HOME
CINEMA NEWS
GALLERY
TV NEWS
REVIEWS
CONTACT US
ಕಿರು ಚಿತ್ರ ಕಾರು
ಪತಿಬೇಕು ಡಾಟ್ ಕಾಂ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡಿದ್ದ ಆರ್‍ಜೆ ಶೀತಲ್‍ಶೆಟ್ಟಿ ‘ಸಂಗಾತಿ’ ಎನ್ನುವ ಸೂಕ್ಷವಾದ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಇದರಿಂದ ಉತ್ತೇಜಿತರಾಗಿ ‘ಕಾರು’ ಎಂಬ ಹನ್ನೆರಡರಿಂದ ಹದಿನೈದು ನಿಮಿಷದ ಚಿತ್ರವನ್ನು ಸದ್ದಿಲ್ಲದೆ ಮಧುಗಿರಿ ಸುತ್ತಮುತ್ತ ಮಾಡಿ ಮುಗಿಸಿದ್ದಾರೆ. ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದು ಪುಟ್ಟ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಏನೇನೋ ಕನಸುಗಳು ಇರುತ್ತವೆ. ಯಾವುದೋ ವಸ್ತು ಕನಸಾಗಿರುತ್ತೆ. ಅದರಲ್ಲಿ ಕೆಲವು ನಿಜವಾಗಿ ಬೇರೆಯದು ಸುಳ್ಳಾಗಲೂಬಹುದು. ಇಂತಹ ಕಲ್ಪನೆಗಳನ್ನು ಹೆಕ್ಕಿಕೊಂಡು ಕತೆ, ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದು, ನೋಡಿದವರ ಮುಖದಲ್ಲಿಯೂ ಮಂದಹಾಸ ಮೂಡುವಂತಾಗಬೇಕೆಂಬುದು ನಿರ್ದೇಶಕಿಯ ಕನಸಾಗಿದೆಯಂತೆ. ಛಾಯಗ್ರಹಣ ಯೋಗಿಶ್ವರ್, ಸರ್ಕಾರಿ ಶಾಲೆಗೆ ಕೆಲಸ ಮಾಡಿದ್ದ ಪ್ರದೀಪ್‍ರಾವ್ ಸಂಕಲನ, ಅಭಿಷೇಕ್ ಪೋಸ್ಟರ್ ಡಿಸೈನ್, ಅನಂತ್‍ಕಾಮತ್ ಸಂಗೀತವಿದೆ. ಡಿಸೆಂಬರ್‍ದಲ್ಲಿ ನಡೆಯಲಿರುವ ಗೋವಾ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.
2/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\