HOME
CINEMA NEWS
GALLERY
TV NEWS
REVIEWS
CONTACT US
ಯೋಗಿ ದುನಿಯಾ ಚಿತ್ರಮಂದಿರ ಸಮಸ್ಯೆ
ಯುಎಫ್‍ಓ, ಕ್ಯೂಬ್ ವಿರುದ್ದ ಹೋರಾಡುವ ಸಲುವಾಗಿ ಬಿಡುಗಡೆಯಾಗಬೇಕಾದ ಚಿತ್ರಗಳನ್ನು ಮಾಣಿಜ್ಯ ಮಂಡಳಿ ಸಲಹೆ ಮೇರೆಗೆ ಮುಂದೂಡಲಾಗಿತ್ತು. ಈ ಸಂದರ್ಭದಲ್ಲಿ ಸಾರಾಗೋವಿಂದು ಪರಿಸ್ಥಿತಿ ಹತೋಟಿಗ ಬಂದ ಸಂದರ್ಭದಲ್ಲಿ ಮುಂದೂಡಲ್ಪಟ್ಟ ಚಿತ್ರಗಳಿಗೆ ಆದ್ಯತೆ ನೀಡಲಾಗುವುದು ಎಂಬುದಾಗಿ ಭರವಸೆ ನೀಡಿದ್ದರು. ಅದರಂತೆ ‘ಯೋಗಿ ದುನಿಯಾ’ ಇದೇ 23 ರಂದು ತೆರೆಗೆ ಬರುತ್ತಿದೆ. ಆದರೆ ಇವರ ಎದುರು ಬೇರೆ ಚಿತ್ರಗಳು ಬರುತ್ತಿರುವುದು ತೊಂದರೆಯಾಗುತ್ತಿದೆ ಎಂದು ಚಿತ್ರದ ಕೊನೆಯ ಪತ್ರಿಕಾಗೋಷ್ಟಿಯಲ್ಲಿ ಯೋಗಿ, ನಿರ್ಮಾಪಕ ಸಿದ್ದರಾಜು ಬೇಸರ ವ್ಯಕ್ತಪಡಿಸಿದರು. ಇದರ ಸಲುವಾಗಿ ಮತ್ತೋಮ್ಮೆ ಮಂಡಳಿಯನ್ನು ಸಂಪರ್ಕಿಸುವ ಇರಾದೆ ಇದೆ ಎನ್ನುತ್ತಾರೆ. ರಚನೆ,ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಹರಿ ಹೇಳುವಂತೆ ರಾತ್ರಿ ಬೆಂಗಳೂರು ಹೇಗಿದೆ ಅಂತ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು. ಮಧ್ಯಮ ವರ್ಗದ ಹುಡುಗಿ, ಗಾರ್ಮೆಂಟ್ಸ್ ಕೆಲಸದಲ್ಲಿ ತೊಡಗಿಕೊಂಡಿದ್ದು, ನಗುವನ್ನು ನೋಡದ ನತದೃಷ್ಣ ಹೆಣ್ಣಾಗಿ ಕಾಣಿಸಿಕೊಂಡಿದ್ದೇನೆ ಎಂಬುದು ನಾಯಕಿ ಹಿತಾಚಂದ್ರಶೇಖರ್ ನುಡಿ.

ಟ್ರಾವಲ್ ಏಜೆಂಟ್, ಕಷ್ಟ-ಸುಖ ಬಂದಾಗ ಕುಡಿಯುತ್ತೇನೆ. ದುನಿಯಾ-2 ಕತೆಗೂ ಸಂಬಂದವಿಲ್ಲ. ಚಟಕ್ಕೆ ಬಿದ್ದಾಗ ಏನೇನು ಎದುರಿಸಬೇಕಾಗುತ್ತದೆ, ಇದರಿಂದ ಕುಟುಂಬ ಹೇಗೆ ತೊಂದರೆ ಅನುಭವಿಸುತ್ತದೆ. ಮದ್ಯೆ ನವಿರಾದ ಪ್ರೀತಿ ಇರಲಿದೆ. 90ರ ದಶಕಕ್ಕೆ ರಿಲೇಟ್ ಆಗಲಿದೆ ಎಂದು ಯೋಗಿ ಹೇಳಿದರು. ಇಡೀ ಚಿತ್ರೀಕರಣ ರಾತ್ರಿ ಹೊಗೆಯಲ್ಲಿ ನಡೆಸಿರುವುದು ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದು ಕ್ರಿಕೆಟ್ ಬೆಟ್ಟಿಂಗ್ ನಾಯಕನಾಗಿ ನಟಿಸಿರುವ ನೀನಾಸಂಸತೀಶ್. ನಟ ಶಿವಮಂಜು, ನಿರ್ಮಾಪಕ ಎನ್.ವೆಂಕಟೇಶ್‍ಬಾಬು, ಸಹ ನಿರ್ಮಾಪಕರಾದ ಕೆ.ನಾರಾಯಣಮೂರ್ತಿ, ಜಿ.ಚಂದ್ರಶೇಖರಪಾಟೀಲ್ ಉಪಸ್ತಿತರಿದ್ದರು. ಹಿಂದಿನ ಚಿತ್ರಗಳ ಕೆಟ್ಟ ಅನುಭವದಿಂದ ಆರ್ಯ ಮೌರ್ಯ ಮುಖಾಂತರ ಸ್ವಂತವಾಗಿ 180 ಕೇಂದ್ರಗಳಲ್ಲಿ ಶುಕ್ರವಾರದಂದು ಜನರಿಗೆ ತೋರಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/03/18

ದುನಿಯಾ, ಯೋಗಿ ದುನಿಯಾ, ದುನಿಯಾ-2
ಒಂದು ಸಿನಿಮಾ ಹಿಟ್ ಆಗಿದೆ ಅಂದರೆ ಭಾಗ-2 ಇಲ್ಲವೆ ಅದೇ ಹೆಸರಿನ ಪಕ್ಕ ಬೇರೆ ಹೆಸರನ್ನು ಹಾಕಿಕೊಂಡು ಚಿತ್ರಗಳು ಬರುವುದು ವಾಡಿಕೆಯಾಗಿದೆ. ಅದರ ಸಾಲಿಗೆ ‘ದುನಿಯಾ-2’ ಸೇರ್ಪಡೆಯಾಗಿದೆ. ದುನಿಯಾ 11 ಹನ್ನೊಂದು ವರ್ಷಗಳ ಕೆಳಗೆ ಬಿಡುಗಡೆಗೊಂಡು ಎಲ್ಲರಿಗೂ ಭವಿಷ್ಯ ಸೃಷ್ಟಿಯಾಗಿದ್ದು ಇತಿಹಾಸ. ನಿರ್ದೇಶಕ ಚಲಪತಿ ಭಾಗ-2 ಚಿತ್ರದ ಕತೆಯನ್ನು ಯೋಗಿಗೆ ಹೇಳಿದ್ದಾರೆ. ಅವರು ಕತೆ ಚೆನ್ನಾಗಿದ್ದರಿಂದ ಒಪ್ಪಿಕೊಂಡು, ಅನಿವಾರ್ಯ ಕಾರಣದಿಂದ ಪ್ರಾಜೆಕ್ಟ್‍ನಿಂದ ಹೊರಬಂದು ತಮ್ಮದೆ ಬ್ಯಾನರ್ ಮೂಲಕ ಇದೇ ಹೆಸರಿನೊಂದಿಗೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದು ನ್ಯಾಯಲಯದಲ್ಲಿ ಒಂದೂವರೆ ವರ್ಷ ಕಾಲ ವ್ಯಾಜ್ಯ ನಡೆದು ತೀರ್ಪು ಯೋಗಿ ಕಡೆಗೆ ಆಗಿರುವುದಿಲ್ಲ. ಇವಿಷ್ಟನ್ನು ನಿರ್ದೇಶಕರು ಮೊದಲ ಪತ್ರಿಕಾಗೋಷ್ಟಿಯಲ್ಲಿ ಎಲ್ಲವನ್ನು ಹೇಳಿಕೊಂಡರು. ಈಗಾಗಲೇ ಮಹಾರಾಷ್ಟ್ರದ ಗಡಿಭಾಗದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ನಾಯಕಿ ಸೇರಿದಂತೆ ಉಳಿದ ಕಲಾವಿದರು ಆಯ್ಕೆಯಾಗಬೇಕಿದೆ. ಮೈಸೂರು, ಗೋಕರ್ಣ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಇರಾದೆ ಇದೆ.

ಸ್ಕೂಟರ್ ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ನಾಯಕ, ಗಾರ್ಮೆಂಟ್ಸ್‍ನಲ್ಲಿರುವ ನಾಯಕಿ ಇಬ್ಬರ ಸುಂದರ ಪ್ರೇಮಕತೆಯನ್ನು ಹೇಳಲಾಗುತ್ತಿದೆ. ಇದರ ಜೊತೆಗೆ ತಾಯಿ-ಮಗನ ಭಾವನೆಗಳು ಇರಲಿರುವುದು ವಿಶೇಷವಾಗಿದೆ. ಹಿಂದಿನ ಚಿತ್ರಕ್ಕೂ ಯಾವುದೇ ಸಂಬಂದವಿಲ್ಲ. ಅದರ ಮೇಕಿಂಗ್ ಸ್ಟೈಲ್‍ನ್ನು ಬಳಸಲಾಗುವುದು. ಭೂಗತ ಲೋಕ ಇರದೆ, ರೌಡಿಸಂ, ರಾಜಕೀಯ ಸ್ಪರ್ಶ ಕೆಲವು ಕಡೆ ಬರಲಿದೆ ಎಂಬುದರ ಮಾಹಿತಿಯನ್ನು ಬಿಚ್ಚಿಟ್ಟರು. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣ ಸಿಕೊಂಡಿರುವ ರಾಜೈ ಮುಖ್ಯ ಪಾತ್ರ, ತಾಯಿಯಾಗಿ ಹರಣ ಆಯ್ಕೆಯಾಗಿದ್ದಾರೆ. ಗೌತಂಶ್ರೀವತ್ಸ –ವಿಕ್ರಂವರ್ಮ ಜಂಟಿಯಾಗಿ ಐದು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಗ್ರಹಣ ಹರೀಶ್.ಎನ್.ಸೊಂಡೇಕೊಪ್ಪ, ಸಾಹಸ ಟೈಗರ್ ಚಂದ್ರು ಅವರದಾಗಿದೆ. ನಿರ್ದೇಶಕರ ನಂಬಿಕೆ ಮೇಲೆ ಉದ್ಯಮಿ ಕೃಷ್ಣಂರಾಜು ನಾಲ್ಕೂವರೆ ಕೋಟಿ ಸುರಿಯಲು ಮನಸ್ಸು ಮಾಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
11/03/18
ದುನಿಯಾ- 2 ಈಗ ಯೋಗಿ ದುನಿಯಾ
ದುನಿಯಾ-2 ಹೆಸರಿನೊಂದಿಗೆ ಶುರುವಾದ ಸಿನಿಮಾ ಕೆಲವರು ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ‘ಯೋಗಿ ದುನಿಯಾ’ ನಾಮಕರಣದೊಂದಿಗೆ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಕಳೆದ ವರ್ಷ ಆಡಿಯೋ ಲೋಕಾರ್ಪಣೆ ಸಂದರ್ಭದಲ್ಲಿ ಭೇಟಿ ಮಾಡಿತ್ತು. ಟ್ರೈಲರ್, ಹಾಡುಗಳನ್ನು ತೋರಿಸುವುದರ ಮೂಲಕ ಮತ್ತೋಮ್ಮೆ ಮಾದ್ಯಮದ ಎದುರು ತಂಡವು ಹಾಜರಾಗಿತ್ತು. ರಚನೆ,ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಹರಿ ಹೇಳುವಂತೆ ರಾತ್ರಿ ಬೆಂಗಳೂರು ಹೇಗಿದೆ ಅಂತ ತೋರಿಸುವ ಪ್ರಯತ್ನ ಮಾಡಲಾಗಿದೆ. ಶೇಕಡ 90 ರಷ್ಟು ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಸನ್ನಿವೇಶಕ್ಕೆ ತಕ್ಕಂತೆ ಗೀತೆಗಳು ಬರುತ್ತದೆ. ಮೊದಲಬಾರಿ ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಥ್ಯಾಂಕ್ಸ್ ಎಂದರು. ನಿರ್ದೇಶಕರು ಕತೆ ಹೇಳಿದಾಗ ಇಂತಹ ಪಾತ್ರ ನನ್ನಿಂದ ಮಾಡಲು ಸಾದ್ಯನಾ ಎನ್ನುವ ಗೊಂದಲ ಕಾಡುತ್ತಿತ್ತು. ಆಗ ರಿಯಾಲಿಟಿ ಶೋ ಮುಗಿಸಿ, ಚಿತ್ರಕ್ಕೆ ತಯಾರಿ ಮಾಡಿಕೊಂಡು ನಟಿಸಿದ್ದು ಮರೆಯಲಾಗದ ಅನುಭವ. ಮಧ್ಯಮ ವರ್ಗದ ಹುಡುಗಿ, ಗಾರ್ಮೆಂಟ್ಸ್ ಕೆಲಸದಲ್ಲಿ ತೊಡಗಿಕೊಂಡಿದ್ದು, ನಗುವನ್ನು ನೋಡದ ನತದೃಷ್ಣ ಹೆಣ್ಣಾಗಿ ಕಾಣ ಸಿಕೊಂಡಿದ್ದೇನೆ. ದುನಿಯಾ ಐಕಾನ್ ಚಿತ್ರವಾದಂತೆ ಇದು ಸಹ ಆ ಸಾಲಿಗೆ ಸೇರುತ್ತದೆ ಎನ್ನುತ್ತಾರೆ ನಾಯಕಿ ಹಿತಾಚಂದ್ರಶೇಖರ್.

ಹಾಡುಗಳು ಹೊರತುಪಡಿಸಿದರೆ ಎಲ್ಲಾ ಸನ್ನಿವೇಶಗಳು ನಿಜರೂಪದಿಂದ ಕೂಡಿಬಂದಿದೆ. ರಾತ್ರಿ ಕತೆಯಾದ ಕಾರಣ ಬರ್ಬರ ಬದುಕಿನ ತಣ್ಣನೆಯ ಕೌರ್ಯ ಇದೆ. ನನ್ನ ಪಾತ್ರದಿಂದಲೇ ಕತೆಯು ತಿರುವು ಪಡೆದುಕೊಳ್ಳುತ್ತದೆ ಎಂಬುದು ನೀನಾಸಂಅಶ್ವಥ್ ನುಡಿ. ಎಲ್ಲಾ ಪಾತ್ರಗಳು ಚೌಕಟ್ಟು ಮೀರಿ ಹೋಗಿಲ್ಲ. ದುನಿಯಾ ಚಿತ್ರ ನೋಡಿ ಯೋಗಿ ಅಭಿಮಾನಿಯಾಗಿದ್ದೇನೆ. ಹಿನ್ನಲೆ ಸಂಗೀತ ಒದಗಿಸಿರುವುದು ಛಾಲೆಂಜ್ ಆಗಿತ್ತು. ಸರಿಗಮಪ ಲಿಟ್ಟ್ ಚಾಂಪ್ಸ್ ಪ್ರತಿಭೆ ಐಶ್ವರ್ಯರಂಗನಾಥನ್ ಅವರಿಂದ ಒಂದು ಗೀತೆಯನ್ನು ಹಾಡಿಸಲಾಗಿದೆ ಎಂದು ವಿವರ ನೀಡಿದರು ಬಿ.ಜೆ.ಭರತ್. ಹೋಂ ಬ್ಯಾನರ್ ಆಗಿದ್ದರಿಂದ ಕೆಲಸ ಮಾಡೋದು ಕಷ್ಟ ಅಂತ ನಗಿಸಿದರು ನಾಯಕನ ಗೆಳೆಯನಾಗಿ ಮುಸ್ಲಿಂ ಹುಡುಗನ ಪಾತ್ರ ಮಾಡಿರುವ ಯೋಗಿ ಅಣ್ಣ ಮಹೇಶ್.

ಸಿಹಿಕಹಿಗೀತಾ ಬ್ಯಾನರ್ ಮೂಲಕ ಬಣ್ಣ ಹಚ್ಚಲಾಯಿತು. ಅವರ ಮಗಳೇ ನಾಯಕಿಯಾಗಬೇಕೆಂದು ಹಠ ಹಿಡಿದು ಆಯ್ಕೆ ಮಾಡಿದ್ದೆ. ಮೈ ಫಿಲಿಂ ಫ್ಯಾಕ್ಟರಿ ಶುರುಮಾಡಲಾಗಿದ್ದು ಇದರ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ ಅಂತ ಹೇಳಿಕೊಂಡಿದ್ದು ಅಂಬುಜಾಸಿದ್ದರಾಜು. ಅಮ್ಮನ ಮಾತಿಗೆ ಸಾಥ್ ನೀಡಿದ ಯೋಗಿ ಮಾತನಾಡಿ ಟ್ರಾವಲ್ ಏಜೆಂಟ್ ಪಾತ್ರ ಮಾಡಿದ್ದೇನೆ. ಕಷ್ಟ-ಸುಖ ಬಂದಾಗ ಕುಡಿಯುತ್ತೇನೆ. ತಂತ್ರೆಜ್ಘರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆಂದು ಅವರ ಹೆಸರುಗಳನ್ನು ಹೇಳಿ ಕಾಲೇಳೆದು ನಗಿಸಿದರು.


ದುನಿಯಾ ಬಿಡುಗಡೆಯಾಗಿ ಇಂದಿಗೆ 11 ವರ್ಷ ಆಗುತ್ತದೆ. ಕಳೆದ ವರ್ಷ ಬಿಡುಗಡೆ ಮಾಡುವ ಯೋಜನೆ ಇತ್ತು. ಕಾರಣಾಂತರಗಳಿಂದ ಆಗಲಿಲ್ಲ. ಹಿತೈಷಿಗಳು ಅಂತ ನಂಬಿದವರು ಟೈಟಲ್ ಬಗ್ಗೆ ತಕರಾರು ತೆಗೆದರು. ಅವರಿಗೆ ಒಳ್ಳೆಯದಾಗಲಿ. ಒಮ್ಮೆ ಶೀರ್ಷಿಕೆ ನೊಂದಣ ಮಾಡಿಸಿದರೆ ಹತ್ತು ವರ್ಷ ನಿರ್ಮಾಪಕರಿಗೆ ಸೇರಿದ್ದು ಎಂದು ವಾಣ ಜ್ಯ ಮಂಡಳಿಯಲ್ಲಿ ಲಿಖಿತ ಮೂಲಕ ನೀಡದೆ ಇರುವುದರಿಂದ ಇಷ್ಟೆಲ್ಲಾ ರಾದ್ದಾಂತ ಆಗಿದೆ. ದಾಖಲಾತಿ ಇದ್ದ ಪಕ್ಷ್ಕದಲ್ಲಿ ನ್ಯಾಯಲಯದಲ್ಲಿ ಹೋರಾಟ ಮಾಡಿ ಗೆಲ್ಲಬಹುದಿತ್ತು. ಈಗಲಾದರೂ ಮಂಡಳಿಯ ಬೈಲಾ ತಿದ್ದುಪಡಿ ಮಾಡಿಕೊಂಡರೆ ಉತ್ತಮ. ಇಲ್ಲದೆ ಹೋದರೆ ನಿರ್ಮಾಪಕಕರುಗಳು ಹೊಡೆದಾಡಿ ಕೊಂಡು ಸಾಯಬೇಕಾದ ಪರಿಸ್ಥಿತಿ ಎದುರಾಗುತ್ತಾದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ನಿರ್ಮಾಪಕ ಟಿ.ಪಿ.ಸಿದ್ದರಾಜು.
ನಟ ಶಿವಮಂಜು, ನಿರ್ಮಾಪಕ ಎನ್.ವೆಂಕಟೇಶ್‍ಬಾಬು, ಸಹ ನಿರ್ಮಾಪಕರಾದ ಕೆ.ನಾರಾಯಣಮೂರ್ತಿ, ಜಿ.ಚಂದ್ರಶೇಖರಪಾಟೀಲ್ ಉಪಸ್ತಿತರಿದ್ದರು. ಯೋಗಿ ದುನಿಯಾ ನೋಡಲು ಮುಂದಿನ ತಿಂಗಳು 9ರ ವರೆಗೆ ಕಾಯಬೇಕಾಗಿದೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-9/02/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore