HOME
CINEMA NEWS
GALLERY
TV NEWS
REVIEWS
CONTACT US
ಸಲಿಂಗ ಪ್ರೇಮಿಗಳ ಬದುಕು ಬವಣೆಗಳು
ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಇದರ ತೀರ್ಪು ಬರುವ ಮುಂಚೆ ‘ಬೆಸ್ಟ್ ಫ್ರೆಂಡ್ಸ್’ ಎನ್ನುವ ಸಿನಿಮಾವೊಂದು ಸಿದ್ದಗೊಂಡಿತ್ತು. ಪ್ರಪಂಚದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇರುತ್ತದೆ. ಪ್ರತಿ ಸೃಷ್ಟಿಯಲ್ಲೂ ಅದರದ್ದೆ ಆದ ರೀತಿಯಲ್ಲಿ ಬೇರೆಯವರು ಅವರನ್ನು ಬದುಕಲು ಬಿಡಬೇಕು. ಇಲ್ಲದೆ ಹೋದಲ್ಲಿ ನಮ್ಮಗಳ ಮುಂದೆ ನೋಡಬಾರದ ದುರಂತಗಳು ನಡೆದುಹೋಗುತ್ತದೆ. ಇದನ್ನೆ ಚಿತ್ರದಲ್ಲಿ ಕೊನೆಯದಾಗಿ ಸಂದೇಶದ ಮೂಲಕ ಹೇಳಲಾಗಿದೆ. ಕತೆಯ ಕುರಿತು ಹೇಳುವುದಾದರೆ ಹಳ್ಳಿಯಿಂದ ಪಟ್ಟಣದ ಕಾಲೇಜ್‍ಗೆ ಸೇರುವ ಆರ್ಕಷಣಾಗೆ ಶ್ರೀಮಂತ ಮನೆತನದ ಸೃಷ್ಟಿ ಪರಿಚಯವಾಗುತ್ತದೆ. ಮುಂದೆ ಸ್ನೇಹಕ್ಕೆ ತಿರುಗುತ್ತದೆ. ಎಲ್ಲರಿವರೆಗೆ ಅಂದರೆ ಒಬ್ಬರನೊಬ್ಬರು ಬಿಟ್ಟಿರಲಾಗದಷ್ಟು ಹತ್ತಿರವಾಗುತ್ತಾರೆ. ಕೊನೆಗೆ ನಮ್ಮಿಬ್ಬರ ನಡುವೆ ಬೇರೆ ಯಾರೂ ಬರಬಾರದು, ನಾವು ಯಾರನ್ನು ಮದುವೆ ಆಗಬಾರದು ಎನ್ನುವ ಹಂತಕ್ಕೆ ಜೋಡಿಗಳು ಪರಸ್ಪರ ಒಂದಾಗಲು ತೀರ್ಮಾನ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಇದಕ್ಕೆ ಒಪ್ಪವುದಿಲ್ಲ. ಅಹಸಹಜ ಸಂಬಂದವೆಂದು ಸಮಾಜವು ನೋಡುತ್ತದೆ. ಅಂತಿಮವಾಗಿ ಇವರುಗಳು ಏನು ಮಾಡುತ್ತಾರೆ ಎಂಬುದನ್ನು ಚಿತ್ರಮಂದಿರಕ್ಕೆ ಹೋದರೆ ತಿಳಿಯುತ್ತದೆ.

ಇದು ತೀರ್ಪು ನೀಡಲಾಗದ ಪ್ರೇಮಕತೆ ಅಂತ ಅಡಿಬರಹದಲ್ಲಿರುವ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡಿರುವ ಟಿ.ಶಿ.ವೆಂಕಟೇಶ್ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಸಿನಿಮಾವು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಹಣೆಯಲಾಗಿದೆ. ಧಾರವಾಹಿಗಳಲ್ಲಿ ಪಾತ್ರಗಳ ಕಲಾವಿದರು ಬದಲಾದಂತೆ, ಇಲ್ಲಿಯೂ ಅದು ಮುಂದುವರೆದಿದೆ. ನಾಲ್ವರು ಸಲಿಂಗ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಮೇಘಾನಾ, ದ್ರಾವ್ಯಶೆಟ್ಟಿ ನಟನೆ ಹೈಲೈಟ್ ಆಗಿದೆ. ಅಮ್ಮನಾಗಿ ಸುಮತಿಪಾಟೀಲ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರವ್‍ಕೌಶಿಕ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ರವಿಸುವರ್ಣ-ಧನುಶ್‍ಜಯನ್ ಛಾಯಗ್ರಹಣಕ್ಕೆ ಪೂರಕವಾಗಿ ಕೆ.ಆರ್.ಲಿಂಗರಾಜು ಸಂಕಲನ ಪೂರಕವಾಗಿದೆ. ಚಿತ್ರವನ್ನು ಒಮ್ಮೆ ನೋಡಬಹುದಾಗಿದೆ.
ನಿರ್ಮಾಣ: ಲಯನ್.ಎಸ್.ವೆಂಕಟೇಶ್
ಸಿನಿ ಸರ್ಕಲ್.ಇನ್ ವಿಮರ್ಶೆ
***
5/01/19

ಹೊಸ ವರ್ಷಕ್ಕೆ ಬೆಸ್ಟ್ ಫ್ರೆಂಡ್ಸ್
ಶೃತಿ ಮತ್ತು ರಶ್ಮಿ ಗೆಳತಿಯರು ಪ್ರೀತಿಗೋಸ್ಕರ ಮನಸ್ತಾಪ ಮಾಡಿಕೊಂಡಿದ್ದಾರೆ. ಒಬ್ಬಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇದು ನಡೆದಿದ್ದು 2012, ಹಾಸನದಲ್ಲಿ. ಇದನ್ನೆ ಆಧರಿಸಿದ ‘ಬೆಸ್ಟ್ ಫ್ರೆಂಡ್ಸ್’ ಸಿನಿಮಾವೊಂದು ಸೆನ್ಸಾರ್‍ನಿಂದ ಯುಎ ಪ್ರಮಾಣಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ ಸಂಶೋಧನೆ ನಡೆಸಿ ಸಂಬಂದಪಟ್ಟವರು, ವಕೀಲರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೇಕಡ 50 ರಷ್ಟು ನೈಜ ಘಟನೆ ಇರಲಿದ್ದು, ಉಳಿದವು ಕಾಲ್ಪನಿಕವಾಗಿದೆಯಂತೆ. 158 ವರ್ಷಗಳ ಕಾನೂನು ಹೋರಾಟದ ನಂತರ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿದೆ. ಸಿನಿಮಾದಲ್ಲಿ ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಲಾಗಿದೆ. ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆಯನ್ನು ಆಧರಿಸಿ ಚಿತ್ರ ಸಿದ್ದಪಡಿಸಲಾಗಿದೆ

ಸಲಿಂಗಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ಒಂದು ರೀತಿಯಲ್ಲಿ ನೋಡುತ್ತದೆ. ಪ್ರೇಮಕತೆಯಾಗಿ ಉಳಿಯಬೇಕು, ಕಾಮಕತೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಮುಖ್ಯ ಪಾತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅಖಂಡ ಕರ್ನಾಟಕ ಚಲನ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರವು ಜನವರಿ ನಾಲ್ಕರಂದು ಏಕಕಾಲಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
25/12/18


ಹೊಸ ವರ್ಷದಲ್ಲಿ ಬೆಸ್ಟ್ ಫ್ರೆಂಡ್ಸ್
ಶೃತಿ ಮತ್ತು ರಶ್ಮಿ ಗೆಳತಿಯರು ಪ್ರೀತಿಗೋಸ್ಕರ ಮನಸ್ತಾಪ ಮಾಡಿಕೊಂಡಿದ್ದಾರೆ. ಒಬ್ಬಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇದು ನಡೆದಿದ್ದು 2012, ಹಾಸನದಲ್ಲಿ. ಇದನ್ನೆ ಆಧರಿಸಿದ ‘ಬೆಸ್ಟ್ ಫ್ರೆಂಡ್ಸ್’ ಸಿನಿಮಾವೊಂದು ಸೆನ್ಸಾರ್‍ನಿಂದ ಯುಎ ಪ್ರಮಾಣಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ ಸಂಶೋಧನೆ ನಡೆಸಿ ಸಂಬಂದಪಟ್ಟವರು, ವಕೀಲರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೇಕಡ 50 ರಷ್ಟು ನೈಜ ಘಟನೆ ಇರಲಿದ್ದು, ಉಳಿದವು ಕಾಲ್ಪನಿಕವಾಗಿದೆಯಂತೆ. ಭಾವನೆಗಳು ತುಂಬಿದ ಪ್ರೇಮಕತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ಣು ಸಲಿಂಗ ಕಾಮಿಗಳಾಗಿ ಪ್ರೇಮ ವಿಚಾರ ಸಂಬಂದದಲ್ಲಿ ಒಬ್ಬಳೆ ಉಳಿಯಬೇಕೆಂದು ಅಪರಾಧ ಮಾಡುವುದು. ಸರಿಯಲ್ಲವೆಂದು ಸಂದೇಶದ ಮೂಲಕ ಹೇಳಲಾಗಿದೆಯಂತೆ.

ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿದೆ. ಸಿನಿಮಾದಲ್ಲಿ ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಲಾಗಿದೆ. ಮುಖ್ಯ ಪಾತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅಖಂಡ ಕರ್ನಾಟಕ ಚಲನ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ ನಾಲ್ಕರಂದು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
18/12/18

ಬೆಸ್ಟ್ ಫ್ರೆಂಡ್ಸ್ ಹಾಡುಗಳು ಹೊರಬಂತು
158 ವರ್ಷಗಳ ಕಾನೂನು ಹೋರಾಟದ ನಂತರ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸರ್ವೊಚ್ಚ ನ್ಯಾಯಲವರು ತೀರ್ಪು ನೀಡಿದೆ. ಅದರಂತೆ ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ಬಿಚ್ಚಿಟ್ಟಿರುವುದು ವಿಶೇಷ. 2012, ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆ, ಉಳಿದಂತೆ ಕಾಲ್ಪನಿಕ ಕತೆಯನ್ನು ಸೃಷ್ಟಿಸಲಾಗಿದೆ. ತಾಯಿ-ತಂದೆಯರಿಂದ ಜನ್ಮ ಪಡೆದಿರುವ ಮೂರನೇ ಜಾತಿಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡಿರುವ ವಿಶಿಷ್ಟ ಹಾಗೂ ವಿಭಿನ್ನ ಸಂದೇಶವನ್ನು ಸಾರುವುದೇ ಚಿತ್ರದ ಹೂರಣವಾಗಿದೆ. ಸತತ ಆರು ವರ್ಷದ ಶ್ರಮ, ಎರಡು ವರ್ಷದ ಪ್ರಯಾಣ ಮಾಡಿ ಸಂಶೋಧನೆ ನಡೆಸಿರುವ ಟಿ.ಶಿ.ವೆಂಕಟೇಶ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಅಡಿಬರಹದಲ್ಲಿ ಇದು ತೀರ್ಪು ನೀಡಲಾಗದ ಪ್ರೇಮಕತೆ ಎಂದು ಹೇಳಿಕೊಂಡಿದೆ.

ಸಮಾಜದಲ್ಲಿ ಮೂರನೇ ಜಾತಿ. ಅದು ಸಲಿಂಗಜಾತಿ. ಇವರುಗಳು ಸಹ ನಮ್ಮಂತೆ ಜೀವಿಸುತ್ತಾರೆ. ಅವರನ್ನು ಬದುಕಲು ಬಿಡಿ ಎಂದು ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ರಿಯಲ್‍ದಲ್ಲಿ ಶೃತಿ ಮತ್ತು ರಶ್ಮಿ ಇರುವಂತೆ, ರೀಲ್‍ನಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ನಟಿಸಿದ್ದಾರೆ. ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂದಾದವರು ನಟಿಸಿದ್ದಾರೆ.

ಹಾಡುಗಳಿಗೆ ಆರವ್‍ರುಶಿಕ್ ಸಂಗೀತವಿದೆ. ಛಾಯಗ್ರಹಣ ರವಿಸುವರ್ಣಾ-ಧನುಷ್‍ಜಯನ್, ಸಂಕಲನ ಕೆ.ಆರ್.ಲಿಂಗರಾಜು, ನೃತ್ಯಕ್ಕೆ ಸುರೇಶ್‍ಗುಟ್ಟಹಳ್ಳಿ ಚಿತ್ರದಲ್ಲಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಅಂಬ್ರಲಾ ಆಡಿಯೋ ಮುಖಾಂತರ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು.

ಇದೇ ಸಂದರ್ಭದಲ್ಲಿ ನಿರ್ದೇಶಕ, ನಿರ್ಮಾಪಕರು ಸೇರಿಕೊಂಡು, ಸಹದ್ಯೋಗಿಗಳೊಂದಿಗೆ ಶುರು ಮಾಡಿರುವ ‘ಅಖಂಡ ಕರ್ನಾಟಕ ಚಲನಚಿತ್ರೋದ್ಯಮ ಪರಿಷತ್(ರಿ)’ ಸಂಸ್ಥೆಯನ್ನು ಲೋಕ ಸಭಾ ಸದಸ್ಯ ಎಲ್.ಹನುಮಂತರಾವ್ ಮತ್ತು ಸಹಕಾರ ಸಚಿವ ಬಂಡೆಪ್ಪಕಾಶಪ್ಪ ಸಸಿಗೆ ನೀರು ಹಾಕುವುದರೊಂದಿಗೆ ಚಾಲನೆ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/11/18


ಚಿತ್ರಗಳ ಆಯ್ಕೆ ಪ್ರಶಸ್ತಿಯಲ್ಲಿ ಅಸಮಾಧಾನದ ಹೊಗೆ
ಘನ ಸರ್ಕಾರವು ಪ್ರತಿ ವರ್ಷ ನೀಡುವ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯಲ್ಲಿ ಸರಿಯಾದ ಮಾನದಂಡ ಅನುಸರಿಸದೆ, ಶಿಪಾರಸ್ಸು ಇರುವವರಿಗೆ ಪ್ರಶಸ್ತಿ ನೀಡಲಾಗಿದೆ. ಚಿತ್ರಗಳನ್ನು ಹರಾಜು ರೀತಿಯಲ್ಲಿ ಪರಿಗಣಿಸಿದ್ದಾರೆಂದು ‘ಬೆಸ್ಟ್ ಫ್ರೆಂಡ್ಸ್’ ನಿರ್ದೇಶಕ ಟೇಶಿವೆಂಕಟೇಶ್ ಮಾದ್ಯಮದ ಎದುರು ಬೇಸರ ವ್ಯಕ್ತಪಡಿಸಿದರು. ಅವರು ಮಾತನಾಡುತ್ತಾ 158 ವರ್ಷಗಳ ಕಾನೂನು ಹೋರಾಟದ ನಂತರ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿದೆ. ನಮ್ಮ ಸಿನಿಮಾದಲ್ಲಿ ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಲಾಗಿದೆ. ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆಯನ್ನು ಆಧರಿಸಿ ಚಿತ್ರ ಸಿದ್ದಪಡಿಸಲಾಗಿದೆ. ಸತತ ಆರು ವರ್ಷದ ಶ್ರಮ, ಎರಡು ವರ್ಷದ ಪ್ರಯಾಣ ಮಾಡಿ ಸಂಶೋಧನೆ ನಡೆಸಲಾಗಿತ್ತು.

ಇದೆಲ್ಲಾವನ್ನು ಆಯ್ಕೆ ಸಮಿತಿಯು ನಿರ್ಲಕ್ಷಿಸಿ ರಾಷ್ಟ್ರ ಪ್ರಶಸ್ತಿ ಬಂದ ಚಿತ್ರಕ್ಕೆ ಮತ್ತೋಮ್ಮೆ ಹಿಂದೂ ಮುಂದು ನೋಡದೆ ಆಯ್ಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿಯಾಗಿದೆ. ಅಲ್ಲಿನ ನೀತಿ ನಿಯಮಗಳು ಇಲ್ಲಿಗೆ ಸರಿಹೊಂದಿರುವುದಿಲ್ಲ. ರಾಜಕೀಯದಲ್ಲಿ ಬಲಿಷ್ಟರಾದವರಿಗೆ, ಹಿಂದಿನ ಬಾಗಿಲಿನಿಂದ ಬಂದವರ ಚಿತ್ರಗಳನ್ನು ಸಮಿತಿಯು ಪರಗಣಿಸಿರುವುದು ನೋಡಿದಾಗ ಪಾರದರ್ಶಕತೆ ಅನುಸರಿಸಿಲ್ಲವೆಂದು ಘೋಚರಿಸಿದೆ. ನಮ್ಮಂತೆ ಉತ್ತಮ ಚಿತ್ರಗಳನ್ನು ತಯಾರಿಸಿರುವ ನಿರ್ಮಾಪಕರ ಘೋಳನ್ನು ಕೇಳುವರಾರು. ಇದಕ್ಕಾಗಿ ಸರ್ಕಾರದ ವಿರುದ್ದ ನ್ಯಾಯಲಯದ ಮೋರೆ ಹೋಗುವುದಾಗಿ ತಿಳಿಸಿದರು. ಇವರ ಮಾತಿಗೆ ನಿರ್ಮಾಪಕ ಲಯನ್ ಎಸ್.ವೆಂಕಟೇಶ್ ದಸ್‍ಕತ್ ಹಾಕಿದರು. ಪ್ರತಿ ವರ್ಷವು ಆಯ್ಕೆಯಾಗದವರ ಕೂಗು ಇದ್ದಂತೆ ಈ ಸಲವು ಮುಂದುವರೆದಿದೆ. ಇದು ಎಲ್ಲಿಯವರೆಗೆ ತೆಗೆದುಕೊಂಡು ಹೋಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/10/18ನೈಜ ಘಟನೆಯ ಬೆಸ್ಟ್ ಫ್ರೆಂಡ್ಸ್
ನವೆಂಬರ್ 28, 2012ರಂದು ಅಪ್ಪಟ ಗೆಳತಿಯರಾದ ಶೃತಿ ಮತ್ತು ರಶ್ಮಿ ಪ್ರೀತಿಗೋಸ್ಕರ ಮನಸ್ತಾಪ ಮಾಡಿಕೊಂಡಿದ್ದಾರೆ. ಒಬ್ಬಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇದನ್ನೆ ಆಧರಿಸಿದ ‘ಬೆಸ್ಟ್ ಫ್ರೆಂಡ್ಸ್’ ಸಿನಿಮಾವೊಂದು ಸೆನ್ಸಾರ್‍ನಿಂದ ಯುಎ ಪ್ರಮಾಣಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ಐದು ಚಿತ್ರಗಳನ್ನು ನಿರ್ದೇಶಿಸಿರುವ ಟೇ.ಶೀ.ವೆಂಕಟೇಶ್ ಇದರ ಬಗ್ಗೆ ಸಂಶೋಧನೆ ನಡೆಸಿ ಸಂಬಂದಪಟ್ಟವರು, ವಕೀಲರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೇಕಡ 50 ರಷ್ಟು ನೈಜ ಘಟನೆ ಇರಲಿದ್ದು, ಉಳಿದವು ಕಾಲ್ಪನಿಕವಾಗಿದೆಯಂತೆ. ಘರ್ಷಣೆ ನಡುವೆ ಕಾನೂನು ಮತ್ತು ಮಾನವ ಹಕ್ಕುಗಳು, ಇದು ತೀರ್ಪು ನೀಡಲಾಗದ ಪ್ರೇಮಕತೆ ಅಂತ ಪೋಸ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶಕರು ಹೇಳುವಂತೆ ಭಾವನೆಗಳು ತುಂಬಿದ ಪ್ರೇಮಕತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ಣು ಸಲಿಂಗ ಕಾಮಿಗಳಾಗಿ ಪ್ರೇಮ ವಿಚಾರ ಸಂಬಂದದಲ್ಲಿ ಒಬ್ಬಳೆ ಉಳಿಯಬೇಕೆಂದು ಅಪರಾಧ ಮಾಡುವುದು. ಇದನ್ನು ಮಾಡಬೇಡಿ.

ದೇಶದ 72 ಪ್ರದೇಶಗಳಲ್ಲಿ ಸಲಿಂಗಕಾಮ ಮಾಡುವುದು ಕಾನೂನುಬಾಹಿರವೆಂದು ಹೇಳಿದೆ. ಸರ್ವೋಚ್ಚ ನ್ಯಾಯಲಯವು ಸೆಕ್ಷನ್ 377 ಐಪಿಸಿ ಪ್ರಕಾರ ಇಂತಹ ಅಪರಾಧಿಗಳಿಗೆ ಜೀವಾವಧಿ ಶಿಕ್ಷಿ ವಿದಿಸಿರುತ್ತದೆ. ಸಲಿಂಗಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ಒಂದು ರೀತಿಯಲ್ಲಿ ನೋಡುತ್ತದೆ. ಪ್ರೇಮಕತೆಯಾಗಿ ಉಳಿಯಬೇಕು, ಕಾಮಕತೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದಲ್ಲಿ ನಟರು ಇರದೆ ಹೊಸ ನಟಿಮಣ ಯರು ಅಭಿನಯಿಸಿರುವುದು ವಿಶೇಷವಾಗಿದೆ. ಮುಖ್ಯ ಪಾತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅಖಂಡ ಕರ್ನಾಟಕ ಚಲನ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆ ಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-14/01/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore