮಾಡಿದ್ದರು.

ನನ್ನಜೀವನದಲ್ಲಿಇದೇ ಪ್ರಥಮ ಗೆಲುವು.ಇನ್ನು ಮುಂದೆ ಬರೋದುಜಾಕ್‍ಪಾಟ್.ಖರೀದಿ ಮಾಡಿದ ವಿತರಕರೆಲ್ಲರುಖುಷಿಯಾಗಿದ್ದಾರೆ. ಉಪ್ಪಿ ಸರ್ ಬೇರೆಚಿತ್ರದಲ್ಲಿ ಬ್ಯುಸಿ ಇರುವಕಾರಣತುರ್ತಾಗಿಇಂದೇ ಸಕ್ಸಸ್ ಮೀಟ್ ಮಾಡಬೇಕಾಯಿತು.ಸರ್‍ಕತೆ ಕೇಳಿ ಅಂದೇ ಮತ್ತೋಂದುಗೀತಾಂಜಲಿ ಆಗುತ್ತದೆಂದು ಹೇಳಿದ್ದು ನಿಜವಾಗಿದೆ.ಇಂಥದ್ದೊಂದು ಯಶಸ್ಸಿಗೆ ಕಾರಣರಾದ ಮಾದ್ಯಮದವರಿಗೆ ಧನ್ಯವಾದಗಳು ಎಂಬುದು ನಿರ್ಮಾಪಕ, ನಿರ್ದೇಶಕಆರ್.ಚಂದ್ರು ಮಾತಾಗಿತ್ತು.

ಎಲ್ಲರ ಶ್ರಮದಿಂದಅದ್ಬುತ ಸಿನಿಮಾಆಗಿದೆ.ಬೇರೆಯವರಚಿತ್ರ ನೋಡಿದಂತೆಆಗಿತ್ತು.ಕಾಲೇಜುದೃಶ್ಯ ಬಂದಾಗಯುವಕ, ಕುಟುಂಬ ಸನ್ನಿವೇಶದಲ್ಲಿ ಹಳಬನಾಗಿ ಕಾಣಿಸಿಕೊಂಡಿದ್ದೇನೆ. ಯುವಕರು, ಹೆಣ್ಣು ಮಕ್ಕಳಿಗೆ ಇಷ್ಟವಾಗಿದ್ದರಿಂದ ಹೆಚ್ಚು ದಿನ ಪ್ರದರ್ಶನವಾಗುತ್ತದೆ. ಈ ದಿನ ಎಲ್ಲಾ ನಿರ್ಮಾಪಕರಿಗೆ ಬರಲಿ ಎಂಬ ದೈವಿಕ ಭಾವನೆಇದೆ.ಯಶಸ್ಸುಎಂಬುದುಚಿದಂಬರರಹಸ್ಯವೆಂದುಅಣ್ಣಾವ್ರು ಹೇಳಿದ್ದರು.ನಂತರ ಎ ಚಿತ್ರದ ನೆನಪು ಮಾಡಿಕೊಂಡುಅದೇರೀತಿಆಗುತ್ತದೆಂದುಉಪೇಂದ್ರಕೇಕ್ ಕತ್ತರಿಸಿ ಎಲ್ಲರಿಗೂ ನೀಡಿದರು. ಸಂತೋಷಕೂಟದಲ್ಲಿ ಹಿತೈಷಿ ಕೆ.ಪಿ.ಶ್ರೀಕಾಂತ್, ಹಂಚಿಕೆದಾರರಾದ ಮೋಹನ್, ಸಂಗೀತ ನಿರ್ದೇಶಕಡಾ.ಕಿರಣ್‍ತೋಟಂಬೈಲು, ಛಾಯಾಗ್ರಾಹಕ ಸುಜ್ಘಾನ್‍ಮೂರ್ತಿ ಉಪಸ್ತಿತರಿದ್ದು ಸಂತಸವನ್ನು ಹಂಚಿಕೊಂಡರು. ಇದಕ್ಕೂ ಮುನ್ನವಿತರಕಮೋಹನ್‍ದಾಸ್‍ಪೈಹೇಳುವಂತೆ ತಮಿಳು ಸಿನಿಮಾಗಳು ಪ್ರದರ್ಶನವಾಗುವಚಿತ್ರಮಂದಿರದಲ್ಲಿ ಗಳಿಕೆ ಚೆನ್ನಾಗಿ ಬರುತ್ತ್ತಿದೆ. ಎಲ್ಲಾ ಕಡೆಗಳಿಂದ ಫೋನ್ ಮಾಡಿ ಹೆಚ್ಚಿನ ಷೋ ನೀಡಲು ಬೇಡಿಕೆ ಬರುತ್ತಿದೆ.ಸೂಪರ್ ಸ್ಟಾರ್‍ಉಪೇಂದ್ರ ಸೂಪರ್ ಹಿಟ್‍ಕೊಟ್ಟಿದ್ದಾರೆ.ಚಂದ್ರು ಲಾಟರಿ ಹೊಡೆದ್ರುಎಂದರು.
ಸಿನಿ ಸರ್ಕಲ್.ಇನ್ ನ್ಯೂಸ್
15/06/19ಪ್ರೀತಿಗಿಂತಜೀವನ ಮುಖ್ಯ
ನೀವು ಕೆಟ್ಟ ಹುಡುಗರಿಂದಕಾಪಾಡಿದ್ದೀರಾಥ್ಯಾಂಕ್ಸ್‍ಎಂದು ಸಂತೋಷ್‍ನಾರಾಯಣ್‍ಗೆ ಹೇಳುತ್ತಾಳೆ. ಮೊದಲು ಪ್ರೀತಿ ಹಿಂದೆಓಡುವ ಬದಲು, ಜೀವನದ ಹಿಂದೆಓಡು.ಉದ್ದಾರವಾಗುತ್ತೀಯಾಎಂದು ಆಕೆಗೆ ಹೇಳುವಲ್ಲಿಗೆ ‘ಐ ಲವ್ ಯು’ ಚಿತ್ರದಕತೆಯು ಬಿಚ್ಚಿಕೊಳ್ಳುತ್ತದೆ.ಶೀರ್ಷಿಕೆಯಂತೆ ಇಡೀ ಸಿನಿಮಾ ಪ್ರೀತಿ, ಪ್ರೇಮಎಂದು ಹೇಳುತ್ತಾ, ಅದರಾಚೆಗೂಒಂದು ಬದುಕು, ಗುರಿಎನ್ನುವುದುಇದೇಎಂದು ಹೇಳಲಾಗಿದೆ.ಕಥಾನಾಯಕ ಸಂತೋಷ್ ಸೀನಿಯರ್ ವಿದ್ಯಾರ್ಥಿ. ಕಾಲೇಜಿನಲ್ಲಿ ಗೆಳಯರೊಂದಿಗೆ ತುಂಟಾಟ ಮಾಡುತ್ತಾಜೀವನದ ಬೆಲೆ ಗೊತ್ತಿಲ್ಲದೆಇರುತ್ತಾನೆ. ಅಲ್ಲಿಗೆಧಾರ್ಮಿಕಎನ್ನುವ ಹುಡುಗಿಲವ್ ಬಗ್ಗೆ ಥಿಸೀಸ್ ಮಾಡಲು ಬರುತ್ತಾಳೆ.ಈತನೊಂದಿಗೆ ಪರಿಚಯವಾಗಿ, ಈಕೆಗೆ ಸಹಾಯ ಮಾಡುತ್ತಾ ಪ್ರೀತಿಎಂದರೆಏನೆಂದು ಪ್ರಾಕ್ಟಿಕಲ್ ಆಗಿ ಹಲವರು ಲವ್ ಮಾಡುವುದನ್ನುತೋರಿಸುತ್ತಾನೆ. ಮುಂದೆ ಇವಳ ಮೇಲೆ ಮೋಹಗೊಂಡು ಹೇಳಿದಾಗ, ಅವಳು ಮಾರುದ್ದಡೈಲಾಗ್ ಹೊಡೆದು ತಿರಸ್ಕರಿಸುತ್ತಾಳೆ. ಖಿನ್ನತೆಗೆ ಒಳಗಾಗಿ ಮುಂದೇಏನಾಗುತ್ತಾನೆ.ಕೊನೆಯಲ್ಲಿ ಇವನ ಪ್ರೀತಿದಕ್ಕುತ್ತಾದಾ?ಕ್ಲೈಮಾಕ್ಸ್‍ದಲ್ಲಿಒಂದುಅರ್ಥಪೂರ್ಣದೃಶ್ಯ ಬಂದು ಕೊನೆಗೊಳ್ಳುತ್ತದೆ.ಅದುಏನೆಂದುಚಿತ್ರ ನೋಡಿದರೆ ತಿಳಿಯುತ್ತದೆ.

ಎರಡು ವರ್ಷಗಳ ನಂತರಉಪೇಂದ್ರಚಿತ್ರವು ಬಿಡುಗಡೆಯಾಗಿರುವಕಾರಣ ಅಭಿಮಾನಿಗಳು ಖುಷಿ ಪಡುವಂತಹಡ್ಯಾನ್ಸ್,ಫೈಟು, ಹಾಡುಗಳು ಇರಲಿದೆ. ವಿದ್ಯಾರ್ಥಿ ಮತ್ತು ಶ್ರೀಮಂತ ಉದ್ಯಮಿಯಾಗಿಅವರಅಭಿನಯಚಿತ್ರಕ್ಕೆ ಮೆರುಗುತಂದಿದೆ. ಧಾರ್ಮಿಕಳಾಗಿ ರಚಿತಾರಾಂ ನಾಯಕಿಯಾಗಿಅಭಿನಯದಲ್ಲಿ ಸೈ ಅನಿಸಿಕೊಂಡಿದ್ದಾರೆ. ಒಂದುರಸಭರಿತ ಹಾಡಿನಲ್ಲಿಚೆಂದಕಾಣಿಸುತ್ತಾರೆ. ಹಾಗೆ ಬಂದು ಹೋಗುವ ಸೋನುಗೌಡ ನೆನಪಿನಲ್ಲಿ ಉಳಿಯುತ್ತಾರೆ. ನಿರ್ದೇಶಕ,ನಿರ್ಮಾಪಕಆರ್.ಚಂದ್ರುಅದ್ಬುತಕತೆಗೆತಕ್ಕಂತೆ ಶ್ರೀಮಂತವಾಗಿ ದೃಶ್ಯಗಳನ್ನು ತೆರೆ ಮೇಲೆ ತೋರಿಸಿರುವುದು ಇವರ ಶ್ರಮ ಸಾರ್ಥಕವಾಗಿದೆ. ಇದಕ್ಕೆ ಪೂರಕವಾಗಿ ಸಂಗೀತಡಾ.ಕಿರಣ್‍ತೋಟಂಬೈಲು, ಹಿನ್ನಲೆ ಶಬ್ದ ಗುರುಕಿರಣ್, ಮತ್ತುಛಾಯಾಗ್ರಹಣ ಸುಜ್ಘಾನ್‍ಮೂರ್ತಿ ವರ್ಕ್‍ಔಟ್‍ಆಗಿದೆ. ಮೊದಲರ್ದದಲ್ಲಿ ಮಿತಿಯಿಲ್ಲದ ಮಾತುಗಳಲ್ಲಿ ತೋಯುವ ಪ್ರೇಕ್ಷಕ, ವಿರಾಮದ ನಂತರ ಮನಸ್ಸನ್ನುಕದಡುವ ಸನ್ನಿವೇಶಗಳು ಬರುವುದು ಪ್ಲಸ್ ಪಾಯಿಂಟ್‍ಆಗಿದೆ.ನೀವು ಯಾರನ್ನಾದರೂ ಪ್ರೀತಿಸುತಿದ್ದರೆ, ಗೌರವಿಸುತ್ತಿದ್ದರೆ ಮಿಸ್ ಮಾಡದೆಚಿತ್ರ ನೋಡಿಎಂದು ಹೇಳಬಹುದು.
ಸಿನಿ ಸರ್ಕಲ್.ಇನ ವಿಮರ್ಶೆ
***
14/06/19

ಉಪ್ಪಿ ನಿರ್ರ್ದೇಶನದಲ್ಲಿಕನ್ನಡ-ತೆಲುಗುಚಿತ್ರ
ಶನಿವಾರಆಂದ್ರಪ್ರದೇಶದಸ ವಿಶಾಖಪಟ್ಟಣದ ವರುಣ್ ಬೀಚ್ ಪಕ್ಕದಲ್ಲಿ ‘ಐ ಲವ್ ಯು’ ಟ್ರೈಲರ್ ಬಿಡುಗಡೆಗೊಂಡಿತು. ನಿರ್ಮಾಪಕ ಮತ್ತು ನಿರ್ದೇಶಕಆರ್.ಚಂದ್ರು ಮಾತನಾಡಿ ಈ ಹಿಂದೆಇಲ್ಲಿನ ಶಾಸಕರ ಮಗನಿಗೆ ಸಿನಿಮಾ ಮಾಡಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ.ಪ್ರೀತಿಯನ್ನುಯಾವರೀತಿ ಮಾಡಬೇಕುಎಂದು ಇಂದಿನ ಯುವಪೀಳಿಗೆಗೆ ಸಂದೇಶದ ಮೂಲಕ ಹೇಳಲಾಗಿದೆ.ಕ್ಲೈಮಾಕ್ಸ್ ನೋಡಿಚಿತ್ರಮಂದಿರದಿಂದ ಹೊರಬಂದವರು ಮೊಬೈಲ್ ಮೂಲಕ ತಮಗೆಇಷ್ಟವಾದವರಿಗೆ ಐಲವ್‍ಯುಹೇಳುವುದು ಖಚಿತ.ಇದೇ ತಿಂಗಳು ಹದಿನಾಲ್ಕರಂದುಎರಡು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ನಿಮ್ಮನ್ನು ಭೇಟಿ ಮಾಡಲುಇಲ್ಲಿಗೆ ಬರಬೇಕಾಯಿತು.ಉಪ್ಪಿ ಸರ್‍ಅವರೊಂದಿಗೆ ಕೆಲಸ ಮಾಡುವುದು ಸುಲಭ.ಇಂತಹ ನಟರೊಂದಿಗೆ ಪ್ರತಿ ವರ್ಷಚಿತ್ರ ಮಾಡುವ ಬಯಕೆಇದೆ. ಅವರಪಾತ್ರವುಎ ಚಿತ್ರದಂತೆ,ಚಾರ್ಮಿನಾರ್‍ಕತೆಎನ್ನಬಹುದು.ನಾಯಕಿರಚಿತಾರಾಮ್‍ಎರ್ರಾಟಿಕ್‍ದೃಶ್ಯವಿದ್ದರೂ ಅಶ್ಲೀಲತೆ ಇಲ್ಲವೆಂದು ಹೇಳಿದರು.

ಟಾಲಿವುಡ್‍ಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸಿರುವುದು ಖುಷಿ ತಂದಿದೆಅಂತ ತೆಲುಗು,ತಮಿಳು,ಇಂಗ್ಲೀಷ್‍ನ್ನು ಮಿಶ್ರಣ ಮಾಡಿದ ಸೋನುಗೌಡ ಹೆಚ್ಚಿನ ವಿವರಕ್ಕೆಚಿತ್ರನೋಡಿಎಂದುಜಾರಿಕೊಂಡರು. ಸಂಗೀತ ನಿರ್ದೇಶಕಡಾ.ಕಿರಣ್‍ತೋಟಂಬೈಲುಹಾಡುಗಳು ಚೆನ್ನಾಗಿ ಬಂದಿದೆಎಂದರು.

ಸನ್‍ಆಫ್ ಸತ್ಯಮೂರ್ತಿ ನಂತರಇದರಲ್ಲಿ ನಟಿಸಲಾಗಿದೆ.ಕನ್ನಡ-ತೆಲುಗು ಭಾಷೆಸಹೋದರರುಇದ್ದಂತೆ. ಮುಂದೆಎರಡು ಭಾಷೆಯಲ್ಲಿ ನಿರ್ದೇಶನ ಮಾಡಲಿದ್ದೇನೆ. ಅದರ ಸಿದ್ದತೆಗಳು ನಡೆಯುತ್ತಿದೆಎಂದು ಅಭಿಮಾನಿಗಳ ಬೇಡಿಕೆಗೆಡೈಲಾಗ್, ಡ್ಯಾನ್ಸ್ ಮಾಡಿದರು. ರಂಗಸ್ಥಳಂ, ಸರೈನೋಡು ಬಳಿಕ ಇದೇಜಾಗದಲ್ಲಿ ಹಲವು ನಿರ್ಬಂಧಗಳ ನಡುವೆಯೂ,ಚಿತ್ರತಂಡವುಅನುಮತಿ ಪಡೆದುಕೊಂಡುಜನರ ಮಧ್ಯೆಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು. ನಾಯಕಿರಚಿತಾರಾಮ್ ತುಣುಕುಗಳಲ್ಲಿ ಕಾಣಿಸಿಕೊಂಡರು.ವೈಜಾಗ್ ಬಿಸಿಲಿಗೆ ಬೆಂಗಳೂರಿನ ಮಾದ್ಯಮದವರು ತತ್ತರಿಸಿ ಹೋಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/06/19


ಜೂನ್ ಹದಿನಾಲ್ಕರಂದು ಐ ಲವ್ ಯು
ಸುದ್ದಿ ಮಾಡುತ್ತಿರುವ ‘ಐ ಲವ್ ಯು’ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿ ಹೆಸರು ಮಾಡಿದೆ. ಎರಡನೆ ಟ್ರೈಲರ್‍ನ್ನು ಸುದೀಪ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡುತ್ತಾ ತುಣುಕುಗಳು ತುಂಬಾ ಶ್ರೀಮಂತವಾಗಿದೆ. ಮಧ್ಯದಲ್ಲೊಂದು ಸೋನುಗೌಡ ಪಾತ್ರವು ಎಂಟ್ರಿಯಾಗಿ ಕುತೂಹಲ ಮೂಡಿಸಿದೆ. ಉಪೇಂದ್ರ ಕುಟುಂಬ ನಂತರ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಯಾರೇ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡುತ್ತಾ ಖುಷಿ ಪಡುತ್ತಿದ್ದೆ. ಇದನ್ನು ನೋಡಿದಾಗ ನಾನು ಮುಂದೆ ಕುಣಿಯಲೇ ಬೇಕಾಗಿದೆ. ಇತರೆ ಕಲಾವಿದರಿಗೆ ಉಪ್ಪಿರವರು ಪ್ರೇರಣೆಯಾಗಿದ್ದಾರೆ. ನಾನೇನು ಮಾಡಿದ್ದೇನೆ ಎನ್ನುವುದು ಅವರನ್ನು ನೋಡಿ ಮಾಡಿರೋದು, ನಾವುಗಳು ಬೇರೆ ಭಾಷೆಯಲ್ಲಿ ಮಾಡಿರುವುದನ್ನು ಅವರು ಅಂದೇ ಮಾಡಿ ತೋರಿಸಿದ್ದಾರೆ. ಎಲ್ಲರೂ ರಾಜಕೀಯಕ್ಕೆ ಬರುತ್ತೇನೆಂದು ಹೇಳುತ್ತಾರೆ. ಇವರು ಮಾತ್ರ ಇದರಲ್ಲಿ ಧುಮುಕಿದ್ದಾರೆ. ತಾವು ನಿರ್ದೇಶನ ನಿಲ್ಲಿಸದೆ ಮುಂದುವರೆಸಿ, ಅದರಲ್ಲಿ ನೀವೇ ನಟಿಸಬೇಕು. ಚಂದ್ರು, ಪ್ರೇಮ್ ಸೇರಿದಂತೆ ಕಮರ್ಷಿಯಲ್ ನಿರ್ದೇಶಕರು ಉದ್ಯಮಕ್ಕೆ ಅವಶ್ಯಕವಾಗಿದೆ ಎಂದರು.

ಇಪ್ಪತ್ತೈದು ವರ್ಷಗಳಿಂದಲೂ ನಮ್ಮಿಬ್ಬರ ಒದ್ದಾಟ, ಅವತ್ತಿನ ಪರಿಚಯ ಇಲ್ಲಿಯವರೆಗೂ ಬಂದಿದೆ. ಅಂದಿಗಿಂತ ಫೈರ್ ಇಂದು ಜಾಸ್ತಿ ಅವರಲ್ಲಿ ತುಂಬಿದೆ. ಹಿಂದಿ, ತೆಲುಗು, ತಮಿಳು ಸೇರಿದಂತೆ ಅವರು ಉತ್ತುಂಗಕ್ಕೆ ಏರಿದ್ದಾರೆ. ಚಂದ್ರು ಅವರಿಗೆ ಚಿತ್ರವು ಲಾಭ ತಂದುಕೊಟ್ಟು, ಇತರೆ ಪ್ರಾಂತ್ಯಗಳಲ್ಲಿ ಹೆಸರು ಮಾಡಲಿ. ರಚಿತಾರಾಮ್ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಮಾಡೋದಲ್ಲವಾಗಿದ್ದರೂ, ಸಿನಿಮಾಸಲುವಾಗಿ ಗ್ಲಾಮರ್, ಹಾಟ್ ಆಗಿ ನಟಿಸಿ ಪಡ್ಡೆ ಹುಡುಗರನ್ನು ಬೋಲ್ಡ್ ಮಾಡಿದ್ದಾರೆಂದು ಅವರ ಕಡೆ ನೋಡುತ್ತಾ ಮೈಕ್‍ನ್ನು ಉಪೇಂದ್ರ ವರ್ಗಾಯಿಸಿದರು. ಚಿತ್ರಮಂದಿರದಿಂದ ಹೊರಬಂದವರು ತಮಗೆ ಇಷ್ಟವಾದವರನ್ನು ಸಂಪರ್ಕಿಸಿ ಐ ಲವ್ ಯು ಎಂದು ಹೇಳುವುದು ಖಚಿತ. ಎಂಟರಂದು ವಿಶಾಖಪಟ್ಟಣದ ಬೀಚ್ ಪಕ್ಕದಲ್ಲಿ ತೆಲುಗು ಆಡಿಯೋ ಬಿಡುಗಡೆ ಮಾಡುವ ಕಾರ್ಯಕ್ರಮವಿದೆ. ಅಲ್ಲಿಗೆ ಇಲ್ಲಿನ ಮಾದ್ಯಮದವರನ್ನು ಕರೆಸಿಕೊಳ್ಳಲು ಯೋಜನೆ ಹಾಕಲಾಗಿದೆ. ಎಲ್ಲರ ಸಹಕಾರ ಬೇಕೆಂದು ಕತೆ,ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಅವಲತ್ತು ಮಾಡಿಕೊಂಡರು.

ಶೂಟ್ ಆಗುವಾಗ ಇಂತಹ ದೃಶ್ಯದಲ್ಲಿ ಭಾಗಿಯಾಗಿದ್ದೇನೆಂದು ಫೀಲ್ ಆಗಲಿಲ್ಲ. ತೆರೆ ಮೇಲೆ ನೋಡಿದಾಗ ನಾನೇನಾ ಅನಿಸುವಷ್ಟು ಪ್ರಶ್ನೆ ಮೂಡಿಬಂತು. ಮೊದಲಬಾರಿ ಕತೆಗೋಸ್ಕರ ಬೋಲ್ಡ್‍ಆಗಿ ನಟಿಸಿದ್ದೇನೆ. ಚಿನ್ನಿ ಮಾಸ್ಟರ್ ಚೆನ್ನಾಗಿ ಹೆಜ್ಜೆ ಹಾಕಿಸಿದ್ದಾರೆ. ಮುಂದೆ ಅವರೇ ಇದ್ದರೆ ಇಂತಹ ಹಾಡು ಇದೆಯಾ ಅಂತ ಕೇಳುತ್ತೇನೆಂದು ರಚಿತಾರಾಮ್ ಹೇಳಿದರು. ಸಂಗೀತ ನಿರ್ದೇಶಕ ಡಾ.ಕಿರಣ್‍ತೋಟಂಬೈಲು, ಛಾಯಾಗ್ರಾಹಕ ಸುಜ್ಘಾನ್‍ಮೂರ್ತಿ, ಲಹರಿವೇಲು, ಗುರುಕಿರಣ್, ಸಿನಿಪಂಡಿತರು ಮತ್ತು ಆಂದ್ರ,ತೆಲಂಗಾಣ ಪತ್ರಕರ್ತರು ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/05/19

ಏಪ್ರಿಲ್ 12ಕ್ಕೆ ಐ ಲವ್ ಯು ?
ಫೆಬ್ರವರಿ 14ರಂದು ‘ಐ ಲವ್ ಯು’ ತೆರೆಗೆ ಬರುತ್ತದೆಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಸದರಿ ದಿನಾಂಕದಂದು ಬಾರದೆ ಇರುವುದಕ್ಕೆ ನಿರ್ಮಾಪಕ,ನಿರ್ದೇಶಕ ಆರ್.ಚಂದ್ರು ಕಾರಣಗಳನ್ನು ಹೇಳುತ್ತಾ ಹೋದರು. ಎರಡು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಕಾರಣ ಉಪೇಂದ್ರ ಆತುರ ಇಲ್ಲದೆ ಕೂಲ್ ಆಗಿ ಬಿಡುಗಡೆ ಮಾಡಲು ಸಲಹೆ ನೀಡಿದ್ದರು. ಟಾಲಿವುಡ್‍ನಲ್ಲಿ ಬಹುದೊಡ್ಡ ವಿತರಣೆ ಸಂಸ್ಥೆ ಶ್ರೇಯಸ್ ಮೀಡಿಯಾದವರು ಸುಮಾರು 250 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಥಮ ಹಂತವಾಗಿ ಇದೇ 11ರಂದು ಆ ಭಾಗದಲ್ಲಿ ದೊಡ್ಡದೊಂದು ಕಾರ್ಯಕ್ರಮ ನಡೆಯಲಿದೆ. ಸದ್ಯ ಸಿಜಿ ಕೆಲಸಗಳು ನಡೆಯುತ್ತಿದೆ. ಇಲ್ಲಿನ ವಿತರಕರು ಬೇಗನೆ ಸಿನಿಮಾ ಕೊಡಿ ನಾವು ಸಿದ್ದರಿದ್ದವೇರೆಂದು ಬೇಡಿಕೆ ಇಟ್ಟಿದ್ದಾರೆ. ನಮ್ಮ ಕಡೆಯಿಂದ ತಾಂತ್ರಿಕ ಕೆಲಸಗಳು ತಡವಾಗುತ್ತಿದೆ. ಇದು ಬಿಟ್ಟರೆ ಬೇರೆ ಏನು ಇಲ್ಲ. ಬಹುಶ: 12ರಂದು ಬರುವ ಸಾದ್ಯತೆ ಇದೆ. ಉಪ್ಪಿ ಮೆದುಳು, ನಿರ್ದೇಶಕರ ಹೃದಯವೆಂದು ಹೇಳಲಾಗಿದೆ. ಉಪನಾಯಕಿ ಸೋನುಗೌಡ ಟ್ರೈಲರ್, ಪೋಸ್ಟರ್‍ಗಳಲ್ಲಿ ಕಾಣಿಸಿಕೊಂಡಿಲ್ಲ. ಪಾತ್ರದ ತೀವ್ರತೆ ಅವರಿಗೆ ಅರ್ಥವಾಗಿದೆ. ಅದಕ್ಕಾಗಿ ಪ್ರತಿ ಸುದ್ದಿಗೋಷ್ಟಿಯಲ್ಲಿ ತಪ್ಪದೆ ಹಾಜರಾಗುತ್ತಿದ್ದಾರೆ. ಅವರ ಪಾತ್ರದಲ್ಲಿ ಒಳ್ಳೆ ವಿಚಾರ ಇರುವುದರಿಂದ ಗೌಪ್ಯತೆ ಕಾಪಾಡಿಕೊಂಡಿದ್ದೇವೆ. ಹೆಸರಾಂತ ವೈದ್ಯರು ಆಕಸ್ಮಿಕವಾಗಿ ಭೇಟಿ ನೀಡಿ ಅವರಿಗೆ ಐದು ನಿಮಿಷದಲ್ಲಿ ಕತೆ ಹೇಳಲಾಗಿತ್ತು. ಅವರು ಉಪ್ಪಿರವರನ್ನು ಭೇಟಿ ಮಾಡುವುದಾಗಿ ಹೇಳಿದಂತೆ ಆಗಮಿಸಿದ್ದಾರೆ ಎಂದರು.

ನಿರ್ದೇಶಕರು ಅವರದೆ ಸಮಯ ತಗೆದುಕೊಂಡು ಮುಂದಕ್ಕೆ ಹೋಗುತ್ತಿದ್ದಾರೆ. ನನ್ನದೆ ಕೆಲಸದಲ್ಲಿ ಬ್ಯುಸಿ ಇದ್ದೇನೆ. ಒಳ್ಳೇದು ಆಗಲಿ. ಆದಷ್ಟು ಬೇಗನೆ ಸೋನುಗೌಡ ಪೋಸ್ಟರ್‍ನಲ್ಲಿ ಕಾಣಿಸಿಕೊಳ್ಳಲಿ ಎಂದು ಅವರನ್ನು ನೋಡುತ್ತಾ ಉಪೇಂದ್ರ ಸುಮ್ಮನಾದರು. ಎಲ್ಲಾ ಕಡೆಗಳಲ್ಲಿ ನನ್ನ ಭಾವಚಿತ್ರ ಇಲ್ಲ. ಯಾಕೆ ಗೋಷ್ಟಿಗೆ ಹೋಗಬೇಕೆಂದು ಅಂದುಕೊಂಡಿಲ್ಲ. ಪಾತ್ರದ ಮಹತ್ವ ಏನು ಅಂತ ತಿಳಿದಿದೆ. ಅವಶ್ಯಕತೆ ಅನಿಸಿಲಿಲ್ಲ. ಬಿಡುಗಡೆ ನಂತರ ನನ್ನ ಪಾತ್ರವು ಇತಿಹಾಸ ಸಾರುತ್ತೆ. ಪರಿಚಯದ ಹಾಡಿನಲ್ಲಿ ಬರುತ್ತೇನೆ. ಅದನ್ನು ಟಾಕೀಸ್‍ನಲ್ಲಿ ನೋಡಿ ಎಂದು ಸೋನುಗೌಡ ಅವಲತ್ತು ಮಾಡಿಕೊಂಡರು. ಮಾತುಕತೆಯಲ್ಲಿ ಹಾಜರಿದ್ದ ಛಾಯಾಗ್ರಾಹಕ ಸುಜ್ಘಾನ್, ಡಾ.ಮಂಜುನಾಥ್, ಹಿತೈಷಿ ರಾಜೇಂದ್ರ ಉಪಸ್ತಿತರಿದ್ದು ಕಡಿಮೆ ಸಮಯ ತೆಗೆದುಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/03/19


ದಾವಣಗೆರೆಯಲ್ಲಿ ಉಪೇಂದ್ರ ಡೈಲಾಗ್‍ಗಳನ್ನು ಹೇಳಿದರು
ಸೂಪರ್ ಸ್ಟಾರ್ ಉಪೇಂದ್ರ ಎಲ್ಲೆ ಹೋದರೂ ಒಂದು ಸಿನಿಮಾದ ಡೈಲಾಗ್ ಹೇಳುವುದು ರೂಡಿಯಾಗಿದೆ. ಆದರೆ ದಾವಣೆಗೆರೆಯಲ್ಲಿ ಅವರದೆ ಅಭಿನಯದ ‘ಐ ಲವ್ ಯು’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಎ, ಸೂಪರ್, ರಕ್ತಕಣ್ಣೀರು ಚಿತ್ರಗಳ ಡೈಲಾಗ್‍ಗಳನ್ನು ಹೇಳುತ್ತಾ ರಸದೌತಣ ನೀಡಿದರು. ಎಲ್ಲರ ನಂತರ ವೇದಿಕೆಗೆ ಆಗಮಿಸಿದ ಉಪೇಂದ್ರ ಮಾತನಾಡುತ್ತಾ ಎ ಚಿತ್ರದ 100 ನೇ ದಿನದ ಸಮಾರಂಭವನ್ನು ಇದೇ ಜಾಗದಲ್ಲಿ ಮಾಡಲಾಗಿತ್ತು. ನಿಮ್ಮದು ಬೆಣ್ಣೆಯಂತ ಮನಸು. ಚಿತ್ರಕ್ಕೆ ಐ ಲವ್ ಯು ಅಂತ ಹೇಳ್ತಿರಾ ಅಂತ ಗೊತ್ತಿದೆ. ರಾಜಕೀಯಕ್ಕೆ ಬರಬೇಕಂತಲೇ ಸಿನಿಮಾರಂಗಕ್ಕೆ ಬಂದೆ. ಚಿತ್ರರಂಗದಲ್ಲಿ ಸಿಕ್ಕ ಸಂತಸ ರಾಜಕೀಯದಲ್ಲಿ ಸಿಗಬೇಕಿದೆ. ಅದನ್ನೆ ಮಾಡ್ತಾ ಇದ್ದೇನೆಂದು ಹೇಳಿದಾಗ ಶಿಳ್ಳೆ ಶಬ್ದ ಕೇಳಿಬಂತು.

ಇದಕ್ಕೂ ಮುನ್ನ ನಿರ್ದೇಶಕ ಆರ್.ಚಂದ್ರು ಮೈಕ್ ತೆಗೆದುಕೊಂಡು ಒಂಬತ್ತು ಚಿತ್ರಗಳ ನಿರ್ದೇಶನ, ಮೂರು ನಿರ್ಮಾಣ ಮಾಡಲಾಗಿದೆ. ಉಪ್ಪಿ ಸರ್ ಮೆದುಳು, ನನ್ನ ಕತೆ ಸೇರಿಕೊಂಡು ಚಿತ್ರವಾಗಿದೆ. ಹಿಂದಿನ ಚಿತ್ರಗಳನ್ನು ಹುಬ್ಬಳ್ಳಿ,ಬೆಂಗಳೂರು,ಮೈಸೂರು,ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಈ ಬಾರಿ ನಿಮ್ಮಗಳ ಮುಂದೆ ಬಂದಿದ್ದೇವೆ. ಒಂದಾನೊಂದು ಕಾಲದಲ್ಲಿ ಹಾಡು ವಿಶೇಷವಾಗಿದ್ದು, ನೋಡಲು ಮರೆಯದಿರಿ ಎಂದಷ್ಟೇ ಹೇಳಿದರು. ನಿರ್ದೇಶಕ ಆರ್.ಚಂದ್ರು ಅಲ್ಲ. ಅವರು ಆರು ಚಂದ್ರು. ಸಾಕಷ್ಟು ವಿಭಾಗಗಳನ್ನು ತಿಳಿದುಕೊಂಡಿದ್ದಾರೆ. ಆರು ಹಾಡುಗಳ ಪೈಕಿ ಒಂದು ಹಾಡಿಗೆ ಸಾಹಿತ್ಯ, ಸಂಗೀತವನ್ನು ಅಭಿಮಾನದ ಮೇಲೆ ಉಪೇಂದ್ರ ಅವರಿಗೆ ರವಿಚಂದ್ರನ್ ಅರ್ಪಿಸಿದ್ದಾರೆಂದು ಚೂಚ್ಚಲಬಾರಿ ಸಂಗೀತ ಒದಗಿಸಿರುವ ಡಾ.ಕಿರಣ್‍ತೋಟಂಬೈಲು ಮಾಹಿತಿ ನೀಡಿದರು.

ಮೈಲಾರಿ ಚಿತ್ರದ ಪೂರ್ತಿ ಹಾಡಿಗೆ ಹೆಜ್ಜೆ ಹಾಕಿದ ನಾಯಕಿ ರಚಿತಾರಾಂ, ಭಾನುವಾರ ಮಾಂಸಹಾರ ಸೇವಿಸುವ ನಾನು, ಇಂದು ಇಲ್ಲಿನ ಬೆಣ್ಣದೋಸೆ ರುಚಿಗೆ ಮಾರುಹೋದೆ. ಉಪ್ಪಿ ಸರ್ ಅವರೊಂದಿಗೆ ಮಾದಲಬಾರಿ ನಟಿಸಿದ್ದೇನೆ. ಚಿತ್ರೀಕರಣದಲ್ಲಿ ಖುಷಿ, ಪ್ರತಿಕ್ರಿಯೆಗಳನ್ನು ಅನುಭವಿಸಿದ್ದೇನೆ. ನಿರ್ದೇಶಕರು ಇಂದಿನ ತಲೆಮಾರಿಗೆ ತಕ್ಕದಾದ ಅದ್ಬುತ ಕತೆಯನ್ನು ನೀಡಿದ್ದಾರೆಂದು ದಾವಣೆಗೆರೆ ಅಭಿಮಾನಿಗಳಿಗೆ ಮೈಕ್ ಮೂಲಕ ಪ್ಲೈನ್ ಕಿಸ್‍ನ್ನು ರವಾನಿಸಿದರು. ಸೋನುಗೌಡ ಡ್ಯಾನ್ಸ್ ಮಾಡಿ ಪಾತ್ರದ ವಿವರ ತಿಳಿಸಲಿಲ್ಲ. ಗುರುಕಿರಣ್, ಮಯೂರಿ ಹಾಡಿನ ಲೋಕಕ್ಕೆ ಕರೆದೂಯ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
4/02/19

ಚುಮ ಚುಮ ಚಳಿಯಲ್ಲಿ ಐ ಲವ್ ಯು ಅಂದರು
ಅದ್ದೂರಿಯಾಗಿ ಸಿದ್ದಗೊಂಡಿರುವ ‘ಐ ಲವ್ ಯು’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಲು ರಾಜಮೌಳಿ ಬರುತ್ತಾರೆಂದು ಸುದ್ದಿಯಾಗಿತ್ತು. ಅದು ಎಷ್ಟರಮಟ್ಟಿಗೆ ನಿಜ ಎಂಬುದು ಜನವರಿ 12ರಂದು ತಿಳಿಯಲಿದೆ. ಭಾನುವಾರ ಅಶೋಕ ಹೋಟೆಲ್‍ದಲ್ಲಿ ಚಳಿಯನ್ನು ಲೆಕ್ಕಿಸದೆ ಎರಡು ಭಾಷೆಯ ಟ್ರೈಲರ್‍ನ್ನು ಶಿವರಾಜ್‍ಕುಮಾರ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಬಿಡುಗಡೆ ಮಾಡಿದರು. ಶಿವಣ್ಣ ಮಾತನಾಡಿ ಪಾತ್ರದಲ್ಲಿ ಎರಡು ಬಾರಿ ಐ ಲವ್ ಯು ಎಂದು ವಿಭಿನ್ನವಾಗಿ ಹೇಳಿದ್ದೇನೆ. ಅದರಲ್ಲೂ ಓಂ ಚಿತ್ರದಲ್ಲಿ ಹೇಳಿದ್ದು ಮರೆಯಲಾಗದು. ಉಪೇಂದ್ರ ಅವರು ಭೂಗತಲೋಕ, ಭಾವನೆಗಳನ್ನು ಅಂದೇ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದರು. ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ. ಇಷ್ಟದ ನಿರ್ದೇಶಕ ಅವರೇ ಆಗಿರುತ್ತಾರೆ. ರಚಿತಾರಾಂ ಕನ್ನಡ ಚಿತ್ರರಂಗದ ಉತ್ತಮ ನಾಯಕಿ. ಐದು ವರ್ಷದ ಕೆಳಗೆ ಅಮ್ಮನಿಗೆ ಐ ಲವ್ ಯು ಹೇಳಿದ್ದು ಇಂದಿಗೂ ನೆನಪಿದೆ. ಚಂದ್ರು ಜೊತೆಗೆ ಬಾದ್‍ಷಾ ಮಾಡಬೇಕಾಗಿತ್ತು. ಈಗಾಗಲೇ ಅದೇ ಹೆಸರಿನ ಚಿತ್ರವು ಬೇರೆ ಭಾಷೆಯಲ್ಲಿ ಬಂದಿರುವುದರಿಂದ ಅದನ್ನೆ ಮಾಡಿದರೆ ನಕಲು ಮಾಡಿದಂತೆ ಆಗುತ್ತದೆ. ಕನ್ನಡ ಚಿತ್ರವು ತಾರಕ್ಕೆ ಹೋಗುತ್ತಿರುವುದು ಸಂತಸ ತಂದಿದೆ. ತಮಿಳಿನ ಭಾರತಿರಾಜ ಪುಟ್ಟಣಕಣಗಾಲ್ ಚಿತ್ರವನ್ನು ನೋಡಲು ಬರುತ್ತಿದ್ದರು. ಇಂತಹ ಲೆಜೆಂಡ್ ನಿರ್ದೇಶಕಗಳು ಇರುವುದು ನಮ್ಮಗಳ ಸುಕೃತ ಎನ್ನಬಹುದು. ಎಲ್ಲರು ಡಾ.ರಾಜ್‍ಕುಮಾರ್, ಅಮಿತಾಬ್‍ಬಚ್ಚನ್, ಮೋಹನ್‍ಲಾಲ್ ಆಗುವುದಿಲ್ಲ. ನೂರು ಕಾಲ ಹೋದರೂ ಟೈಟಲ್ ಸೂಕ್ತವಾಗಿದೆ. ಒಳ್ಳೆಯದಾಗಲಿ ಅಂತ ಹರಿಸಿದರು.

ಬೊಲ್ಡ್ ಅಂಡ್ ಬ್ಯುಟಿಫುಲ್ ಪಾತ್ರದಲ್ಲಿ ಮೊದಲ ಬಾರಿ ನಟಿಸಿದ್ದು ಖುಷಿ ತಂದಿದೆ. ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗುತ್ತಿರುವುದರಿಂದ ಅವರಿಗೆ ಉಡುಗೊರೆ ಎನ್ನಬಹುದು. ಐದೂವರೆ ವರ್ಷ ಅನುಭವದಲ್ಲಿ ಇಂತಹ ರೋಲ್ ಮಾಡಿರುವುದು ಹೆಮ್ಮೆ ಅನಿಸಿದೆ. ಧಾರ್ಮಿಕ ಹೆಸರಿನಲ್ಲಿ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಉಪ್ಪಿ ಸರ್ ಹೇಳಿದ್ದ ಡೈಲಾಗ್‍ನ್ನು ಹೇಳಿಸಿದ್ದಾರೆ. ಇನ್ನೆನಿದ್ದರೂ ಪ್ರೇಕ್ಷಕರು ಹೇಳಬೇಕೆಂದು ಮೈಕನ್ನು ನಾಯಕಿ ರಚಿತಾರಾಮ್ ಹಸ್ತಾಂತರಿಸಿದರು.

ಒಂಬತ್ತು ಚಿತ್ರಗಳಿಗೆ ನಿರ್ದೇಶನ, ಮೂರು ಸಿನಿಮಾಗಳ ನಿರ್ಮಾಣ ಮಾಡಿದ್ದರೂ ಸಾಧನೆ ಶೂನ್ಯ ಅಂತ ಭಾವಿಸಿದ್ದೇನೆ. ಸ್ಯಾಂಡಲ್‍ವುಡ್‍ನಲ್ಲಿ ಇಷ್ಟಪಡುವ ನಟ ಎಂದರೆ ಅದು ಶಿವಣ್ಣ ಮಾತ್ರ. ಉಪ್ಪಿ ಸರ್ ಕತೆ ಕೇಳದೆ ಡೇಟ್ಸ್ ನೀಡಿದರು. ಮತ್ತೋಂದು ಗೀತಾಂಜಲಿ ಅಗುತ್ತದೆಂದು ಭವಿಷ್ಯ ನುಡಿದಿದ್ದಾರೆ. ಜನರಿಗೆ ಆಹ್ವಾನಪತ್ರಿಕೆ ಎನ್ನುವ ಹಾಗೆ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ತಾನಾಗೆ ಬಂದಿದ್ದು ಅಲ್ಲ. ಹಿರಿಯರು ನೀಡಿದ ಧೈರ್ಯ ಈ ಮಟ್ಟಕ್ಕೆ ಬರುವಂತಾಯಿತು ಎಂದು ನಿರ್ದೇಶಕ,ನಿರ್ಮಾಪಕ ಆರ್.ಚಂದ್ರು ಹೇಳಿದರು.

ಚಿತ್ರರಂಗದಲ್ಲಿ ಎಲ್ಲರೂ ಶಿವಣ್ಣರಿಗೆ ಶೀರ್ಷಿಕೆಯಲ್ಲಿ ಹೇಳುತ್ತಾರೆ. ಅವರು ಈ ಮಟ್ಟಕ್ಕೆ ಬೆಳಯಲು ಅಪ್ಪಾಜಿ ಕಾರಣರಾಗಿದ್ದಾರೆ. ಅಣ್ಣಾವ್ರು, ವರದರಾಜು ಅವರೊಂದಿಗೆ ಓಂ ಸಿನಿಮಾ ಕುರಿತಂತೆ ಚರ್ಚಿಸಲು ಅವಕಾಶ ಸಿಕ್ಕಿತು. ನಿರ್ದೇಶಕರ ಜೀವನದಲ್ಲಿ ನಡೆದ ಕತೆಯನ್ನು ಚಿತ್ರರೂಪಕ್ಕೆ ತಂದಿದ್ದಾರೆ. ನಿಜವಾದ ಲವ್ ಎಂದರೆ ಏನು ಅಂತ ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ನೋಡುಗನು ಆಚೆ ಬಂದ ನಂತರ ಯಾರಿಗಾದರೂ ಐ ಲವ್ ಯು ಅಂತ ಹೇಳುವುದು ಖಂಡಿತ ಅಂತಾರೆ ಉಪೇಂದ್ರ.

ಚೊಚ್ಚಲಬಾರಿ ಸಂಗೀತ ಒದಗಿಸಿರುವ ವೈದ್ಯ ಕಿರಣ್‍ತೊಟಂಬೈಲು, ಛಾಯಗ್ರಾಹಕ ಸುಗ್ನಾನ್‍ಮೂರ್ತಿ, ಶ್ರೀಕಾಂತ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸುಸಂದರ್ಭದಲ್ಲಿ ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/01/19

ಐ ಲವ್ ಯು ಕಾಯಕ್ರಮಕ್ಕೆ ರಾಜಮೌಳಿ ?
ಉಪೇಂದ್ರ, ರಚಿತಾರಾಮ್, ಸೋನುಗೌಡ ಅಭಿನಯ, ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಅದ್ದೂರಿ ‘ಐ ಲವ್ ಯು’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್‍ದಲ್ಲಿ ನಿರತವಾಗಿದೆ. ಮೊಟ್ಟ ಮೊದಲಬಾರಿ ವೈದ್ಯ ಕಿರಣ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ‘ನಿನ್ನೆ ಪ್ರೀತಿಸ್ತೇನೆ’ ಗೀತೆಯನ್ನು ಪ್ರೀತ್ಸೆ,ಪ್ರೀತ್ಸೆ ಮಾದರಿಯಲ್ಲಿ ದುಬೈ, ಮಸ್ಕಟ್‍ದಲ್ಲಿ ಶೂಟ್ ಮಾಡಲು ಯೋಜನೆ ಹಾಕಲಾಗಿದೆ. ಇದಕ್ಕಾಗಿ ಫೆಬ್ರವರಿ ಮೊದಲವಾರದಂದು ಅಲ್ಲಿಗೆ ಪ್ರಯಾಣ ಕೈಗೊಳ್ಳುತ್ತಾರಂತೆ. ವಿಷಯವನ್ನು ತಿಳಿಸಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.

ವಿವರವನ್ನು ಹೇಳದೆ ಇರಲು ನಿರ್ದೇಶಕರಿಂದ ಸೂಚನೆ ಬಂದಿದ್ದರಿಂದ ಎಲ್ಲರು ಪಾತ್ರದ ಗೌಪ್ಯತೆಯನ್ನು ಕಾಪಾಡಿದರು. ಬಿಸಿ ತುಪ್ಪ ಇದ್ದಂತೆ ರೋಲ್ ಇದೆ. ಉಪ್ಪಿ ಸರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ಹೆಚ್ಚಾಗಿ ಅಪ್ಪನೊಂದಿಗೆ ತೆರೆ ಹಂಚಿಕೊಂಡಿದ್ದು ಮರೆಯಲಾಗದ ಅನುಭವ ಅಂತಾರೆ ಸೋನುಗೌಡ.

ಸೆಟ್‍ನಲ್ಲಿ ಉಪ್ಪಿ ಅವರಿಂದ ಸಾಕಷ್ಟು ಲವ್ ಬಗ್ಗೆ ತಿಳಿದುಕೊಂಡೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಚಂದ್ರು, ಉಪ್ಪಿ ಇಬ್ಬರು ನನಗೆ ಲವ್ ಗುರುಗಳು ಆಗಿದ್ದರು. ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇದನ್ನು ಮಾಡುವುದು ಕಷ್ಟ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಲವ್ ಬಗ್ಗೆ ಉಪ್ಪಿ ಅವರೊಂದಿಗೆ ಆರೋಗ್ಯಕರ ಚರ್ಚೆ ನಡೆಸಿ ಮಾತಿಗೆ ವಿರಾಮ ಹಾಕಿದರು ನಾಯಕಿ ರಚಿತಾರಾಮ್.

ಪ್ರೀತಿ ಬಗ್ಗೆ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಪ್ರಾರಂಭದಲ್ಲೆ ಇದೊಂದು ಗೀತಾಂಜಲಿ ಆಗುತ್ತದೆಂದು ಹೇಳಿದ್ದೆ. ಅದೇ ರೀತಿ ಬಂದಿದೆ. ಕ್ಲೈಮಾಕ್ಸ್ ಥ್ರಿಲ್ ಆಗಿದ್ದು, ಹೊರಗೆ ಬರುವಾಗ ಪ್ರತಿಯೊಬ್ಬರು ಯಾರಿಗಾದರೂ ಐ ಲವ್ ಯು ಹೇಳುತ್ತಾರೆ. ಪ್ರೀತಿ ಅಂದರೆ ಏನು ಅಂತ ಹೇಳಲಾಗಿದೆ. ಲವ್ ಆಗೋದು, ಮಾಡೋದು ಬೇರೆ, ಕಾಮಿಡಿಯನ್ನು ಹೇಗೆ ಮಾಡುವುದೆಂದು ರಚಿತರಾಮ್ ಅವರಿಂದ ಕಲಿತೆ ಎಂದು ಉಪೇಂದ್ರ ಕಾಲೆಳೆದರು.

ಕರ್ನಾಟಕದ ಮದ್ಯ ಭಾಗ ದಾವಣಗೆರೆಯಲ್ಲಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಗುರುಕಿರಣ್ ಸಂಗೀತ ಸಂಜೆ ನಡೆಯಲಿದೆ. ಉಪ್ಪಿ ಸರ್‍ಗೆ ಕಾಲಿವುಡ್, ಟಾಲಿವುಡ್‍ದಲ್ಲಿ ಬೇಡಿಕೆ ಇರುವ ಕಾರಣ ರಜನಿಕಾಂತ್, ರಾಜಮೌಳಿ ಅವರನ್ನು ಕರೆಸಲು ಪ್ರಯತ್ನಗಳು ನಡೆಯುತ್ತಿದೆ. ಭಾರತದ ಟಾಪ್ 10 ನಿರ್ದೇಶಕರಲ್ಲಿ ಉಪೇಂದ್ರ ಒಬ್ಬರಾಗಿದ್ದಾರೆ. ಇದೇ 30ರಂದು ಟ್ರೈಲರ್, ಜನವರಿ 12 ಆಡಿಯೋ ಸಿಡಿ ಬಿಡುಗಡೆ, ಪ್ರೇಮಿಗಳ ದಿನದಂದು ಅವರಿಗೆ ಉಡುಗೊರೆಯಾಗಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರಲಿದೆ ಎಂಬುದರ ಮಾಹಿತಿಯನ್ನು ಆರ್.ಚಂದ್ರು ಬಿಚ್ಚಿಟ್ಟರು.
ಸಿನಿ ಸರ್ಕಲ್.ಇನ್ ನ್ಯೂಸ್
20/12/18ಉಪೇಂದ್ರ ಫಸ್ಟ್ ಲುಕ್ ಬಿಡುಗಡೆ
ಎ ಸಿನಿಮಾದ ಡೈಲಾಗ್‍ನೊಂದಿಗೆ ಶುರುವಾಗಿ, ನಂತರ ಕಾಮ,ಕ್ರೋದ, ಮೋಹ, ಮಧ ಎಂದು ಹೇಳಿಕೊಂಡು, ಮುಂದೆ ಸುಂದರ ಬೆಡ್ ರೊಂದಲ್ಲಿ ಉಪೇಂದ್ರ ಒಂದು ಮುಖ್ಯವಾದ ಭಾಗವನ್ನು ಮಾತ್ರ ಬೆಡ್‍ಶೀಟ್‍ನಲ್ಲಿ ಮುಚ್ಚಿಕೊಂಡು ಬಾಯಲ್ಲಿ ರೋಸ್ ಇಟ್ಟುಕೊಳ್ಳುವ ಒಂದು ನಿಮಿಷದ ‘ಐ ಲವ್ ಯು’ ಚಿತ್ರದ ಫಸ್ಟ್ ಲುಕ್‍ನ್ನು ಹಿರಿಯ ವಿತರಕ ಭಾಷಾ ಬಿಡುಗಡೆ ಮಾಡಿದರು. ವೃತ್ತಿಯಲ್ಲಿ ವೈದ್ಯ, ಪ್ರವೃತಿ ಸಂಗೀತನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಿರಣ್ ಮಾತನಾಡಿ ಬಿಡುವು ಸಮಯದಲ್ಲಿ ರಾಗಗಳನ್ನು ಖುಷಿಯಾಗಿ ಸಿದ್ದಪಡಿಸಿಕೊಳ್ಳಲಾಗಿತ್ತು. ಒಮ್ಮೆ ಚಂದ್ರು ಅದನ್ನು ಕೇಳಿ ಆರು ಹಾಡುಗಳಿಗೆ ಕಂಪೋಸ್ ಮಾಡಲು ಅವಕಾಶ ನೀಡಿದ್ದಾರೆ. ಅವರಿಗೆ ಟ್ಯೂನ್ ಒಪ್ಪಿಸೋದು ಕಷ್ಟ. ಸಂತೋಷ್‍ನಾಯಕ್ ಉತ್ತಮ ಸಾಹಿತ್ಯ ರಚಿಸಿದ್ದಾರೆ ಎಂದರು.
ಎ, ಉಪೇಂದ್ರ ಕತೆ ಇದು. ನಿರ್ದೇಶಕರ ನಿಜ ಜೀವನದ ಅನುಭವಗಳು ತೋರಿಸಿದ್ದು, ಅವರ ಭಾವನೆಗಳು ಇರಲಿದೆ. ಒಂದೇ ಲುಕ್ ಬೆಸ್ಟ್ ಫಸ್ಟ್ ಲುಕ್ ಆಗಿದೆ. ಚಂದ್ರು ಪ್ರಭುದ್ದರಾಗಿದ್ದಾರೆ. ಸಿನಿಮಾದ ಕಂಟೆಂಟ್, ಮೆದುಳು ಅವರ ಹೃದಯವಾಗಿದೆ. ಸನ್ನಿವೇಶಕ್ಕೆ ತಕ್ಕದಾದ ಕಾಸ್ಟ್ಯೂಮ್‍ನ್ನು ಆಯ್ಕೆ ಮಾಡುತ್ತಿದ್ದರು. ಇದು ಕನ್ನಡದ ಗೀತಾಂಜಲಿ ಆಗಲಿದೆ. ನಿಮ್ಮೆಲ್ಲರಿಗೂ ಐ ಲವ್ ಯು ಒಳ್ಳೆದು ಆಗಲಿ ಅಂತ ಉಪೇಂದ್ರ ಮಾತಿಗೆ ವಿರಾಮ ಹಾಕಿದರು

ಉಪ್ಪಿ ಸರ್ ವಿಶೇಷ ವ್ಯಕ್ತ್ತಿ ಎಂದು ಇಡೀ ಕರ್ನಾಟಕ ಒಪ್ಪಿಕೊಂಡಿದೆ. ಅಂತಹ ಲೆಜೆಂಡ್ ಜೊತೆಗೆ ಎರಡನೆ ಬಾರಿ ಕೆಲಸ ಮಾಡಿದ್ದು ನನ್ನ ಸುಕೃತ ಎನ್ನಬಹುದು. ತಂತ್ರಜ್ಘರಿಗೆ ತುಂಬಾ ಗೌರವ ಕೊಡುತ್ತಾರೆಂದು ಬ್ರಹ್ಮ ಮಾಡುವ ಸಂದರ್ಭದಲ್ಲಿ ತಿಳಿಯಿತು. ಆ ಚಿತ್ರದ ಬಾಕಿ 10 ಲಕ್ಷ ಕೊಡಲು ಹೋದಾಗ, ಒಂದು ಲಕ್ಷ ತೆಗೆದುಕೊಂಡು ಬಾಕಿ ಹಣವನ್ನು ಹಿಂತುರಿಗಿಸಿದರು. ಹೊಸ ಚಿತ್ರ ಶುರು ಮಾಡಿ ನಿಮ್ಮೊಂದಿಗೆ ಇರುತ್ತೇನೆಂದು ಹೇಳಿದ್ದರು. ಅದರಂತೆ ಅವರ ಅನುಮತಿ ಇಲ್ಲದೆ ಚಿತ್ರದ ಘೋಷಣೆ ಮಾಡಿ, ಹೇಳಿದಾಗ ಬೇರೆಯವರಿಗೆ ನೀಡಲಾಗಿದ್ದ ಕಾಲ್‍ಶೀಟ್‍ನ್ನು ನನಗೆ ನೀಡಿದರು. ಎ, ಉಪೇಂದ್ರದಂತ ಸಿನಿಮಾಗಳನ್ನು ಅವರಿಂದ ಮಾತ್ರ ಮಾಡಲು ಸಾಧ್ಯ. ಯಾರು ನಿರ್ದೇಶಕರ ಕನಸಿಗೆ ಕಲಾವಿದರು ಪ್ರೋತ್ಸಾಹ ಕೊಡುತ್ತಾರೋ ಅದು ಅರ್ಧ ಗೆದ್ದಂಗೆ. ಸರ್ ಸಿನಿಮಾ ಅಂದಕೂಡಲೆ ನಿರ್ದೇಶಕರಾಗಿದ್ದವರು, ಇದರಲ್ಲಿ ಸಹಾಯಕ ನಿರ್ದೇಶನ ಮಾಡಿದ್ದಾರೆ. ಎಂಟು ದಿನದ ಮಾತಿನ ಭಾಗದ ಚಿತ್ರೀಕರಣ, ಎರಡು ಸಾಹಸ, ಮೂರು ಹಾಡುಗಳ ಕೆಲಸ ಬಾಕಿ ಇದೆ. ಇದರ ಮಧ್ಯೆ ಡಬ್ಬಿಂಗ್ ಶುರು ಮಾಡಲಾಗಿದೆ. ಡಿಸೆಂಬರ್‍ಗೆ ಬಿಡುಗಡೆ ಮಾಡುವುದು ಪಕ್ಕಾ. ಸಿನಿಮಾ ನೋಡಿ ಹೊರಬಂದ ಜನರು ಮೋಬೈಲ್ ಆನ್ ಮಾಡಿ ಐ ಲವ್ ಯು ಎಂದು ಹೇಳುತ್ತಾರೆ. ಸರ್ ಹೇಳಿದಂತೆ ಗೀತಾಂಜಲಿ ಆಗಲಿದೆ ಎಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಹೇಳುವಾಗ ವಿಧೇಯ ವಿದ್ಯಾರ್ಥಿಯಂತೆ ಉಪೇಂದ್ರ ಅವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದರು.

ಛಾಯಗ್ರಾಹಕ ಸುಜ್ಘಾನ್‍ಮೂರ್ತಿ, ಮಂಡ್ಯಾದ ರಾಜಕೀಯ ಧುರೀಣ ರವಿಕುಮಾರ್, ಹಿತೈಷಿಗಳು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/09/18
ಹೆಲಿಕಾಫ್ಟರ್‍ನಲ್ಲಿ ಉಪೇಂದ್ರ ಮಿಂಚಿಂಗ್
‘ಬ್ರಹ್ಮ’ ಚಿತ್ರದ ನಂತರ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‍ದಲ್ಲಿ ‘ಐ ಲವ್ ಯು’ ಚಿತ್ರ ಸೆಟ್ಟೇರಿದ್ದು, ಮೊದಲ ಹಂತದ ಚಿತ್ರೀಕರಣ ನೈಸ್ ರಸ್ತೆಯಲ್ಲಿ ನಡೆಯುತ್ತಿತ್ತು. ಮಾದ್ಯಮದವರು ರಸ್ತೆಗೆ ಭೇಟಿ ನೀಡಿದಾಗ ಆಕಾಶದಿಂದ ಹೆಲಿಕಾಪ್ಟರ್ ಭೂಮಿಗೆ ಆಗತಾನೆ ಬಂದಳಿಯುತು. ಅದರಿಂದ ಉಪೇಂದ್ರ ಹಿಂಬಾಲಕರೊಂದಿಗೆ ಸ್ಟೈಲಿಷ್‍ಆಗಿ ಇಳಿದು ನಡೆದುಕೊಂಡು ಬರುವ ದೃಶ್ಯಗಳನ್ನು ಸಮಯ ವ್ಯರ್ಥ ಮಾಡದೆ ಚಿತ್ರೀಕರಣ ನಡೆಸಿದ ನಂತರ ಖುಷಿಯಿಂದ ಅನುಭವಗಳನ್ನು ಹೇಳಿಕೊಂಡಿತು. ಮಾತು ಶುರು ಮಾಡಿದ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಸಾಕಷ್ಟು ಚಿತ್ರಗಳು ಇದೇ ಜಾಗದಲ್ಲಿ ನಡೆದರೂ ಪತ್ರಕರ್ತರನ್ನು ಕರೆಸುವುದಿಲ್ಲ. ಪ್ರತಿ ಬಾರಿ ನಡೆದಾಗಲು ಮಾದ್ಯವದವರನ್ನು ಆಹ್ವಾನಿಸುತ್ತೆನೆ. ದೊಡ್ಡ ಬ್ಯುಸಿನೆಸ್ ಮ್ಯಾನ್ ಸಂತೋಷ್‍ನಾರಾಯಣ್ ಆಗಿ ಪರಿಚಯಿಸುವ ದೃಶ್ಯಗಳನ್ನು ತೆಗೆಯಲಾಗಿದೆ. ಇದರ ನಂತರ ಆಕ್ಷನ್ ಬರುವುದರ ಕಾರಣ ಬಾಂಬೆಯಿಂದ ಕುಂಗುಫು ಪರಿಣಿತ ಫೈಟರ್ಸ್‍ಗಳನ್ನು ಕರೆಸಲಾಗಿ, ಇದನ್ನು ಬೆಂಗಳೂರು ಅರಮನೆ ಮುಂಬಾಗ ತೆಗೆಯಲಾಗಿದೆ. ಅವರ ಹೇರ್‍ಸ್ಟೈಲ್ ಕೂಡ ಹೈಲೈಟ್ ಆಗಿದೆ. ತಾಂತ್ರಿಕವಾಗಿ ಉಪ್ಪಿ ಸರ್ ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. 60 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಲಾಗಿದೆ ಎಂದರು.

ನಿರ್ಮಾಪಕರು ಫೋಟೋಶೂಟ್‍ನ್ನು ವಿಭಿನ್ನವಾಗಿ ಮಾಡಿಸಿದ್ದಾರೆ. ದೊಡ್ಡ ಬ್ಯುಸಿನೆಸ್‍ಮ್ಯಾನ್ ಆಗರುವ ಕಾರಣ ಅದ್ದೂರಿಯಾಗಿ ತೋರಿಸಲು ನಿರ್ದೇಶಕರ ಶ್ರಮಕ್ಕೆ ಬೇರೇನೂ ಹೇಳಲಾಗದು ಎಂದು ಕಿರುನಗೆ ಚೆಲ್ಲಿದರು ಉಪೇಂದ್ರ, ಅಂದಿನ ಚಿತ್ರೀಕರಣದಲ್ಲಿ ಟಗರು ಖ್ಯಾತಿಯ ತ್ರಿವೇಣಿ ಭಾಗವಹಿಸಿದ್ದರು. ಛಾಯಗ್ರಾಹಕ ಸುಜ್ಘಾನ್‍ಮೂರ್ತಿ ,ಸಾಹಸ ನಿರ್ದೇಶಕ ವಿನೋಧ್ ಹೆಚ್ಚೇನು ಮಾತನಾಡಲಿಲ್ಲ. ಇನ್ನು ಚಿತ್ರಕ್ಕೆ ನಾಯಕಿಯಾಗಿ ರಚಿತಾರಾಮ್, ಉಳಿದಂತೆ ರವಿಶಂಕರ್, ರವಿಕಾಳೆ, ಸಾಧುಕೋಕಿಲ, ಅಚ್ಯುತಕುಮಾರ್, ಶಯ್ಯಾಜಿರಾವ್ ಶಿಂದೆ, ಸೇರಿದಂತೆ ಹಲವು ಕಲಾವಿದರು ತಂಡದಲ್ಲೆ ಸೇರ್ಪಡೆಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಶ್ರೀ ಸಿದ್ದೇಶ್ವರ ಎಂಟರ್‍ಪ್ರೈಸಸ್ ಬ್ಯಾನರ್, ಅದರಂತೆ ತೆಲುಗುದಲ್ಲಿ ಗೋನಾಲ್.ಜಿ.ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
22/06/18


ಉಪ್ಪಿ ಹುಟ್ಟು ಹಬ್ಬಕ್ಕೆ ಐ ಲವ್ ಯು ?
ಸ್ಟಾರ್ ಕಲಾವಿದರ ಹುಟ್ಟಹಬ್ಬಕ್ಕೆ ಏನಾದರೂ ಉಡುಗೊರೆಯನ್ನು ನಿರ್ಮಾಪಕರು, ನಿರ್ದೇಶಕರು ನೀಡುವುದು ವಾಡಿಕೆಯಾಗಿದೆ. ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ವೃತ್ತಿ ಬದುಕಿನ ಹನ್ನೊಂದನೆ ‘ಐ ಲವ್ ಯು’ ಚಿತ್ರಕ್ಕೆ ಉಪೇಂದ್ರ ನಾಯಕನಾಗಿ ನಟಿಸುತ್ತಿರುವುದು ತಿಳಿದಿದೆ. ಅದರಂತೆ ಸೋಮವಾರ ಕಂಠೀರವದಲ್ಲಿ ಮಹೂರ್ತ ಆಚರಿಸಿಕೊಂಡಿತು. ಕತೆಯ ಕುರಿತು ಒಂದು ಏಳೆಯನ್ನು ಬಿಟ್ಟುಕೊಡದ ತಂಡವು ಈಗಿನ ಟ್ರೆಂಡ್, ಯುವಜನತೆ, ಫ್ಯಾಮಿಲಿಗೆ ಹೇಳಿಮಾಡಿಸಿದಂತ ಚಿತ್ರವಾಗುತ್ತದೆ. ಪ್ರೀತಿ, ಪ್ರೇಮ ಪುಸ್ತಕದ ಬದನೆಕಾಯಿ ಎಂದು ಎ ಚಿತ್ರದಲ್ಲಿ ಉಪೇಂದ್ರ ಡೈಲಾಗ್‍ನ ವಿಷಯಗಳನ್ನು ಇಟ್ಟುಕೊಂಡು, ಪ್ರಸಕ್ತ ಹುಡುಗ-ಹುಡುಗಿಯರು ಇಷ್ಟಪಡುವ ಅಂಶಗಳನ್ನು ಸೇರಿಸಿಕೊಳ್ಳಲಿದ್ದಾರೆ. ಅಲ್ಲದೆ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಜಯರಾಮ್ ಜೀವನದ ಒಂದು ಅಂಶವನ್ನು ಬಳಸಲಾಗುತ್ತದಂತೆ. ಮೂಕರ ಸನ್ನೆ ಮತ್ತು ಪ್ರೇಮಿಗಳು ಹೆಚ್ಚಾಗಿ ಈ ರೀತಿಯಲ್ಲಿ ತೋರಿಸುವ ಕಾರಣ ಟೈಟಲ್Uರೀ ಚಿಹ್ನೆಯನ್ನು ಬಳಸಲಾಗಿದೆ.

ಉಪೇಂದ್ರ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಾರಂತೆ. ವಿರಾಮದವರೆವಿಗೂ ಯುವಜನತೆಗೆ , ನಂತರ ಕುಟುಂಬದವರಿಗೆ ಅನ್ವ ಯವಾಗುವಂತಹ ಸನ್ನಿವೇಶಗಳು ಬರಲಿದೆಯಂತೆ. ಉಪ್ಪಿ ಸನಾತನ ಅಭಿಮಾನಿ ಪ್ರಮೋದ್ ರಚಿಸಿರುವ ಐದು ಹಾಡುಗಳಿಗೆ ಬಿಜಿಎಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಕಿರಣ್‍ತೊಟಂಬೈಲು ಸಂಗೀತ ಸಂಯೋಜಿಸುತ್ತಿದ್ದಾರೆ. ಇಬ್ಬರಿಗೂ ಮೊದಲ ಅನುಭವವಾಗಿದೆ. ಮೊದಲನೇ ಹಂತ ಬೆಂಗಳೂರು, ಎರಡನೆಯದರಲ್ಲಿ ಮಂಗಳೂರು, ಕೊನೆ ಹಂತಕ್ಕೆ ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಮಫ್ತಿ ಖ್ಯಾತಿ ನವೀನ್‍ಕುಮಾರ್ ಛಾಯಗ್ರಹಣ, ಸಂಕಲನ ದೀಪು.ಎಸ್.ಕುಮಾರ್, ಸಾಹಸ ರವಿವರ್ಮ-ಥ್ರಿಲ್ಲರ್‍ಮಂಜು, ನೃತ್ಯ ಮುರಳಿ ನಿರ್ವಹಿಸುತ್ತಿದ್ದಾರೆ. ಇಬ್ಬರು ನಾಯಕಿಯರ ತಲಾಶ್ ನಡೆಯುತ್ತಿದ್ದು, ಉಳಿದಂತೆ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಅಚ್ಯುತಕುಮಾರ್,ಕುರಿಪ್ರತಾಪ್, ಬುಲೆಟ್‍ಪ್ರಕಾಶ್, ರಾಜೇಶ್‍ನಟರಂಗ ಮುಂತಾದವರ ತಾರಬಳಗವಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವುದರಿಂದ ಆಂಧ್ರದ ಗೋನಾಲ್.ಜಿ.ವೆಂಕಟೇಶ್ ಅಲ್ಲಿನ ಭಾಷೆಗೆ ಹಣ ಹೂಡುತ್ತಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಶಿವರಾಜ್‍ಕುಮಾರ್ ಕ್ಲಾಪ್ ಮಾಡಿ ಶುಭ ಹಾರೈಸಿದ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಾಕ್ಷ್ಷಿಯಾಗಿದ್ದರು. ಅಂದುಕೊಂಡಂತೆ ಆದಲ್ಲಿ ಉಪೇಂದ್ರ ಹುಟ್ಟಹಬ್ಬದಂದು ಬಿಡುಗಡೆ ಮಾಡಲು, ಸಾದ್ಯವಾಗದೆ ಹೋದಲ್ಲಿ ಆಡಿಯೋ ಅನಾವರಣ ಮಾಡುವುದು ಖಚಿತ ಅಂತಾರೆ ಆರ್.ಚಂದ್ರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
22/05/18
ಐ ಲವ್ ಯು ಚಿತ್ರಕ್ಕೆ 21 ರಂದು ಮಹೂರ್ತ ಫಿಕ್ಸ್
ನಿರ್ದೇಶಕ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‍ದಲ್ಲಿ ‘ಐ ಲವ್ ಯು’ ಸೆಟ್ಟೇರಲಿದೆ ಎಂಬ ಸುದ್ದಿಯಾಗಿತ್ತು. ಅದರಂತೆ ಸೋಮವಾರ ಅದ್ದೂರಿ ಮಹೂರ್ತಕ್ಕೆ ಘಟಾನುಘಟಿ ಗಣ್ಯರುಗಳು ಆಗಮಿಸುವ ನಿರೀಕ್ಷೆ ಇದೆ. ವತ್ಸಲಾರೇವಣ್ಣ ಜ್ಯೋತಿ ಬೆಳಗಿಸುವರು. ಮೊದಲ ದೃಶ್ಯಕ್ಕೆ ಶಿವರಾಜ್‍ಕುಮಾರ್ ಆರಂಭ ಫಲಕ ತೋರಿಸಿದರೆ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಕ್ಯಾಮರಾ ಸ್ವಿಚ್‍ಆನ್ ಮಾಡಿ ತಂಡಕ್ಕೆ ಶುಭಹಾರೈಸಲಿದ್ದಾರೆ. ಸಮಾರಂಭದಲ್ಲಿ ಅತಿಥಿಗಳಾಗಿ ರಾಘವೇಂದ್ರರಾಜಕುಮಾರ್, ವಿನಯ್ ರಾಜ್‍ಕುಮಾರ್, ಧ್ರುವಸರ್ಜಾ, ಶ್ರೀಮುರಳಿ, ಗಣೇಶ್, ಶ್ರೀನಗರಕಿಟ್ಟಿ, ಲೂಸ್‍ಮಾದಯೋಗಿ, ಮೇಘನಾಗಾಂವ್ಕರ್ ಮತ್ತು ವಿಶೇಷ ಅತಿಥಿಯಾಗಿ ಹಿತೈಷಿ ಕೆ.ಪಿ.ನಂಜುಂಡಿ ಆಗಮಿಸಲಿದ್ದಾರೆ ತಾರಬಳಗದಲ್ಲಿ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಅಚ್ಯುತಕುಮಾರ್, ಕುರಿಪ್ರತಾಪ್, ಬುಲೆಟ್‍ಪ್ರಕಾಶ್, ರಾಜೇಶ್‍ನಟರಂಗ ಮುಂತಾದವರ ನಟನೆ ಇದೆ.

ಸಂಗೀತ ಡಾ.ಕಿರಣ್‍ತೂಟಮ್‍ಬೈಲು, ಛಾಯಗ್ರಹಣ ನವೀನ್‍ಕುಮಾರ್.ಐ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ರವಿವರ್ಮ-ಥ್ರಿಲ್ಲರ್‍ಮಂಜು, ನೃತ್ಯ ಮುರಳಿ ಅವರದಾಗಿದೆ. ನಿರ್ದೇಶನ ಜೊತೆಗೆ ನಿರ್ಮಾಣದ ಸಾರಥ್ಯವನ್ನು ವಹಿಸಿಕೊಂಡಿರುವ ಆರ್.ಚಂದ್ರ್ರು ಅವರು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತರಲು ಯೋಜನೆ ಹಾಕಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
20/05/18

ಚಂದ್ರು ಸಿನಿಮಾಗೆ ಉಪೇಂದ್ರ ಬಂದ್ರು
ನಿರ್ದೇಶಕ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‍ದಲ್ಲಿ ಬ್ರಹ್ಮ ತೆರೆಕಂಡು ಯಶಸ್ವಿಯಾಗಿತ್ತು. ಈಗ ಅದೇ ತಂಡದಿಂದ ‘ಐ ಲವ್ ಯು’ ಅಡಿ ಬರಹದಲ್ಲಿ ಎರಡು ಹೃದಯಗಳ ಸಿಗ್ನೇಚರ್ ಎಂದು ಹೇಳಿಕೊಂಡಿರುವ ಸಿನಿಮಾ ಸೆಟ್ಟೇರಲಿದೆ. 80ರ ದಶಕದಲ್ಲಿ ತೆರೆಕಂಡು ಹಿಟ್ ಆಗಿದ್ದ ಶಂಕರ್‍ನಾಗ್ ಅಭಿನಯದ ‘ಐ ಲವ್ ಯು’ ಸಿನಿಮಾವು ಮನೋವೈಜ್ಘಾನಿಕ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಅದೇ ಹೆಸರಿನಲ್ಲಿ ಆರ್.ಚಂದ್ರು ಅವರು ಕನಕ ನಂತರ ಇದರಲ್ಲಿ ಬ್ಯುಸಿಯಾಗಿದ್ದು, ಅಂತಹುದೆ ಪಕ್ಕಾ ಟ್ರೆಂಡಿ ಪ್ರೀತಿ ಕತೆಯನ್ನು ತೆಗೆದುಕೊಂಡಿದ್ದಾರೆ. ಅರ್ಜುನ್‍ರೆಡ್ಡಿ ಶೈಲಿಯಲ್ಲಿರುವುದರಿಂದ ಉಪೇಂದ್ರ ಆ ಜಾನರ್ ಚೆನ್ನಾಗಿ ಹೊಂದಿಕೊಳ್ಳಲಿರುವುದರಿಂದ ಅವರನ್ನೆ ಆಯ್ಕೆ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಅಪ್ಪಟ ಕನ್ನಡದ ಹುಡುಗಿ ನಾಯಕಿಯಾಗುತ್ತಿರುವುದರಿಂದ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಹೈದರಾಬಾದ್ ಮೂಲದ ರಾಜ್‍ಪ್ರಭಾಕರ್. ಉಪೇಂದ್ರ ಸದ್ಯ ಹೋಮ್ ಮಿನಿಸ್ಟರ್ ಚಿತ್ರದ ಸಲುವಾಗಿ ಮಲೇಶಿಯಾ ಪ್ರವಾಸದಲ್ಲಿದ್ದಾರೆ. ಅದನ್ನು ಮುಗಿಸಿದ ನಂತರ ಈ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಮೇ 18ರಂದು ಮಹೂರ್ತ ಆಚರಿಸಿಕೊಳ್ಳುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
3/05/18

ಐ ಲವ್ ಯು ಅಂತಾರೆ ಆರ್.ಚಂದ್ರು
ಚಂದನವನದಲ್ಲಿ ಹಳೇ ಚಿತ್ರಗಳ ಶೀರ್ಷಿಕೆಗಳನ್ನು ಬಳಸಿಕೊಳ್ಳುತ್ತಿರುವುದು ರೂಡಿಯಾಗುತ್ತಿದೆ. ಅದರಂತೆ 80ರಲ್ಲಿ ತೆರೆಕಂಡು ಹಿಟ್ ಆಗಿದ್ದ ಶಂಕರ್‍ನಾಗ್ ಅಭಿನಯದ ‘ಐ ಲವ್ ಯು’ ಚಿತ್ರ ಈಗ ಅದೇ ಹೆಸರಿನಲ್ಲಿ ಸೆಟ್ಟೇರುತ್ತಿದೆ. ನಿರ್ದೇಶಕ ಆರ್.ಚಂದ್ರು ಅವರು ಕನಕ ನಂತರ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಕತೆಗೆ ಇದು ಸೂಕ್ತವಾಗಿರುವುದರಿಂದ ಇದನ್ನು ಇಡಲಾಗಿ, ಎರಡು ಹೃದಯಗಳ ಸಿಗ್ನೇಚರ್ ಎಂಬುದನ್ನು ಅಡಿಬರಹದಲ್ಲಿ ಹೇಳಿಕೊಂಂಡಿದ್ದಾರೆ. ಶೀರ್ಷಿಕೆ ಹೇಳುವಂತೆ ಪಕ್ಕಾ ಟ್ರೆಂಡಿ ಪ್ರೀತಿಯ ಕತೆಯಾಗಿರುವುದರಿಂದ ನಾಯಕ ಯಾರೆಂಬುದು ತಿಳಿದಿರುವುದಿಲ್ಲ. ಸದ್ಯ ಕೆಲ ನಾಯಕರೊಂದಿಗೆ ಚರ್ಚೆ ಮುಗಿಸಿರುವ ಚಂದ್ರು ಅದು ಪಕ್ಕಾ ಆದ ನಂತರ ತಿಳಿಸುತ್ತಾರಂತೆ. ಅಪ್ಪಟ ಕನ್ನಡದ ಹುಡುಗಿ ನಾಯಕಿಯಾಗುತ್ತಿರುವುದರಿಂದ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಹೈದರಾಬಾದ್ ಮೂಲದ ರಾಜ್‍ಪ್ರಭಾಕರ್. ಇವರು ಒಂದು ಏಳೆಯ ಸಾರಾಂಶ ಕೇಳಿ ಥ್ರಿಲ್ ಆಗಿ, ಎರಡು ಭಾಷೆಗಳಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇನ್ನುಳಿದಂತೆ ತಂತ್ರಜ್ಘರು ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಏಪ್ರಿಲ್ 1 ರಂದು ಹಾಡುಗಳ ಧ್ವನಿಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಿದ್ದು, 20ರಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.

ಸಿನಿ ಸರ್ಕಲ್.ಇನ್ ನ್ಯೂಸ್
30/03/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore