HOME
CINEMA NEWS
GALLERY
TV NEWS
REVIEWS
CONTACT US

ಸೆನ್ಸಾರ್ ಅಂಗಳದಲ್ಲಿ ಫೇಸ್ ಟು ಫೇಸ್
ಹೊಸಬರ “ಫೇಸ್ 2 ಫೇಸ್” ಚಿತ್ರೀಕರಣೋತ್ತರ ಕೆಲಸಗಳು ಮುಗಿದಿದ್ದು, ಸದ್ಯದಲ್ಲೆ ಸೆನ್ಸಾರ್‍ಗೆ ಹೋಗಲಿದೆ. ಮಂಜುಮಾಂಡವ್ಯ ಸಂಭಾಷಣೆ, ವಿಶ್ವಜಿತ್‍ರಾವ್ ಛಾಯಾಗ್ರಹಣ, ಕ್ರೇಜಿಮೈಂಡ್ಸ್ ಸಂಕಲನ, ಬಾಬುಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆ ಇದೆ. ಜಯಂತ್‍ಕಾಯ್ಕಿಣಿ, ಡಾ||ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯದ ಗೀತೆಗಳಿಗೆ ಏಕ್‍ಕ್ವಾಬ್ ಸಂಗೀತ ಸಂಯೋಜಿಸಿದ್ದರೆ. ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್‍ಜನಾರ್ಧನ್. ದೃಶ್ಯಂದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ರೋಹಿತ್‍ಭಾನುಪ್ರಕಾಶ್ ನಾಯಕ. ಪೂರ್ವಿಜೋಷಿ, ದಿವ್ಯಾಹುರುಡುಗ ನಾಯಕಿಯರು. ಇವರೊಂದಿಗೆ ವೀಣಾಸುಂದರ್, ಗೋಪಾಲ್, ಕೃಷ್ಣದೇಶಪಾಂಡೆ, ರೂಪಗೌಡ, ಸುಚೇಂದ್ರಪ್ರಸಾದ್, ಆರ್ಯನ್, ಅರುಣ್ ಅಲೆಕ್ಸಾಂಡರ್, ಯಮುನಾ ಮುಂತಾದವರಿದ್ದಾರೆ. ಮಗ ನಿರ್ದೇಶಕನಾಗುತ್ತಿರುವ ಕಾರಣ ಸುಮಿತ್ರ.ಬಿ.ಕೆ ಶ್ರೀ ಬನಶಂಕರಿ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/12/18


ರಿಲೀಸ್ ಆಯ್ತು ಫೇಸ್ 2 ಫೇಸ್ ಹಾಡುಗಳು
ತ್ರಿಕೋನ ಪ್ರೇಮಕತೆ, ಇ.ಕೆ.ಕವಾಬ್-ದಿ ಬ್ಯಾಂಡ್ ಸಂಗೀತದ ‘ಫೇಸ್ 2 ಫೇಸ್’ ಚಿತ್ರದ ಹಾಡುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚಿತ್ರತಂಡ ಮತ್ತು ಗಣ್ಯರುಗಳು ಮಾತನಾಡಿದ್ದನ್ನು ಓದುಗರಿಗೆ ಸಾದರಪಡಿಸಲಾಗುತ್ತಿದೆ.
ನಿರ್ದೇಶಕ, ಸಂದೀಪ್‍ಜನಾರ್ಧನ್: ಉಪೇಂದ್ರ ಜೊತೆಯಲ್ಲಿ ಐದು ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ನನ್ನದು ಮಾತು ಕಡಿಮೆ, ಕೆಲಸ ಜಾಸ್ತಿ. ಕತೆ ಬರದು ನಿರ್ಮಾಪಕರು ಸಿಗಲಿಲ್ಲ. ಅಮ್ಮನಿಗೆ ಕಷ್ಟ ಅರ್ಥವಾಗಿ ಹಣ ಹೂಡಿದರು. ಕಡಿಮೆ ಬಜೆಟ್‍ನಲ್ಲಿ ಮಾಡಬೇಕೆಂದು ನಿರ್ಧರಿಸಿ, ಮುಂದೆ ಗುಣಮಟ್ಟ ಅಂತ ಡಬ್ಬಲ್ ಆಯಿತು. ಬಿಕ್ಕಮಗಳೂರು, ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ಸದ್ಯದಲ್ಲೆ ಆಗಲಿದೆ.
ಕ್ರೇಜಿಮೈಂಡ್ಸ್, ಸಂಕಲನಕಾರ: ಎರಡು ಮುಖ, ಮುಖವಾಡ ಇರುವ ಕತೆಯಾಗಿದೆ.

ಸುಮಿತ್ರಾ..ಬಿ.ಕೆ. ನಿರ್ಮಾಪಕಿ: ಇಲ್ಲಿಯವರೆಗೂ ಎರಡೂವರೆ ಕೋಟಿ ಖರ್ಚು ಮಾಡಲಾಗಿದೆ. ಮುಂದೆ ಎಷ್ಟು ಅಂತ ಹೇಳಲಿಕ್ಕೆ ಆಗೋಲ್ಲ.

ಪೂರ್ವಿಜೋಷಿ, ನಾಯಕಿ; ನಿರ್ದೇಶಕರು ಮೊದಲ ಬಾರಿ ಕತೆ ಹೇಳಿದಾಗ ಅರ್ಥವಾಗಲಿಲ್ಲ. ಹಳ್ಳಿ ಹುಡುಗಿಯಾಗಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪಾತ್ರ.

ದಿವ್ಯಾಉರುಡಗ, ನಾಯಕಿ: ಉಪೇಂದ್ರ ಶಿಷ್ಯರಾಗಿದ್ದರಿಂದ ಗೊಂದಲ ಕತೆ ಇದೆ. ಪೂರ್ತಿ ಸಿನಿಮಾ ನೋಡಿದರೆ ಅರ್ಥವಾಗುತ್ತದೆ. ಪಾತ್ರ ಹೇಳಿದರೆ ಸಾರಾಂಶ ತಿಳಿಯುತ್ತದೆ. ದಯವಿಟ್ಟು ಚಿತ್ರಮಂದರಕ್ಕೆ ಬನ್ನಿ.
ರೋಹಿತ್‍ಭಾನುಪ್ರಕಾಶ್, ನಾಯಕ: ಶಿಕ್ಷಕರ ದಿನಾಚರಣೆ ದಿನದಂದು ಗೀತೆಗಳು ಲೋಕಾರ್ಪಣೆಯಾಗಿದೆ. ನಾವು ಏನು ಆಗಿದ್ದೇವೆ ಅದಕ್ಕೆಲ್ಲಾ ಅಪ್ಪ, ಅಮ್ಮ, ಶಿಕ್ಷಕ ಕಾರಣರಾಗಿರುತ್ತಾರೆ. ನಿಜಜೀವನದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದೆ. ರೀಲ್‍ನಲ್ಲಿ ಅಂತಹುದೆ ರೀತಿಯಲ್ಲಿ ಕಾಣಿಸಿಕೊಂಡಿದ್ದೇನೆ.

ಶಿವರಾಂ: ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಲಾಗಿದೆ. ಈ ಪಾಠಿ ಜನರು ಬಂದಿದ್ದಾರೆಂದರೆ ಚಿತ್ರಕ್ಕೆ ಗೆಲುವು ಸಿಕ್ಕಿದೆ ಎಂದರ್ಥ ಕೊಡುತ್ತದೆ. ಉಪೇಂದ್ರರನ್ನು ಇಷ್ಟ ಪಡುವ ನನಗೆ ಅವರ ಶಿಷ್ಯನ ಚಿತ್ರ ಇಷ್ಟವಾದಂತೆ. ನಾಯಕ ನನ್ನ ಅಣ್ಣನ ಮೊಮ್ಮಗ. ಅಮಿತಾಬ್‍ಬಚ್ಚನ್ ಅವರನ್ನು ಪರಿಚಯಿಸಿದವರು. ಯಶಸ್ಸು, ದುಡ್ಡು ಹಿಂದೆ ಹೋಗಬೇಡಿ. ಅದು ನಿಮ್ಮನ್ನು ಹಿಂಬಾಲಿಸಿ ಬರವುಂತೆ ನಡೆದುಕೊಳ್ಳಬೇಕು.
ಪ್ರಥಮ್: ಬಿಗ್‍ಬಾಸ್ ಸೀಸನ್-6ಗೆ ನಿರ್ದೇಶಕರು ಹೋಗಲು ಅರ್ಹ ರಾಗಿದ್ದಾರೆ.

ನಾಯಕನ ತಂದೆ ರವಿಭಟ್, ನಾಯಕಿಯ ತಾಯಿ ಯಮುನಾಶ್ರೀನಿಧಿ, ಖಳನಟ ಆರ್ಯನ್ ಮತ್ತು ಗೆಳೆಯನ ಚಿತ್ರಕ್ಕೆ ಶುಭಹಾರೈಸಲು ಕಲಾವಿದರುಗಳಾದ ಅನುಪಮಾ, ವಿನಾಯಕಜೋಷಿ, ನಿರಂಜನ್, ಕೃಷಿತಾಪಂಡ, ನವೀನ್, ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
7/09/18


ತ್ರಿಕೋನ ಪ್ರೇಮ ಕತೆ
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಫೇಸ್ 2 ಫೇಸ್’ ಚಿತ್ರದಲ್ಲಿ ಥ್ರಿಲ್ಲರ್ ಪ್ರೇಮ ಕತೆ ಇದೆ. ಸತ್ಯ, ತಾಯಿ, ಹುಡುಗಿ, ಗೆಳತನ ಇವೆಲ್ಲಾವನ್ನು ನಂಬಿಕೊಂಡಿದ್ದು, ಪ್ರೀತಿಯಲ್ಲಿ ಬೀಳುತ್ತಾನೆ. ಅವಳು ಕೈ ಕೊಟ್ಟಾಗ ಮತ್ತೋಬ್ಬಳ ಪ್ರವೇಶವಾಗುತ್ತದೆ. .ತ್ರಿಕೋನ ಪ್ರೇಮಕತೆಯಲ್ಲಿ ಶ್ರೀಮಂತನಾಗಲು ಅಡ್ಡ ದಾರಿ ಹಿಡಿಯುತ್ತಾನೆ. ನಂತರ ಅವಘಡಗಳು ಬಂದಾಗ ಅದನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಅರ್ಥವಾಗುವ ಹಾಗೇ ಚಿತ್ರಕತೆಯನ್ನು ಸಿದ್ದಪಡಿಸಿದ್ದಾರೆ ನಿರ್ದೇಶಕ ಸಂದೀಪ್‍ಜನಾರ್ಧನ್. ಇವರ ಕುರಿತು ಹೇಳುವುದಾದರೆ ಉಪೇಂದ್ರ ಬಳಿ ಸಹಾಯಕರಾಗಿ ದುಡಿದ ಅನುಭವವಿದೆ. ಎರಡು ಹಂತಗಳಲ್ಲಿ ಚಿಕ್ಕಮಗಳೂರು, ಬೆಂಗಳೂರು, ಮಂಗಳೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಜಯಂತ್‍ಕಾಯ್ಖಣ , ವಿ.ನಾಗೇಂದ್ರಪ್ರಸಾದ್ ರಚಿಸಿರುವ ಐದು ಹಾಡುಗಳಿಗೆ ಮುಂಬೈ ಮೂಲದ ಇ.ಕೆ.ಖವಾಬ್ ಸಂಗೀತ ಸಂಯೋಜಿಸುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದೃಶ್ಯದಲ್ಲಿ ಖಳನಟನಾಗಿ ಅಭಿನಯಿಸಿದ್ದ ರೋಹಿತ್‍ಭಾನುಪ್ರಕಾಶ್ ನಾಯಕನಾಗಿ ಪ್ರಥಮ ಅನುಭವ. ಪಕ್ಕದ್ಮನೆ ಹುಡುಗನಂತೆ ಸುತ್ತಲೂ ಸನ್ನಿವೇಶಗಳು ಆವರಿಸಿಕೊಂಡಾಗ, ಅದು ಹೇಗೆ ಪರಿಣಾಮ ಬೀರುತ್ತೆ, ಯಾವ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತದೆ ಎಂಬಂತಹ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪೂರ್ವಿಜೋಷಿ ಮತ್ತು ದಿವ್ಯಾಹುರುಡಗ ನಾಯಕಿಯರು. ಉಳಿದಂತೆ ನಿಕ್ಸ್‍ಕುಕ್ರೇಜ, ಬ.ಲರಾಜ್ವಾಡಿ, ಸುಮ ಮುಂತಾದವರು ನಟಿಸುತ್ತಿದ್ದಾರೆ. ಛಾಯಗ್ರಹಣ ವಿಶ್ವಜಿತ್‍ರಾವ್, ಸಂಭಾಷಣೆ ಮಂಜುಮಾಂಡವ್ಯ, ಸಂಕಲನ ಕ್ರೇಜಿಮೈಂಡ್ಸ್ ಅವರದಾಗಿದೆ. ಮಗ ಆಕ್ಷನ್ ಕಟ್ ಹೇಳುವ ಸಿನಿಮಾಗೆ ಅಮ್ಮ ಸುಮಿತ್ರಜನಾರ್ಧನ್, ಮಾಮ ಮಂಜುನಾಥ್ ಹಣ ಹೂಡುತ್ತಿದ್ದಾರೆ. ಬನಶಂಕರಿ ದೇವಿ ಸನ್ನಿದಿಯಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸಿನಿಪಂಡಿತರು, ಹಿತೈಷಿಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
-28/09/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore