HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿ, ಸೇಡು ಮಿಶ್ರಣ ದಳಪತಿ
ಆತನ ಹೆಸರು ರಾಮ್. ಅಂಗ ಎನ್ನುವ ಗ್ರಾಮದ ಅಧಿಪತಿ ಸೂರ್ಯಕಾಂತ್‍ತಂಬರಗಿ ನಡೆಸುವ ಅಪರಾಧ, ಕೃತ್ಯಗಳಿಗೆ ನೆರಳಾಗಿ ಇರುವವನು. ಇವನ ಕರ್ಮಕಾಂಡಳಿಗೆ ನಾಯಕಿಯ ಅಜ್ಜ-ಅಜ್ಜಿ ಕೂಡ ಬಲಿಯಾಗಿರುತ್ತಾರೆ. ಕ್ಲೈಮಾಕ್ಸ್‍ನಲ್ಲಿ ಆಕೆಯ ತಾಯಿ ಸ್ವಂತ ಅಕ್ಕನೆಂದು ತಿಳಿದು ಯಜಮಾನ ವಿರುದ್ದ ತಿರುಗಿ ಬಿದ್ದು ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದು ಕತೆ. ಇವಿಷ್ಟನ್ನು ಹೇಳಲು ನಿರ್ದೇಶಕ ಪ್ರಶಾಂತ್‍ರಾಜ್ ಎರಡು ಘಂಟೆ ತೆಗೆದುಕೊಂಡಿದ್ದಾರೆ. ವಾಯಿ ವಿಹಾರಕ್ಕೆ ಹೋಗುವ ರಾಮ್ ರಸ್ತೆಯಲ್ಲಿ ವೈದೇಹಿ ದರ್ಶನವಾಗುತ್ತದೆ. ಮೊದಲ ನೋಟದಲ್ಲೆ ಫಿದಾ ಆಗಿ ಅವಳ ಹಿಂದೆ ಬೀಳುತ್ತಾನೆ. ಬೇರೆ ಚಿತ್ರದಂತೆ ಲವ್ ದೃಶ್ಯಗಳನ್ನು ಎಪಿಸೋಡ್ ಮಾಡದೆ, ಹೆಚ್ಚು ಸಮಯ ತಎಗೆದುಕೊಳ್ಳದೆ ಬೇಗನೆ ಇಬ್ಬರಿಗೂ ಪ್ರೀತಿ ಹುಟ್ಟುವಂತೆ ಆಗುತ್ತದೆ. ಮತ್ತೋಂದು ಕಡೆ ಬೇರೋಬ್ಬ ಹುಡುಗನೊಂದಿಗೆ ಮದುವೆ ಮಾಡಲು ಪೋಷಕರು ನಿಶ್ಚಯಿಸುತ್ತಾರೆ. ಇದನ್ನು ವಿರೋಧಿಸಿ ರಾಮ್‍ನೊಂದಿಗೆ ದೂರದ ಊರಿಗೆ ಬಂದು ಸೂರ್ಯಕಾಂತ್ ಬಳಗದಲ್ಲಿ ಬಂದಿಯಾಗುತ್ತಾಳೆ. ಅಲ್ಲಿಂದ ಕತೆ ಬೇರೆ ಕಡೆ ತಿರುವು ಪಡೆದುಕೊಳ್ಳುತ್ತದೆ ಅದು ಏನು ಅಂತ ದಳಪತಿ ನೋಡಿದರೆ ಉತ್ತರ ಸಿಕ್ಕುತ್ತದೆ.

ಪ್ರೀತಿ ಮತ್ತು ರೌಡಿಸಂನ್ನು ಪರದೆ ಮೇಲೆ ಮುಖಾಮುಖಿಯಾಗಿ ಬಿಂಬಿಸಿರುವುದರಿಂದ ಪ್ರೇಕ್ಷಕ ನಿದ್ದೆಗೆ ಜಾರುವುದಿಲ್ಲ. ನಾಯಕನಾಗಿ ಪ್ರೇಮ್ ಎಂದಿನಂತೆ ಸುಲಲಿತವಾಗಿ ಅಭಿನಯಿಸಿ ಫೈಟ್‍ಗಳಲ್ಲಿ ಖುಷಿ ತಂದುಕೊಡುತ್ತಾರೆ. ಕೃತಿಕರಬಂದ ನಟನೆಗಿಂತ ಅವರ ಗ್ಲಾಮರ್ ಡ್ರೆಸ್ ಕಣ್ಣಿಗೆ ತಂಪು ಕೊಡುತ್ತದೆ. ಅಬ್ಬರಿಸಿ ಬೊಬ್ಬರಿಸಿರುವ ಶರತ್‍ಲೋಹಿತಾಶ್ವ, ತಂದೆಯಾಗಿ ಶ್ರೀನಿವಾಸಪ್ರಭು, ತಾಯಿ ಪಾತ್ರದಲ್ಲಿ ಪದ್ಮಜರಾವ್ ಕಾಣಿಸಿಕೊಂಡಿದ್ದಾರೆ. ನಗಿಸಲು ಚಿಕ್ಕಣ್ಣ, ಸಣ್ಣ ಪಾತ್ರಕ್ಕೆ ಕೃಷಿತಾಪಂಡ ಇದ್ದಾರೆ. ಚರಣ್‍ರಾಜ್ ಸಂಗೀತದಲ್ಲಿ ಎರಡು ಹಾಡು ಕೇಳಬಲ್. ಚೌಕದಲ್ಲಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ಪ್ರೇಮ್ ಅವರ ಮಾಸ್ ಅಭಿನಯ ನೋಡುವ ಇಚ್ಚೆ ಇದ್ದಲ್ಲಿ ದಳಪತಿ ಮೋಸ ಮಾಡುವುದಿಲ್ಲ.
ನಿರ್ಮಾಣ: ನವೀನ್
ಸಿನಿ ಸರ್ಕಲ್.ಇನ್ ನ್ಯೂಸ್
14/04/18

ಪ್ರೀತಿಗಾಗಿ ಹೋರಾಡುವ ದಳಪತಿ
ಗಾನಬಜಾನ, ಲವ್‍ಗುರು, ಜೂಮ್ ಚಿತ್ರಗಳಲ್ಲಿ ನವಿರಾದ ಪ್ರೀತಿ, ಚುರುಕಾದ ಹಾಸ್ಯವನ್ನು ನೀಡಿದ್ದ ನಿರ್ದೇಶಕ ಪ್ರಶಾಂತ್‍ರಾಜ್ ಈ ಬಾರಿ ಪಕ್ಕಾ ಆಕ್ಷನ್ ಚಿತ್ರ ಅಡಬರಹದಲ್ಲಿ ವಾರ್ ಫಾರ್ ಲವ್ ಅಂತ ಹೇಳಿಕೊಂಡಿರುವ ‘ದಳಪತಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಲಾವಿದರ ಡೇಟ್ಸ್ ಸಮಸ್ಯೆ, ವಿಎಫ್‍ಎಕ್ಸ್ ಕೆಲಸ ಇವುಗಳಿಂದ ಎರಡು ವರ್ಷ ಸಮಯ ತೆಗೆದುಕೊಂಡಿದೆ. ಈಗ ಬಿಡುಗಡೆ ಹಂತಕ್ಕೆ ಬಂದಿರುವುದರಿಂದ ತಂಡವು ಎರಡನೆ ಬಾರಿ ಮಾಧ್ಯಮದವರನ್ನು ಭೇಟಿ ಮಾಡಿತು. ಚಿತ್ರದ ಕುರಿತು ನಿರ್ದೇಶಕರು ಈ ರೀತಿಯಲ್ಲಿ ಬಣ್ಣಿಸಿಕೊಂಡರು. ಇಲ್ಲಿಯವರೆಗೂ ಮಾಡಿದ್ದಕ್ಕಿಂತ ಇದು ಭಿನ್ನವಾಗಿದೆ. ಚಂದ್ರು ಕತೆ ಹೇಳಿದಾಗ ಶೀರ್ಷಿಕೆ ದಳಪತಿ ಸೂಕ್ತವಾಗಿದೆ ಅನಿಸಿತು. ನಾಯಕನಾಗಿ ಪ್ರೇಮ್ ಅವರನ್ನು ಸಂಪರ್ಕಿಸಿದಾಗ ಅವರು ಚೌಕದಲ್ಲಿ ಬ್ಯುಸಿ, ನಾಯಕಿ ಕೃತಿಕರಬಂದ ಬಾಲಿವುಡ್‍ನಲ್ಲಿ ಕಮಿಟ್ ಆಗಿದ್ದರು. ಈ ಗ್ಯಾಪ್‍ನಲ್ಲ ಜೂಮ್ ಮುಗಿಸಲಾಯಿತು. ನಂತರ ಇಬ್ಬರ ಸಮಯವನ್ನು ಬಳಸಿಕೊಂಡು ಚಿತ್ರೀಕರಣ ಮುಗಿಸಲಾಗಿದೆ. ಪ್ರತಿಯೊಬ್ಬ ಹುಡುಗಿಯು ಇಂತಹ ಹುಡುಗ ಸಿಗಬೇಕೆಂದು, ಗಂಡ ಆಗಬೇಕೆಂದು ಆಸೆ ಪಡುತ್ತಾರೆ. ಅದರಂತೆ ಪ್ರತಿ ಹುಡುಗನಿಗೆ ಇದೇ ರೀತಿಯ ಹುಡುಗಿ, ಹೆಂಡತಿ ಸಿಗಬೇಕೆಂದು ಬಯಸುತ್ತಾರೆ. ರಾಮಯಣ-ಮಹಭಾರತದ ಅಂಶಗಳನ್ನು ತೆಗೆದುಕೊಂಡು ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಶರತ್‍ಲೋಹಿತಾಶ್ವ, ಚಿಕ್ಕಣ್ಣ, ಪದ್ಮಜರಾವ್ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ನಂತರ ಪ್ರೇಮ್ ಆಕ್ಷನ್ ಹೀರೋ ಆಗಿ ಅವಕಾಶಗಳು ಸಿಗುವುದು ಖಚಿತವೆಂದು ಭವಿಷ್ಯ ನುಡಿದರು.

ರಾಮ್ ಆಗಿ ಪ್ರೀತಿಯನ್ನು ಉಳಿಸಿಕೊಳ್ಳಲು ಸಮಯ ಸಂದರ್ಭನೋಡದೆ ಅವಳಿಗಾಗಿ ಕಲಿಯಾಗುತ್ತಾನೆ. ಶೇಕಡ 30ರಷ್ಟು ಮೃಧುವಾಗಿದ್ದು, ಉಳಿದಂತೆ ಹೋರುಡುವ ಬಿಸಿರಕ್ತದ ಯುವಕನಾಗಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದೇ ಹದಿನೆಂಟರಂದು ಹುಟ್ಟುಹಬ್ಬ ಇರುವುದರಿಂದ ನಿರ್ಮಾಪಕರು ದಳಪತಿಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂದರು ಪ್ರೇಮ್.

ಗೂಗ್ಲಿಯಲ್ಲಿ ಸ್ವಾತಿ ಪಾತ್ರವು ಹೆಸರು ತಂದುಕೊಟ್ಟಂತೆ, ಇದರಲ್ಲಿ ವೈದಿಯಾಗಿ ಎಲ್ಲರಿಗೂ ಇಷ್ಟವಾಗುತ್ತೇನೆ. ಒಂದು ಸನ್ನಿವೇಶದಲ್ಲಿ ಆಯುಧವನ್ನು ಹಿಡಿದುಕೊಂಡಿದ್ದೇನೆಂದು ನಕ್ಕರು ಕೃತಿಕರಬಂದ. ಏಪ್ರಿಲ್ ಹದಿಮೂರರಂದು ಸುಮಾರು 250 ಕೇಂದ್ರಗಳಲ್ಲಿ ಜಯಣ್ಣ ಸಂಸ್ಥೆಯ ಮೂಲಕ ತೆರೆಗೆ ತರಲು ಯೋಜನ ಹಾಕಲಾಗಿದೆ ಅಂತ ಮಾಹಿತಿ ನೀಡಿದರು ನಿರ್ಮಾಪಕ ನವೀನ್. ಸ್ಯಾಂಡಲ್‍ವುಡ್ ಯುಕೆ ಅಂತ ಸಂಘವನ್ನು ಕಟ್ಟಿಕೊಂಡು ಲಂಡನ್, ಯುರೋಪ್ ದೇಶಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವ ಮಂಜುನಾಥ್ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/04/18
ದಳಪತಿಯ ಆಡಿಯೋ ಸಂಭ್ರಮ
ಕಳೆದ ವರ್ಷ ಜೂಮ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿಮ್ಮ ಸಿನಿಮಾ ಬ್ಯಾನರ್ ಮೂಲಕ ಮತ್ತೊಂದು ಚಿತ್ರ ತಯಾರಾಗಿ ತೆರೆಗೆ ಬರುತ್ತಿದೆ. ದಳಪತಿ ಎಂಬ ಹೆಸರಿನ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಕೃತಿ ಕರಬಂಧ ಪ್ರಮುಖ ಪಾತ್ರಗಳಲ್ಲಿ ಕಾಣ ಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ನೆರವೇರಿತು. ಲವ್‍ಗುರು ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಪೆÇ್ರಡಕ್ಷನ್ ಹೌಸ್ ಆರಂಭಿಸಿದ ನಿರ್ಮಾಪಕ ನವೀನ್ ಈವರೆಗೆ 4 ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದು ಅವರ ಸಂಸ್ಥೆಯ ಮೂಲಕ ಹೊರಬರುತ್ತಿರುವ ಐದನೇ ಚಿತ್ರವಾಗಿದೆ. ಪ್ರಶಾಂತ್‍ರಾಜ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಯಕ ಪ್ರೇಮ್ ಅವರದು ಎರಡು ಷೇಡ್ ಇರುವ ಪಾತ್ರವಾಗಿದ್ದು, ನಾಯಕ ಒಂದು ಗ್ರೂಪನ್ನು ಲೀಡ್ ಮಾಡುವಂಥ ವ್ಯಕ್ತಿಯಾಗಿರುತ್ತಾನೆ. ಹಾಗಾಗಿ ದಳಪತಿ ಎಂಬ ಹೆಸರನ್ನು ಚಿತ್ರಕ್ಕಿಟ್ಟಿz್ದÉೀವೆ ಎಂದು ನಿರ್ದೇಶಕ ಪ್ರಶಾಂತ್‍ರಾಜ್ ಚಿತ್ರದ ಬಗ್ಗೆ ಮಾತನಾಡುತ್ತಾ ಹೇಳಿದರು. ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ಈಗಾಗಲೇ ಅಂತಿಮಹಂತ ತಲುಪಿದ್ದು, ಒಂದೆರಡು ವಾರಗಳಲ್ಲಿ ದಳಪತಿಯ ಮೊದಲಪ್ರತಿ ಹೊರಬರಲಿದೆ.

ನಾಯಕನಟ ಪ್ರೇಮ್ ಮಾತನಾಡಿ ನಾನು ಆರಂಭದಿಂದ ಈವರೆಗೆ ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲೂ ತುಂಬಾ ಅದ್ಬುತವಾದ ಹಾಡುಗಳೇ ಸಿಕ್ಕಿವೆ. ಸಂಗೀತ ನಿರ್ದೇಶಕರು ಹೊಸಬರಾಗಿದ್ದರೂ, ಹಳಬರಾಗಿದ್ದರೂ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿವೆ. ಅಲ್ಲದೆ ಈ ಚಿತ್ರದಲ್ಲಿ ಕವಿರಾಜ್, ಪವನ್ ಒಡೆಯರ್, ಪೆÇ್ರ. ಕೃಷ್ಣೇಗೌಡ ಉತ್ತಮವಾದ ಸಾಹಿತ್ಯವನ್ನು ಕೂಡ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಸಂಗೀತ ನಿರ್ದೇಶಕ ಚರಣರಾಜ್ ಮ್ಯೂಸಿಕ್ ಕಂಪೆÇೀಜ್ ಮಾಡಿದ್ದಾರೆ. ಅಲ್ಲದೆ ನಾನು ಅಭಿನಯಿಸಿದ ಬಹುತೇಕ ಸಿನಿಮಾಗಳನ್ನು ಆನಂದ್ ಆಡಿಯೋದವರೇ ರಿಲೀಸ್ ಮಾಡಿದ್ದಾರೆ. ಈ ಹಿಂದೆ ಬಂದ ಚೌಕ ಚಿತ್ರವನ್ನೂ ಕೂಡ ಅವರೇ ರಿಲೀಸ್ ಮಾಡಿದ್ದರು. ನಾನು ಚಿತ್ರರಂಗಕ್ಕೆ ಬಂದು ಸುಮಾರು 15 ವರ್ಷಗಳಾದವು. ಈವರೆಗೆ ಕೇವಲ 22 ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿz್ದÉೀನೆ. ನನ್ನ ಜೊತೆ ಬಂದವರೆಲ್ಲಾ ಈಗಾಗಲೇ 50-60 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಖ್ಯೆ ಹೆಚ್ಚಿಸಿಕೊಳ್ಳುವುದು ಮುಖ್ಯವಲ್ಲ. ನಿರ್ದೇಶಕರು ಕೊಟ್ಟ ಪಾತ್ರವನ್ನು ಪ್ರೀತಿಯಿಂದ ಮಾಡುತ್ತೇನೆ. ಅದು ವರ್ಷವೇ ಆದರೂ ಸಹಿಸಿಕೊಳ್ಳುತ್ತೇನೆ ಎಂದು ತನ್ನ ಸಿನಿಜರ್ನಿಯನ್ನು ಹೇಳಿಕೊಂಡರು.

ನಂತರ ಸಂಗೀತ ನಿರ್ದೇಶಕ ಚರಣರಾಜ್ ಮಾತನಾಡುತ್ತ ನನ್ನ ಸಂಗೀತ ನಿರ್ದೇಶನದಲ್ಲಿ ಹೊರಬರುತ್ತಿರುವ ನಾಲ್ಕನೇ ಚಿತ್ರ ಇದಾದರೂ ನಾನು ಮ್ಯೂಸಿಕ್ ಜರ್ನಿ ಆರಂಭಿಸಿದ ಮೊದಲ ಚಿತ್ರವೂ ಇದೇ ಆಗಿದೆ. ಯೂಥ್‍ಗೆ ಆಕರ್ಷಿಸುವಂಥ ಹಾಡುಗಳನ್ನು ಕಂಪೆÇೀಜ್ ಮಾಡಿz್ದÉೀವೆ. ವಿಶೇಷವಾಗಿ ಈ ಚಿತ್ರದ ಹಾಡುಗಳನ್ನು ಆಸ್ಟ್ರೇಲಿಯಾದಲ್ಲಿ ಮಾಸ್ಟರಿಂಗ್ ಮಾಡಿz್ದÉೀವೆ. ಅನನ್ಯ ಭಟ್, ಸಂಚಿತ್ ಹೆಗ್ಡೆ, ಸಿಂಧೂರಿಯಂಥ ಯುವ ಗಾಯಕರ ಜೊತೆ ವಿಜಯ ಪ್ರಕಾಶ್‍ರಂಥ ಹಿರಿಯ ಗಾಯಕರೂ ಈ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಆನ್‍ಲೈನ್‍ನಲ್ಲಿ ಹಿಟ್ ಆಗಿವೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ನವೀನ್ ಮಾತನಾಡುತ್ತ ನಿಮ್ಮ ಸಿನಿಮಾ ಬ್ಯಾನರ್ ಮೂಲಕ ಬರುತ್ತಿರುವ ಐದನೇ ಚಿತ್ರವಿದು. ಈ ಚಿತ್ರ ಹಲವಾರು ಕಾರಣಗಳಿಂದ ವಿಶೇಷವಾಗಿದೆ. ಅದರಲ್ಲಿ ಚಿತ್ರದ ಹೆಸರು ಪ್ರಮುಖವಾದುದು. ನಂತರ ಈ ಚಿತ್ರದಲ್ಲಿ ಚಿಕ್ಕಣ್ಣ ಸೇರಿದಂತೆ 23 ಜನ ಹಿರಿಯ ಹಾಗೂ ಕಿರಿಯ ಕಲಾವಿದರು ಅಭಿನಯಿಸಿದ್ದಾರೆ. ಸಂಚಿತ್ ಹಾಡಿದ ಹಾಡು ನನಗೆ ತುಂಬಾ ಇಷ್ಟವಾಗಿದೆ. ಈಗ ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ನಡೆಯುತ್ತಿದ್ದು, ಸಧ್ಯದಲ್ಲೇ ಮೊದಲಪ್ರತಿ ಹೊರಬರಲಿದೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.
-24/09/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore